ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ"
This blog is about assembly of words flowed from the key board in the journey of life
ಬೆಲ್ಲಕ್ಕೆ ನೊಣ ಮುತ್ತಿದ ಹಾಗೆ ಎಲ್ಲರೂ ನನ್ನ ಲ್ಯಾಪ್ಟಾಪ್ ಸುತ್ತಾ ಕೂತು ನೋಡುತ್ತಿದ್ದರು..
"ನೋಡ್ರಪ್ಪಾ ದೇವರಿಗೆ ನೈವೈದ್ಯ ಇಟ್ಟು ಅದರ ಕಡೆ ನೋಡುತ್ತಲೇ ಇದ್ದರೇ ದೇವರಿಗೂ ಸಂಕೋಚವಲ್ಲವೇ.. ಜೊತೆಗೆ ದೇವರಿಗೆ ಹೇಗೆ ಬಂದು ನೈವೇದ್ಯ ಸ್ವೀಕರಿಸಬೇಕು.. ಎನ್ನುವ ಗೊಂದಲವೂ ಕಾಡುತ್ತದೆ.. ಹಾಡುವ ಕೋಗಿಲೆಗೆ ಸ್ವತಂತ್ರ ಕೊಟ್ಟಾಗ ಮಾತ್ರವೇ ಹಾಡೋದು ಅಲ್ಲವೇ.. "
ಕಲಿತ ಬುದ್ದಿಯನ್ನೆಲ್ಲಾ ಉಪಯೋಗಿಸಿ ಒಂದಷ್ಟು ಹೇಳಿದ ಮೇಲೆ, ಪ್ರಸಾದ ಸ್ವೀಕರಿಸಿದ ಮೇಲೆ ಭಕ್ತರು ದೇವಸ್ಥಾನದಿಂದ ಹೊರಗೆ ಹೋಗುವಂತೆ.. ಜಾಗ ಖಾಲಿಯಾಯಿತು..
ಬರಹಕ್ಕೆ ೧೯೪೭ ಆಗಸ್ಟ್ ೧೫ ಸಿಕ್ಕಿತು ..
ಅದೊಂದು ಸುಂದರ ಮುಂಜಾವು..
ಬಿಳಿ ಧಿರಿಸಿನಲ್ಲಿ ಮೈಸೂರು ರಸ್ತೆಯ ನಾಯಂಡಹಳ್ಳಿಯ ಬಳಿ ಬಸ್ಸು ಹತ್ತಿದ್ದು ನೋಡಿದ್ದು..
ಡಿವೈನ್ ಫೀಲಿಂಗ್ ಬಂದದ್ದು ಮೊದಲ ನೋಟದಲ್ಲಿಯೇ..
ಹೌದು ಕೆಲವು ಬಂಧಗಳಿಗೆ ಯಾವುದೇ ಬಂಧವಿರೋಲ್ಲ ಅಂತಾರೆ.. ಇವರು ಹಾಗೆ..
ನೀರು ಯಾವುದೇ ಪಾತ್ರೆಗೆ ಹಾಕಿದಾಗ ಆ ಪಾತ್ರಕ್ಕೆ ಹೊಂದುವಂತೆ..ಇವರ ವ್ಯಕ್ತಿತ್ವ..
ಸಮಾಜಮುಖಿ ಕೆಲಸ ಮಾಡಿದರೂ ಇವರು ಅನ್ಮೋಲ್ ರತ್ನ ಆಗೋಕೆ ಇಷ್ಟ ಪಡಲ್ಲ
ತಿರುಗಾಲ ತಿಪ್ಪಿ ಅಂದರೆ ವಾರಾಂತ್ಯಕ್ಕೆ ಪ್ರವಾಸ ಹೊರಟರೂ ಇವರು ತನ್ನನ್ನು ತಾನು ಅಲೆಮಾರಿ ಅಂದುಕೊಳ್ಳೋಲ್ಲ
ವಿದ್ಯೆ ಕಲಿಸುವ ಶಾಲೆಯಲ್ಲಿ ತೊಡಗಿಕೊಂಡಿದ್ದರೂ ತನ್ನನ್ನು ಶಿಕ್ಷಕಿ ಎಂದುಕೊಳ್ಳೋಲ್ಲ
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಗುಂಪಿನಲ್ಲಿ ತಾನು ಸಕ್ರಿಯವಾಗಿದ್ದರೂ ತಾನು ಸಮಾಜ ಸೇವಕಿ ಎಂದು ಗುರುತಿಸಿಕೊಳ್ಳೋಕೆ ಇಷ್ಟ ಪಡಲ್ಲ
ಬದುಕಿನಲ್ಲಿ ಹೆಜ್ಜೆಯನ್ನು ಭಾರವಾಗಿಟ್ಟುಕೊಂಡು ಬಂದಿದ್ದರೂ ಬದುಕು ಹೂವಿನ ಹಾಸಿಗೆ ಎಂದೇ ನಂಬಿ..ಅದನ್ನು ಸಮಾಜಕ್ಕೂ ತೋರಿಸುವ ಗುಣವಿದ್ದರೂ ತಾನು ಸವಾಲುಗಳನ್ನು ಮೆಟ್ಟಿ ನಿಂತ ಈ ಶತಮಾನದ ಮಾದರಿ ಹೆಣ್ಣು ಎಂದು ಕರೆಸಿಕೊಳ್ಳೋದು ಇಷ್ಟವಿಲ್ಲ
ಗೌರೀಶಂಕರಾದ ತಪ್ಪಲಿಗೆ ಹೋಗಿ ಕರುನಾಡ ಬಾವುಟದಲ್ಲಿ ರಾರಾಜಿಸಿದರೂ ತಾನು ಹೆಮ್ಮೆಯ ಕನ್ನಡತಿ ಎಂದು ಹೇಳಿಕೊಳ್ಳುತ್ತಾರೆ ವಿನಹ ಅಸಾಮಾನ್ಯ ಚಾರಣಗಿತ್ತಿ ಎಂದು ಪೋಸ್ಟ್ ಹಾಕೋಲ್ಲ
ಕಾಡುಮೃಗಗಳ ದಟ್ಟ ಕಾಡಿನೊಳಗೆ ಸುತ್ತಾಡಿದರೂ ಪೇಟೆ ಮಂದಿ ಕಾಡಿಗೆ ಬಂದ್ರೂ ಅಂತ ಹೇಳಿಕೊಳ್ಳೋಲ್ಲ
ಸಂತ್ರಸ್ತರಿಗೆ ಆಸರೆ ನೀಡುತ್ತಾರೆ ಸಮಾಜ ಸುಧಾರಕಿಯಲ್ಲ ಮನೋಶಾಸ್ತ್ರಜ್ಞೆ ಅಲ್ಲ
ನೊಂದಿರುವವರಿಗೆ ಸಾಂತ್ವನ ಹೇಳುತ್ತಾರೆ..
