Friday, July 1, 2011

ಶಶಿಗೆ ಜನ್ಮ ದಿನದ ಶುಭಾಶಯಗಳು...

ಪ್ರಪಂಚದಲ್ಲಿ ಶಶಿಯ ಅಭಿಮಾನವೇ ಕೀರ್ತಿಯೇ ಅಧಿಕವಾಗಿರಲು...ಸೃಷ್ಟಿಕರ್ತನಾದ ಬ್ರಹ್ಮನು ಶಶಿಯ ಅಭಿಮಾನವನ್ನು ಒಂದು ಕಡೆ..ಕೈಲಾಸವನ್ನು ಒಂದು ಕಡೆ ಇಟ್ಟನು..
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಕೈಲಾಸದ ಮೇಲೆ ನಂದಿಯನ್ನು ಇರಿಸಿದನು..
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಕೈಲಾಸದ ಮೇಲೆ ಪರಶಿವನನ್ನು ಕೂರಿಸಿದನು.... .
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ವೆಂಕಿಯನ್ನು ಕೂರಿಸಿದನು.... .
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ಲೋಕಿಯನ್ನು ಕೂರಿಸಿದನು.....
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ಜೆ. ಎಂ. ನನ್ನು ಕೂರಿಸಿದನು
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಪರಶಿವನ ಜೊತೆ ಶ್ರೀಕಿ ಯನ್ನು ಕೂರಿಸಿದನು
 
ಆಗಲು ಶಶಿಯ ಕೀರ್ತಿಯೇ ಅಧಿಕವಾಯಿತು..
 
ಕಟ್ಟಕಡೆಗೆ ಪ್ರತಿಭಾ ಅಕ್ಕನನ್ನು ಕೂರಿಸಿದನು...
 
ಆಗ ತಕ್ಕಡಿ ಸಮವಾಯಿತು
 
ಸಾರಾಂಶ ಏನು ಎಂದರೆ...ನಮ್ಮ ಪ್ರೀತಿಯ ಶಶಿಯ ಅಭಿಮಾನದ ತೂಕ..ಕೈಲಾಸ, ನಂದಿ, ಪರಶಿವ, ಶಶಿಯ ಜೀವದ ಗೆಳೆಯರಾದ ಲೋಕಿ, ವೆಂಕಿ, ಶ್ರೀಕಿ, ಜೆ. ಎಂ. ಇವೆರಲ್ಲ ತೂಕಕ್ಕಿಂತ ಅಧಿಕ..ಅದನ್ನು ಸರಿತೂಗಿಸಲು ಶಶಿಯ ಸತಿ ಪ್ರತಿಭಾ ಅಕ್ಕ ಬರಬೇಕಾಯಿತು..
 
ಇಂಥ ನಲ್ಮೆಯ ಶಶಿಗೆ ಜನ್ಮ ದಿನದ ಶುಭಾಶಯಗಳು...
 
(ಕವಿರತ್ನ ಕಾಳಿದಾಸ ಸಿನೆಮಾದಿಂದ ಅಣ್ಣಾವ್ರು ಹೇಳಿದ ಸಂಭಾಷಣೆ ಸ್ಪೂರ್ತಿಯಿಂದ ಬರೆದ ಕಿರುನುಡಿ)