Sunday, December 25, 2011

ಪ್ರಕಾಶ್ ಚಿಕ್ಕಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಕಪಾಟಿನಲ್ಲಿರುವ ಪುಸ್ತಕಗಳು ಒಬ್ಬರಿಗೊಬ್ಬರು ಮಾತಾಡುತಿದ್ದವು...

"ನಮ್ಮನ್ನು, ನಮ್ಮ ಬಳಗವನ್ನು ಎಷ್ಟು  ಚೆನ್ನಾಗಿ ಒಂದೇ ಕಡೆ ಸೇರಿಸಿದ್ದಾರೆ ನಮ್ಮ ಯಜಮಾನರು"

"ಮನೆಗೆ  ಅತಿಥಿಗಳು ಬಂದು ನಮ್ಮನ್ನ ನೋಡಿ  ಪುಸ್ತಕಗಳು ಚೆನ್ನಾಗಿ ಒಂದಾಗಿ  ತುಂಬು ಸಂಸಾರ ನಡೆಸುತ್ತಿದ್ದಾರೆ ಅಂತ ಹೇಳಿದಾಗ ಎಷ್ಟು ಸಂಭ್ರಮ ಅಲ್ವ..."

"ಇದಕ್ಕೆಲ್ಲ ಕಾರಣ ನಮ್ಮಲ್ಲಿರುವ "ಪ್ರಕಾಶ"ವನ್ನು ಸುತ್ತ-ಮುತ್ತಲಿನವರಿಗೆ ಪಸರಿಸುತ್ತಿರುವ ನಮ್ಮ  ಯಜಮಾನರು... 
ಇಂದು ಅವರ  ಜನುಮ ದಿನ ..ಅವರಿಗೆ ಏನಾದರು ಕಾಣಿಕೆ ನೀಡಬೇಕು..."

ಅಷ್ಟರಲ್ಲಿ ಸುಂದರಾವಾಗಿ ಸಜ್ಜುಗೊಂಡಿದ್ದ ತಾಮ್ರ, ಹಿತ್ತಾಳೆ ಪಾತ್ರೆ-ಪಡಗಗಳು  "ಪುಸ್ತಕಗಳೇ ಆಗಲೇ ನಾವು ನಮ್ಮ ಯಜಮಾನರಿಗೆ ಹುಟ್ಟು ಹಬ್ಬ ಕಾಣಿಕೆ ತಂದಿದ್ದೇವೆ..."
ನೀವು ಕಪಾಟಿನಲ್ಲಿ ನಿಮ್ಮನ್ನ ಹಾಗು ನಿಮ್ಮ ಮನೆ  ಕಪಾಟನ್ನು ಸಜ್ಜುಗೊಳಿಸಿಕೊಳ್ಳುತಿದ್ದಾಗ ನಾವೆಲ್ಲರೂ ತಂದಿದ್ದೆವು...ನೋಡಿ ನಮ್ಮ ಕುಟುಂಬದ ಹಿರಿಯಣ್ಣ "ಮೈತ್ರಿ" ಕೂಡ ನಮಗೆ ಸಹಾಯ ಮಾಡುತಿದ್ದಾರೆ..."

ಪುಸ್ತಕಗಳು, ಪಾತ್ರೆ-ಪಡಗಗಳು, ಮೈತ್ರಿ ಎಲ್ಲವು ಜೋರಾಗಿ ನಲಿಯುತ್ತ ಕುಣಿಯುತ್ತ ತಮ್ಮ ಪ್ರೀತಿಯ ಯಜಮಾನರಿಗೆ  ಬೆಳಕಿನ ಪ್ರಕಾಶ ಬೀರುತ್ತ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರಲು ಯಜಮಾನರ ಕಡೆ ಧಾವಿಸುತ್ತ ನಡೆದವು...

ಅಷ್ಟರಲ್ಲಿ ಜ್ಞಾನವಂತರು, ವಿನಯವಂತರು "ಪ್ರಕಾಶ್ ಮತ್ತು ಶಾರದ ದಂಪತಿಗಳು ತಮ್ಮ ಪರಿವಾರದೊಡನೆ "ಮೈತ್ರಿ" ಒಳಗೆ ಬರುತಿದ್ದರು...

ದ್ವಾರದಲ್ಲೇ ಕಾಯುತಿದ್ದ ಪುಸ್ತಕಗಳು ಮತ್ತು ಅದರ ಕುಟುಂಬ ಸದಸ್ಯರು "ಯಜಮಾನರಾದ ಪ್ರಕಾಶ ಧಣಿಗಳೇ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು, ದೇವರು  ನಮ್ಮ ಕುಟುಂಬಕ್ಕೆ ಇನ್ನಷ್ಟು ಸದಸ್ಯರನ್ನ ಸೇರಿಸಲಿ ಹಾಗೂ  ನಿಮ್ಮ ಜ್ಞಾನದ ದಾಹ ಇನಷ್ಟು ಹೆಚ್ಚ್ಹಾಗಲಿ, ನಿಮಗೆ ಅರೋಗ್ಯ, ಐಶ್ವರ್ಯ, ಸುಖ ಸಮೃದ್ಧಿ ಸಿದ್ದಿಸಲಿ" 

ಚಿಕ್ಕಪ್ಪ ಹುಟ್ಟು ಹಬ್ಬಕ್ಕೆ ನಮ್ಮ ಕಡೆಯಿಂದ ಕೂಡ ಶುಭಾಶಯಗಳು 

Friday, December 23, 2011

Shivakumar & his wife blessed with a Girl Baby


When i called him, he was over the moon with joy.

His voice filled with infectious energy.  He, and his cell phone had a good vibration to receive the happy moments.


I congratulated him saying, you are smart, and i can imagine how cute your baby will be.

his smile is infectious, and can inject new enthusiasm in its own way.

A baby is an unconditional gift by god to the mother…


The parenthood wakes up the kid in us…

It is a privilege to get this kind of boon to light up our life..

