Saturday, October 29, 2011

ಜಾಕಿ ಅಮೋಘ ಐದೂವರೆ ಘಂಟೆಗಳ ಪ್ರದರ್ಶನ


ನಮ್ಮ ಮನೆಯಲ್ಲಿ ಕುತೂಹಲಿಗಳಾಗಿ ಜಾತಕ ಪಕ್ಷಿಗಳಂತೆ "ಜಾಕಿ" ಸಿನಿಮಾ ನೋಡಲು ಕಾಯುತ್ತಿದ್ದಾಗ...

ಅಣ್ಣನ ಮಗಳು ಹೇಳಿದಳು "ಜಾಕಿ" ಚೆನ್ನಾಗಿಲ್ಲ...ಅಂತ..

ಆದ್ರೆ ಹಾಡುಗಳು, ಹೊಡೆದಾಟಗಳು, ಕಾಲು ಕುಣಿಸುವಂತ ಸಂಗೀತ ಇದ್ದ ಸಿನೆಮಾದ ಬಗ್ಗೆ ನನಗೆ ಸಹಜವಾಗೇ ತವಕ ಕಾಡಿತ್ತು..

ಅದರಲ್ಲೂ ಅಣ್ಣಾವ್ರ ಬ್ಯಾನೆರ್ ಅಡಿ ತಯಾರಾದ ಚಿತ್ರವಾದ್ದರಿಂದ ಸಹಜವಾಗೇ ಉತ್ಸಾಹ ತುಂಬಿತ್ತು...

ಸರಿ ಘಂಟೆ ೬ ಹೊಡೆಯಿತು...ಶುರುವಾಯಿತು...

ಮೊದಲ ಹಾಡು ಅತಿ ಅದ್ಭುತ ಎನ್ನುವ ಹಾಗೆ ಚಿತ್ರೀಕರಿಸಿದ್ದಾರೆ..ಲಯಬದ್ದವಾದ ಸಂಗೀತ, ನೃತ್ಯ ಅಮಲು ಬರೆಸುವ ಹಾಗೆ ಇತ್ತು..

ಮುಂದೆ ಶುರುವಾಯ್ತು ಮಾರಿ ಹಬ್ಬ...ಸಾರೀ ಜೈ ಮಾನ್ಕಾಲಮ್ಮನ  ಹಬ್ಬ...


ಅಮ್ಮ ತಮ್ಮ ಕೆಲಸವೆಲ್ಲ ಮುಗಿಸಿ ಸುಮಾರು ಒಂಭತ್ತು ಘಂಟೆಗೆ ಬಂದು ಕೇಳಿದ್ರು..ಎಲ್ಲಿಗೆ ಬಂತೂ ಸಿನಿಮಾ ಅಂತ.....


ಅದು ಶುರುವಾದ ಕಡೆನೇ ಇತ್ತು...

ಜಾಹಿರಾತಿನ ಮಧ್ಯೆ ಸಿನಿಮಾದ ಚೌಕಟ್ಟನ್ನು ಅರಿತುಕೊಳ್ಳಲು ಸಮಯ ಹಿಡಿಯುತ್ತಿತ್ತು...

ಹಾಗು ಕತೆ ಹುಡುಕುತ್ತ ಮನಸು ಜಾಹಿರಾತಿನ ಮಧ್ಯೆ ಅಲೆದಾಡುತ್ತ ಹೆಣಗುತ್ತಿತ್ತು

ನಾನು ಹಟಕ್ಕೆ ಬಿದ್ದವನಂತೆ ಏನಾದ್ರು ಸರಿ ನೋಡಿಯೇ ಬಿಡೋಣ ಅಂತ ಕುಳಿತೆ ಇದ್ದೆ..

ಊಟ ಆಯಿತು..ಜಾಕೀ ಮುಗಿಯಲಿಲ್ಲ..ಹಾಸಿಗೆ ಹಾಕಿ ಶಯನಕ್ಕೆ ಮನಸು ಸಿದ್ದವಾಯಿತು..ಜಾಕಿ ಮುಗಿಯಲಿಲ್ಲ..

ಮನೆ ಸುತ್ತ ಮುತ್ತ ಪಟಾಕಿ ಸದ್ದು ಕ್ಷೀಣವಾಗುತ್ತ ಸಾಗಿತು...ಆದರು ಜಾಕಿ ಮುಗಿಯಲಿಲ್ಲ..

ಕಡೆಗೆ ಮುಗಿದಾಗ ರಾತ್ರಿ ೧೧.೨೯...

ದೂರದಲ್ಲಿ ಎಲ್ಲೋ..ಅಣ್ಣಾವ್ರ ಹಾಡು "ನಾವು ಯಾರಿಗೂ ಕಮ್ಮಿ ಇಲ್ಲ" ಹಾಗೆ ತೇಲಿ ಬರ್ತಾ ಇತ್ತು...

ಸೋನಿ ವಾಹಿನಿಯಂತೆ..ತಿರುಳಿಲ್ಲದ ಸುಮಾರು ಎರಡು ಘಂಟೆಗಳ  ಸಿನೆಮಾವನ್ನು ಐದು ಘಂಟೆಗಳಿಗೂ ಮಿಗಿಲಾಗಿ ಹಿಗ್ಗಿಸಿ ದಾಖಲೆ ನಿರ್ಮಿಸಿದ ಉದಯ ವಾಹಿನಿಗೆ ದೂರದಿಂದಲೇ ಪ್ರಣಾಮಗಳು...

ಹುರುಳಿಲ್ಲ, ತಿರುಳಿಲ್ಲ..ನಮ್ಮ ನಾಡಿನ ಜನತೆ ಇದನ್ನ ಯಾಕೆ ಮುಗಿಬಿದ್ದು ನೋಡಿದರು ಹಾಗು ಕಳೆದ ವರ್ಷದ ಅತ್ಯಂತ ಯಶಸ್ವೀ ಚಿತ್ರ, ಹಣಗಳಿಕೆಯಲ್ಲಿ ಯಾಕೆ ಮುಂದೆ ಇತ್ತು .........?

ರಹಸ್ಯ ನನಗೆ ಚಿದಂಬರ ರಹಸ್ಯಾವಾಗೆ ಉಳಿಯಿತು...

ಅಣ್ಣಾವ್ರು ಹಾಗು ಅವರ ಹಿಂದಿನ ಶಕ್ತಿ ವರದಪ್ಪನವರು ಇಲ್ಲದ ಅನುಪಸ್ಥಿತಿ ಎದ್ದು ಕುಣಿಯುತ್ತ ಇತ್ತು...

ಮನಸು ಒಮ್ಮೆ ತಿರುಗಿ ನೋಡಿದಾಗ...ನನ್ನೇ ಶಪಿಸಿತು...ಅನ್ಯಾಯವಾಗಿ ನಿನ್ನ ಜೀವನ ಅದ್ಭುತ ೫.೩೦ ಘಂಟೆಗಳನ್ನ ಹಾಳು ಮಾಡಿದೆ ಅಂತ...