ಗೀತೋಪದೇಶ ಮುಗಿದಿತ್ತು ... ಆದರೂ ಪಾರ್ಥ ಮುಖದಲ್ಲಿ ಚಿಂತೆಯ ಕಾರ್ಮೋಡ... ಕೃಷ್ಣ ನಗುಮೊಗದಿಂದ ಹುಬ್ಬನ್ನು ಮೇಲೇರಿಸಿ ಪಾರ್ಥನತ್ತ ದೃಷ್ಟಿ ಹರಿಸಿದ!!!
ಪರಮಾತ್ಮ ನನ್ನ ಅನುಮಾನವನ್ನು ಪರಿಹರಿಸು!!! |
ಪಾರ್ಥ : ಕೃಷ್ಣ.. ವಾಸುದೇವ.. ಕುರುಕ್ಷೇತ್ರದಲ್ಲಿ ನನಗೆ ಬಂದ ಅನುಮಾನ ಕಲಿಯುಗದಲ್ಲಿ ಬಂದರೆ ಏನು ಮಾಡುವುದು..
ಕೃಷ್ಣ : ದ್ವಾಪರದಲ್ಲಿ ನಾ ಉಲಿದ ಭಗವದ್ಗೀತೆ ಕಲಿಯುಗದಲ್ಲಿ ಕಗ್ಗವಾಗಿ ಅರಳಿದೆ..
ಪಾರ್ಥ : ಹೌದೆ ಅದರ ಬಗ್ಗೆ ಇನ್ನಷ್ಟು ಹೇಳು ಕೃಷ್ಣ
ಕೃಷ್ಣ : ಕಳೆದ ವಾರ ತಾನೇ ಅದರ ಕತೃ ನೂರ ಇಪ್ಪತೇಳನೆಯ ಜನುಮದಿನೋತ್ಸವ ಜರುಗಿತು..
ಪಾರ್ಥ : ಅವರ ಹೆಸರೇನು ವಾಸುದೇವ?
ಕೃಷ್ಣ : ಅವರು ಡಿ ವಿ ಜಿ ಅಂತ.. ನಮ್ಮ ಪಿತಾಮಹ ಭೀಷ್ಮ ಇಲ್ಲವೇ ಹಾಗೆಯೇ ಕರುನಾಡಿಗೆ ಅವರು ಕೂಡ ಹಾಗೆಯೆ.. ಅವರು ರಚಿಸಿದ ಮಂಕುತಿಮ್ಮನ ಕಗ್ಗ ಬಡವನ್ಗೀತೆ ಎಂಬ ಹೆಸರಿಂದಲೇ ಹೆಸರುವಾಸಿ..
ಕಗ್ಗ ಪಿತಾಮಹ - ಶ್ರೀ ಡಿ ವಿ ಜಿ (ಚಿತ್ರಕೃಪೆ - ತಿರುಮಲೈ ರವಿ ಸರ್ |
ಪಾರ್ಥ : ನನಗೆ ಸಿಗಬಹುದೇ ಒಂದು ಪ್ರತಿ
ಕೃಷ್ಣ : ಅದು ಸಿಗುತ್ತದೆ.. ಅದರ ಜೊತೆಯಲ್ಲಿಯೇ.. ಅದನ್ನು ಇನ್ನಷ್ಟು ಸರಳಗೊಳಿಸಿ. ಅದಕ್ಕೆ ಪ್ರಸ್ತಾರ ಹಾಕಿ.. ಅದರ ಅರ್ಥವನ್ನು ವಿವರಿಸಿ.. ತನ್ನ ಜೀವನದಲ್ಲಿ ಕಂಡು ಓದಿ ತಿಳಿದು ನಲಿದು ಇತರರಿಗೂ ಹಂಚುವ ಸುಂದರ ಮನಸ್ಸಿನ ಶ್ರೀ ರವಿ ತಿರುಮಲೈ.. "ಕಗ್ಗ ರಸಧಾರೆ" ಎನ್ನುವ ಅಮೃತವನ್ನು ಹಂಚುತ್ತಿದ್ದಾರೆ.. ಪಾರ್ಥ.. ನಿನ್ನ ಪ್ರಶ್ನೆ ಎಂಥಹ ದಿನ ಬಂದಿದೆ ಗೊತ್ತೇ
ಪಾರ್ಥ : ಏನು ವಾಸುದೇವ?
