Wednesday, April 27, 2011

Why Nightingale is not singing from 23rd April 2011

The residents of Kumaraswamy Layout, Uttarahalli banashankari residents set up a form, and brought a complaint to R. Ashok - Home Minister of Karnataka.  The discussion was as below

R. Ashok : Hello everybody, tell whats your issues

Residents: This is the month of April, and Mango trees are well grown, fruits are better this month, inspite of all this, Nightingale bird is not singing

R. Ashok: Ok, this is a serious issue, has anyone tried to find out the route cause.

Residents : Yes, Sir, everything was ok till 22nd April 11, but from 23rd morning onwards Nightingale is not singing

R. Ashok: Then today is 27th April, what you people were doing so many days,

Residents: We tried found out the real reason, when we analysed, we found the reason that, Swathi is singing all the songs so effortlessly, after hearing that Nightingale decided she is a great singer, and it
stopped singing it seems

R. Ashok : Thats fine, but why it stopped from  23rd April 2011

Residents: It was the day Swathi born on this date, so cuckko realised that, and stopped

R. Ashok : Thats great, and also i appreciate you people's patience to sort out the issue, and find the route cause, not to worry, i will instruct the parents of Swathi to convince Cuckkoo, and also, on my behalf send swathi some great gifts, and also well wishes from our side. 
Wish swathi a belated birthday wishes due to the delay in information brought to my notice

Have a wonderful days of singing, and years ahead.

Sunday, April 24, 2011

Koravangaladalli K B C - Jnanesha

ಅಮಿತಾಬ್  ಕೆ. ಬಿ. ಸಿ. ಕಾರ್ಯಕ್ರಮದಲ್ಲಿ ಕೇಳಿರುವ ಕೆಲವು ಪ್ರಶ್ನೆಗಳು 

೧. ಏಪ್ರಿಲ್ ೨೪ ಯಾವುದಕ್ಕೆ ಹೆಸರುವಾಸಿ
     ೧   ಅಣ್ಣಾವರ ಜನುಮದಿನ ೨. ಸಚಿನ್ ಜನುಮದಿನ ೩. ವಾರದಲ್ಲಿ ಒಂದು ವಾರ ೪. ಎಂಟರ ನಂಟು (೪ ಕ್ಷ ೨ = ೮)

೨. ಅಣ್ಣಾವ್ರು ಯಾವುದಕ್ಕೆ ಹೆಸರು ವಾಸಿ
     ೧   ಕನ್ನಡ ಸಿನಿಮಾ ಅಭಿನಯ   ೨. ಗಾಯನ  ೩. ಅಭಿನಯ ಮತ್ತು ಗಾಯನ  ೪. ಅಭಿಮಾನಿ ದೇವರುಗಳು 

೩. ಈ ಕೆಳಗಿನ ಸಂಭಾಷಣೆ ಯಾವತ್ತು ನಡೆದಿದ್ದು
    ೧. ಅಣ್ಣಾವ್ರಿಗೆ ದಾದಾ ಸಾಹೇಬ್ ಫಾಲ್ಕೆ ಬಂದಾಗ ೨. ಸಚಿನ್ ಅಮೋಘ ಶತಕ ಬಾರಿಸಿ ಇಂಡಿಯಾ ಸೋತಾಗ ೩.    
        ಜ್ಞಾನೇಶ್ ಸಿ. ಎ ಮುಗಿಸಿದಾಗ ೪. ಶ್ರೀಕಾಂತನಿಗೆ ತಲೆ ಕೆಟ್ಟು ಬರೆದಾಗ 

"ಅಮಿತಾಬ್ : ಅಣ್ಣಾವ್ರೆ ನಮಸ್ಕಾರ, ಕೂಲಿ ಸಿನಿಮಾದಲ್ಲಿ ಅಭಿನಯ ಮಾಡಿ ಅಂತ ನಾನು ಕೇಳಿದ್ರು ನೀವು ಮಾಡಲಿಲ್ಲ

 ಅಣ್ಣಾವ್ರು : ಬಚ್ಚನ್ ಸಾಹೇಬ್ರೆ, ಬಚ್ಚನ್ ಸಾಹೇಬ್ರೆ, ನಮಸ್ಕಾರ...ಹೌದು ಅದು ನನ್ನ ಅಭಿಮಾನಿ ದೇವರುಗಳು ಒತ್ತಾಯ   
               ಮಾಡಲಿಲ್ಲ..