A wonderful gift to start the new calendar year…

Congratulations to our smart boy Shivakumar on his new role as a FATHER of GIRL BABY

Monday, December 12, 2011

My Friend in Cisco - Sreedevi Subramanyam's Birthday

Laptop is eagerly waiting for chandini...

by the time deskphone decked completely in white and white getting ready to welcome chandini



Laptop : Today is our madam's birthday, the moment she logs in, I will sing "Happy Birthday" songs for her
IP Phone: Today I will make sure, every caller who will wish her, will hear your song

By that time chandini comes to the desk. She took out the laptop, and logged in
Laptop starts singing, and the message " Dear Chandini, wish  you a many more login's for the years, wish you wonderful great days ahead" getting displayed as screensaver.

by the time, desk phone rings..
Chandini says " Hello"...
Voice from that side "Wow chandini, this is something amazing, instead of boring trin trin...i could able to hear birthday songs..you had shown a great affection towards your desktop items.  See how they are showing their emotions, affections to you"

Chandini "ya, thats correct, these are all my lovely friends"...
with happy tears in her eyes..she says "thank you for the wishes wishes, will call you"

By the time whole BU comes pouring birthday wishes on chandini,


VP: It is my pleasure to shower praise, affection, wishes to Chandini who put her best foot in all the times for the Team, whether moving from SA to Campus, and subsequent changes due to business requirement..we all wish her a great days ahead"

Happy Birthday Chandini

Monday, December 5, 2011

Papa's Birthday - 5-Dec-2011

The child in us always brings the best.

We will grow big, but we need to keep the child at our heart

God has given me a great soul as my sister in the form of cute and lovely Papa.

We may not share the blood relation, but we share a wonderful relation of brotherly hood.

Papa you are an extraordinary human being, and a great sister to cherish along.

Wish you a great birthday!!

Wednesday, November 9, 2011

ಕುಮಾರ ಚಿಕ್ಕಪ್ಪ .....ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು

ಚಾಣಕ್ಯ ಒಂದು ಬಾರಿ ಎ ಟು ಜೆಡ್   ಡಿಪಾರ್ಟ್ಮೆಂಟಲ್ ಸ್ಟೋರ್ಗೆ ಹೋಗಿದ್ದಾಗ...
 
"ಇಲ್ಲಿ ಎಲ್ಲವು  ಸಿಗುತ್ತದೆ ಅಲ್ಲವೇ..."
 
"ಹೌದು ಆಚಾರ್ಯರೇ ಎಲ್ಲವು ಸಿಗುತ್ತೆ"
 
"ಹಾಗಾದರೆ ನನಗೆ ನಾನೇ ಬರೆದ ಕೆಲವು ಪುಸ್ತಕಗಳು ಬೇಕಿತ್ತು"
 
"ಕ್ಷಮಿಸಿ ಆಚಾರ್ಯರೇ...ಪುಸ್ತಕಗಳು ಇಲ್ಲೀ ಖಾಲಿ  ಆಗಿದೆ..."
 
"ಎಲ್ಲಿ ಸಿಗುತ್ತೆ..ನನಗೆ ಕೆಲವು ಬೇಕಾಗಿತ್ತು"
 
"ಪದ್ಮನಾಭನಗರದಲ್ಲಿ ನಿಮ್ಮ ತರಹ ಜ್ಞಾನೋತ್ತಮರು...ಗುಣೋತ್ತಮರು  ಇದ್ದಾರೆ..."
 
"ಸರಿ ಹಂಗಾದ್ರೆ ಅಲ್ಲಿಗೆ ಹೋಗ್ತಿನಿ"
 
ಆಚಾರ್ಯರು ಬಾಗಿಲ ಬಳಿ ಬಂದು ಕರೆ ಘಂಟೆ ಮಾಡ್ತಾರೆ...
 
ಕುಮಾರಸ್ವಾಮಿಗಳು ಬಂದು ಬಾಗಿಲು ತೆಗೆದಾಗ..ಅವರಿಗೆ ಆಶ್ಚರ್ಯ, ಖುಷಿ ತಡೆಯಲಾಗದೆ..ಆಚಾರ್ಯರನ್ನ
ಒಳಗೆ ಬರ ಮಾಡಿಕೊಳ್ತಾರೆ
 
"ಕುಮಾರಸ್ವಾಮಿಗಳೇ ನಿಮಗೆ ನನ್ನ ಆಶಿರ್ವಾದಗಳು..ನಿಮ್ಮ ಹುಟ್ಟು ಹಬ್ಬಕ್ಕಾಗಿ ಶುಭಾಶಯ ಕೋರಲು ಬಂದೆ..."
 
"ನಿಮ್ಮ ಜ್ಞಾನ ತಪಸ್ಸಿನ ಬಗ್ಗೆ ಕೇಳಿದ್ದೆ..ಆಶೀರ್ವದಿಸಲು ಬಂದೆ..ನಿಮಗೆ ಅರೋಗ್ಯ ಭಾಗ್ಯ, ಶಾಂತಿ, ಸುಖ ಸಿಗಲಿ ಎಂದು ಹರಸುತ್ತೇನೆ"
 
ಕುಮಾರ ಚಿಕ್ಕಪ್ಪ ನಮ್ಮ ಕೋರವಂಗಲ ಕುಟುಂಬದ ಚಾಣಕ್ಯನಂತಿರುವ ನಿಮಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು...

Saturday, October 29, 2011

ಜಾಕಿ ಅಮೋಘ ಐದೂವರೆ ಘಂಟೆಗಳ ಪ್ರದರ್ಶನ


ನಮ್ಮ ಮನೆಯಲ್ಲಿ ಕುತೂಹಲಿಗಳಾಗಿ ಜಾತಕ ಪಕ್ಷಿಗಳಂತೆ "ಜಾಕಿ" ಸಿನಿಮಾ ನೋಡಲು ಕಾಯುತ್ತಿದ್ದಾಗ...

ಅಣ್ಣನ ಮಗಳು ಹೇಳಿದಳು "ಜಾಕಿ" ಚೆನ್ನಾಗಿಲ್ಲ...ಅಂತ..

