ಇದೇನ್ಲಾ ಓಸಾದಾಗಿ ಏನೋ ಏಳಾಕೆ ಒಂಟೆ ಅಂದ್ರ.. ಔದು.. ಔದು..
3ಕೆ ಅಂದ್ರೆ.. ಕನ್ನಡ ಕಥನ ಕವನ... ಕಥೆ ಕವನ ಕಾವ್ಯ.. ಕಥೆ ಕಾದಂಬರಿ ಕನ್ನಡ... ಎಂಗೆ ಲಾಗಾ ಹಾಕಿದರೂ ಕಾಲು ಕೆಳಗೆ ಅನ್ನುವಂತೆ ಮೂರು ಬಗೆಯಲ್ಲಿ ಕ ಅಕ್ಷರಗಳು ಜೊತೆಯಾಗಿ ನಿಂತು ೩ಕೆ ಎಂದು ಸಾರುತ್ತವೆ....
ಅದೆಲ್ಲ ಸರಿ ೩ತ ಅಂದ್ರಲ್ಲ ಅದಕ್ಕೆ ಹೇಳಿ ಅಂದ್ರಾ.. ಈ ಲೇಖನದ ಕೊನೆ ಭಾಗವನ್ನು ನೋಡಿ.. ಅಲ್ಲಿ ಉತ್ತರ ಸಿಗುತ್ತದೆ..
ಅರೆ ಅರೆ ಇರಿ ಸ್ವಾಮೀ ಜರ್ ಅಂಥಾ ಸ್ಕ್ರೋಲ್ ಮಾಡಬೇಡಿ.. ಒಸಿ ಸಮಾಧಾನ ಇರಲಿ.. ಅಲ್ಲವೇ..
ಫಿಲಂ ಕಡೆತನಕ ನೋಡಿದರೆ ಸ್ವಾರಸ್ಯ.. ನೋಡಿ... ಅಯ್ಯೋ... ಓದಿ ಆಮೇಲೆ ಗೊತ್ತಾಗುತ್ತದೆ..
೩ತ ಅಂದ್ರೆ ಏನೂ ಅಂತ.. !!!
******
ನೋಡು ನೋಡುತ್ತಲೇ ಒಂದು ವರ್ಷದ ಉದ್ದಿನ ಮೂಟೆ ಉರುಳೇ ಹೋಯಿತು.. ಕಳೆದ ವರ್ಷ ಇದೆ ನವೆಂಬರ್ ೨೬ ರಂದು... ಉತ್ಸಾಹ ತುಂಬಿದ ಹಬ್ಬದ ವಾತಾವರಣ ಇದೆ ಅಂಗಳದಲ್ಲಿ ಮೂಡಿತ್ತು... ಅದನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಈ ದಿನ ಸಾಗಿತ್ತು ..
ಹೊಟ್ಟೆ ತುಂಬಿದವರಿಗೆ ಹಸಿವಿನ ಅರ್ಥವಾಗೋಲ್ಲ
ಹಸಿವಿದ್ದವರಿಗೆ ಸುಖದ ಅನುಭವವಿರೋಲ್ಲ!
ಹಸಿವಿನಲ್ಲಿ ಸುಖವುಂಡವರು ಜ್ಞಾನಿಗಳು
ದುಃಖದಲ್ಲಿ ನಗುವ ಕಂಡವರು ತತ್ವಜ್ಞಾನಿಗಳು!
ನಿಜ ಅನ್ನಿಸುತ್ತದೆ.. ದೇವರಿಗೆ ಸವಾಲು ಹಾಕುವ ಬದಲು.. ದೇವರ ಮೇಲಿನ ನಂಬಿಕೆಯ ಹೆಗಲ ಮೇಲೆ ಕೈಹಾಕಿ..
"ನೋಡು ಶಿವ..