ಅಮಿತಾಬ್ : ಹೋಗ್ಲಿ ಬಿಡಿ, ನಾನು ಅಮೃತಧಾರೆ ಎನ್ನುವ ಸಿನಿಮಾ ಮಾಡಿದಾಗ ನಿಮ್ಮ ಜನ್ಮ ದಿನದಲ್ಲಿ 
                  ಪಾಲುಗೊಂಡಿದ್ದೆ..ಅಂದಹಾಗೆ ಇನ್ನಿಬ್ಬರು ಅತಿಥಿಗಳು ಬರಬೇಕಿತ್ತು

ಅಣ್ಣಾವ್ರು : ಹೌದು, ನೀವು ಹೇಳಿದ್ದಿರಿ, ಇಬ್ಬರನ್ನ ಕರೆದು ಕೊಂದು ಬರ್ತಿರ ಅಂತ..ಅಂದ ಹಾಗೆ ಯಾರವರು?

ಅಮಿತಾಬ್ : ಓಹ್ ಓಹ್ ಬಂದ್ರು, ಬಂದ್ರು, ಅಣ್ಣಾವ್ರೆ ಒಬ್ಬರು ಕ್ರಿಕೆಟ್ ಆಟದಲ್ಲಿ  ಈಶ, ಇನ್ನೊಬ್ಬರು ಜ್ಞಾನದಲ್ಲಿ ಈಶ..

ಅಣ್ಣಾವ್ರು : ಓಹ್ ಓಹ್ ಗೊತ್ತಾಯ್ತು, ಬನ್ನಿ ಜ್ಞಾನೇಶ್ ಅವರೇ, ನಮಸ್ಕಾರ ನಿಮ್ಮ ಪ್ರತಿಭೆಗೆ...ನಿಮ್ಮ ಹೆಸರಲ್ಲೇ ಮಹೇಶ್ವರ  
              ಇದ್ದಾನೆ...ಬನ್ನಿ ಬನ್ನಿ ಸಚಿನ್ ಅವರೇ, ನಿಮ್ಮನ್ನ ಹೊಗಳೋದು ಸೂರ್ಯನಿಗೆ ದೀಪ ಹಿಡಿದಂಗೆ 

ಅಮಿತಾಬ್ : ಅಣ್ಣಾವ್ರೆ. ಸಚಿನ್ ಬಾಯಿ, ಜ್ಞಾನೇಶ್ ಸಾಬ್,  ಕೇಕ್ ಕಟ್ ಮಾಡೋಣ, ನೀವು ಮೂವರೂ ನಿಮ್ಮ ಜನ್ಮ ದಿನವನ್ನು  
                  ನನ್ನ ಮನೆಯಲ್ಲಿ ಆಚರಿಸುತ್ತಾ ಇದ್ದೀರಾ, ತುಂಬಾ ಕುಶಿ ಆಗ್ತಾ ಇದೆ, ಜಯಾಜಿ, ಅಭಿ, ಐಶು ಕೇಕ್ ತನ್ನಿ.
                  ಕಾರ್ಯಕ್ರಮ ತುಂಬಾ ಚೆನ್ನಾಗಿದೆ...ನಮಸ್ಕಾರ ಮುಂದಿನ ವಾರ ಮತ್ತೆ ಬೇಟಿ ಆಗೋಣ."  
                 ಎಲ್ಲರೂ ಎದ್ದು ನಿಂತು, ಸಂಭ್ರಮ  ನೋಡ್ತಾ ಇದ್ದಾರೆ..