ಆದ್ರೆ ಹಾಡುಗಳು, ಹೊಡೆದಾಟಗಳು, ಕಾಲು ಕುಣಿಸುವಂತ ಸಂಗೀತ ಇದ್ದ ಸಿನೆಮಾದ ಬಗ್ಗೆ ನನಗೆ ಸಹಜವಾಗೇ ತವಕ ಕಾಡಿತ್ತು..

ಅದರಲ್ಲೂ ಅಣ್ಣಾವ್ರ ಬ್ಯಾನೆರ್ ಅಡಿ ತಯಾರಾದ ಚಿತ್ರವಾದ್ದರಿಂದ ಸಹಜವಾಗೇ ಉತ್ಸಾಹ ತುಂಬಿತ್ತು...

ಸರಿ ಘಂಟೆ ೬ ಹೊಡೆಯಿತು...ಶುರುವಾಯಿತು...

ಮೊದಲ ಹಾಡು ಅತಿ ಅದ್ಭುತ ಎನ್ನುವ ಹಾಗೆ ಚಿತ್ರೀಕರಿಸಿದ್ದಾರೆ..ಲಯಬದ್ದವಾದ ಸಂಗೀತ, ನೃತ್ಯ ಅಮಲು ಬರೆಸುವ ಹಾಗೆ ಇತ್ತು..

ಮುಂದೆ ಶುರುವಾಯ್ತು ಮಾರಿ ಹಬ್ಬ...ಸಾರೀ ಜೈ ಮಾನ್ಕಾಲಮ್ಮನ  ಹಬ್ಬ...


ಅಮ್ಮ ತಮ್ಮ ಕೆಲಸವೆಲ್ಲ ಮುಗಿಸಿ ಸುಮಾರು ಒಂಭತ್ತು ಘಂಟೆಗೆ ಬಂದು ಕೇಳಿದ್ರು..ಎಲ್ಲಿಗೆ ಬಂತೂ ಸಿನಿಮಾ ಅಂತ.....


ಅದು ಶುರುವಾದ ಕಡೆನೇ ಇತ್ತು...

ಜಾಹಿರಾತಿನ ಮಧ್ಯೆ ಸಿನಿಮಾದ ಚೌಕಟ್ಟನ್ನು ಅರಿತುಕೊಳ್ಳಲು ಸಮಯ ಹಿಡಿಯುತ್ತಿತ್ತು...

ಹಾಗು ಕತೆ ಹುಡುಕುತ್ತ ಮನಸು ಜಾಹಿರಾತಿನ ಮಧ್ಯೆ ಅಲೆದಾಡುತ್ತ ಹೆಣಗುತ್ತಿತ್ತು

ನಾನು ಹಟಕ್ಕೆ ಬಿದ್ದವನಂತೆ ಏನಾದ್ರು ಸರಿ ನೋಡಿಯೇ ಬಿಡೋಣ ಅಂತ ಕುಳಿತೆ ಇದ್ದೆ..

ಊಟ ಆಯಿತು..ಜಾಕೀ ಮುಗಿಯಲಿಲ್ಲ..ಹಾಸಿಗೆ ಹಾಕಿ ಶಯನಕ್ಕೆ ಮನಸು ಸಿದ್ದವಾಯಿತು..ಜಾಕಿ ಮುಗಿಯಲಿಲ್ಲ..

ಮನೆ ಸುತ್ತ ಮುತ್ತ ಪಟಾಕಿ ಸದ್ದು ಕ್ಷೀಣವಾಗುತ್ತ ಸಾಗಿತು...ಆದರು ಜಾಕಿ ಮುಗಿಯಲಿಲ್ಲ..

ಕಡೆಗೆ ಮುಗಿದಾಗ ರಾತ್ರಿ ೧೧.೨೯...

ದೂರದಲ್ಲಿ ಎಲ್ಲೋ..ಅಣ್ಣಾವ್ರ ಹಾಡು "ನಾವು ಯಾರಿಗೂ ಕಮ್ಮಿ ಇಲ್ಲ" ಹಾಗೆ ತೇಲಿ ಬರ್ತಾ ಇತ್ತು...

ಸೋನಿ ವಾಹಿನಿಯಂತೆ..ತಿರುಳಿಲ್ಲದ ಸುಮಾರು ಎರಡು ಘಂಟೆಗಳ  ಸಿನೆಮಾವನ್ನು ಐದು ಘಂಟೆಗಳಿಗೂ ಮಿಗಿಲಾಗಿ ಹಿಗ್ಗಿಸಿ ದಾಖಲೆ ನಿರ್ಮಿಸಿದ ಉದಯ ವಾಹಿನಿಗೆ ದೂರದಿಂದಲೇ ಪ್ರಣಾಮಗಳು...

ಹುರುಳಿಲ್ಲ, ತಿರುಳಿಲ್ಲ..ನಮ್ಮ ನಾಡಿನ ಜನತೆ ಇದನ್ನ ಯಾಕೆ ಮುಗಿಬಿದ್ದು ನೋಡಿದರು ಹಾಗು ಕಳೆದ ವರ್ಷದ ಅತ್ಯಂತ ಯಶಸ್ವೀ ಚಿತ್ರ, ಹಣಗಳಿಕೆಯಲ್ಲಿ ಯಾಕೆ ಮುಂದೆ ಇತ್ತು .........?

ರಹಸ್ಯ ನನಗೆ ಚಿದಂಬರ ರಹಸ್ಯಾವಾಗೆ ಉಳಿಯಿತು...

ಅಣ್ಣಾವ್ರು ಹಾಗು ಅವರ ಹಿಂದಿನ ಶಕ್ತಿ ವರದಪ್ಪನವರು ಇಲ್ಲದ ಅನುಪಸ್ಥಿತಿ ಎದ್ದು ಕುಣಿಯುತ್ತ ಇತ್ತು...

ಮನಸು ಒಮ್ಮೆ ತಿರುಗಿ ನೋಡಿದಾಗ...ನನ್ನೇ ಶಪಿಸಿತು...ಅನ್ಯಾಯವಾಗಿ ನಿನ್ನ ಜೀವನ ಅದ್ಭುತ ೫.೩೦ ಘಂಟೆಗಳನ್ನ ಹಾಳು ಮಾಡಿದೆ ಅಂತ...

