ಚಿನ್ನ ಬೆಳ್ಳಿ ಎಂಬ ಲೋಹಗಳು ಬರಿ ಲೋಹಗಳಾಗಿದ್ದಾಗ.. ಮದುವೆಯಾದ ಹೆಣ್ಣು ಮಕ್ಕಳು ಕರಿಮಣಿ.. ರಸಗುಂಡು.. ಮಾಂಗಲ್ಯ ಇವನ್ನೆಲ್ಲ ಅರಿಶಿನದಲ್ಲಿ ಅದ್ದಿದ ದಾರದಲ್ಲಿ ಪೋಣಿಸಿ ಅದನ್ನು ಧರಿಸಿದಾಗ ಅವರ ಮೊಗದಲ್ಲಿ ಬೆಳಗುತಿದ್ದ ಆನಂದ..
ಆಹಾ ಆಹಾ ಅದನ್ನು ವರ್ಣಿಸಲು ವರ್ಣಮಾಲೆಯು ಸೋಲೊಪ್ಪಿಕೊಳ್ಳುತ್ತದೆ!!!
ಈ ಲೋಕದಲ್ಲಿ ಈ ಕಲಿಯುವ ಯುಗದಲ್ಲಿ ಸರ್ವಜ್ಣನೆ ಹೇಳಿದ ಹಾಗೆ ಬಲ್ಲವರಿಂದ ಕಲಿತು ವಿದ್ಯೆ ಎಂಬಾ ಮಹಾಪರ್ವತದಲ್ಲಿ ಕೂತೆ ಎನ್ನುವಂತೆ ಸುತ್ತ ಮುತ್ತಲು ಕಾಣುವ ಕತ್ತಲಲ್ಲಿ ಬೆಳಕನ್ನು ಹುಡುಕಿ ಆ ಬೆಳಕಿನ ದೀಪವನ್ನು ಹತ್ತಾರು ಮಾನಸ ಲೋಕಕ್ಕೆ ಒಯ್ಯುವ ತಾಕತ್ ಎಲ್ಲರಲ್ಲೂ ಇರುತ್ತ್ತದೆ.. ಅದನ್ನು ಅಳವಡಿಸಿ ಬೆಳೆಸಿಕೊಳ್ಳಬೇಕು..
ಬೆಳದಿಂಗಳ ಬಾಲೆ ಚಿತ್ರದಲ್ಲಿ ಅನಂತ್ ನಾಗ್ ಹೇಳುತ್ತಾರೆ ಮಾನವ ನಾಲ್ಕು ಹಂತದಲ್ಲಿ ಬೆಳೆಯುತ್ತಾನೆ..
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿಲ್ಲ
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ
ನಾನು ಚೆನ್ನಾಗಿದ್ದೇನೆ ಪ್ರಪಂಚವೂ ಚೆನ್ನಾಗಿದೆ
ನಿಜವಾಗಿಯೂ ಈ ಮಾತುಗಳು ನನ್ನನ್ನೂ ತುಂಬಾ ಕಾಡುತ್ತವೆ..
ಏನೋ ಶ್ರೀ ಇದು.. ಈ ಪಾಟಿ ಗರಗಸ ಅಂದುಕೊಂಡ್ರಾ.. ಇರಿ ಇರಿ ವಿಷಯ ಇದೆ..
ಸರಿ.. ವಸುದೇವನಿಗೆ ಅಶರೀರವಾಣಿ ಒಂದು ಘಂಟಾ ನಾದವಾಯಿತು.. ಸರಿ ಮಗುವನ್ನು ಹೊತ್ತು ನಡೆದೆ ಬಿಟ್ಟಾ..
ಜೋರಾದ ಮಳೆ.. ಘರ್ಜನೆ ಮಾಡುತ್ತಿದ್ದ ಮೋಡಗಳು, ಪೃಥ್ವಿಗೆ ಬರಿ ಸೂರ್ಯನಲ್ಲ ಬೆಳಕು ಕೊಡೋದು ನಾನು ಕೂಡ ಅನ್ನುವಂತೆ ಮಿಂಚು ಅವಾಗವಾಗ ತನ್ನ ಇರುವನ್ನು ತೋರಿಸುತ್ತಿತ್ತು...
ಗಕ್ಕನೆ ನಿಂತ ವಸುದೇವ.. ಕಾರಣ ಸೊಕ್ಕಿ ಉಕ್ಕಿ ಹರಿಯುತ್ತಿದ್ದ ಯಮುನೆ ತುಂಬಿ ಹರಿಯುತ್ತಿದ್ದಳು.. ವಸುದೇವ ಪ್ರಾರ್ಥಿಸಲಿಲ್ಲ ಆದರೆ ಲೋಕ ಕಲ್ಯಾಣಕ್ಕೆ ಅವತಾರ ಪುರುಷನ ಜನನವಾಗಿತ್ತು.. ಅಲ್ಲಿ ರೇ.. ಇಲ್ಲಾ ಎನ್ನುವ ಪದಗಳಿಗೆ ಅವಕಾಶವೇ ಇರಲಿಲ್ಲ..
ಯಮುನೆ ಹೆಣ್ಣು ಮಕ್ಕಳ ಬೈ ತಲೆಯಂತೆ ದಾರಿ ಮಾಡಿಕೊಟ್ಟಳು.. ಉಕ್ಕಿ ಹರಿಯುತ್ತಿದ್ದ ಯಮುನೆಯ ಮಧ್ಯೆ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗಿದ.. ತಲೆಯ ಮೇಲೆ ಸೂರಾಗಿ ಆದಿ ಶೇಷನೆ ಬರುತ್ತಿದ್ದ.. !!
ಗೋಕುಲಕ್ಕೆ ಬಂದು.. ನಂದನ ಮನೆಯಲ್ಲಿ ಯಶೋದೆಯನ್ನು ಹುಡುಕಲು ಶುರು ಮಾಡಿದ.. ಯಶೋದೆ ಇಲ್ಲಾ..