ಉತ್ತರಗಳು : 

೧. ಸಿನಿಮಾ ಜಗತ್ತಿನ ದೇವರು (ರಾಜಣ್ಣ), ಕ್ರಿಕೆಟ್ ಜಗತ್ತಿನ ದೇವರು (ಸಚಿನ್),ಜ್ಞಾನದ ಈಶ (ಜ್ನಾನೆಶ) ಹುಟ್ಟು ಹಬ್ಬ
೨. ಅಭಿಮಾನಿಗಳ ದೇವರು
೩. ಇದು ಜ್ನಾನೆಶನ ,ಅಣ್ಣಾವ್ರು , ಸಚಿನ್,  ಹುಟ್ಟು ಹಬ್ಬಕ್ಕೆ  ಒಂದು ದಶಕದ ಕೆಳಗೆ ಕೆ. ಬಿ. ಸಿ. ಯಲ್ಲಿ ಕೇಳಿದ ಒಂದು ಪ್ರಶ್ನೆಗಳ ಗುಚ್ಛ

ಬನ್ನಿ ಎಲ್ಲರು ಜ್ನಾನೆಶನ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳೋಣ

Saturday, April 23, 2011

Cousin Brother - Swamy - Birthday 23rd April 2011

ವೆನಿಲಾ: ಬಾಳೆ ಗಿಡವೇ, ಇವತ್ತು ನನ್ನ ಬಹು ಮುಖ್ಯ ಸಂತೋಷದ ದಿನ..


ಬಾಳೆ: ಏನ್ ಸಮಾಚಾರ ವೆನಿಲಾ, ಏನು ಅಷ್ಟು  ಖುಷಿ 

ವೆನಿಲಾ: ಕಳಸಾಪುರಕ್ಕೆ ನನ್ನನ್ನು ಪರಿಚಯಿಸಿದ ನನ್ನ ಜನ್ಮಧಾತನ ಹುಟ್ಟು ಹಬ್ಬ 

ಬಾಳೆ: ಹೌದಾ!!!!!! ಬಹಳ ಒಳ್ಳೆಯ ಸಮಾಚಾರ...

ವೆನಿಲಾ: ನನ್ನ ಯಜಮಾನರು ನನ್ನನ್ನು ನೋಡಲು ಬಂದಾಗ ಹೇಗೆ ಸ್ವಾಗತ ಮಾಡೋದು? 

ಬಾಳೆ: ಬಹಳ ಸುಲಭ, ನೀನು ಸುವಾಸನೆಗೆ ಹೆಸರು ಅಲ್ವ, ಅವರು ಬರುವ ಹಾದಿಯೆಲ್ಲ ಗಮ ಗಮ ಪರಿಮಳ ಬರುವ ಹಾಗೆ ಮಾಡು, ನಾನು ರಸಬರಿತ ಹಣ್ಣುಗಳನ್ನು ಕೊಡುತ್ತೇನೆ, ತೆಂಗಿನ ಮರ, ಒಳ್ಳೆಯ ಎಳನೀರು ಕೊಡುತ್ತೇನೆ ಅಂತ ಹೇಳ್ತಾ ಇದೆ ನೋಡು, ಅದಕೆ ಒಳ್ಳೆ ಫಸಲು ಕೊಡುತ್ತೇನೆ ಅಂತ ಹೇಳ್ತಾ ಇದ್ದಾನೆ, ಇದರ ಜೊತೆಗೆ ಕೆರೆ ಏರಿಯ ಮೇಲೆ ನೋಡು, ಕೋರವಂಗಲದ ಕುಟುಂಬ ಸದಸ್ಯರೆಲ್ಲ ಒಳ್ಳೆಯ ಶುಭಾಶಯಗಳನ್ನು ಕೋರುತ್ತ ನಿಂತಿದ್ದಾರೆ..ಇದೆಲ್ಲವೇ ಸುಯೋಗ..