ಕವನ ಬರೆಯುತ್ತಾರೆ ಕವಿಯತ್ರಿಯಲ್ಲ
ಲೇಖನ ಬರೆಯುತ್ತಾರೆ ಸಾಹಿತಿಯಲ್ಲ
ತಂಡ ಕಟ್ಟಿ ನೆಡೆಸುತ್ತಾರೆ ನಾಯಕಿಯಲ್ಲ
ಹಾಡುತ್ತಾರೆ ಗಾಯಕಿಯಲ್ಲ
ನರ್ತಿಸುತ್ತಾರೆ ಆದರೆ ನರ್ತಕಿಯಲ್ಲ
ಫೋಟೋ ತೆಗೆಯುತ್ತಾರೆ ಛಾಯಾಗ್ರಾಹಕಿಯಲ್ಲ
ತಾವು ಎಲ್ಲರ ತರಹ ಅನ್ನುತ್ತಾರೆ ಆದರೆ ಮಾನವರಲ್ಲ
ಇವರು ಅಸಾಧಾರಣ ಗುಣವುಳ್ಳ ಭಗವಂತನ ಅದ್ಭುತ ಸೃಷ್ಟಿ ಡಿವೈನ್ ವುಮನ್
DFR DFR ಜನುಮದಿನದಂದು ಇಲ್ಲ ಇಲ್ಲ ಎಂದು ಬರೆದು ನಿಮ್ಮ ಅಗಾಧ ಗುಣಗಳ ಖಜಾನೆಯನ್ನು ತೆರೆದಿಡಲು ಪ್ರಯತ್ನ ಪಟ್ಟಿದ್ದೇನೆ.. ನೀವೊಂದು ಸಾಗರ ಹೇಳಿದಷ್ಟು ಹೇಳುವಂತೆ ಮಾಡುವ ಅಪೂರ್ವ ಗುಣಸಾಗರಿ ನೀವು
ನಿಮ್ಮ ಬ್ಲಾಗ್ ಹೆಸರು ಹೇಳುವಂತೆ.. ಬಿಳಿಮುಗಿಲು ಅದಕ್ಕೆ ಕೊನೆಯೇ ಇಲ್ಲ.. ಆ ಬಿಳುಪಿನ ಹೊಳಪಿಗೆ ಮಾರು ಹೋಗುವವರೇ ಎಲ್ಲಾ... !
ಶುಭವಾಗಲಿ..ಜನುಮದಿನದಂದು ಪ್ರತಿದಿನವೂ .. ಅನುಕ್ಷಣವೂ .. ಸಂತಸ ನಿಮ್ಮ ಸ್ವತ್ತಾಗಿರಲಿ!
ಕನ್ನಡವೋ ಇಂಗ್ಲೀಸೋ ಅಂತ ಗೊಂದಲವಿದ್ದಾಗ.. ತಾಯಿ ಮೊದಲು ಆಮೇಲೆ ಮಿಕ್ಕಿದ್ದು ಅಂತ ಮನಸ್ಸು ಹೇಳಿತು.. ಅಂಗಾಗಿ ಕನ್ನಡಲ್ಲಿ ಬರೆಯುವ ಅಂತ ನಿರ್ಧಾರವಾಯ್ತು..
ಮಹೇಶ್ ಮತ್ತು ಶ್ರುತಿ ಡಿಸೆಂಬರ್ ಹದಿನಾರು ೨೦೧೭ರಲ್ಲಿ ಒಂದು ಸಂಗೀತ ಸಂಜೆ ಜೀವ ಸ್ವರ ತಂಡದಿಂದ ಕಾರ್ಯಕ್ರಮದಲ್ಲಿ ಪರಿಚಯವಾದ ಸ್ನೇಹ.. ಅದು ಅದ್ಭುತ ಗೆಳೆತನಕ್ಕೆ ತಿರುಗಿ ಅಲೆಮಾರಿಯಾಗಿದ್ದ ನನಗೆ ಅನೇಕ ಚಾರಣಗಳಲ್ಲಿ ಜೊತೆಯಾದವರು.
ಇವರದು ಸುಂದರ ಕುಟುಂಬ..ಸಂಗೀತ ಕುಟುಂಬ ಅಂದರೂ ತಪ್ಪಿಲ್ಲ.. ಅವರ ಪುಟ್ಟ ತುಂಟ ಮಗ ಮೊಬೈಲಿನಲ್ಲಿ ಆಟವಾಡೋದು ಇದ್ದರೂ.. ಯು ಟ್ಯೂಬ್ ನಲ್ಲಿ ಶಾಸ್ತ್ರೀಯ ಸಂಗೀತ ಹಾಕಿಕೊಂಡು ಅದರ ಜೊತೆ ಹಾಡುವುದು.. ಇವರ ಪರಂಪರೆಯನ್ನು ಮುಂದುವರೆಸುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.. ಅದಕ್ಕೆ ಅಲ್ಲವೇ ಹೇಳೋದು ಬೆಳೆಯುವ ಪೈರು ಮೊಳಕೆಯಲ್ಲಿ ಅಂತ..
ಶ್ರೀಕಿ ನೀನು ಬರಬೇಕು.. (ಸರ್ ಸರ್ ಅಂತ ಇದ್ದ ಪರಿಚಯ.. ಹೋಗೋ ಬಾರೋ ಹಂತಕ್ಕೆ ಬಂದಿದೆ ಎಂದರೆ ನೋಡಿ ಗೆಳೆತನ ಒಂದು ಝರಿಯ ತರಹ ಸಣ್ಣ ಒರತೆಯಲ್ಲಿ ಶುರುವಾಗಿ ಜಲಪಾತವಾಗಿ ಸಾಗರ ಸೇರುತ್ತದೆ.. "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ" ನನ್ನ ಆರಾಧ್ಯ ದೈವ ಶ್ರೀ ಪುಟ್ಟಣ್ಣ ಕಣಗಾಲ್ ಅವರ ಶುಭಮಂಗಲದ ಹಾಡು ನೆನಪಿಗೆ ಬಂತು)
ಬರ್ತೀನಿ.. ಬರೋಕೆ ಎಲ್ಲಾ ಪ್ರಯತ್ನ ಮಾಡುವೆ ಅಂತ ಆಶ್ವಾಸನೆ ಕೊಟ್ಟೆ.. ಬದುಕಿನ ಜಂಜಾಟದಲ್ಲಿ ಸ್ವಲ್ಪ ಮನಃಶಾಂತಿ ಬೇಕಿತ್ತು.. ಬದಲಾವಣೆ ಬೇಕಿತ್ತು.. ಇಂತಹ ಕಾರ್ಯಕ್ರಮವನ್ನು ಹೃದಯದಿಂದ ಸಂಭ್ರಮಿಸುವ ನನ್ನ ಮನದನ್ನೆ ಊರಿಗೆ ಹೋಗಿದ್ದಳು.. ಆ ಬೇಜಾರಿತ್ತು.. ಅವಳಿದ್ದಿದ್ದರೆ ಆ ಸಂಗೀತ ಸಂಭ್ರಮದಲ್ಲಿ ಅವಳನ್ನು ಹಿಡಿಯುವುದು ನನಗೆ ಕಷ್ಟವಾಗುತಿತ್ತು.. ಇರಲಿ ಇರಲಿ.. ಹೊರಟೆ ನನ್ನ ಸದ್ದಿಲ್ಲದೇ ಸಂಭ್ರಮಿಸುವ ನನ್ನ ಗೆಳತೀ ಅರ್ಥಾತ್ ಮಗಳ ಜೊತೆ ಹೊರಟೆ.
ಎಲ್ಲರೂ ಅಪರಿಚಿತರು ಸಭಾಂಗಣದಲ್ಲಿ ನೆರೆದಿದ್ದರು.. ಎಲ್ಲರೂ ಅಪರಿಚಿತರೇ ಆದರೆ ಎಲ್ಲರನ್ನೂ ಬಂಧಿಸಿದ್ದು ಸಂಗೀತದ ಸೆಳೆತ ಅದರಲ್ಲೂ ಇಬ್ಬರು ದಿಗ್ಗಜರು..