ವಸುದೇವನಿಗೆ ಗಾಬರಿ.. ಅಯ್ಯೋ ಈಗ ಏನು ಮಾಡುವುದು ಎಂದು
ಮತ್ತೆ ಅಶರೀರವಾಣಿ "ವತ್ಸ ಗಾಬರಿ ಬೇಡ.. ಲೋಕಕಲ್ಯಾಣಕ್ಕೆ ಅವತಾರ ಎತ್ತಿರುವ ಈ ಮಹಾಪುರುಷ ಹೊಣೆ ನನ್ನದು.. ಯಶೋದೆ ಮಮತಾಮಯಿ .. ಸುಖ ನಿದ್ರೆಯಲ್ಲಿ ಇದ್ದಾಳೆ .. ನೀನು ಆ ಮಗುವನ್ನು ಇಲ್ಲಿಯೇ ಬಿಡು. ಸ್ವಲ್ಪ ಹೊತ್ತು ವಿರಮಿಸಿಕೋ.. ನಂತರ ನೀನು ಮಥುರಕ್ಕೆ ಹೊರಡಬಹುದು... ಇದರ ಮಧ್ಯೆ ಈ ಪುಸ್ತಕವನ್ನು ಓದು.. ಆಯಾಸ ಕಡಿಮೆ ಆಗುತ್ತದೆ...
ಅಲ್ಲಿ ಇಲ್ಲಿ ನೋಡಿದ ಮೇಲೆ.. ಅಲ್ಲಿ ಕೆಲವು ಪುಟಗಳು ಕಾಣಿಸಿದವು .
ಮೊದಲ ನೌಕೆ.
ಬಂಧುಗಳು.. ಮಿತ್ರರು.. ಸಹೃದಯ ಓದುಗರು..ಸಿನೆಮಾಸಕ್ತರು.. ಸಾಹಿತ್ಯ ಅಭಿರುಚಿಯುಳ್ಳವರು.. ತಮ್ಮೊಳಗೆ ಒಂದು ಪ್ರಪಂಚವನ್ನು ತೆರೆದಿಡುವ ಬ್ಲಾಗ್ ಮಿತ್ರರು ಹೆಜ್ಜೆ ಇಡುತ್ತಾ ಬೆಂದಕಾಳೂರಿನ ಜೆ. ಸಿ ರಸ್ತೆಯಲ್ಲಿನ ರವಿಂದ್ರ ಕಲಾಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದ್ದರು.. ನಕ್ಕು ನಲಿಯುವ ಮಾತುಗಳು, ಬಹಳ ದಿನಗಳಾದ ಮೇಲೆ ಭೇಟಿ ಮಾಡುವ ಗೆಳೆಯರು.. ಇವರ ಕಲರವಕ್ಕೆ ಕಲಾಕ್ಷೇತ್ರ ಸಾಕ್ಷಿಯಾಗಿತ್ತು.. ಸುಂದರ ವಧುವಂತೆ ಸಜ್ಜಾಗಿತ್ತು ಕಲಾಕ್ಷೇತ್ರ.. !
ಎರಡನೇ ದೋಣಿ
ವೇದಿಕೆ ಸಜ್ಜಾಗಿತ್ತು.. ಮುದ್ದು ಪುಟಾಣಿಗಳಿಬ್ಬರು ಕೆಲ ನಿಮಿಷಗಳ ಕಾಲ ಎಲ್ಲರನ್ನು ನಿಬ್ಬೆರಗು ಗೊಳಿಸಿ ಮಾಡಿದ ನೃತ್ಯ ಆಹಾ ವರ್ಣಿಸಲು ಎರಡು ಮಾತಿಲ್ಲ.. ಇಡಿ ಕಾರ್ಯಕ್ರಮದ ಕೇಂದ್ರ ಬಿಂಧುವಿನ ಕುಡಿ ಆ ಎರಡು ಪುಟಾಣಿಗಳಲ್ಲಿ ಒಂದಾಗಿತ್ತು.
ಅಂಗೀಕ ಅಭಿನಯ,, ಆ ಮುದ್ರೆಗಳು, ಹಾವ ಭಾವ, ತಾಳಕ್ಕೆ ತಕ್ಕಂತೆ ಇಡುತ್ತಿದ್ದ ನೃತ್ಯದ ಮತ್ತುಗಳು ಆಹಾ.. ಸೂಪರ್ ಸೂಪರ್ ಅನ್ನಿಸುವಂತೆ ಮಾಡಿದ್ದವು.
ಮೂರನೇ ಹಾಯಿ ದೋಣಿ
ನೆರೆದಿದ್ದ ಸಹೃದಯ ಮಿತ್ರರಿಗೆ ಬರಿ ಉಪಚಾರ ಮಾತ್ರವಲ್ಲ ಉಪಹಾರವೂ ಇತ್ತು.. ಉಪಹಾರ ನಾಲಿಗೆಯನ್ನು ತಣಿಸಿದರೆ ಸೊಗಸಾದ ಉಪಾಸನ ಮೋಹನ್ ತಂಡದಿಂದ ಕಿವಿಗಳಿಗೆ ರಸದೌತಣ ಒದಗಿಸಿತು. ಪುಂಕಾನುಪುಂಕವಾಗಿ ಅರಳಿದ ಗೀತೆಗಳು ಒಂದಕ್ಕಿಂತ ಒಂದು ಮಧುರ ಅಮರ. ಮನತುಂಬಿ ಹಾಡಿದಾಗ ಕರ್ಣವೂ ಕೂಡ ಕಿವಿ ತುಂಬಿ ಕೇಳುತ್ತದೆ ಎನ್ನುತ್ತಾರೆ.. ಆ ಮಾತು ನಿಜವೆಂಬ ಅರಿವಾಯಿತು.