ಕಷ್ಟ ಕೊಡುತ್ತೀಯಾ
ಕ್ವಾಟ್ಲೆ ಕೊಡುತ್ತೀಯಾ
ಜೀವನ ರೋಸತ್ತಿ ಹೋಗುವಂತೆ ಮಾಡ್ತೀಯ
ಮಾಡು ತೊಂದರೆ ಇಲ್ಲ
ಆದರೆ
ಒಂದು ಮಾತು ನಿನಗೆ..
ಈ ದೇಹ ಮನಸ್ಸು ಎಂದೂ ಬಾಗದು
ಕಷ್ಟ ಕೊಡುವಾಗ
ನಿಭಾಯಿಸುವ ಕಲೆಯನ್ನು
ನಿಭಾಯಿಸುವಾಗ
ತಾಳ್ಮೆಯನ್ನು
ತಾಳ್ಮೆಯ ಜೊತೆಯಲ್ಲಿ
ನಗುವನ್ನು ಕೊಡುವುದಾದರೆ
ನನ್ನ ಜೋಳಿಗೆಯಲ್ಲಿ ಕಷ್ಟಗಳೆಂಬ ಜ್ಞಾನ ದೀವಟಿಗೆಯನ್ನು ಹಾಕು .. ಇಲ್ಲವಾದರೆ ರೈಟ್ ಹೇಳು.."
ಈ ರೀತಿಯ ಮಾತುಗಳು ಹೇಳಬೇಕಾದರೆ.. ತಾಕತ್ತು ಬೇಕು.. ಅದು ಸುಮ್ಮನೆ ಬರುವುದಿಲ್ಲ..
"ಬೆಟ್ಟ ಕೊರೆದು
ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ
ಹೋದ್ರೆ ತಾನೇ ದಾರಿ ಕಾಣೋದು ನಮ್ಗೆ"
ಎನ್ನುವ ನಾಗರಹೊಳೆ ಚಿತ್ರದ ಹಾಡಿನಂತೆ.. ನುಗ್ಗಿ ನೆಡೆದಾಗ ಭಗವಂತನು ಸೊಂಟ ಬಾಗಿಸಿ ದಾರಿ ದೀಪವಾಗುತ್ತಾನೆ ಎನ್ನುತ್ತದೆ ಜಾನಪದ ಮಾತುಗಳು..
ಏನಪ್ಪಾ ಇದು "ಮಾಮರವೆಲ್ಲೋ ಕೋಗಿಲೆಯೆಲ್ಲೂ.. ಏನೀ ಸ್ನೇಹ ಸಂಬಂಧ.. ಎಲ್ಲಿಹದೊ ಈ ಅನುಬಂಧ" ಎನ್ನುವ ಹಾಡಿನಂತೆ.. ಇದನ್ನು ಜೋಡಿಸಿಸುವುದು ಏಕೇ ಅಂತೀರಾ.. ಇಲ್ಲೇ ಇರೋದು ನೋಡಿ ಮಜಾ..
ಒಂದು ಗ್ರಾಮದಿ ಹೊರಗಿನ ಪ್ರಪಂಚ ಕಾಣದ ಒಂದು ಮುಗ್ಧ ಜೋಡಿ... ತಮ್ಮ ಸಂಧ್ಯಾಕಾಲದಲ್ಲಿ ನೂರಾರು ಭಾವನೆಗಳ ಮಧ್ಯೆ.. ನೂರಾರು ಭಾವನೆಗಳ ನಡುವಲ್ಲಿ... ಬೆಂದ ಮನೆಯಲ್ಲಿ ಗಳು ಹಿರಿದದ್ದೇ ಲಾಭ ಎನ್ನುವಂತೆ ಇವರ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಪಿತಾಮಹರುಗಳ ನಡುವಲ್ಲಿ ಇದ್ದರೂ.. ತಮ್ಮ ಕಲೆಯೇ ಮೈಯೆತ್ತಿ ಬಂದಂತೆ ಅದರೊಡನೆ ಒಡನಾಡುತ್ತಾ ತಮ್ಮ ಬವಣೆಯ ಬಟ್ಟೆಯನ್ನು ಪದಗಳ ಶಾಖದಲ್ಲಿ ಒಣಗಿಸಿಕೊಂಡು ಸಾರ್ಥಕ ಬದುಕು ನೆಡೆಸುತ್ತಿರುವ ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮನವರ ತತ್ವ ಪದಗಳ ಸುನಾಮಿಗೆ ಮನಸ್ಸು ಮೂಕವಾಗಿದ್ದು ಸಹಜ..