ಒಬ್ಬರು ಮಾಮೂಲಿ ಎನಿಸುವ ಸಂಗೀತಕ್ಕೆ ಅನೇಕಾನೇಕ ವಿಭಿನ್ನವಾದ ಸದ್ದು ಮಾಡಬಲ್ಲ ಉಪಕರಣಗಳಿಂದ ನಾದದ ಜಾದೂ ಮಾಡುವ ಶ್ರೀ ರಾಹುಲ್ ದೇವ್ ಬರ್ಮನ್.. (ಮೇರೇ ಸಾಂನೆ ವಾಲೀ ಕಿಡಕಿ ಹಾಡಿನಲ್ಲಿ ಬಾಚಣಿಗೆ, ಡಬ್ಬ.. ಚುರಾಲಿಯ ಚಿತ್ರದಲ್ಲಿ ಗಾಜಿನ ಲೋಟ, ಮೆಹಬೂಬ ಮೆಹಬೂಬ ಹಾಡಿನಲ್ಲಿ ಖಾಲಿ ಗಾಜಿನ ಸೀಸೆಯನ್ನು ಊದಿ ಬರುವ ನಾದ)
ಅದೊಂದು ಪುಟ್ಟ ಹಳ್ಳಿ ಅಲ್ಲಿನ ಗ್ರಾಮಸ್ಥರು ಮುಗ್ಧರು.. ಆ ಊರಿನ ವ್ಯಾಜ್ಯ ಏನೇ ಇದ್ದರೂ ಅವರೇ ಪರಿಹರಿಸಿ ಕೊಳ್ಳುತ್ತಿದ್ದರು.. ಆ ಪ್ರದೇಶದ ರಾಜ ನ್ಯಾಯ ತೀರ್ಮಾನಕ್ಕೆ ಹೆಸರಾಗಿದ್ದ ವಿಕ್ರಮಾದಿತ್ಯ.. ಅವನ ಸಿಂಹಾಸನದಲ್ಲಿ ೩೨ ಬೊಂಬೆಗಳಿದ್ದವು.. ರಾಜನಿಗೆ ನ್ಯಾಯ ನಿರ್ಣಯಿಸಲು ಆ ಗೊಂಬೆಗಳು ಸಹಾಯ
ಸುತ್ತಮುತ್ತಲ ಹಳ್ಳಿಗಳ ಮಂದಿ ನ್ಯಾಯ ತೀರ್ಮಾನಕ್ಕೆ ಆ ರಾಜನ ಬಳಿ ಬರುತ್ತಿದ್ದದ್ದು ವಾಡಿಕೆ.. ಈ ಹಳ್ಳಿಯ ಮಂದಿ ಮಾತ್ರ ಒಮ್ಮೆಯೂ ಆ ರಾಜನ ಬಳಿ ತಮ್ಮ ಅಹವಾಲು ತೆಗೆದುಕೊಂಡು ಹೋದ ಉದಾಹರಣೆಗಳೇ ಇರಲಿಲ್ಲ ಅಂತ ಆ ಊರಿನ ಪ್ರಮುಖರೆಲ್ಲ ಮಾತಾಡಿಕೊಳ್ಳುತ್ತಿದ್ದರು..
ಇದು ಹೇಗೋ ಆ ಕಿವಿ ಈ ಕಿವಿ ಕಿವಿಗೆ ಅಂತ ಸಾಗಿ ಕಡೆಗೆ ಮಂತ್ರಿಯ ಕಿವಿಗೆ ಬಿತ್ತು.. ಇದೊಂದು ರೀತಿಯ ಅಹಂಗೆ ಪೆಟ್ಟು ಬಿದ್ದ ಹಾಗಿತ್ತು.. ಕಾರಣ ನ್ಯಾಯ ಅಂದರೆ ವಿಕ್ರಮಾದಿತ್ಯ ಅನ್ನೋವಷ್ಟು ಖ್ಯಾತಿಯಿದ್ದ ಆ ರಾಜ್ಯದಲ್ಲಿ ಈ ರೀತಿ ಆಗಲು ಸಾಧ್ಯವೇ ಎನ್ನುವ ಕುತೂಹಲ ಕೂಡ ಸೇರಿದ್ದು ವಿಶೇಷ..
ಇದನ್ನು ಸೂಕ್ಷ್ಮವಾಗಿ ರಾಜನ ಕಿವಿಗೆ ಸಾಗಿಸಿಸಿದರು ಮಂತ್ರಿಗಳು..
ರಾಜನಿಗೆ ಕೋಪದ ಬದಲು ಕುತೂಹಲ ಹೆಚ್ಚಾಯಿತು.. ಸರಿ ತನ್ನ ಮಂತ್ರಿಗಳ ಜೊತೆಯಲ್ಲಿ ಮಾರುವೇಷ ಧರಿಸಿ ಆ ಹಳ್ಳಿಯ ಕಡೆಗೆ ಹೊರಟರು..
ಮಾರ್ಗ ಮಧ್ಯೆ ಹಲವಾರು ಜನ ಮಾತಾಡುತ್ತ "ವಿಕ್ರಮಾದಿತ್ಯರಂಥಹ ಅರಸರ ಕಾಲದಲ್ಲಿ ನಾವಿರೋದು ಪುಣ್ಯ.. ಅವರ ನ್ಯಾಯ ತೀರ್ಮಾನದ ಬಗ್ಗೆ ಎರಡನೇ ಮಾತುಗಳೇ ಇಲ್ಲ.. ಸರಿಯಾದ ತೀರ್ಪು ಕೊಡೊದರಲ್ಲಿಎತ್ತಿದ ಕೈ.. ಆ ಗೊಂಬೆಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ.. ಹಾಗೆಯೇ ಈ ಹಳ್ಳಿಯಲ್ಲಿಯೂ ಎಷ್ಟು ಚೆನ್ನಾದ ಹಾಗೂ ಸರಿಯಾದ ತೀರ್ಮಾನ ಕೊಡುತ್ತಾರೆ..
ವ್ಯಾಜ್ಯ ೧ : ಅಣ್ಣ ತಮ್ಮಂದಿರ ಮಧ್ಯೆ ಭೂಮಿ ಪಾಲು ಮಾಡುವ ವಿಷಯದಲ್ಲಿ ತಕರಾರು ಬಂದಿತ್ತು.. ಆದರೆ ಅವರಿಬ್ಬರೂ ಜಗಳವಾಡದೆ ಆ ಹಳ್ಳಿಯ ಪ್ರಮುಖರ ಬಳಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.. ಸಮಸ್ಯೆ ಇದ್ದದ್ದು ಅವರ ಹೊಲ ಗದ್ದೆಗಳ ಆಕಾರದಲ್ಲಿ ಸರಿಯಾಗಿ ಭಾಗ ಮಾಡಲು ಸಾಧ್ಯವಿರಲಿಲ್ಲ.. ಆಗ ಅಲ್ಲಿನ ಪ್ರಮುಖರು ಮುಖ್ಯ ಭೂಮಿಯನ್ನು ಭಾಗ ಮಾಡಿ ಉಳಿದ ಭಾಗಮಾಡಲು ಆಗದ ಭೂಮಿಯನ್ನು ಒಂದು ವರ್ಷ ಒಬ್ಬನಿಗೆ ಇನ್ನೊಂದು ವರ್ಷ ಇನ್ನೊಬ್ಬನಿಗೆ ಉಳುಮೆ ಮಾಡಲು ಹೇಳಿದರು.. ಒಪ್ಪುವಂತಹ ನಿರ್ಣಯವೇ ಹೌದು.. ಕಾರಣ ಭೂಮಿಯೂ ಫಲವತ್ತಾಗಿರುತ್ತದೆ.. ಬೆಲೆಯೂ ಚೆನ್ನಾಗಿ ಬರುತ್ತದೆ.. ವಾಹ್ ವಾಹ್..