ಹುಟ್ಟು ಹಾಕುತ್ತಾ ಸಾಗಿದ ಯಾನ
ಅಲ್ಲಿದ್ದವರಿಗೆಲ್ಲಾ ಎರಡು ಯೋಚನೆ.. ಒಂದು "ನಮೋ" ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ.. ಎರಡನೆಯದು ತೀರದ ಭಾವ ಯಾನ ಯಾವಾಗ ಅನಾವರಣಗೊಳ್ಳಲಿದೆ..
ಯೋಚನೆಯೇ ಬೇಡ.. ಮೊದಲನೆಯದು ನಡೆಯಲು ನಂಬಿಕೆ ವಿಶ್ವಾಸಗಳು ಬೇಕು.. ಎರಡನೆಯದನ್ನು ಅನುಭವಿಸಲು ಭಾವುಕ ಮನಸ್ಸು ಇರಬೇಕು. ಅದು ಶತಃಸಿದ್ಧವಾಗಿತ್ತು. ಕಾರಣ ಅಲ್ಲಿದ್ದವರೆಲ್ಲ ಸುಂದರ ಮನದ ಸುಮಧುರ ಕುಸುಮಗಳು.
ಪ್ರಖ್ಯಾತ ತಾರೆ ಶ್ರೀ ಪ್ರಕಾಶ್ ರೈ ಜ್ಯೋತಿ ಬೆಳಗಿದರು.. ಅವರ ಜೊತೆಯಲ್ಲಿ ಹೆಸರಾದ ನಿರ್ದೇಶಕ ಶ್ರೀ ಯೋಗರಾಜ್ ಭಟ್, ತಮ್ಮ ಸುಂದರ ಉಡುಗೆ ತೊಡುಗೆಗೆ ಹೆಸರಾದ ಶ್ರೀ ವಿಶ್ವೇಶರ ಭಟ್.. ಇವರೆಲ್ಲ ಒಬ್ಬರಾದ ಮೇಲೆ ಒಬ್ಬರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಶುರು ಮಾಡಿದರು.
ಅಂತಃಕರಣದ ಅಲೆಗಳ ಮೇಲೆ ಯಾನ
ತಾನು ಬೆಳಕಿಗೆ ಬಂದರೆ ಸಾಕು ಅನ್ನದೆ ಬೆಳಕಲ್ಲಿದ್ದು ಬೆಳಕಿಗೆ ಬರಲು ಯೋಚಿಸದ ಹಲವಾರು ಸಾಧಕರನ್ನು ತಮ್ಮ ಅಕ್ಷರಗಳ ಲೋಕದಿಂದ ಪರಿಚಯಿಸುತ್ತಾ ಅವರ ಸಾಧನೆಗಳ ಪಕ್ಷಿನೋಟ ಕೊಡುತ್ತಾ, ಅವರನ್ನು ವೇದಿಕೆಗೆ ಬರಮಾಡಿಕೊಂಡು ನಾಲ್ಕು ಜನರ ಮಧ್ಯೆದಲ್ಲಿ ನಿಲಿಸಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಕಿರುಕಾಣಿಕೆ ನೀಡಿದ್ದು ಸ್ವಾಗತಾರ್ಹ ಕಾರ್ಯಕ್ರಮ.
ಆ ಸಾಧಕರ ಪರಿಶ್ರಮ, ಅವರ ಧೃಡ ಮನಸ್ಸು, ನಾ ಇದ್ದರೇ ನಿಮ್ಮೆಲ್ಲರನ್ನು ಗುರಿ ತಲುಪಿಸುತ್ತೇನೆ ಎನ್ನುವಂಥಹ ಗಟ್ಟಿ ಧ್ಯೇಯ ಇವುಗಳ ಸಮಾಗಮವೇ ಶ್ರೀ ಮೆಡಿಸಿನ್ ಬಾಬ, ಐ ಕ್ಯಾನ್ ಜೀವಿ, ಹೀಗೆ ಹಲವಾರು ಸಾಧಕರನ್ನು ರಂಗದ ಮೇಲೆ ನಿಲ್ಲಿಸಿದ್ದು ಶ್ಲಾಘನೀಯ ಶ್ರಮ.
ನಾ ಗೆದ್ದರೆ ಗೆಲುವು ನನದು ಎನ್ನುವ ಈ ಲೋಕದಲ್ಲಿ ನಾ ಗೆದ್ದಿದ್ದರೆ ಆ ಗೆಲುವು ನನದಲ್ಲ ನಿಮದು ನನ್ನ ಕುಟುಂಬದ್ದು ನನ್ನ ಬಂಧು ಮಿತ್ರರದ್ದು ಎನ್ನುತ್ತಾ ತಮ್ಮ ಗೆಲುವಿನ ಲೋಕದಲ್ಲಿ ಜೊತೆಯಲ್ಲಿ ನೆರಳಾಗಿ ನಿಂತ ಎಲ್ಲರನ್ನೂ ಪರಿಚಯಿಸಿ ಅಭಿನಂದಿಸಿದ್ದು ಸೂಪರ್ ಸೂಪರ್ ಎನ್ನುವಂತೆ ಮಾಡಿತ್ತು.
ತಂದೆ ತಾಯಿ, ಗುರುಗಳು, ಸುಮಧುರ ಮನಸ್ಸಿನ ಕವಿಗಳು, ದಾರಿ ತೋರಿದವರು, ದಾರಿ ಹಾಕಿ ಕೊಟ್ಟವರು, ದಾರಿ ಮಾಡಿಕೊಟ್ಟವರು ಎಲ್ಲರನ್ನು ಸ್ಮರಿಸುತ್ತಾ ಅವರಿಗೆ ಕಿರುಕಾಣಿಕೆ ಸಲ್ಲಿಸಿದ್ದು ಇಡಿ ಕಾರ್ಯಕ್ರಮದ ವಿಶೇಷ.