Sunday, September 25, 2011

Light of glory meets boundless energy

A combination can be a mixture of two momentum bounded in one single frame...
Glory of Light (Yashdeep) with Boundless (Aditi)
 Nature
The bond always happens above our zenith...
Love and affections are coded in heaven!!!!!

The right Ctrl+F will land us in the opportunity zone..
The search in the light always yields the results!!!!
One such ctrl+f brought our light of glory (Yashdeep) to get blended with boundless creation (Aditi)
Yashdeep's hand & Aditi's hand holding the moments of life!

The light always says there are boundless rays originated from me...
Boundless light in the glory of light!!!!

The boundless rays says..am carrying light to the distant distance...
Light getting carried to distant parts
The mother of all names (Aditi) will get bonded  with the mother of hope  - The Glory of Light (Yashdeep) to make the moments beautiful, energetic...and extraordinary to create greatest symphony of music in the life!!!!
creating symphony of perfect music

Yashdeep & Aditi - the wonderful combination get in to a boundless lock of life...the wedding lock..

Have a great moments and momentum ahead!!!!

Trekking gang : hamare paas sleeping bag hai, back pack hai, chapathi's hai, bus reservation tickets hai........tere paas kya hai

Yashdeep : 
Mere pass boundless (Aditi) energy hai!!!!

Friday, September 16, 2011

ಮಗುವಿನ ಹುಟ್ಟು ಹಬ್ಬಕ್ಕೆ ಶುಭಾಶಯ

ಯೋಚನೆ ಮಾಡ್ತಾ ಹೋದರೆ ಕೆಲವು ಅಧ್ಬುತ ದೃಶ್ಯಗಳು, ಘಟನೆಗಳು ಕಣ್ಣ ಮುಂದೆ ಹರಿದಾಡುತ್ತವೆ...
ಹೇಳುತ್ತಾರೆ...ಕಲೆಯು ಎಲ್ಲರನ್ನು ಕೈ ಬೀಸಿ ಕರೆಯುತ್ತೆ...
ಆದರೆ ಕೆಲವರನ್ನು ಮಾತ್ರ ಅರಿಸಿಕೊಳ್ಳುತ್ತೆ..
ಹೇಳುತ್ತಾರೆ..ಕೆಲವು ಸಂಬಂಧಗಳಿಗೆ ಹೆಸರಿರುವುದಿಲ್ಲ...
ಆದರೆ
ಆರ್ದತೆ, ಗಾಡತೆ ಇರುತ್ತೆ...
ಹೇಳುತ್ತಾರೆ..ಎಲ್ಲರಿಗು ಸ್ನೇಹಿತರಾದವರು ಯಾರಿಗೂ ಸ್ನೇಹಿತರಲ್ಲ ಅಂತ....
ನನ್ನ ವಿದ್ಯಾ ಪರಿಚಯವೂ ಹಾಗೆ...ಅಚಾನಕ್ ಆಗಿ ಆಗಿಬಿಡ್ತು...
ಒಂದು ಸಣ್ಣ ದೂರವಾಣಿ ಕರೆ...ಒಂದು ಚಿಕ್ಕ ಮಿಂಚಂಚೆ...
ನಮ್ಮನ್ನು ಬಂಧಿಸಿತು....
ಯೋಚನೆ ಮಾಡಿದಾಗ ತಿಳಿಯೋಲ್ಲ...
ಒಳ್ಳೆಯ ಸ್ನೇಹಿತಳ,
ಒಳ್ಳೆಯ ತಂಗಿಯ,
ಒಳ್ಳೆಯ ಸಹೋದ್ಯೋಗಿಯಾ...
ಯೋಚನೆ ಮಾಡಿದಷ್ಟು ತಿಳಿಯದಾಳಕ್ಕೆ ಹೋಗುತ್ತಾ ಇತ್ತು...
ಕಡೆಗೆ ಒಂದು ರೂಪ ಸಿಕ್ಕಿತು...ಮತ್ತು ನಾಮಕರಣವು ಆಯಿತು...

ಅದೇ "ಮಗು"ವಿನ ಸಂಬಂಧ...
ನಮ್ಮಿಬ್ಬರ ಪರಿಚಯ, ಹಾಗು ಗೆಳೆತನ..
ಎರಡು ಮಗುವಿನ ಹಾಗೆ..
ಅದಕ್ಕೆ ಹೆಸರು ಇಲ್ಲ, ದಾರಿಯು ಇಲ್ಲ...
ಅಂತ ಮಗುವಿನ ಹುಟ್ಟು ಹಬ್ಬಕ್ಕೆ ಶುಭಾಶಯಗಳನ್ನು ಕೋರುವುದು...
ನನ್ನ ಭಾಗ್ಯ...
ಮಗುವೆ...ನಿನ್ನ ಹುಟ್ಟು ಹಬ್ಬಕ್ಕೆ ನನ್ನ ಹಾರ್ದಿಕ ಶುಭಾಶಯಗಳು...
ಜೀವನದಲ್ಲಿ ಅರೋಗ್ಯ, ನೆಮ್ಮದಿ, ಶಾಂತಿ, ಸುಖ, ನಲಿವು
ಎಲ್ಲವು ತುಂಬಿ ರಾರಾಜಿಸಲಿ...
ಮಗುವಿನ ಮನಸು ಹಾಗೆ ಇರಲಿ...

Friday, July 1, 2011

ಶಶಿಗೆ ಜನ್ಮ ದಿನದ ಶುಭಾಶಯಗಳು...