ವ್ಯಾಜ್ಯ ೨ - ಅದ್ಭುತ ಗೆಳೆತನದ ಇಬ್ಬರೂ ಕಾರಣಾಂತರಗಳಿಂದ ಕೆಲಸದ ಒತ್ತಡ.. ಉದ್ಯೋಗದಲ್ಲಿ ಬೆಳೆಯಲೇ ಬೇಕಾದ ಅನಿವಾರ್ಯತೆ, ಬೆಳೆಯುತ್ತಿರುವ ಬದುಕು ಇವುಗಳಿಂದ ಮೊದಲಿನ ಹಾಗೆ ಮಾತಾಡಲು ಪುರುಸೊತ್ತು ಸಿಗುತ್ತಿರಲಿಲ್ಲ ಆದರೂ ಪ್ರತಿದಿನದ ಶುಭಾಶಯಗಳೊಂದಿಗೆ ದಿನ ಆರಂಭವಾಗುತ್ತಿತ್ತು..ಆದರೆ ಜನುಮದಿನದ ಶುಭಾಶಯಗಳನ್ನು ಹೇಳೋದಕ್ಕೆ ತಡವಾಗಿತ್ತು.. ಆದರೆ ಒಬ್ಬರಲ್ಲಿ ಬೇಸರವಿಲ್ಲ.. ಇನ್ನೊಬ್ಬರಲ್ಲಿ ಕೋಪವಿಲ್ಲ.. ಆದರೂ ಯಾಕೆ ಏನಾಯಿತು ಅನ್ನುವ ತವಕ.. ಈ ಸಮಸ್ಯೆಗೆ ಎಷ್ಟು ಸುಲಭವಾಗಿ ಉತ್ತರ ಕೊಟ್ಟರು.. ನೋಡಿ ಸುಮ್ಮನೆ ಶುಭಾಶಯಗಳು ಅಂತ ಹೇಳಿದರೆ ಒಪ್ಪಿಕೊಳ್ಳುವ ಮನಸ್ಸಲ್ಲ ಅದು.. ಸ್ವಲ್ಪ ವಿಭಿನ್ನವಾಗಿ ಬರೆಯಬೇಕು ಅಂದರೆ ಸಮಯದ ಅಭಾವ.. ಮತ್ತೆ ಬೇಕಾಬಿಟ್ಟಿ ಬರೆಯುವ ಮನಸ್ಸು ಅಲ್ಲವಲ್ಲ.. ಹಾಗೆ ಬರೆದರೂ ಇಲ್ಲೇನೂ ಸಮಸ್ಯೆ ಇದೆ ಎನ್ನುವ ಆಲೋಚನೆಗಳು ಬರುತ್ತಿದ್ದವು.. ಆದರೆ ಅದಕ್ಕೆ ಉತ್ತರ ಸಿಗುತ್ತಿರಲಿಲ್ಲ.. ಹಾಗಾಗಿ ತಿಂಗಳ ಅಂತ್ಯದ ತನಕ ಕಾಯೋದು.. ಆಗಲೂ ಬರಲಿಲ್ಲ ಅಂದರೆ ಕರೆ ಮಾಡಬಹುದು ಅಂತ ತೀರ್ಪು ಕೊಟ್ಟರು.. ತೀರ್ಪು ಎಂದರೆ ಇದು..ಬಾರದ ಕೋಪವೂ ಮಾಯಾ .ಇಲ್ಲದ ಬೇಸರವೂ ಮಾಯಾ..
ವಿಕ್ರಮಾದಿತ್ಯ ಎರಡೂ ತೀರ್ಪುಗಳ ಕತೆಯನ್ನು ಕೇಳಿ ಇನ್ನಷ್ಟು ಖುಷಿಯಾಯಿತು.. ಎರಡೂ ತೀರ್ಪುಗಳಲ್ಲಿ ಭಾಗಿಯಾಗಿದ್ದ ಮಂದಿಯನ್ನು ನೋಡಬೇಕು ಅಂತ ಬಯಸಿದಾಗ ಅಲ್ಲಿನ ಊರ ಜನರು
ಮೊದಲನೇ ತೀರ್ಪಿನಲ್ಲಿದ್ಧ ಅಣ್ಣ ತಮ್ಮಂದಿರು ಹೆಗಲ ಮೇಲೆ ಹೆಗಲು ಕೈ ಹಾಕಿ ಕೊಂಡು ತಮ್ಮ ಹೊಲ ಗದ್ದೆಗಳ ಕಡೆ ಹೊರಟಿದ್ದರು..
ಎರಡನೇ ತೀರ್ಪಿನಲ್ಲಿದ್ದವರನ್ನು ಹುಡುಕಿದರು.. ಆದರೆ ಸಿಗಲಿಲ್ಲ.. ಕಾಣಲಿಲ್ಲ.. ಆಗ ಅವರೆಲ್ಲಿ ಎಂದಾಗ.. ನೋಡ್ರಪ್ಪಾ ಒಬ್ಬರು ಈ ಲೇಖನವನ್ನು ಬರೆಯುತ್ತಿದ್ದಾರೆ.. ಇನ್ನೊಬ್ಬರು ಈ ಲೇಖನವನ್ನು ಓದುತ್ತಿದ್ದಾರೆ..
ಓದುತ್ತಿದ್ದಾರಲ್ಲ ಅವರದೇ ಜನುಮದಿನ.. ಅವರಿಗೆ ಶುಭಾಶಯಗಳನ್ನು ಕೋರುತ್ತಾ ನಮ್ಮ ದಿನ ನಿತ್ಯದ ಕೆಲ್ಸದ ಕಡೆಗೆ ಗಮನ ಕೊಡೋಣ..
ವಿಕ್ರಮಾದಿತ್ಯರಿಗೆ ಪೂರ್ಣ ಖುಷಿಯಾಯಿತು. ಇಷ್ಟು ಸರಳವಾಗಿ ಆದರೆ ಗಂಭೀರವಾಗಿ ತೀರ್ಪು ಕೊಡಬೇಕಾದರೆ ಈ ಹಳ್ಳಿಯ ಮಂದಿ ಸಾಮಾನ್ಯರಲ್ಲ.. ಏನೋ ದಿವ್ಯಶಕ್ತಿ ಇದೆ .. ಏನದು ಅಂತ ಕೇಳಿದಾಗ..