ವಸುದೇವನ ಆ ಚಿಕ್ಕ ಚಿಕ್ಕ ಪತ್ರಗಳನ್ನು ಓದಿದ ಮೇಲೆ ಸುಸ್ತು ಆಯಾಸ ಎಲ್ಲವೂ ಹೂವಿನ ಹಾಗೆ ಹಗುರಾಗಿತ್ತು.. ಅರೆ ಇದೇನಿದು ಈ ರೀತಿಯ ಕಾರ್ಯಕ್ರಮವೂ ಇರುವುದೇ.. ಲೋಕ ಕಲ್ಯಾಣಕ್ಕೆ ಅವತಾರವೆತ್ತಿರುವ ಈ ಪುಣ್ಯ ಪುರುಷನ ಸನ್ನಿಧಾನದಲ್ಲಿ ಈ ರೀತಿಯ ಸುಂದರ ವಿವರ..
ಅವನ ಮನಸ್ಸು ಹಕ್ಕಿಯ ಹಾಗೆ ಹಾರಾಡತೊಡಗಿತು..
ಸರಿ ಅಲ್ಲಿಂದ ಹೊರಟ ವಾಸುದೇವ ಯಮುನೆ ಹತ್ತಿರ ಮತ್ತೆ ಬಂದಾಗ.. ಯಮುನೆ ಹೇಳಿದಳು ವಸುದೇವ ನಾ ನಿನಗೆ ದಾರಿ ಮಾಡಿಕೊಟ್ಟೆ ಎಂಬ ಅಹಂ ನನ್ನ ಕಾಡುತ್ತಿತ್ತು ಆದರೆ.. ಆ ಕಾರ್ಯಕ್ರಮದ ಬಗ್ಗೆ ನೀನು ಓದಿ.. ನಿನ್ನ ಮನದಲ್ಲಾಗುತ್ತಿರುವ ಅಲೆಗಳ ಯಾನ ನೋಡಿದಾಗ ಆಹಾ ಇಂತಹ ಸುಮಧುರ ಮನಗಳು ಸುರಿಸುವ ಆನಂದ ಭಾಷ್ಪದಿಂದ ನನ್ನ ಒಡಲು ತುಂಬಿ ಹರಿಯುತ್ತಿದೆ ಎನ್ನಿಸುತ್ತಿದೆ..
ಕಂದಾ ವಾಸುದೇವ.. ಇಂತಹ ಸುಂದರ ಹೂವಿನ ಮನಸ್ಸಿನ ಜೀವಿಯನ್ನು ನಾ ನಿನ್ನ ಮನದಲ್ಲಿ ಕಂಡಿದ್ದು ನನಗೆ ಬಲು ಸಂತಸವನ್ನು ಹೊತ್ತು ತಂದಿದೆ.. ಅವರ ಜನುಮದಿನಕ್ಕೆ ಈ ಲೇಖನ ಒಂದು ಸುಂದರ ಚೌಕಟ್ಟು ಎನ್ನುವುದು ಬಹಳ ಸುಂದರ ಅನುಭವ.
ಭಾವ ತೀರ ಯಾನದ ನಾವಿಕ ಮಣಿಕಾಂತ್ ಅವರ ಸುಂದರ ಪರಿಶ್ರಮ ಈ ಕಾರ್ಯಕ್ರಮದ ಪ್ರತಿ ಕ್ಷಣದಲ್ಲೂ ಮಾರ್ಧನಿಸುತ್ತಿತ್ತು ಅನ್ನಿಸುತ್ತಿದೆ.. ವತ್ಸ ಇವರ ಈ ಮನೋಜ್ಞ ಕಾರ್ಯ ಎಲ್ಲರನ್ನು ಎಲ್ಲವನ್ನೂ ತಲುಪಲಿ ಮತ್ತು ಅವರ ಈ ಸುಂದರ ಜನುಮದಿನ ಸದಾ ಆನಂದವನ್ನು ಹೊತ್ತು ಹೊತ್ತು ತರಲಿ ಎಂದು ಹಾರೈಸುತ್ತೇನೆ.
ಇಡಿ ಕಾರ್ಯಕ್ರಮ ಒಂದು ಶಿಸ್ತಿನ ಕವಾಯತು ನಡೆದಂತೆ ನಡೆಯಿತು. ಮಾತಾಡಿದ ಪ್ರತಿ ಅತಿಥಿಗಳು, ತಮ್ಮ ಭಾವವನ್ನು ಹರವಿಕೊಂಡದ್ದು ಒಂದು ಉತ್ತಮ ಕಾರ್ಯಕ್ರಮ ಹೀಗೆ ಇರಬೇಕು ಎನ್ನಿಸುವಂತೆ ತೆರೆದಿಟ್ಟಿತು.
ಮಣಿಕಾಂತ್ ಸರ್ ನಿಮ್ಮ ನಿರ್ಮಲ ನೆಗೆ ಎಷ್ಟು ತೂಕಬದ್ಧವಾಗಿದೆಯೋ ಅಷ್ಟೇ ನಿಮ್ಮ ಹೂವಿನ ಮನಸ್ಸು ಕೂಡ.. ನಿಮ್ಮ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿ. ಅಲ್ಲಿ ನಡೆದ ಪ್ರತಿಕ್ಷಣವನ್ನು ದಾಖಲಿಸಬೇಕು ಎಂಬ ಹಂಬಲ ನನ್ನದು. ಆದ್ರೆ ಚಿತ್ರಗಳು ಹೇಳುವ ಕಥೆ ಕೆಲವೊಮ್ಮೆ ಅಕ್ಷರಗಳು ಹೇಳಲಾರವು ಅನ್ನಿಸಿತು . ಹಾಗಾಗಿ ಇಡಿ ಕಾರ್ಯಕ್ರಮದ ತುಣುಕುಗಳನ್ನು ಚಿತ್ರಗಳನ್ನಾಗಿ ಇಲ್ಲಿಯೇ ಹರಡಿ ಬಿಟ್ಟಿದ್ದೇನೆ. .