ಕೃಷ್ಣ : ಇಂದು ಶ್ರೀ ರವಿ ತಿರುಮಲೈ ಅವರ ಜನುಮ ದಿನ.. ಅವರ ಬಂಧು ಬಳಗ.. ಸ್ನೇಹಿತರು ನಿನ್ನೆಯಿಂದಲೇ ಕಾಯುತ್ತಿದ್ದಾರೆ.. ಅವರಿಗೆ ಶುಭ ಕೋರುವುದಕ್ಕಾಗಿ.. ನಡಿ ನಡಿ ನಾವು ಅವರಿಗೆ ಶುಭ ಕೋರೋಣ..
ಪಾರ್ಥ : ನನಗೆ ದಾರಿ ತೋರಿದ ನೀನು.. ಇಂದು ರಥವನ್ನು ನಾ ಓಡಿಸುತ್ತೇನೆ.. ಅವರ ದರುಶನ ಭಾಗ್ಯ ನನಗೂ ಆಗಲಿ..
ಕೃಷ್ಣ : ಆದರೆ ನಿನಗೆ ಅವರ ಮನೆಯ ಹಾದಿ ಗೊತ್ತೇ ಪಾರ್ಥ?
ಪಾರ್ಥ : ಇದೋ ಈ ಬಾಣಕ್ಕೆ.. "ಕಗ್ಗ ರಸಧಾರೆ.. ಕಗ್ಗ ರಸಧಾರೆ" ಎಂದು ಮಂತ್ರವನ್ನು ಉಪದೇಶಿಸಿ ಬಿಡುತ್ತೇನೆ.. ಅದು ಅಲ್ಲಿಗೆ ಕರೆದೊಯ್ಯುತ್ತದೆ...
ಕೃಷ್ಣ : ಆಹಾ ಎಂಥಹ ಸುಂದರ ಆಲೋಚನೆ.. ಭಗವದ್ಗೀತೆ ಉಲಿದ ನಾನು.. ಪಾರ್ಥಸಾರಥಿ ಆಗುವ ಬದಲು ಪಾರ್ಥನೆ ಸಾರಥಿಯಾಗಿದ್ದಾನೆ.. ತುಂಬಾ ಸಂತಸದಾಯಕ ವಿಷಯ.. ನಡೆ ಪಾರ್ಥ..
ಪಾರ್ಥ ಮತ್ತು ಪಾರ್ಥಸಾರಥಿ ಇಬ್ಬರೂ ಬರುತ್ತಾರೆ.. ಬಾಣ ನಿಂತ ಕಡೆ ಅವರು ನಿಲ್ಲುತ್ತಾರೆ..
ಅಲ್ಲಿ ನೋಡಿದರೆ..
ದೇವಸ್ಥಾನದ ಗೋಪುರವೇ ನಾಚುವಂಥ ಪ್ರಶಾಂತತೆ ಮುಖದಲ್ಲಿ..
ನಾಚಿ ಬಾಡಿದ ಗೋಪುರ.. ಅದರ ಮುಂದೆ ನಮ್ಮ ರವಿ ಸರ್ (ಚಿತ್ರಕೃಪೆ - ರವಿ ಸರ್) |
ಸಾಧನೆ ಎನ್ನಿಸಿದರೂ ಧೈನ್ಯತಾ ಭಾವ ಮನದಲ್ಲಿ..
ಏನಿಲ್ಲ ಸರ್ ನನ್ನ ಸಾಧನೆ ಎನ್ನುವ ರವಿ ಸರ್ (ಚಿತ್ರ ಕೃಪೆ - ರವಿ ಸರ್) |
ಇನ್ನಷ್ಟು ಸಾಧಿಸಬೇಕು ಎನ್ನುವ ಹಸಿವು ಕಂಗಳಲ್ಲಿ..
ಸಾಧನೆಗೆ ಕೊನೆಯಿಲ್ಲ ಎನ್ನುವ ರವಿ ಸರ್ (ಚಿತ್ರ ಕೃಪೆ - ರವಿ ಸರ್) |
ಮುಂದಿನ ಕಗ್ಗ ರಸಧಾರೆಯ ಬಿಡುಗಡೆಗೆ ತಹ ತಹಸುತ್ತಿರುವ ಅಭಿಮಾನಿ ಬಳಗ..