ನೋಡಿ ಈ ಹಳ್ಳಿಯ ಮಂದಿಗೆ ಪ್ರತಿ ತಿಂಗಳಿಗೆ ಒಮ್ಮೆನಿವೇದಿತಾ ಚಿರಂತನ್ ವಿಚಾರ ವಿನಿಮಯ ಕಾರ್ಯಕ್ರಮ ಮಾಡುತ್ತಾರೆ.. ನಾವೆಲ್ಲರೂ ಒಂದೇ ಮನಸ್ಸಿನಿಂದ ಪೂರ್ಣ ಇಚ್ಚೆಯಿಂದ ಭಾಗವಹಿಸುತ್ತೇವೆ.. ಅವರು ಹೇಳಿ ಕೊಡುವ ಅವರು ತೋರಿಸುವ ಹಾದಿಯಲ್ಲಿ ನೆಡೆಯುತ್ತಿರುವುದರಿಂದ ನಮಗೆ ಈ ರೀತಿಯ ದಿವ್ಯ ಜ್ಞಾನ ಪ್ರಾಪ್ತಿಯಾಗಿದೆ.. ಇದರ ಸಮಸ್ತ ಯಶಸ್ಸು ಅವರಿಗೆ..
ವಿಕ್ರಮಾದಿತ್ಯರ ಸಂತಸಕ್ಕೆ ಪಾರವೇ ಇರಲಿಲ್ಲ..
ನಿವೇದಿತಾ ಚಿರಂತನ್ ಅವರಿಗೆ ಶುಭಾಶಯಗಳು ಹಾಗೆ ಇದೆ ಹಳ್ಳಿಯಂತೆ ನನ್ನ ದೇಶದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಈ ರೀತಿಯ ದಿವ್ಯ ಜ್ಞಾನ ನೀಡಿ ಎಂಬ ಕಳಕಳಿಯ ಮನವಿಯೊಂದಿಗೆ ಈ ದೇಶದ ಅರಸನಾಗಿ ನಿಮಗೆ ಶುಭ ಕೋರುತ್ತಿದ್ದೇನೆ ಎಂದು ಹೇಳಿ ತಮ್ಮ ಅರಮನೆಗೆ ತಮ್ಮ ಪರಿವಾರದ ಗಣಗಳ ಜೊತೆ ಹೊರಟರು..
***************************
ಸಿಬಿ ತಡವಾಯಿತು.. ಕ್ಷಮೆ ಇರಲಿ.. ಭಗವಂತ ನೀಡಿದ ಅದ್ಭುತ ಗೆಳತಿಗೆ ಜನುಮದಿನದ ತಡವಾದ ಶುಭಾಶಯಗಳು (ಫೋಟೋಗಳನ್ನು ಕದಿಯಲಾಗಿದೆ ----- ಕ್ಷಮೆ ಇರಲಿ)
ದೃಶ್ಯ ೧
ಕೇಳು ನಿನಗೇನು ಕೇಳು..
ನನಗೆ DFR ತರಹ ತಾಳ್ಮೆ ಬೇಕು..
ಬೇರೆ ಏನೂ ಬೇಡವೇ.. ದುಡ್ಡು, ಅಂತಸ್ತು, ರಾಜ್ಯ, ಕೋಶ..
ಇಲ್ಲ ನನಗೆ ೩ಕೆ ತಂಡದವರು ಇದೆ ಬೇಕು ಅಂತ ಕೇಳಿದ್ದಾರೆ ನನಗೆ ಅದೇ ಬೇಕು
ದೃಶ್ಯ ೨
ಚಾವಟಿಯಲ್ಲಿ ಬಾಸುಂಡೆ ಬರುವ ತರಹ ಹೊಡೆಯುತ್ತಿರುತ್ತಾರೆ..
"ಇನ್ನೂ ಬಲವಂತವಾಗಿ ಹೊಡಿ.. ಇನ್ನೂ ಜೋರಾಗಿ ಹೊಡಿ"
"ಹೊಡೆಯುವೆ" ಆದರೆ ಏತಕ್ಕೆ ಹೀಗೆ ಚಾವಟಿಯಲ್ಲಿ ಏಕೆ ಒದೆ ತಿನ್ನುತ್ತಿದ್ದೀರಾ"
"ನೋಡಿ ಅಲ್ಲಿ ಎಲ್ಲರೂ DFR DFR ತರಹ ಕೆಲಸ ಮಾಡದೆ.. ಸೋಮಾರಿತನದಿಂದ ಇದ್ದಾರೆ.. ಅದಕ್ಕೆ ಅವರ ತರಹ ಪಾದರಸದಂತೆ ಇರಬೇಕು .. ಇಲ್ಲದೇ ಹೋದರೆ ಹೀಗೆ ಎಲ್ಲರಿಗೂ ಏಟು ಅದು ಎಲ್ಲರಿಗೂ ಪಾಠವಾಗಲಿ ಅಂತ ಬಾರಿಸು ಅಂತ ಹೇಳುತ್ತಿದ್ದೇನೆ"
ದೃಶ್ಯ ೩
"ಎಲ್ಲಿ ಮರೆಯಾದೆ ವಿಠಲ ... ಏಕೆ ದೂರದೇ.. ವಿಠಲ ರಂಗ ವಿಠಲ ರಂಗಾಅಅಅಅಅಅಅಅಅಅ"
"ಅರೆ ಗೋರಾ.. ವಿಠಲ ಪಂಡರಾಪುರದಲ್ಲಿ ಸಿಗುತ್ತಾನೆ.. ಆದರೆ ನೀನು ಅಲ್ಲಿಗೆ ಹೋಗಿ ದರ್ಶನ ಪಡೆದು ಬಂದಿದ್ದೀಯಾ.. ಆದರೂ ಯಾಕೆ ಇನ್ನೂ ಹಣೆಯಲ್ಲಿ ಗೆರೆಗಳು ಇದ್ದಾವೆ"
"ಹೌದು ನಾಮದೇವರೇ.. ವಿಠಲನ ದರ್ಶನವೇನೋ ಆಯಿತು.. ಆದರೆ DFR DFR ಅವರ ಅಭಿಮಾನಿಗಳಿಗೆ ಸಿಗುತ್ತಿಲ್ಲ ಏನು ಮಾಡೋದು"
ಟಂ ಅಂತ ಪಾಂಡುರಂಗನೂ ಮಾಯಾ.. ನಾಮದೇವರು ಮಾಯಾ.. ಈ ಪ್ರಶ್ನೆಗೆ ಉತ್ತರ ಬರಿ DFR DFR ಅವರಿಗೆ ಮಾತ್ರ ಗೊತ್ತಿರೋದು
ದೃಶ್ಯ ೪
"ಎಲ್ಲಿರುವನೋ ನಿನ್ನ ಹರಿ.. ಈ ಕಂಬದಲ್ಲಿರುವನೇ.. ಈ ಕಂಬದಲ್ಲಿರುವನೇ?"