ನಿಮ್ಮ ಜನುಮದಿನಕ್ಕೆ ನಿಮ್ಮದೇ ಸಮಾರಂಭದಲ್ಲಿ ಅನಾವರಣಗೊಂಡ ಭಾವ ತೀರ ಯಾನ ಎನ್ನುವ ಸುಂದರ ಹೊತ್ತಿಗೆಯಂತೆ ಪ್ರತಿ ಪುಟವೂ ನವ ನವೀನ.. ಹಾಗೆಯೇ ನಿಮ್ಮ ಅತಿ ಅತಿ ಮಧುರಾತಿ ಮಧುರ ಮನಸ್ಸು ಈ ಕಾರ್ಯವನ್ನು ಇನ್ನಷ್ಟು ಘಮ ಗುಟ್ಟುವಂತೆ ಮಾಡಿದ್ದು ನಿಮ್ಮ ಹಾಗೂ ನಿಮ್ಮ ತಂಡದ ತಾಕತ್ತು.
ನಿಮಗೆ ಜನುಮದಿನ ಶುಭಾಶಯಗಳನ್ನು ಕೋರುತ್ತಾ ನೀವು ಕಂಡ ಕನಸ್ಸೆಲ್ಲಾ ನನಸಾಗಲಿ ನನಸೆಲ್ಲ ಸೊಗಸಾಗಿರಲಿ ಎಂದು ಆಶಿಸುವ ನಿಮ್ಮೆಲ್ಲರ ಅಭಿಮಾನಿಗಳು!!!
ಜನುಮದಿನದ ಶುಭಾಶಯಗಳು ಮಣಿಕಾಂತ್ ಸರ್ !!!
ಆಹಾ ಆಹಾ ಅದನ್ನು ವರ್ಣಿಸಲು ವರ್ಣಮಾಲೆಯು ಸೋಲೊಪ್ಪಿಕೊಳ್ಳುತ್ತದೆ!!!
ಈ ಲೋಕದಲ್ಲಿ ಈ ಕಲಿಯುವ ಯುಗದಲ್ಲಿ ಸರ್ವಜ್ಣನೆ ಹೇಳಿದ ಹಾಗೆ ಬಲ್ಲವರಿಂದ ಕಲಿತು ವಿದ್ಯೆ ಎಂಬಾ ಮಹಾಪರ್ವತದಲ್ಲಿ ಕೂತೆ ಎನ್ನುವಂತೆ ಸುತ್ತ ಮುತ್ತಲು ಕಾಣುವ ಕತ್ತಲಲ್ಲಿ ಬೆಳಕನ್ನು ಹುಡುಕಿ ಆ ಬೆಳಕಿನ ದೀಪವನ್ನು ಹತ್ತಾರು ಮಾನಸ ಲೋಕಕ್ಕೆ ಒಯ್ಯುವ ತಾಕತ್ ಎಲ್ಲರಲ್ಲೂ ಇರುತ್ತ್ತದೆ.. ಅದನ್ನು ಅಳವಡಿಸಿ ಬೆಳೆಸಿಕೊಳ್ಳಬೇಕು..
ಬೆಳದಿಂಗಳ ಬಾಲೆ ಚಿತ್ರದಲ್ಲಿ ಅನಂತ್ ನಾಗ್ ಹೇಳುತ್ತಾರೆ ಮಾನವ ನಾಲ್ಕು ಹಂತದಲ್ಲಿ ಬೆಳೆಯುತ್ತಾನೆ..
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿಲ್ಲ
ನಾ ಚೆನ್ನಾಗಿಲ್ಲ ಪ್ರಪಂಚ ಚೆನ್ನಾಗಿದೆ
ನಾ ಚೆನ್ನಾಗಿದ್ದೇನೆ ಪ್ರಪಂಚ ಚೆನ್ನಾಗಿಲ್ಲ
ನಾನು ಚೆನ್ನಾಗಿದ್ದೇನೆ ಪ್ರಪಂಚವೂ ಚೆನ್ನಾಗಿದೆ
ನಿಜವಾಗಿಯೂ ಈ ಮಾತುಗಳು ನನ್ನನ್ನೂ ತುಂಬಾ ಕಾಡುತ್ತವೆ..
ಏನೋ ಶ್ರೀ ಇದು.. ಈ ಪಾಟಿ ಗರಗಸ ಅಂದುಕೊಂಡ್ರಾ.. ಇರಿ ಇರಿ ವಿಷಯ ಇದೆ..
****
ವಸುದೇವನಿಗೆ ಅಶರೀರವಾಣಿ ನುಡಿಯುತ್ತದೆ.. "ವತ್ಸ.. ಈಗ ಜನಿಸುವ ಮಗುವನ್ನು ಯಶೋದೆ ಬಳಿಗೆ ಬಿಡು.. ಅಲ್ಲಿಯೇ ಬೆಳೆಯಲಿ.. .. ಈ ಕೆಲಸ ಈ ಕ್ಷಣ ಆಗಬೇಕು"ಸರಿ.. ವಸುದೇವನಿಗೆ ಅಶರೀರವಾಣಿ ಒಂದು ಘಂಟಾ ನಾದವಾಯಿತು.. ಸರಿ ಮಗುವನ್ನು ಹೊತ್ತು ನಡೆದೆ ಬಿಟ್ಟಾ..
ಜೋರಾದ ಮಳೆ.. ಘರ್ಜನೆ ಮಾಡುತ್ತಿದ್ದ ಮೋಡಗಳು, ಪೃಥ್ವಿಗೆ ಬರಿ ಸೂರ್ಯನಲ್ಲ ಬೆಳಕು ಕೊಡೋದು ನಾನು ಕೂಡ ಅನ್ನುವಂತೆ ಮಿಂಚು ಅವಾಗವಾಗ ತನ್ನ ಇರುವನ್ನು ತೋರಿಸುತ್ತಿತ್ತು...
