Sunday, December 25, 2011

ಪ್ರಕಾಶ್ ಚಿಕ್ಕಪ್ಪನವರಿಗೆ ಹುಟ್ಟು ಹಬ್ಬದ ಶುಭಾಶಯಗಳು

ಕಪಾಟಿನಲ್ಲಿರುವ ಪುಸ್ತಕಗಳು ಒಬ್ಬರಿಗೊಬ್ಬರು ಮಾತಾಡುತಿದ್ದವು...

"ನಮ್ಮನ್ನು, ನಮ್ಮ ಬಳಗವನ್ನು ಎಷ್ಟು  ಚೆನ್ನಾಗಿ ಒಂದೇ ಕಡೆ ಸೇರಿಸಿದ್ದಾರೆ ನಮ್ಮ ಯಜಮಾನರು"

"ಮನೆಗೆ  ಅತಿಥಿಗಳು ಬಂದು ನಮ್ಮನ್ನ ನೋಡಿ  ಪುಸ್ತಕಗಳು ಚೆನ್ನಾಗಿ ಒಂದಾಗಿ  ತುಂಬು ಸಂಸಾರ ನಡೆಸುತ್ತಿದ್ದಾರೆ ಅಂತ ಹೇಳಿದಾಗ ಎಷ್ಟು ಸಂಭ್ರಮ ಅಲ್ವ..."

"ಇದಕ್ಕೆಲ್ಲ ಕಾರಣ ನಮ್ಮಲ್ಲಿರುವ "ಪ್ರಕಾಶ"ವನ್ನು ಸುತ್ತ-ಮುತ್ತಲಿನವರಿಗೆ ಪಸರಿಸುತ್ತಿರುವ ನಮ್ಮ  ಯಜಮಾನರು... 
ಇಂದು ಅವರ  ಜನುಮ ದಿನ ..ಅವರಿಗೆ ಏನಾದರು ಕಾಣಿಕೆ ನೀಡಬೇಕು..."

ಅಷ್ಟರಲ್ಲಿ ಸುಂದರಾವಾಗಿ ಸಜ್ಜುಗೊಂಡಿದ್ದ ತಾಮ್ರ, ಹಿತ್ತಾಳೆ ಪಾತ್ರೆ-ಪಡಗಗಳು  "ಪುಸ್ತಕಗಳೇ ಆಗಲೇ ನಾವು ನಮ್ಮ ಯಜಮಾನರಿಗೆ ಹುಟ್ಟು ಹಬ್ಬ ಕಾಣಿಕೆ ತಂದಿದ್ದೇವೆ..."
ನೀವು ಕಪಾಟಿನಲ್ಲಿ ನಿಮ್ಮನ್ನ ಹಾಗು ನಿಮ್ಮ ಮನೆ  ಕಪಾಟನ್ನು ಸಜ್ಜುಗೊಳಿಸಿಕೊಳ್ಳುತಿದ್ದಾಗ ನಾವೆಲ್ಲರೂ ತಂದಿದ್ದೆವು...ನೋಡಿ ನಮ್ಮ ಕುಟುಂಬದ ಹಿರಿಯಣ್ಣ "ಮೈತ್ರಿ" ಕೂಡ ನಮಗೆ ಸಹಾಯ ಮಾಡುತಿದ್ದಾರೆ..."

ಪುಸ್ತಕಗಳು, ಪಾತ್ರೆ-ಪಡಗಗಳು, ಮೈತ್ರಿ ಎಲ್ಲವು ಜೋರಾಗಿ ನಲಿಯುತ್ತ ಕುಣಿಯುತ್ತ ತಮ್ಮ ಪ್ರೀತಿಯ ಯಜಮಾನರಿಗೆ  ಬೆಳಕಿನ ಪ್ರಕಾಶ ಬೀರುತ್ತ ಹುಟ್ಟು ಹಬ್ಬದ ಶುಭಾಶಯಗಳನ್ನ ಕೋರಲು ಯಜಮಾನರ ಕಡೆ ಧಾವಿಸುತ್ತ ನಡೆದವು...

ಅಷ್ಟರಲ್ಲಿ ಜ್ಞಾನವಂತರು, ವಿನಯವಂತರು "ಪ್ರಕಾಶ್ ಮತ್ತು ಶಾರದ ದಂಪತಿಗಳು ತಮ್ಮ ಪರಿವಾರದೊಡನೆ "ಮೈತ್ರಿ" ಒಳಗೆ ಬರುತಿದ್ದರು...

ದ್ವಾರದಲ್ಲೇ ಕಾಯುತಿದ್ದ ಪುಸ್ತಕಗಳು ಮತ್ತು ಅದರ ಕುಟುಂಬ ಸದಸ್ಯರು "ಯಜಮಾನರಾದ ಪ್ರಕಾಶ ಧಣಿಗಳೇ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳು, ದೇವರು  ನಮ್ಮ ಕುಟುಂಬಕ್ಕೆ ಇನ್ನಷ್ಟು ಸದಸ್ಯರನ್ನ ಸೇರಿಸಲಿ ಹಾಗೂ  ನಿಮ್ಮ ಜ್ಞಾನದ ದಾಹ ಇನಷ್ಟು ಹೆಚ್ಚ್ಹಾಗಲಿ, ನಿಮಗೆ ಅರೋಗ್ಯ, ಐಶ್ವರ್ಯ, ಸುಖ ಸಮೃದ್ಧಿ ಸಿದ್ದಿಸಲಿ" 

ಚಿಕ್ಕಪ್ಪ ಹುಟ್ಟು ಹಬ್ಬಕ್ಕೆ ನಮ್ಮ ಕಡೆಯಿಂದ ಕೂಡ ಶುಭಾಶಯಗಳು 

1 comment:

  1. ಆತ್ಮೀಯ ಶ್ರೀಕಾಂತನಿಗೆ,
    ನಿನ್ನ ವಿಶ್ವಾಸಕ್ಕೆ ನನ್ನ ಮಾತುಗಳು ತುಂಬಾ ಕಡಿಮೆಯಾಗುತ್ತದೆ. ಮಾತು ಮೀರಿದ ಒಂದು ಸ್ತಿತಿಗೆ ನನ್ನನ್ನು ನಿನ್ನ ಲೇಖನ ಕರೆದೊಯ್ದಿತು. ಹೃದಯತುಂಬಿ ಬಂದ ಮಾತುಗಳಿಗೆ ನಾನು ಚಿರಋಣಿ.
    ಎಲ್ಲರಿಗು ಒಳಿತಾಗಲಿ ಎಂದು ಯಾವಾಗಲು ಹಾರೈಸುವ,
    ನಿಮ್ಮವ ಪ್ರಕಾಶ್

    ReplyDelete