ಟಿ"ತಂದೆಯೇ ನಿನಗೆ ನಾ ಹರಿಯನು ಹೇಗೋ ತೋರಿಸುತ್ತೇನೆ.. ಪುರುಸೊತ್ತು ಇಲ್ಲದೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಟೂರು, ಸಿನಿಮಾ, ನಾಟಕ, ಕಾರ್ಯಕ್ರಮ ನಿರೂಪಣೆ, ಹಿಮಾಲಯದ ತಪ್ಪಲು, ಫೆಂಚ್ ಅರಣ್ಯ, ರಂಗ ಶಂಕರ, ಜನದನಿ, ೩ಕೆ ರಾಜ್ಯೋತ್ಸವ, NGO, ಚಂಪಕಧಾಮ ದೇವಸ್ಥಾನ ಅಂತ ಸುತ್ತುತ್ತಲೇ ಇರುವ ಅವರನ್ನು ನೀನು ತೋರಿಸು.. ನಾ ಹರಿಯನ್ನು ತೋರಿಸುತ್ತೇನೆ"
ಹಿರಣ್ಯಕಶಿಪು ಹರಿಯನ್ನು ಹುಡುಕೋದು ಬಿಟ್ಟು.. ನಾ ಸೋತೆ ಅವರನ್ನು ಹುಡುಕೋದು ಕಷ್ಟ.. ಅದಕ್ಕೆ ಬದಲು ಹರಿನಾಮ ಸ್ಮರಣೆ ಮಾಡೋದೇ ಉತ್ತಮ "ನಾರಾಯಣ ನಾರಾಯಣ"
ದೃಶ್ಯ ೫"ಹೊಂಚು ಮಾಡಿ ಸಂಚು ಮಾಡಿ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ.. ಕದಂಬರ ವೃಕ್ಷ ತಲೆಯೆತ್ತಿ ನಿಂತಿದೆ .. "
ಶಿವಸ್ಕಂದ ವರ್ಮಾ ಮಯೂರನಿಗೆ "ಮಯೂರ ನಿನಗೆ ರಾಜ್ಯ ಬೇಕು ತಾನೇ ನಾ ಖುಷಿಯಿಂದ ಕೊಡುತ್ತೇನೆ.. ಆದರೆ DFR DFR ಎಲ್ಲರ ಮನವನ್ನು ಗೆಲ್ಲುತ್ತಾರೆ ಅಲ್ಲವೇ.. ಆ ರೀತಿಯ ಗುಣವನ್ನು ನನಗೂ ಹೇಳಿಕೊಡಿ ಅಂತ ನೀವು DFR DFR ಗೆ ಹೇಳಿ ಪ್ಲೀಸ್"
ದೃಶ್ಯ ೬
ಇದು DFR DFR ತಾಕತ್ತು.. ಎಲ್ಲೇ ಹೋದರೂ ಮತ್ತೆ ಬಂದು ನಿಲ್ಲೋದು DFR DFR ಅವರ ನೀರಿನಂತಹ ಗುಣ.. ಯಾವುದೇ ಪರಿಸ್ಥಿತಿಗೆ, ಯಾವುದೇ ವಾತಾವರಣಕ್ಕೆ, ಯಾವುದೇ ಸ್ಥಿತಿಯಲ್ಲಿಯೂ ಕೂಡ ಸದಾ ಇನ್ನೊಬ್ಬರ ಬಗ್ಗೆ ಯೋಚಿಸುವ, ಸಹಾಯ ಚಾಚುವ ಅವರ ಗುಣ ಎಲ್ಲರಿಗೂ ಮಾದರಿ.. ಅಷ್ಟಿಲ್ಲದೆ ನಾ ಎಲ್ಲರಿಗೂ ಗುಣವಾಚಕವಾಗಿ ಹೆಸರಿಡುವ ನಾನು ಅವರನ್ನು DFR DFR ಅಂತ ಕರೆಯುತ್ತೇನೆಯೇ!
ಜನುಮದಿನದ ಶುಭಾಶಯಗಳು DFR DFR!
ಸಿಬಿ : ಹಾಯ್ ಅರ್ಪಿತಾ
ಅರ್ಪಿತಾ : ಹಾಯ್ ಸಿಬಿ
ಸಿಬಿ : ಏನಿದು New journey?
ಅರ್ಪಿತಾ : ನಥಿಂಗ್ Dog eat Dog world ಅನ್ನುವ ಪುಸ್ತಕ ಓದುತ್ತಿದ್ದೆ.. ಅದರಲ್ಲಿನ Small details ಬಹಳ ಇಷ್ಟವಾಯಿತು.. ಆದರೆ ಅಷ್ಟರಲ್ಲಿ Thu ut ke gayi ........ ನಿಮಗಾಗಿ Intezaar ಮಾಡಿದೆ.. ಆದರೆ The perfect day ಬರಲು ತುಂಬಾ ದಿನಗಳಾಯ್ತು.. ನನಗೂ ಒಂದು ರೀತಿಯ ಪ್ರಶ್ನೆ Nostalgic.. am I ???? ಅಂತ ಅನಿಸಿತು.. ಸರಿ What happened now ಅಂತ ಪ್ರಶ್ನೆ.. ಮನದಲ್ಲಿ ಒಂದು ರೀತಿಯ Grief .. ಆದರೂ ಮೊಗದಲ್ಲಿ Smile ... ಮನಸ್ಸಿನಲ್ಲಿ ಅನಿಸಿತ್ತು Happiness is waiting, Soak no more ಅಂತ.. ಖಂಡಿತ Battery recharged ಆಗುತ್ತೆ ಕಾಯೋಣ ಅನಿಸಿತು.. ಅದೇ ಯೋಚನೆಯಲ್ಲಿದ್ದಾಗ ಬಸ್ ನಿಲ್ದಾಣದಲ್ಲಿ The woman with red toe nails ಪುಸ್ತಕ ಓದುತ್ತಿದ್ದೆ ಕಣೆ ಸಿಬಿ.. ಯಾಕೋ ಈ ಕಥೆಯಲ್ಲಿ Untold ಘಟನೆಗಳಿದ್ದಾವೆ ಅನಿಸಿತು.. ಇದಕ್ಕೆ ಒಂದಷ್ಟು ಹಾಡನ್ನು ಗುನುಗುಣಿಸೋಣ ಅಂತ ಮೊಬೈಲಿನಲ್ಲಿ My 10 most favourite songs ಹಾಕಿಕೊಂಡು ಕೂತೆ ... ಹಾಡುಗಳು ಮಧುರವಾಗಿದ್ದವು.. ಜೊತೆಗೆ Second Chance ಕೊಡೋಣ.. ಕಾಯೋಣ ಅನಿಸಿತು..
ಇವರಿಬ್ಬರ ಮಾತುಕತೆ ಮುಂದುವರೆಯುತ್ತಿತ್ತು ..
ಆ ಕಡೆಯಿಂದ ಇವರಿಬ್ಬರ ನೆಚ್ಚಿನ ರೋಹಿಣಿ ನೆಡೆದು ಬರುತ್ತಿದ್ದಳು ಬಂದವಳೇ
ರೋಹಿಣಿ : "Did I ever tell you????? ಅರ್ಪಿತ" ಅಂದಳು..
ಅರ್ಪಿತಾ : ಇಲ್ಲ ರೋಹಿಣಿ ಅಂದೇ..
ಅವಳು ತನ್ನ ಬ್ಯಾಗಿಂದ ಮೈಸೂರು ಪಾಕು Pieces ಕೊಟ್ಟಳು..
ಸಿಬಿ : If Only............ ಬಾಕ್ಸ್ ಫುಲ್ ಇದ್ದರೆ ಚೆನ್ನಾಗಿತ್ತು ರೋಹಿಣಿ
ರೋಹಿಣಿ : ಹೌದು ಕಣೆ .. .. ಇರಲಿ ಇರಲಿ Housewife wala life ಹಾಗಾಗಿ ಮನೆಯಲ್ಲಿ ಕೆಲಸ ಮಾಡುತ್ತಾ ಹಾಗೆ ತಿಂದು ಹಾಕಿದೆ.. ಉಳಿದದ್ದು ನಿನಗೆ ತಂದೆ ...
ಅರ್ಪಿತಾ : ಅದು ಹೋಗಲಿ ಬಿಡು ಮೈಸೂರು ಪಾಕು ಚೆನ್ನಾಗಿದೆ..
