ರಾಜಾಧಿರಾಜ, ರಾಜ ಮಾರ್ತಂಡ, ರಾಜ ಕುಲೋತ್ತುಂಗ,
ಶ್ರೀ ಶ್ರೀ ಶ್ರೀ ಕೃಷ್ಣದೇವರಾಯ ಪ್ರಭುಗಳಿಗೆ
ಬೋಪರಾಕ್, ಬೋಪರಾಕ್
ಶ್ರೀ ಶ್ರೀ ಶ್ರೀ ಕೃಷ್ಣದೇವರಾಯ ಪ್ರಭುಗಳಿಗೆ
ಬೋಪರಾಕ್, ಬೋಪರಾಕ್
ಮಂತ್ರಿ: ಮಹಾರಾಜ, ಇಂದೇಕೆ ನಿಮ್ಮ ಮುಖದಲ್ಲಿ ಮಂದಹಾಸ,
ತೃಪ್ತಿ ತುಂಬಿ ತುಳುಕುತ್ತ ಇದೆ
ಕೃಷ್ಣದೇವರಾಯ : ಮಂತ್ರಿಗಳೇ , ಇಂದು ಒಂದು ಅದ್ಭುತ
ವರ್ತಮಾನ ತಿಳಿಯಿತು, ನಮ್ಮ ಸಾಮ್ರಾಜ್ಯ ಸ್ಥಾಪನೆಯದ
ಸಂಧರ್ಭದಲ್ಲಿ ವಿರೂಪಾಕ್ಷನು ಒಂದು ವರ ನೀಡಿದ್ದಾನೆ.
ನಮ್ಮ ಸಾಮ್ರಾಜ್ಯದ ಹೆಸರಿನಲ್ಲೇ ಇರುವ ಬೆಂಗಳೂರಿನ ಒಂದು ಬಡಾವಣೆಯಲ್ಲಿರುವ ಒಂದು ಮನೆಯಲ್ಲಿ ಒಂದು ಮಗು
ಮೇ ೧೩ ನೆ ತಾರೀಕು ಹುಟ್ಟಿ ಚಿತ್ರಜಗತ್ತಿನಲ್ಲಿ ಅದ್ಭುತ ಸಾಧನೆ
ಮಾಡುತ್ತೆ...
ಅದರ ಹೆಸರು ವಿಷ್ಣುದೇವರಾಯ ಎಂದು.
ಆ ಮಗುವು ಬರೆಯಬಹುದಾದ ಒಂದು ಚಿತ್ರ ನೋಡಿ
ಮಂತ್ರಿಗಳೇ....ನನಗೊಂತು ಆ ಮಗುವನ್ನು ಬಾಚಿ
ತಬ್ಬಿಕೊಳ್ಳುವ ಆಸೆಯಾಗುತ್ತಿದೆ.
ಮಂತ್ರಿ: ಅದಕ್ಕೇನು ಮಹಾರಾಜ, ವಿದ್ಯಾರಣ್ಯರ ಹತ್ತಿರ ಬೇಡಿಕೊಳ್ಳಿ,
ಮುಂದಿನ ತಲೆಮಾರಿನಲ್ಲಿ ಆ ಮಗುವಿನ ಅಪ್ಪನಾಗಿ ಜನ್ಮ ತಾಳಿ
ನಿಮ್ಮ ಆಸೆಯನ್ನ ಈಡೆರಿಸಿಕೊಳ್ಳಿ
ಮುಂದಿನ ತಲೆಮಾರಿನಲ್ಲಿ ಆ ಮಗುವಿನ ಅಪ್ಪನಾಗಿ ಜನ್ಮ ತಾಳಿ
ನಿಮ್ಮ ಆಸೆಯನ್ನ ಈಡೆರಿಸಿಕೊಳ್ಳಿ
ವಿರೂಪಾಕ್ಷನ ದಯೆ ಇಂದ, ಹಾಗು ವಿದ್ಯಾರಣ್ಯರ ಆಶಿರ್ವಾದದಿಂದ ಕೃಷ್ಣದೇವರಾಯ ವಿಜಯ"ಕೃಷ್ಣದೇವರಾಯ"ನಾಗಿ, ಆತನ
ಮಗನಾಗಿ ವಿಷ್ಣು"ದೇವರಾಯ" ಹುಟ್ಟಿದ ಹಬ್ಬ ಆಚರಿಸಿಕೊಳ್ಳುತ್ತ
ಸಂತಸದಿಂದ ಇದ್ದಾನೆ