ಇರಮ್ಮ.. ಕಗ್ಗ ಧಾರೆ ಪುಸ್ತಕ ತಗೊಂಡು ಬರ್ತೀನಿ ಇರಮ್ಮ - (ಚಿತ್ರಕೃಪೆ - ಅಂತರ್ಜಾಲ) |
ಆಹಾ ಇಂಥ ಸ್ನೇಹಮಯಿ ಹುಟ್ಟು ಹಬ್ಬಕ್ಕೆ ನಾವಿಂದು ಬಂದದ್ದು
. ................................
. ................................
. ................................
. ................................
. ................................
ಬಿಡು ಪಾರ್ಥ ಅದನ್ನು ಹೇಳೋದೇ ಬೇಡ..
ನೋಡು ಅಶ್ವಗಳು ಕೂಡ ಕಿವಿ ನಿಮಿರಿಸಿಕೊಂಡು.. ಕಗ್ಗ ರಸಧಾರೆಯನ್ನು ಸವಿಯಲು ಕಾಯುತ್ತಿವೆ..
ಪಾರ್ಥಸಾರಥಿ ಮತ್ತು ಪಾರ್ಥಸಾರಥಿಯ ಸಾರಥಿ ಇಬ್ಬರೂ ರಥದಿಂದ ಇಳಿದು..
"ನಿಮ್ಮ ಕಗ್ಗ ರಸಧಾರೆ ಗಂಗಾವತರಣದ ಹಾಗೆ ಸದಾ ಹರಿಯುತ್ತಿರಲಿ.. ಜಗತ್ತಿನ ಮೂಲೆ ಮೂಲೆಗೂ ನಿಮ್ಮ ಬರಹ ತಲುಪಲಿ.. ಯಶಸ್ಸು.. ಅಭಿಮಾನದ ಹೊಳೆಯಲ್ಲಿ ಸದಾ ಮೀಯುತ್ತಿರಲಿ ನಿಮ್ಮ ಮನಸ್ಸು.. ಶುಭವಾಗಲಿ ಶ್ರೀ ರವಿ ತಿರುಮಲೈ ಅವರೇ"
ಅಶ್ವಗಳಿಗೆ ಇನ್ನಷ್ಟು ಹೊತ್ತು ಅಲ್ಲಿರಲು ಆಸೆಯಾಗಿತ್ತು.. ಆದರೆ ಮತ್ತೆ ಕಾಯಕಕ್ಕೆ ಹೋಗಬೇಕಾಗಿದ್ದರಿಂದ ಒಲ್ಲದ ಮನಸ್ಸಿನಿಂದ ಹೊರಟವು..
ರವಿ ಅವರಿಗೆ ಸಂತಸದಿಂದ.. ಇಂಥ ಆನಂದ ನಾ ತಾಳಲಾರೆ.. ಇನ್ನು ಮಾತಲ್ಲಿ ನಾ ಹೇಳಲಾರೆ... ಎಂದು ಹಾಡಿತು..
ಕಗ್ಗ ರಾಸಧಾರೆಯನ್ನು ಹರಿಸುತ್ತಾ ಎಲ್ಲರ ಪ್ರೀತಿ ಅಭಿಮಾನವನ್ನು ಕೈ ಕಟ್ಟಿ ಸ್ವೀಕರಿಸುತ್ತಾ.. ತಮ್ಮ ಅಭಿಮಾನಿ ಬಳಗದಲ್ಲಿ ರವಿ ಸರ್.. ರವಿಯಣ್ಣ.. ರವಿ ಗುರುಗಳೇ ಎಂದೇ ಬಿರುದಾಂಕಿತರಾದ ರವಿ ತಿರುಮಲೈ ಸರ್ ನಿಮಗೆ ಜನುಮದದಿನದ ಶುಭಾಶಯಗಳು..
ಶುಭವಾಗಲಿ ಎಂಬ ಹಾರೈಕೆ ನಮ್ಮದು.. ಶುಭವಾಗಲಿ ಎಂಬ ಹಾರೈಕೆ ನಿಮ್ಮಿಂದ ನಮಗೆ ಸಿಕ್ಕಾಗ ನಮ್ಮ ಜನುಮ ಪಾವನ..
ಆದಷ್ಟು ಬೇಗ ಕಗ್ಗ ರಸಧಾರೆ ಹರಿಯಲಿ.. ಕಾಯುತ್ತಿರುವ ನಿಮ್ಮವ ಹರಿ ಹರ (ಶ್ರೀಕಾಂತ್ ಮಂಜುನಾಥ್...)
.
ಹುಟ್ಟು ಹಬ್ಬದ ಶುಭಾಶಯಗಳು ಗುರುಗಳೇ.... !!!!