ರೋಹಿಣಿ: ಅದಿರಲಿ ನಿನ್ನ ಡ್ರೆಸ್ ಯಾಕೆ So Ordinary .... ಎನಿಥಿಂಗ್ ಆಯ್ತಾ ...
ಅರ್ಪಿತಾ : Doomsday ಕಣೆ
ಸಿಬಿ: .. Give me one reason...ಯಾಕೆ ಅಂತ ..
ಅರ್ಪಿತಾ : ಇಲ್ಲ ಕಣೆ ಇದು Last chance ಆಮೇಲೆ ನೋಡೋಣ.. ಇಲ್ಲವೇ ಪೂರ್ತಿ Silence ಅಷ್ಟೇ
ಸಿಬಿ : ಏನಾಯಿತು
ಅರ್ಪಿತಾ : ಇದು ಎರಡು ಭಾಗದಲ್ಲಿ ಬರುವ ಕಥೆ ಕಣೆ Over a cup of tea...... (Part 1) (Part 2) ...
ಸಿಬಿ : ಅದು ಸರಿ ಅರ್ಪಿತಾ Do you think they know???.... ........ Nah...
ಅರ್ಪಿತಾ : ಹೌದು ಕಣೆ ಸಿಬಿ At that moment... Am fine ಅನಿಸಿತು ಯಾರಿಗೆ ಹೇಳೋದು Friends ?? Forever :) ಅಂತ ಅನಿಸಿಕೊಂಡ ಕೆಲವರ ಹತ್ತಿರ ಹೇಳೋಣ ಅಂದುಕೊಂಡೆ ajeeb dastan he ye..... ಅಂತ ರೇಗಿಸ್ತಾರೆ.. ಅದಕ್ಕೆ ನಿಮ್ಮಿಬ್ಬರ ಹತ್ತಿರ ಹೇಳೋಣ ಅಂತ ಬಂದೆ ಜೀವನದಲ್ಲಿ Twice in a lifetime (Part I) (Part II) ಆಯಿತು.. Good bye ಹೇಳೋಣ ಅನಿಸಿತು.. ಆದರೆ ಅವನು ಹೇಳ್ತಾನೆ My brother ..ಗೆ ಹೇಳಿದೆ After this day............. Almost..... in love ... ಇದು Journey of Mr.X, Lucky Charms ಅದು ಇದು ಅಂತ ನೂರೆಂಟು ಹೇಳಿದಾಗ The world as I understood.....ಅಂತ ಅರ್ಥ ಆಯಿತು.. ಸರಿಯೋ ತಪ್ಪೋ ಗೊತ್ತಿಲ್ಲ ಆದ್ರೆ What defines you??... ಅಂತ ಯೋಚನೆ ಮಾಡುತ್ತಲೇ Valentine's day ಬಂದೆ ಬಿಡ್ತು New beginning ಅಂತ ಅನಿಸಿತು.. ಕಾಲವೂ ಬದಲಾಗಬೇಕಲ್ಲವೇ Spring ಕೂಡ ಬಂದೆ ಬಿಡ್ತು.. ಸರಿ ಧೈರ್ಯ ಮಾಡಿ ಮಾತಾಡೋಣ ಅನಿಸಿತು Coffeeಗೆ ಕರೆದು confusion ಆಗಿರೋದನ್ನು ಸರಿ ಮಾಡಿಕೊಳ್ಳೋಣ ಅನಿಸಿ .. ತನ್ನ ಮನದಲ್ಲಿದ್ದನ್ನು ಬೊಗಸೆ ತುಂಬಾ ಹೇಳಲು ಶುರು ಮಾಡಿದಾಗ ಆ ಮಾತುಗಳು confessions of a confused soul – 1, 2,3,4,5,6,7,,8,9,10,11,12,13, ಅಂತ ವೆಬ್ ಸೀರೀಸ್ ಬಂದ ಹಾಗೆ ಬಂದಿತು ಸಿಬಿ ... ಏನು ಮಾಡಲಿ ಕಡೆಗೆ ಇದೆಲ್ಲಾ ಅರ್ಥವಾಗಿ.. ಸ್ವಲ್ಪ ಮಟ್ಟಿಗೆ ತಿಳಿಯಾಗಿ One summer afternoon... ಮೊಬೈಲಿನಲ್ಲಿ Hold my hand ಅಂತ ಮೆಸೇಜ್ ಬಂತು... Conscience calls ಪ್ರಕಾರ "Best Friend" ಅನ್ನಿಸ್ತು ಒಪ್ಪಿಕೊಂಡೆ.. ಈ ಕುಶಿಗೆ ಏನಾದರೂ ಕೊಡೋಣ ಅನಿಸಿತು.. ಅವನು ಬುಲೇಟ್ ಬೈಕ್ ನನಗೆ ಬಲು ಇಷ್ಟ.. ಒಂದು ರೀತಿಯಲ್ಲಿ ನಾನೇ ಅವನಿಗೆ ಬಲವಂತ ಮಾಡಿ ಕೊಡಿಸಿದ್ದೆ.. ಶೋ ರೂಮಿನ ಹತ್ತಿರ A humble plea to bullet riders - From a drooling onlooker ಅಂತ ಒಂದು ಪುಸ್ತಕ ಕೊಟ್ಟು.. ದಯಮಾಡಿ ಇದನ್ನು ಅನುಸರಿಸಿ ಅಂತ ಹೇಳಿದ್ದಷ್ಟೇ ಅಲ್ಲದೆ IMHO - Blue mug epiphany ಅನ್ನುವ ಒಂದು ಪುಸ್ತಕ ಕೊತ್ತಿದ್ದರು .ಅದು ನನ್ನ ಬಳಿಯೇ ಇತ್ತು . Crossroads ನಲ್ಲಿದ್ದ ಬದುಕು ಮತ್ತೆ ಹಾದಿಗೆ ಬಂತು ಕಣೆ .. ಅವನಿಗೆ ಈ ಪುಸ್ತಕಗಳನ್ನು ಕೊಟ್ಟಾಗ ನನ್ನ Butterfly girl ಅಂತ ಹೇಳಿ... ಬಾಕಿ ಪ್ರೇಮಿಗಳು ಕೂಡ ಹೊಟ್ಟೆ ಕಿಚ್ಚು ಪಡುವಷ್ಟು Confessions- jealousy ಆಯಿತು ಕಣೆ ಎಂದು ಹೇಳಿದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ.. . ಈಗ ನಾವಿಬ್ಬರು Walking Partners ಮತ್ತೆ ಮೆಲ್ಲನೆ Walking Partners & Couples.ಆದೆವು .. ಒಂದು ವರ್ಷ ನಮ್ಮ ಜೊತೆ Walking Partners - Ramesh Uncle ಅಂದರೆ ನನ್ನ ಮಾವ ಕೂಡ ಸೇರಿಕೊಂಡರು .. ನಮ್ಮ ಬದುಕು Random madness ಇಂದ madness in random ಆಗಿದೆ.. ಬದುಕು ಸುಂದರ ಅನಿಸಿದೆ ಸಿಬಿ..