ಪ್ರಪಂಚದಲ್ಲಿ ಶಶಿಯ ಅಭಿಮಾನವೇ ಕೀರ್ತಿಯೇ ಅಧಿಕವಾಗಿರಲು...ಸೃಷ್ಟಿಕರ್ತನಾದ ಬ್ರಹ್ಮನು ಶಶಿಯ ಅಭಿಮಾನವನ್ನು ಒಂದು ಕಡೆ..ಕೈಲಾಸವನ್ನು ಒಂದು ಕಡೆ ಇಟ್ಟನು..
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಕೈಲಾಸದ ಮೇಲೆ ನಂದಿಯನ್ನು ಇರಿಸಿದನು..
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಕೈಲಾಸದ ಮೇಲೆ ಪರಶಿವನನ್ನು ಕೂರಿಸಿದನು.... .
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ವೆಂಕಿಯನ್ನು ಕೂರಿಸಿದನು.... .
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ಲೋಕಿಯನ್ನು ಕೂರಿಸಿದನು.....
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ಜೆ. ಎಂ. ನನ್ನು ಕೂರಿಸಿದನು
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ಶ್ರೀಕಿ ಯನ್ನು ಕೂರಿಸಿದನು
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಕಟ್ಟಕಡೆಗೆ ಪ್ರತಿಭಾ ಅಕ್ಕನನ್ನು ಕೂರಿಸಿದನು...
 
ಆಗ ತಕ್ಕಡಿ ಸಮವಾಯಿತು
 
ಸಾರಾಂಶ ಏನು ಎಂದರೆ...ನಮ್ಮ ಪ್ರೀತಿಯ ಶಶಿಯ ಅಭಿಮಾನದ ತೂಕ..ಕೈಲಾಸ, ನಂದಿ, ಪರಶಿವ, ಶಶಿಯ ಜೀವದ ಗೆಳೆಯರಾದ ಲೋಕಿ, ವೆಂಕಿ, ಶ್ರೀಕಿ, ಜೆ. ಎಂ. ಇವೆರಲ್ಲ ತೂಕಕ್ಕಿಂತ ಅಧಿಕ..ಅದನ್ನು ಸರಿತೂಗಿಸಲು ಶಶಿಯ ಸತಿ ಪ್ರತಿಭಾ ಅಕ್ಕ ಬರಬೇಕಾಯಿತು..
 
ಇಂಥ ನಲ್ಮೆಯ ಶಶಿಗೆ ಜನ್ಮ ದಿನದ ಶುಭಾಶಯಗಳು...
 
(ಕವಿರತ್ನ ಕಾಳಿದಾಸ ಸಿನೆಮಾದಿಂದ ಅಣ್ಣಾವ್ರು ಹೇಳಿದ ಸಂಭಾಷಣೆ ಸ್ಪೂರ್ತಿಯಿಂದ ಬರೆದ ಕಿರುನುಡಿ)

Thursday, June 30, 2011

ಸೀತಾ ಮಾತೆ - ಜನುಮದಿನದ ಶುಭಾಶಯಗಳು

ನನ್ನ ಚಿಕ್ಕಪ್ಪನ ಮಗ ನರೇಂದ್ರನ ಪ್ರೀತಿಯ ಮಡದಿ ಸುಮಾ...ಅವರಲ್ಲಿ ಸೀತೆಯ ತಾಳ್ಮೆಯ ಗುಣಗಳಿಂದ ಅವರನ್ನ ಸೀತಾ ಮಾತೆ ಅಂತ ನಾನು ಹೆಸರಿಸುವುದು...ಅವರ ಜನ್ಮ ದಿನಕ್ಕೆ ನನ್ನ ಪುಟ್ಟ ಕಾಣಿಕೆ ನುಡಿಗಳು

ಲವ-ಕುಶ ಜನನದ ನಂತರದ ಸಂದರ್ಭ

ರಾಮ : ಪ್ರಾಣ ಸಖಿ...ನಿನಗೆ ಏನು ಬೇಕು ಅಂತ ಹೇಳಲಿಲ್ಲ...

ಸೀತೆ : ಪ್ರಾಣ ಸಖ...ನೀವು ನನ್ನ ಜೊತೆ ಇದ್ದೀರಿ...ಮುದ್ದಾದ ಎರಡು ಗೊಂಬೆಗಳು.... ಇನ್ನೇನು ಬೇಕು ನನಗೆ......

ರಾಮ: ಇಂದು ನಿನ್ನ ಜನುಮದಿನ..ನೀನು ಏನಾದರು ಕೇಳಲೇಬೇಕು ನಾನು ಕೊಡಿಸಲೇಬೇಕು ಹೇಳು ಪ್ಲೀಸ್

ಸೀತೆ: ನನ್ನ ಜನುಮ ದಿನ ನೆನಪಿದೆಯೇ ಪ್ರಾಣನಾಥ....ಹಾಗಾದರೆ "Big Bazaar" ನಲ್ಲಿ ರಾಮಾಯಣ ಸಿ.ಡಿ. ಬಂದಿದೆಯಂತೆ...ಅದನ್ನು ಕೊಡಿಸಿ

ರಾಮ: ಅಯ್ಯೋ ರಾಮ...ಓಹ್ ಸಾರೀ ಸಾರೀ...ಅಯ್ಯೋ ಸೀತೆ..ನಮ್ಮ ಕಥೆಯನ್ನೇ ಇನ್ನೊಮ್ಮೆ ನೋಡುವ ಆಸೆಯೇ...

ಸೀತೆ: ಹೌದು ಪ್ರಾಣನಾಥ....ನೀವು ಶಿವನ ಬಿಲ್ಲನ್ನು ಮುರಿದು ವರಿಸಿದ ದೃಶ್ಯ ನೋಡಬೇಕು...ಅದಕ್ಕೆ

ರಾಮ : ಪ್ರತಿ ತಿಂಗಳು ಎಷ್ಟೊಂದು ಬಿಲ್ಲನ್ನು ಮುರಿತಾಯಿದ್ದಿನಿ ..ಅದನ್ನು ನೋಡಿಲ್ವಾ..

ಸೀತೆ: ಯಾವುದು ಸ್ವಾಮಿ..

ರಾಮ: .ಕರೆಂಟ್ ಬಿಲ್, ವಾಟರ್ ಬಿಲ್, ಸ್ಕೂಲ್ ಬಿಲ್, ಟೆಲಿಫೋನ್ ಬಿಲ್, ಮತ್ತು ಇವಾಗ ತಾನೇ ತಂದ ಮೈಸೂರ್ ಸಿಲ್ಕ್ ಸೀರೆ ಬಿಲ್

ಸೀತೆ: ನನಗೆ ರಾಮ ಗ್ರೀನ್ ಇಷ್ಟ ಅಂತ ಹೆಂಗೆ ಗೊತ್ತು...