ವೆನಿಲಾ: ಹೌದು, ಹೌದು, ತುಂಬಾ ಖುಷಿಯಾಗುತ್ತ ಇದೆ, ನೀವೆಲ್ಲರೂ ನನ್ನ ಜೊತೆ ಇರುವುದು...

ಸ್ವಾಮಿ ನಿಮಗೆ ಜನ್ಮ ದಿನ ಸದಾ ಖುಷಿ ಇರಲಿ, ಬರಲಿ, ತರಲಿ ಅಂತ ಕೋರುತ್ತೇವೆ

ಇಂತಿ ನಿಮ್ಮ
ವೆನಿಲಾ, ಬಾಳೆ, ತೆಂಗು, ಅದಕೆ ಹಾಗು ನೀವು ಪ್ರೀತಿಯಿಂದ ಬೆಳೆಸಿದ ನಮ್ಮ ಕುಟುಂಬದ ಎಲ್ಲರಿಂದಲೂ ಶುಭ ಹಾರೈಕೆಗಳು

Monday, April 4, 2011

ಸ್ವರ್ಗದಲ್ಲಿರುವ ನನ್ನ ಅಜ್ಜ-ಅಜ್ಜಿ ಕಡೆಯಿಂದ ಉಗಾದಿಯ ಶುಭಾಶಯಗಳು 4th April 2011


ಹೀಗೆ ಸ್ವರ್ಗ ಲೋಕದಲ್ಲಿ ರಂಗಸ್ವಾಮಿ ದಂಪತಿಗಳು ವಿಹಾರ ಮಾಡುತ್ತಿದ್ದಾಗ ನಡೆದ ಒಂದು ಸಂಭಾಷಣೆ

ರಂಗಸ್ವಾಮಿ : ಎನ್ರೆ, ಭೂಲೋಕದಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಎಲ್ಲರು ಕ್ಷೇಮವಾಗಿದ್ದರೆ.  ನನಗೆ ಬಹಳ ಸಂತೋಷ ಆಗ್ತಾ ಇದೆ.  ನಾವು ಪಟ್ಟ ಕಷ್ಟ, ನಮ್ಮ ಮುಂದಿನ ಪೀಳಿಗೆಗೆ ಬಾರದಿರಲಿ ಅಂತ ಅಶಿರ್ವದಿಸುತ್ತೇನೆ

ನರಸು : ಹೌದು ರೀ, ನನಗು ತುಂಬಾ ಖುಷಿ ಆಗುತ್ತಿದೆ, ನಮ್ಮ ಮಕ್ಕಳ, ಮೊಮ್ಮಕ್ಕಳ, ಏಳಿಗೆ, ಯಶಸ್ಸು, ನನಗೆ ಬಹಳ ಸಂತಸ ತಂದಿದೆ.  ಎಲ್ಲರು ಅವರವರ ಜೀವನದಲ್ಲಿ ಸುಖ ಸಮೃದ್ದಿ ಕಂಡಿದ್ದಾರೆ.  

ರಂಗಸ್ವಾಮಿ : ಇಂದ್ರ ಹೇಳಿದ, ಅಪ್ಪು, ಮಂಜಣ್ಣ, ಕೃಷ್ಣ, ನಾಗರಾಜ, ಕುಮಾರ, ಗೌರಿ, ನಾಗಲಕ್ಷ್ಮಿ (ಬಯಲಹಳ್ಳಿ) ಎಲ್ಲರಿಗು ಸ್ವಲ್ಪ ಅರೋಗ್ಯದಲ್ಲಿ ತೊಂದರೆ ಇತ್ತು ಅಂತ, ಈಗ ಹೆಂಗಿದ್ದಾರೋ ತಿಳಿಯಬೇಕು.  