ಗಕ್ಕನೆ ನಿಂತ ವಸುದೇವ.. ಕಾರಣ ಸೊಕ್ಕಿ ಉಕ್ಕಿ ಹರಿಯುತ್ತಿದ್ದ ಯಮುನೆ ತುಂಬಿ ಹರಿಯುತ್ತಿದ್ದಳು.. ವಸುದೇವ ಪ್ರಾರ್ಥಿಸಲಿಲ್ಲ ಆದರೆ ಲೋಕ ಕಲ್ಯಾಣಕ್ಕೆ ಅವತಾರ ಪುರುಷನ ಜನನವಾಗಿತ್ತು.. ಅಲ್ಲಿ ರೇ.. ಇಲ್ಲಾ ಎನ್ನುವ ಪದಗಳಿಗೆ ಅವಕಾಶವೇ ಇರಲಿಲ್ಲ..
ಯಮುನೆ ಹೆಣ್ಣು ಮಕ್ಕಳ ಬೈ ತಲೆಯಂತೆ ದಾರಿ ಮಾಡಿಕೊಟ್ಟಳು.. ಉಕ್ಕಿ ಹರಿಯುತ್ತಿದ್ದ ಯಮುನೆಯ ಮಧ್ಯೆ ನಿಧಾನವಾಗಿ ಹೆಜ್ಜೆ ಇಡುತ್ತಾ ಸಾಗಿದ.. ತಲೆಯ ಮೇಲೆ ಸೂರಾಗಿ ಆದಿ ಶೇಷನೆ ಬರುತ್ತಿದ್ದ.. !!
ಗೋಕುಲಕ್ಕೆ ಬಂದು.. ನಂದನ ಮನೆಯಲ್ಲಿ ಯಶೋದೆಯನ್ನು ಹುಡುಕಲು ಶುರು ಮಾಡಿದ.. ಯಶೋದೆ ಇಲ್ಲಾ..
ವಸುದೇವನಿಗೆ ಗಾಬರಿ.. ಅಯ್ಯೋ ಈಗ ಏನು ಮಾಡುವುದು ಎಂದು
ಮತ್ತೆ ಅಶರೀರವಾಣಿ "ವತ್ಸ ಗಾಬರಿ ಬೇಡ.. ಲೋಕಕಲ್ಯಾಣಕ್ಕೆ ಅವತಾರ ಎತ್ತಿರುವ ಈ ಮಹಾಪುರುಷ ಹೊಣೆ ನನ್ನದು.. ಯಶೋದೆ ಮಮತಾಮಯಿ .. ಸುಖ ನಿದ್ರೆಯಲ್ಲಿ ಇದ್ದಾಳೆ .. ನೀನು ಆ ಮಗುವನ್ನು ಇಲ್ಲಿಯೇ ಬಿಡು. ಸ್ವಲ್ಪ ಹೊತ್ತು ವಿರಮಿಸಿಕೋ.. ನಂತರ ನೀನು ಮಥುರಕ್ಕೆ ಹೊರಡಬಹುದು... ಇದರ ಮಧ್ಯೆ ಈ ಪುಸ್ತಕವನ್ನು ಓದು.. ಆಯಾಸ ಕಡಿಮೆ ಆಗುತ್ತದೆ...
ಅಲ್ಲಿ ಇಲ್ಲಿ ನೋಡಿದ ಮೇಲೆ.. ಅಲ್ಲಿ ಕೆಲವು ಪುಟಗಳು ಕಾಣಿಸಿದವು .
ಮೊದಲ ನೌಕೆ.
ಬಂಧುಗಳು.. ಮಿತ್ರರು.. ಸಹೃದಯ ಓದುಗರು..ಸಿನೆಮಾಸಕ್ತರು.. ಸಾಹಿತ್ಯ ಅಭಿರುಚಿಯುಳ್ಳವರು.. ತಮ್ಮೊಳಗೆ ಒಂದು ಪ್ರಪಂಚವನ್ನು ತೆರೆದಿಡುವ ಬ್ಲಾಗ್ ಮಿತ್ರರು ಹೆಜ್ಜೆ ಇಡುತ್ತಾ ಬೆಂದಕಾಳೂರಿನ ಜೆ. ಸಿ ರಸ್ತೆಯಲ್ಲಿನ ರವಿಂದ್ರ ಕಲಾಕ್ಷೇತ್ರಕ್ಕೆ ದಾಂಗುಡಿ ಇಡುತ್ತಿದ್ದರು.. ನಕ್ಕು ನಲಿಯುವ ಮಾತುಗಳು, ಬಹಳ ದಿನಗಳಾದ ಮೇಲೆ ಭೇಟಿ ಮಾಡುವ ಗೆಳೆಯರು.. ಇವರ ಕಲರವಕ್ಕೆ ಕಲಾಕ್ಷೇತ್ರ ಸಾಕ್ಷಿಯಾಗಿತ್ತು.. ಸುಂದರ ವಧುವಂತೆ ಸಜ್ಜಾಗಿತ್ತು ಕಲಾಕ್ಷೇತ್ರ.. !
ಎರಡನೇ ದೋಣಿ
ವೇದಿಕೆ ಸಜ್ಜಾಗಿತ್ತು.. ಮುದ್ದು ಪುಟಾಣಿಗಳಿಬ್ಬರು ಕೆಲ ನಿಮಿಷಗಳ ಕಾಲ ಎಲ್ಲರನ್ನು ನಿಬ್ಬೆರಗು ಗೊಳಿಸಿ ಮಾಡಿದ ನೃತ್ಯ ಆಹಾ ವರ್ಣಿಸಲು ಎರಡು ಮಾತಿಲ್ಲ.. ಇಡಿ ಕಾರ್ಯಕ್ರಮದ ಕೇಂದ್ರ ಬಿಂಧುವಿನ ಕುಡಿ ಆ ಎರಡು ಪುಟಾಣಿಗಳಲ್ಲಿ ಒಂದಾಗಿತ್ತು.