ರಾಮ : ನನ್ನ ಹೆಸರೇ ರಾಮ ಅಲಿಯಾಸ್ ನರೇಂದ್ರ...ಅಂದ ಮೇಲೆ ನಾನು ಗ್ರೀನ್ ಅಗಿರಲೆಬೇಕಲ್ಲ..ಅಂದ್ರೆ ಪ್ರಕೃತಿ ಗ್ರೀನ್ ಇರಲೇಬೇಕಲ್ಲ..

ಸೀತೆ: ಸ್ವಾಮಿ ತುಂಬಾ ಇಷ್ಟಾ ಆಯಿತು..ನಿಮ್ಮ ಉಡುಗೊರೆ, ಮುದ್ದಾದ ಮಕ್ಕಳ ಜೊತೆ ಹೋಟೆಲ್ ನಲ್ಲಿ ಊಟ..ಹಿರಿಯರ ಆಶಿರ್ವಾದ......

ರಾಮ : ನನ್ನ ಸೀತೆ...ನಿನಗೆ ಜನುಮದಿನದ ಶುಭಾಶಯಗಳು...

Thursday, June 23, 2011

Pure Battler of Strength - Agnes Matilda


Enter the world of sea of friendship
Name is the truth behind the persona..
which describes that attitude's altitude. 
One such name was coined in the legendary Greek civilization.  

The discussion between two nomads during the great epics Illiad and Odyssey.

"The Pure form of strength is a good sign of success.   
 The name can be most preferred all over the world, 
 It stood at a prestigious third slot in all time high rankings."

"It is our fortunate fate that,  we have one such pure 
      battler of strength in our fold, it is great feeling 
                to be one in all...than all in one."

"That is true..when the intention and contention is pure 
  from the strength, anything and everything can be 
  achieved."

"June 23rd will be great turn around for us.  
      It will signifies, and the beginning for a successful career 
                all the way."

"How do you say that?"

"It is the day of our one such friend who boarded 
  our ship of friendship...and i always believe in the 
     saying "friend"ship" always sails on the dependen-SEA..."
The sea of soldiers aligned to wish a great years of success
"Oh oh..that is the reason the Soldiers in the Trojan war stopped battling, and they are wishing our friend Agnes Matilda a great success, happiness, and career.. that is a sign of success..."
The Trojan's stopped the battle to Wish Agnes a wonder birthday!!!!
"Yes yes...you are right...She is the change of strength in purest form..and do you know it is one such powerful name AGNES MATILDA the combination of these letters of words stood on top of most preferred names all the way..."

"Will wish her a great success, happiness all round the years ahead....!!!!!!!!!!!!!!!"

Wish you a great, great days of moments on your birthday!!!!!


Friday, June 17, 2011

Limelight in Shadow

She was little surprised.....when she started walking towards the god of light, 

She felt some one is following her......

folliwng the good always brings the best
 She just turned back, and couldn't see any one.....

Questions are what our life is made up of..find the answer in every turn
but again when she started walking, had the same feeling that she is being followed by someone.

She screamed, and yelled, but there was no response. But the feel of she is being followed by someone started growing......miles together.

During that time...the god of light came up..
Opportunity comes like a light from any corner!!!!
 and said.."dont worry you are walking with the properity (Shirish)..
Any symbol or language..prosperity remains same!!!!
am the god of light (Prakash)...
At the end of tunnel of darkness always there is light of opportunity!!!
the things which are following you from miles are your close buddies wealth & fortune(Sri),
When Sri is circling around in chakra...the fortune will be high.....
and Pure & Gentle happiness (Agnes)

True and pure form of affection makes us light in this world
"You are walking towards light with prosperity in hand and being followed by wealth and fortune with pure and gentle happiness around..
your day, days, weeks, years will be filled with joy and joy all the way........"

Wish you a wonderful day...wish you a wonderful birthday!!!!!!!

Wednesday, June 15, 2011

ಮುರುಳಿ and ಶಾರ್ವರಿ ಒಂದು ಸಂಭಾಷಣೆ



ಶಾರ್ವರಿ : ದೊಡ್ಡಪ್ಪ ....ನಿಮ್ಮ ಹುಟ್ಟು ಹಬ್ಬಕ್ಕೆ ನನ್ನ ಚಿಕ್ಕ ಶುಭಾಶಯಗಳು

ಮುರುಳಿ : ಅರೆ ಯಾರಿದು ಓಹ್ ಶಾರ್ವರಿ ಪಾಪು ನಾ..

ಶಾರ್ವರಿ :ಹೌದು ದೊಡ್ಡಪ್ಪ!!!! ಏನ್ ಇವತ್ತಿನ ಸ್ಪೆಷಲ್

ಮುರುಳಿ :ಏನಿಲ್ಲ ಚಿನ್ನು..ಮಾಮೂಲಿ ದಿನ..ಅಂತಹ ಸ್ಪೆಷಲ್ ಏನು ಇಲ್ಲ..ಶಾರ್ವರಿ

             ಪಾಪು ನಿನಗೂ ಹುಟ್ಟಿದ ದಿನದ ಶುಭಾಶಯಗಳು

ಶಾರ್ವರಿ :ದೊಡ್ಡಪ್ಪ..ಇವತ್ತು ನಮ್ಮ ಮನೆನಲ್ಲಿ ಸ್ವೀಟ್ ಮಾಡ್ತಾರೆ..ನಿಮಗೂ

              ಕಳಿಸ್ತೀನಿ..

ಮುರುಳಿ :ವಾವ್ ಸೂಪರ್..ನಾನು ನಿನಗೆ ಒಳ್ಳೆ ಚಾಕೊಲೇಟ್ ಕಳಿಸ್ತೀನಿ...