ಸಿಬಿ : ವಾಹ್ ವಾಹ್ ಸುಂದರ ಬದುಕು ಕಣೆ ಅರ್ಪಿತಾ ನಿಂದು.. ಒಂದು ಹಗ್ ನಿನಗೆ
ರೋಹಿಣಿ : ಓಯೆ ನಾನೂ ಇಲ್ಲಿದ್ದೀನಿ.. ಮೈಸೂರು ಪಾಕು ಗುಳುಂ ಮಾಡಿದಂಗೆ ಅಲ್ಲ.. ನಾನೂ ಇಲ್ಲಿದ್ದೀನಿ.. ನನಗೂ ಒಂದು ಕೊಡ್ರೋ..
ಅರ್ಪಿತಾ : ರೋಹಿಣಿ ನೀ ಇದ್ದಾರೆ ಸಾಕು ಕಣೆ.. ಸಿಬಿ ಜಗತ್ತನ್ನೇ ಗೆಲ್ಲುತ್ತಾಳೆ..
ಸಿಬಿ : ಹ ಹ .. you know what am a gigling ,mug!!!
ಅದ್ಭುತ ಗೆಳೆತನ ಎಂದರೆ ಇದೆ ಅಲ್ಲವೇ.. ಲೇಖನದಲ್ಲಿ ಮೂಡಿ ಬಂದ ಒಂದು ಪಾತ್ರ.. ಸಿಬಿ ಅವರನ್ನು ಇಷ್ಟೊಂದು ಹಚ್ಚಿಕೊಂಡಿದ್ದು.. ಸಿಬಿ ಕೂಡ ಆ ಪಾತ್ರವನ್ನು ಬಲು ಮುತುವರ್ಜಿಯಿಂದ ಸಿದ್ಧಪಡಿಸಿದ್ದು ...ಅದ್ಭುತ.. ಜೊತೆಗೆ ಗೆಳೆತನಕ್ಕೆ ಕಲಶ ಪ್ರಾಯದಂತೆ ರೋಹಿಣಿಯ ಹಾಜರಿ.. ಎಲ್ಲವೂ ಸಸತ್ಯಂ ಶಿವಂ ಸುಂದರಂ.. !
************************
ಗೆಳೆತನ ಅನ್ನೋದು ಎಲ್ಲರಿಗೂ ಸುಲಭವಾಗಿ ಸಿಗುವ ವಸ್ತುವಲ್ಲ ಗೆಳೆಯರಾಗಿರಬಹುದು.. ಆದರೆ ಪ್ರತಿಯೊಂದು ಕ್ಷಣದಲ್ಲೂ ನಿಲ್ಲುವ ಗೆಳೆಯರು ನಿಜವಾಗಿಯೂ ಈ ಆಧುನಿಕ ತಂತ್ರಜ್ಞಾನ ಕೂಡಿರುವ ಜಗತ್ತೇ ಒಂದು ಹಳ್ಳಿಯಾಗಿರುವ ಈ ಕಾಲದಲ್ಲಿ ತಾನುಂಟು ಮೂರು ಲೋಕವುಂಟು ಎನ್ನುವ ಗೆಳೆತನವೆ ಹೆಚ್ಚು.. ಅಂಥದ್ದರಲ್ಲಿ ಅಚಾನಕ್ ಒಂದು ಬ್ಲಾಗ್ ಓದಿ ಪ್ರತಿಕ್ರಿಯೆ ಕೊಟ್ಟ ಕ್ಷಣ ಸಿಕ್ಕಿದು ದೇವರು ಕೊಟ್ಟ ಗೆಳತನ ಅದೇ ನಿವೇದಿತಾ ಚಿರಂತನ್.. ಅಕ್ಷರಗಳ ಮಧ್ಯೆ ಇರುವ ಖಾಲಿ ಜಾಗದಲ್ಲಿ ಭಾವನೆಗಳನ್ನು ಕಂಡು ಹಿಡಿಯುವಷ್ಟು ಚಾಣಾಕ್ಷೆ ಇವರು.. ೨೦೧೨ ರಲ್ಲಿ ಶುರುವಾದ ಗೆಳೆತನಕ್ಕೆ ಭರ್ತಿ ೧೨ ವರ್ಷಗಳು.. ಜನುಮದಿನಕ್ಕೆ ಮರೆಯದೆ ಶುಭಾಶಯಗಳನ್ನು ತಲುಪಿಸುವ ನನಗೆ.. ಒಂದು ವರ್ಷ ಯಾವುದೋ ಕಾರಣಕ್ಕೆ ಹೇಳಲಾಗಲಿಲ್ಲ.. ಆದರೆ ಸಂದರ್ಭಗಳನ್ನು ಹೇಳಿ.. ಒಪ್ಪಿಸಿದ ಮೇಲೆ ಆ ಮುಗುಳ್ನಗೆ ತುಂಬಿದ ಗೆಳೆತನಕ್ಕೆ ಮತ್ತೆ ಹಸಿರಾಯಿತು..
ಹನ್ನೆರಡು ವರ್ಷಗಳ ಗೆಳೆತನಕ್ಕೆ ಏನು ಉಡುಗೊರೆ ಕೊಡೋದು.. ಅಕ್ಕ ಅಲ್ಲ ತಂಗಿ ಅಲ್ಲ ಗೆಳತೀ ಅಲ್ಲ ಬಂಧುವಲ್ಲ..
ಆದರೆ ಮಾರ್ಗದರ್ಶಿ, ಗುರು ಈ ಪದಗಳು ಒಪ್ಪುವಂತಹ ಗೆಳತೀ ಇವರು... ಒಂದು ಸಮಸ್ಯೆಯನ್ನು ಇವರ ಮುಂದಿಟ್ಟರೆ ಸಾಕು.. ಅದನ್ನು ಒಪ್ಪವಾಗಿ ಬಿಡಿಸಿ ಹೀಗಲ್ಲ ಶ್ರೀ ಹೀಗೆ ಎಂದು ಹೇಳಿ ತಿಳಿ ಹೇಳುವ ಅದ್ಭುತ ಇವರು.. ಹೀಗೆ ಮಾತಾಡುತ್ತಿದ್ದಾಗ ನೀವು ಏನು ಓದಿರುವುದು ಅಂದಾಗ ಪುಸ್ತಕ ಅಂದರು.. ನಾ ನಕ್ಕು ಅದು ಸರಿ ಆ ಪುಸ್ತಕದ ಮೇಲೆ ಕರ್ನಾಟಕ ಸರ್ಕಾರ ಅದು ಇದು ಅಂತ ಬರೆದಿರುತ್ತಲ್ಲ ಅದರ ಕೆಳಗೆ ಆ ಪುಸ್ತಕದ ವಿಷಯ ಅಂತ ಪ್ರಿಂಟ್ ಮಾಡಿರುತ್ತೆ..ಅದು ಏನು ಅಂದಾಗ .. ಕಾನೂನು ಅಂದರು.. ಅಬ್ಬಬ್ಬಾ ಆಗ ಗೊತ್ತಾಯಿತು.. ಈ ರೀತಿಯ ತರ್ಕಬದ್ಧ ಮಾತುಗಳು ಕಾನೂನು ಪದವೀಧರರರಿಗೆ ಬಿಟ್ಟು ಬೇರೆ ಎಲ್ಲಿ ಹೋಗಲು ಸಾಧ್ಯ ಅಂತ..
ಇಂತಹ ಅದ್ಭುತ ಗೆಳೆತನಕ್ಕೆ ಒಂದು ಶುಭಾಶಯ ಹೇಳೋಣ ಅಂತ ಅಂದುಕೊಂಡಾಗ ಮೂಡಿ ಬಂದದ್ದು ಈ ಬರಹ..