ನರಸು : ಏನೋ ಯೋಚನೆ ಇಲ್ಲ, ನಮ್ಮ ಆಶೀರ್ವಾದ, ನಮ್ಮ ಹಾರೈಕೆ ಅವರನ್ನ ವಜ್ರ ಕವಚದಂತೆ ಕಾಪಾಡುತ್ತೆ.  ಇಂದು ಯುಗಾದಿ ಹಬ್ಬ ಅಲ್ವ, ಬೇವು ಬೆಲ್ಲ ತಿಂದು ದೇಹವು ವಜ್ರವಾಗುತ್ತದೆ. ಎಲ್ಲರು ಯುಗಾದಿ ಹಬ್ಬದಲ್ಲಿ ಖುಷಿ ಪಡ್ತಾ ಇದ್ದಾರೆ.   ನಾನು ಜನವರಿ ೨೯ಕ್ಕೆ ಹೋಗಿದ್ದಾಗ, ಎಲ್ಲ ಮಕ್ಕಳು, ಮೊಮ್ಮಕ್ಕಳು, ಸೊಸೆಯರನ್ನ, ಮರಿಮೊಮ್ಮಕ್ಕಳನ್ನ ನೋಡಿದೆ, ಖುಷಿ ಆಯಿತು.  ಎಲ್ಲರು ಎಷ್ಟು ಒಗ್ಗಟ್ಟಾಗಿ, ಬೆರೆಯುತ್ತಾ ಕೆಲಸ ಮಾಡುತ್ತಾರೆ, ನೋಡಿದರೆ ಮನಸಿಗೆ ಬಹಳ ಮುದ ಕೊಡುತ್ತೆ.

ರಂಗಸ್ವಾಮಿ : ಹಾ ಹೌದು, ಕಶ್ಯಪ ಮುನಿಗಳು ಹೇಳ್ತಾ ಇದ್ದರು ಇದರ ಬಗ್ಗೆ.  ನನ್ನ ಕುಟುಂಬ ಸಂತೋಷದಿಂದ, ಅರೋಗ್ಯದಿಂದ ಇರಲಿ.  ನಾನು ಜೂನ್-ಜುಲೈನಲ್ಲಿ ಹೋಗಿ ನೋಡಿ ಬರುತ್ತೇನೆ.  

ನರಸು : ಇಲ್ಲ, ಅಷ್ಟು ದೂರ ಕಾಯಬೇಕಿಲ್ಲ, ಮೇ ತಿಂಗಳಲ್ಲಿ, ನಮ್ಮ ಮೊಮ್ಮಕ್ಕಳು, ನಿಮಗೆ ಮಾಡಿದಂತೆ, ಜನ್ಮ ಶತಾಬ್ಧಿ ಆಚರಿಸುತ್ತಾರೆ.  ಅದರ ಬಗ್ಗೆ ಮಾತಾಡಿಕೊಳ್ತಾ ಇದ್ದರು, ಅದು ನನಗೆ ಕಿವಿಗೆ ಬಿತ್ತು.

ಏನೇ ಅಗಲಿ, ನಮ್ಮ ಕುಟುಂಬದ ಹೆಸರು ಉಳಿಸೋಕೆ ಚಿನ್ನದಂಥ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು  ಇದ್ದಾರೆ.  

ರಂಗಸ್ವಾಮಿ : ಹೌದು ಕಣ್ರೆ, ತುಂಬಾ ಅದೃಷ್ಟಶಾಲಿಗಳು ನಾವಿಬ್ಬರು.   ಹೊಸ ವರುಷ, ಹೊಸ ಹರುಷ, ತರಲಿ ಅಂತ ಹೇಳುತ್ತಾ, ನಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭ ಹಾರೈಕೆ ಹೇಳೋಣ.

ಅಜ್ಜ-ಅಜ್ಜಿಯ ಈ ನುಡಿಮುತ್ತುಗಳು ಬಂದ ಮೇಲೆ, ನಮ್ಮ ಯುಗಾದಿಯಾ ಹಬ್ಬ ಸಂತಸದಾಯಕವಾಗಿರುತ್ತೆ..

ಸಮಸ್ತ ಕೋರವಂಗಲ ಕುಟುಂಬಕ್ಕೆ ಯುಗಾದಿಯ ಶುಭಾಶಯಗಳು.