ಶಾರ್ವರಿ :ದೊಡ್ಡಪ್ಪ ಒಂದು ವಿಷ್ಯ..ಯಡೆಯುರಪ್ಪನ ಸರ್ಕಾರ ಇರುತ್ತಾ

              ಹೋಗುತ್ತಾ....ನನಗೆ ಅದೇ ಚಿಂತೆ ಆಗಿ ಬಿಟ್ಟಿದೆ..ನಮಗೆ ಶಾಲೆಯಲ್ಲಿ
              ಕರ್ನಾಟಕದ ಮುಖ್ಯಮಂತ್ರಿ ಯಾರು ಅಂತ ಕೇಳಿದ್ರೆ ಏನು ಹೇಳೋದು
              ಅಂತ..........

ಮುರುಳಿ :ಏನು ಯೋಚನೆ ಬೇಡ ಚಿನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ

              ಹಂಸರಾಜ್ ಭಾರದ್ವಾಜ್ ಅಂತ ಹೇಳು..

ಶಾರ್ವರಿ : ಸರಿ ದೊಡ್ಡಪ್ಪ......ಮತ್ತೆ ಕೆಲಸ ಎಲ್ಲ ಹೆಂಗೆ ನಡಿತ

               ಇದೆ...ಅರಾಮಗಿದೆಯ..ಮುಂದಿನ ವಾರ  ಮನೆಗೆ ಬರ್ತೀನಿ ಅವಾಗ
               ತುಂಬಾ ಮಾತಾಡೋಣ...ಓಕೆನ ...

ಮುರುಳಿ :ಸರಿ ಚಿನ್ನು...ಸಿಗೋಣ ಮತ್ತೆ..ಜನ್ಮದಿನ ಶುಭಾಶಯಗಳು... 


Note: Muruli my brother..he is extremely impatient..
with dry humour...and Sharvari is my cousin brother
daughter who is just around 4 years old..but her
dialouges, her talking style..even she can beat
grownups..perfect dialouge bomber..

Thursday, June 9, 2011

ನಾಗವೇಣಿ-ದಿನಮಣಿ ದಂಪತಿಗಳಿಗೆ ವಿವಾಹ ಮಹೋತ್ಸವದ ಶುಭಾಶಯಗಳು

ಸತ್ರಾರ್ಜಿತ  : ಸೂರ್ಯ ಭಗವಾನ್ ನನ್ನ ತಪಸ್ಸಿಗೆ ಮೆಚ್ಚಿ ನೀನು ಶ್ಯಮಂತಕ  
                    ಮಣಿ ಕೊಟ್ಟೆ ಆದ್ರೆ

ಸೂರ್ಯ      : ಯಾಕೆ ಏನು ಆಯಿತು ಭಕ್ತ

ಸತ್ರಾರ್ಜಿತ  :ನೀನು ಕೊಟ್ಟ ಮಣಿ ಒಂದು ಜೀವತ ಅವಧಿಯಲ್ಲಿ ಮಾತ್ರ ಸಿಗುತ್ತದೆ

                   ಆದ್ರೆ,  ಕೋರವಂಗಲ ಸಂಸ್ಥಾನದ  ಪುತ್ರಿ ನಾಗವೇಣಿ ಉರುಫ್ 
                   ಪುಟ್ಟಿಗೆ ನೀನು ತುಂಬಾ ದೊಡ್ಡ ಉಡುಗೊರೆ ಕೊಟ್ಟಿದೀಯ

ಸೂರ್ಯ    :  ಹಂಗ,..ಆಕೆಯ ತಪಸ್ಸಿಗೆ ಮೆಚ್ಚಿ ಬರಿ ಮಣಿ ಕೊಟ್ಟರೆ ಸಾಲದು
                  ದಿನವು ಮಣಿ ಸಿಗಬೇಕು ಅಂತ "ದಿನಮಣಿ" ಯನ್ನೇ ಕೊಟ್ಟಿದ್ದೇನೆ
                  ಇಂದು ಅವರ ವಿವಾಹ ಮಹೋತ್ಸವ, ಅವರಿಗೆ ಶುಭ ಕೋರೋಣ..
                  ನಿನಗೆ ಇನ್ನು ಉತ್ತಮ "ಮಣಿ" ಯನ್ನು (Money) ಕೊಡುತ್ತೇನೆ.

ಸಮಸ್ತ ಕುಟುಂಬದಿಂದ ನಾಗವೇಣಿ-ದಿನಮಣಿ ದಂಪತಿಗಳಿಗೆ ವಿವಾಹ ಮಹೋತ್ಸವದ ಶುಭಾಶಯಗಳು

Thursday, May 12, 2011

ವಿಷ್ಣು"ದೇವರಾಯ" ಹುಟ್ಟಿದ ಹಬ್ಬ


ರಾಜಾಧಿರಾಜ, ರಾಜ ಮಾರ್ತಂಡ, ರಾಜ ಕುಲೋತ್ತುಂಗ,
ಶ್ರೀ ಶ್ರೀ ಶ್ರೀ ಕೃಷ್ಣದೇವರಾಯ ಪ್ರಭುಗಳಿಗೆ 
ಬೋಪರಾಕ್, ಬೋಪರಾಕ್