ಅಂಗೀಕ ಅಭಿನಯ,, ಆ ಮುದ್ರೆಗಳು, ಹಾವ ಭಾವ, ತಾಳಕ್ಕೆ ತಕ್ಕಂತೆ ಇಡುತ್ತಿದ್ದ ನೃತ್ಯದ ಮತ್ತುಗಳು ಆಹಾ.. ಸೂಪರ್ ಸೂಪರ್ ಅನ್ನಿಸುವಂತೆ ಮಾಡಿದ್ದವು.
ಮೂರನೇ ಹಾಯಿ ದೋಣಿ
ನೆರೆದಿದ್ದ ಸಹೃದಯ ಮಿತ್ರರಿಗೆ ಬರಿ ಉಪಚಾರ ಮಾತ್ರವಲ್ಲ ಉಪಹಾರವೂ ಇತ್ತು.. ಉಪಹಾರ ನಾಲಿಗೆಯನ್ನು ತಣಿಸಿದರೆ ಸೊಗಸಾದ ಉಪಾಸನ ಮೋಹನ್ ತಂಡದಿಂದ ಕಿವಿಗಳಿಗೆ ರಸದೌತಣ ಒದಗಿಸಿತು. ಪುಂಕಾನುಪುಂಕವಾಗಿ ಅರಳಿದ ಗೀತೆಗಳು ಒಂದಕ್ಕಿಂತ ಒಂದು ಮಧುರ ಅಮರ. ಮನತುಂಬಿ ಹಾಡಿದಾಗ ಕರ್ಣವೂ ಕೂಡ ಕಿವಿ ತುಂಬಿ ಕೇಳುತ್ತದೆ ಎನ್ನುತ್ತಾರೆ.. ಆ ಮಾತು ನಿಜವೆಂಬ ಅರಿವಾಯಿತು.
ಹುಟ್ಟು ಹಾಕುತ್ತಾ ಸಾಗಿದ ಯಾನ
ಅಲ್ಲಿದ್ದವರಿಗೆಲ್ಲಾ ಎರಡು ಯೋಚನೆ.. ಒಂದು "ನಮೋ" ದೇಶವನ್ನು ಹೇಗೆ ಮುನ್ನೆಡೆಸುತ್ತಾರೆ.. ಎರಡನೆಯದು ತೀರದ ಭಾವ ಯಾನ ಯಾವಾಗ ಅನಾವರಣಗೊಳ್ಳಲಿದೆ..
ಯೋಚನೆಯೇ ಬೇಡ.. ಮೊದಲನೆಯದು ನಡೆಯಲು ನಂಬಿಕೆ ವಿಶ್ವಾಸಗಳು ಬೇಕು.. ಎರಡನೆಯದನ್ನು ಅನುಭವಿಸಲು ಭಾವುಕ ಮನಸ್ಸು ಇರಬೇಕು. ಅದು ಶತಃಸಿದ್ಧವಾಗಿತ್ತು. ಕಾರಣ ಅಲ್ಲಿದ್ದವರೆಲ್ಲ ಸುಂದರ ಮನದ ಸುಮಧುರ ಕುಸುಮಗಳು.
ಪ್ರಖ್ಯಾತ ತಾರೆ ಶ್ರೀ ಪ್ರಕಾಶ್ ರೈ ಜ್ಯೋತಿ ಬೆಳಗಿದರು.. ಅವರ ಜೊತೆಯಲ್ಲಿ ಹೆಸರಾದ ನಿರ್ದೇಶಕ ಶ್ರೀ ಯೋಗರಾಜ್ ಭಟ್, ತಮ್ಮ ಸುಂದರ ಉಡುಗೆ ತೊಡುಗೆಗೆ ಹೆಸರಾದ ಶ್ರೀ ವಿಶ್ವೇಶರ ಭಟ್.. ಇವರೆಲ್ಲ ಒಬ್ಬರಾದ ಮೇಲೆ ಒಬ್ಬರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಶುರು ಮಾಡಿದರು.
ಅಂತಃಕರಣದ ಅಲೆಗಳ ಮೇಲೆ ಯಾನ
ತಾನು ಬೆಳಕಿಗೆ ಬಂದರೆ ಸಾಕು ಅನ್ನದೆ ಬೆಳಕಲ್ಲಿದ್ದು ಬೆಳಕಿಗೆ ಬರಲು ಯೋಚಿಸದ ಹಲವಾರು ಸಾಧಕರನ್ನು ತಮ್ಮ ಅಕ್ಷರಗಳ ಲೋಕದಿಂದ ಪರಿಚಯಿಸುತ್ತಾ ಅವರ ಸಾಧನೆಗಳ ಪಕ್ಷಿನೋಟ ಕೊಡುತ್ತಾ, ಅವರನ್ನು ವೇದಿಕೆಗೆ ಬರಮಾಡಿಕೊಂಡು ನಾಲ್ಕು ಜನರ ಮಧ್ಯೆದಲ್ಲಿ ನಿಲಿಸಿ ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರನ್ನು ಗೌರವಿಸಿ ಕಿರುಕಾಣಿಕೆ ನೀಡಿದ್ದು ಸ್ವಾಗತಾರ್ಹ ಕಾರ್ಯಕ್ರಮ.
ಆ ಸಾಧಕರ ಪರಿಶ್ರಮ, ಅವರ ಧೃಡ ಮನಸ್ಸು, ನಾ ಇದ್ದರೇ ನಿಮ್ಮೆಲ್ಲರನ್ನು ಗುರಿ ತಲುಪಿಸುತ್ತೇನೆ ಎನ್ನುವಂಥಹ ಗಟ್ಟಿ ಧ್ಯೇಯ ಇವುಗಳ ಸಮಾಗಮವೇ ಶ್ರೀ ಮೆಡಿಸಿನ್ ಬಾಬ, ಐ ಕ್ಯಾನ್ ಜೀವಿ, ಹೀಗೆ ಹಲವಾರು ಸಾಧಕರನ್ನು ರಂಗದ ಮೇಲೆ ನಿಲ್ಲಿಸಿದ್ದು ಶ್ಲಾಘನೀಯ ಶ್ರಮ.