ಮಂತ್ರಿ: ಮಹಾರಾಜ, ಇಂದೇಕೆ ನಿಮ್ಮ ಮುಖದಲ್ಲಿ ಮಂದಹಾಸ, 
ತೃಪ್ತಿ ತುಂಬಿ ತುಳುಕುತ್ತ ಇದೆ


ಕೃಷ್ಣದೇವರಾಯ : ಮಂತ್ರಿಗಳೇ , ಇಂದು ಒಂದು ಅದ್ಭುತ 
ವರ್ತಮಾನ ತಿಳಿಯಿತು, ನಮ್ಮ ಸಾಮ್ರಾಜ್ಯ ಸ್ಥಾಪನೆಯದ 
ಸಂಧರ್ಭದಲ್ಲಿ ವಿರೂಪಾಕ್ಷನು ಒಂದು ವರ ನೀಡಿದ್ದಾನೆ.  
ನಮ್ಮ ಸಾಮ್ರಾಜ್ಯದ ಹೆಸರಿನಲ್ಲೇ ಇರುವ ಬೆಂಗಳೂರಿನ ಒಂದು ಬಡಾವಣೆಯಲ್ಲಿರುವ ಒಂದು ಮನೆಯಲ್ಲಿ ಒಂದು ಮಗು 
ಮೇ ೧೩ ನೆ ತಾರೀಕು ಹುಟ್ಟಿ  ಚಿತ್ರಜಗತ್ತಿನಲ್ಲಿ ಅದ್ಭುತ ಸಾಧನೆ
ಮಾಡುತ್ತೆ...
ಅದರ ಹೆಸರು ವಿಷ್ಣುದೇವರಾಯ ಎಂದು.  
ಆ ಮಗುವು ಬರೆಯಬಹುದಾದ ಒಂದು ಚಿತ್ರ ನೋಡಿ 
ಮಂತ್ರಿಗಳೇ....ನನಗೊಂತು ಆ ಮಗುವನ್ನು ಬಾಚಿ 
ತಬ್ಬಿಕೊಳ್ಳುವ ಆಸೆಯಾಗುತ್ತಿದೆ.  
ಮಂತ್ರಿ: ಅದಕ್ಕೇನು ಮಹಾರಾಜ, ವಿದ್ಯಾರಣ್ಯರ ಹತ್ತಿರ ಬೇಡಿಕೊಳ್ಳಿ,
ಮುಂದಿನ ಲೆಮಾರಿನಲ್ಲಿ ಆ ಮಗುವಿನ ಅಪ್ಪನಾಗಿ ಜನ್ಮ ತಾಳಿ 
ನಿಮ್ಮ ಆಸೆಯನ್ನ ಈಡೆರಿಸಿಕೊಳ್ಳಿ


ವಿರೂಪಾಕ್ಷನ ದಯೆ ಇಂದ, ಹಾಗು ವಿದ್ಯಾರಣ್ಯರ ಆಶಿರ್ವಾದದಿಂದ ಕೃಷ್ಣದೇವರಾಯ ವಿಜಯ"ಕೃಷ್ಣದೇವರಾಯ"ನಾಗಿ, ಆತನ 
ಮಗನಾಗಿ ವಿಷ್ಣು"ದೇವರಾಯ" ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತ 
ಸಂತಸದಿಂದ ಇದ್ದಾನೆ

ದೇವಿ - ಆಶಾ ಜ್ಞಾನ ಸರ್ಜಾ ಹುಟ್ಟು ಹಬ್ಬ

ಕವಿರತ್ನ ಕಾಳಿದಾಸ ಚಿತ್ರೀಕರಣ ನಡಿತ ಇತ್ತು.  
ಕಾಳಿದಾಸ (ಬೀರ) ಕಾಳಿ ಮಾತೆಯಾ ಆಶೀರ್ವಾದ ಪಡೆಯುವ 
ದೃಶ್ಯ ಆಗಬೇಕಿತ್ತು. ಆಗ ನಡೆದ ಒಂದು ಸಂಭಾಷಣೆ 


ಬೀರ : ಮಾತೆ ನಿನ್ನ ಕಣ್ಣುಗಳನ್ನು ನೋಡ್ತಾ ಇದ್ದಾರೆ ಭಕ್ತಿ ಭಾವ
ತುಂಬಿ ಬರುತ್ತೆ


ಕಾಳಿ ಮಾತೆ : ವತ್ಸ, ಹಾಗೇನು ಇಲ್ಲ, ಆದರೆ ಹೊರಗೆ ಯಾಕೆ 
ಅಷ್ಟೊಂದು ಬೆಳಕು


ಬೀರ : ಅಲ್ಲಿ ದೇವಿ ನಿಂತಿದ್ದರೆ, ನಾನು ಅವರಿಗೆ ಕೈ ಮುಗಿಯಲೋ
ಅಥವಾ ನಿನಗೆ ಕೈ ಮುಗಿಯಲೋ ಗೊತ್ತಾಗ್ತಾ ಇಲ್ಲ..
ಅವರ ಕಣ್ಣುಗಳಲ್ಲಿ ಇರುವ ಕಾಂತಿ ಅವರ ಬಗ್ಗೆ ಭಕ್ತಿ ಬರುತ್ತದೆ 
ಕಾಳಿ ಮಾತೆ: ಮೊದಲು, ನಿನಗೆ ವರ ಕೊಡುತ್ತೇನೆ.
ನಂತರ ದೇವಿಯನ್ನ ಮಾತಡಿಸ್ತಿನಿ. 
ಕಾಳಿ ಮಾತೆ: ಮಗು ನೀನು ಯಾರು


ದೇವಿ : ಮಾತೆ ನನ್ನ ದೇವಿ ಅಂತ ಗುರುತಿಸುತ್ತಾರೆ, ನನ್ನ ಹೆಸರು 
ಆಶಾ ಜ್ಞಾನ ಸರ್ಜಾ ಅಂತ. 


ಕಾಳಿ ಮಾತೆ: ಓಹ್ ತಿಳಿಯಿತು, ನಿನ್ನ ಕಣ್ಣುಗಳಲ್ಲಿ ಇರುವ 
ಕಾಂತಿ ಎಂತವರನ್ನು ಮಂತ್ರ ಮುಗ್ಧರನ್ನಾಗಿ ಮಾಡುತ್ತದೆ, ಪಾಪ 
ಕಾಳಿದಾಸನದು ಏನು ತಪ್ಪಿಲ್ಲ..ನಿನ್ನ ಹುಟ್ಟು ಹಬ್ಬಕ್ಕೆ ಆಶಾಭಾವ,
ಜ್ಞಾನದಾಹ, ಸಂತೋಷ, ಸುಖ ಎಲ್ಲವು ಸರಯು ನದಿ ತರಹ 
ಹರಿಯುತ್ತಾ ಇರಲಿ ಇದು ನನ್ನ ಆಶಿರ್ವಾದ, ಹಾಗು ಮಮತೆಯ ನುಡಿ.