ನಾ ಗೆದ್ದರೆ ಗೆಲುವು ನನದು ಎನ್ನುವ ಈ ಲೋಕದಲ್ಲಿ ನಾ ಗೆದ್ದಿದ್ದರೆ ಆ ಗೆಲುವು ನನದಲ್ಲ ನಿಮದು ನನ್ನ ಕುಟುಂಬದ್ದು ನನ್ನ ಬಂಧು ಮಿತ್ರರದ್ದು ಎನ್ನುತ್ತಾ ತಮ್ಮ ಗೆಲುವಿನ ಲೋಕದಲ್ಲಿ ಜೊತೆಯಲ್ಲಿ ನೆರಳಾಗಿ ನಿಂತ ಎಲ್ಲರನ್ನೂ ಪರಿಚಯಿಸಿ ಅಭಿನಂದಿಸಿದ್ದು ಸೂಪರ್ ಸೂಪರ್ ಎನ್ನುವಂತೆ ಮಾಡಿತ್ತು.
ತಂದೆ ತಾಯಿ, ಗುರುಗಳು, ಸುಮಧುರ ಮನಸ್ಸಿನ ಕವಿಗಳು, ದಾರಿ ತೋರಿದವರು, ದಾರಿ ಹಾಕಿ ಕೊಟ್ಟವರು, ದಾರಿ ಮಾಡಿಕೊಟ್ಟವರು ಎಲ್ಲರನ್ನು ಸ್ಮರಿಸುತ್ತಾ ಅವರಿಗೆ ಕಿರುಕಾಣಿಕೆ ಸಲ್ಲಿಸಿದ್ದು ಇಡಿ ಕಾರ್ಯಕ್ರಮದ ವಿಶೇಷ.
ವಸುದೇವನ ಆ ಚಿಕ್ಕ ಚಿಕ್ಕ ಪತ್ರಗಳನ್ನು ಓದಿದ ಮೇಲೆ ಸುಸ್ತು ಆಯಾಸ ಎಲ್ಲವೂ ಹೂವಿನ ಹಾಗೆ ಹಗುರಾಗಿತ್ತು.. ಅರೆ ಇದೇನಿದು ಈ ರೀತಿಯ ಕಾರ್ಯಕ್ರಮವೂ ಇರುವುದೇ.. ಲೋಕ ಕಲ್ಯಾಣಕ್ಕೆ ಅವತಾರವೆತ್ತಿರುವ ಈ ಪುಣ್ಯ ಪುರುಷನ ಸನ್ನಿಧಾನದಲ್ಲಿ ಈ ರೀತಿಯ ಸುಂದರ ವಿವರ..
ಅವನ ಮನಸ್ಸು ಹಕ್ಕಿಯ ಹಾಗೆ ಹಾರಾಡತೊಡಗಿತು..
ಸರಿ ಅಲ್ಲಿಂದ ಹೊರಟ ವಾಸುದೇವ ಯಮುನೆ ಹತ್ತಿರ ಮತ್ತೆ ಬಂದಾಗ.. ಯಮುನೆ ಹೇಳಿದಳು ವಸುದೇವ ನಾ ನಿನಗೆ ದಾರಿ ಮಾಡಿಕೊಟ್ಟೆ ಎಂಬ ಅಹಂ ನನ್ನ ಕಾಡುತ್ತಿತ್ತು ಆದರೆ.. ಆ ಕಾರ್ಯಕ್ರಮದ ಬಗ್ಗೆ ನೀನು ಓದಿ.. ನಿನ್ನ ಮನದಲ್ಲಾಗುತ್ತಿರುವ ಅಲೆಗಳ ಯಾನ ನೋಡಿದಾಗ ಆಹಾ ಇಂತಹ ಸುಮಧುರ ಮನಗಳು ಸುರಿಸುವ ಆನಂದ ಭಾಷ್ಪದಿಂದ ನನ್ನ ಒಡಲು ತುಂಬಿ ಹರಿಯುತ್ತಿದೆ ಎನ್ನಿಸುತ್ತಿದೆ..
ಕಂದಾ ವಾಸುದೇವ.. ಇಂತಹ ಸುಂದರ ಹೂವಿನ ಮನಸ್ಸಿನ ಜೀವಿಯನ್ನು ನಾ ನಿನ್ನ ಮನದಲ್ಲಿ ಕಂಡಿದ್ದು ನನಗೆ ಬಲು ಸಂತಸವನ್ನು ಹೊತ್ತು ತಂದಿದೆ.. ಅವರ ಜನುಮದಿನಕ್ಕೆ ಈ ಲೇಖನ ಒಂದು ಸುಂದರ ಚೌಕಟ್ಟು ಎನ್ನುವುದು ಬಹಳ ಸುಂದರ ಅನುಭವ.
ಭಾವ ತೀರ ಯಾನದ ನಾವಿಕ ಮಣಿಕಾಂತ್ ಅವರ ಸುಂದರ ಪರಿಶ್ರಮ ಈ ಕಾರ್ಯಕ್ರಮದ ಪ್ರತಿ ಕ್ಷಣದಲ್ಲೂ ಮಾರ್ಧನಿಸುತ್ತಿತ್ತು ಅನ್ನಿಸುತ್ತಿದೆ.. ವತ್ಸ ಇವರ ಈ ಮನೋಜ್ಞ ಕಾರ್ಯ ಎಲ್ಲರನ್ನು ಎಲ್ಲವನ್ನೂ ತಲುಪಲಿ ಮತ್ತು ಅವರ ಈ ಸುಂದರ ಜನುಮದಿನ ಸದಾ ಆನಂದವನ್ನು ಹೊತ್ತು ಹೊತ್ತು ತರಲಿ ಎಂದು ಹಾರೈಸುತ್ತೇನೆ.
**********