ಅಂಗಳಕ್ಕೆ ಕಾಲಿಟ್ಟೊಡನೆ ಆಜಾದ್ ಸರ್ ಅವರ ಆತ್ಮೀಯ ಆಲಿಂಗನ.. ಬಾಲೂ ಸರ್ ಅವರ ಶಬ್ದವೇದಿ ಛಾಯಾಚಿತ್ರಣ.. DFR ಅವರ ಆತ್ಮೀಯ ಆಹ್ವಾನ.. ೩ಕೆ ತಂಡದ ಸದಸ್ಯರಿಂದ ಆತ್ಮೀಯ ಸ್ವಾಗತ.. ಮನಸ್ಸು ಮೂಕವಾಗಿತ್ತು.. ಮನಕ್ಕೆ ಮೂಲೆಯೊಂದು ಹುಡುಕುತ್ತಿದ್ದ ಸಂದರ್ಭದಲ್ಲಿ ಸ್ನೇಹದ ಪರಿಧಿಯಲ್ಲಿ ನನ್ನ ಸೇರಿಸಿಕೊಂಡು.. "ಶ್ರೀ ವೃತ್ತದಲ್ಲಿ ಮೂಲೆ ಇರೋಲ್ಲ .. ವ್ಯಾಸದಲ್ಲಿ ನಿಂತಾಗ ನಿನ್ನ ಹವ್ಯಾಸವೇ ನಿನಗೆ ತ್ರಿಜ್ಯವಾಗಿ ಆ ವೃತ್ತದ ಎಲ್ಲೆಯನ್ನು ಮುಟ್ಟುತ್ತೀಯಾ" ಎಂದಿತು ಮನದ ವಾಣಿ..
... ಕಾರ್ಯಕ್ರಮದ ಆರಂಭವನ್ನು ಶುರುಮಾಡಿದ ಅರುಣ್.. ನಾಡಗೀತೆಗೆ ಜೊತೆಯಾಗುವಂತೆ ಮಾಡಿದರು.. ನಂತರ ಒಂಬತ್ತು ವರ್ಷಗಳ ಹಿಂದೆ ಇದೆ ದಿನ ಉಗ್ರವಾದಿಗಳ ಜೊತೆ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಭಾರತದ ವೀರ ಮಕ್ಕಳ ನೆನಪಿಗೆ ಒಂದು ಅರೆ ಘಳಿಗೆ ಮೌನದ ವಾತಾವರಣ ನಿರ್ಮಾಣ ಮಾಡಿ ಅವರ ನಿಸ್ವಾರ್ಥ ಸೇವೆಗೆ ಒಂದು ಗೌರವ ಸೂಚಿಸಿದ ಮೇಲೆ.. ದೀಪಂ ಜ್ಯೋತಿ ಪರಬ್ರಹ್ಮ ಎನ್ನುತ್ತಾ ದೀಪ ಬೆಳಗಿ.. ನಂತರ ಪ್ರಾರ್ಥನೆ ಗೀತೆ ಶ್ರೀಮತಿ ಉಷಾ ಉಮೇಶ ಅವರಿಂದ ಮೊದಲಾಯಿತು..
ವೇದಿಕೆಯಲ್ಲಿ ಆಸೀನರಾಗಿದ್ದವರೆಲ್ಲ ಘಟಾನುಘಟಿಗಳೇ..
ಈ ೩ಕೆ ತಂಡವೇ ಹಾಗೆ.. ಎಲ್ಲರೂ ಜೇನುಗೂಡಿನಂತೆ ತಮ್ಮ ಪಾಡಿಗೆ ಕಾಯಕ ಮಾಡುತ್ತಾ.. ಹೆಸರಿಗೆ ಆಸೆ ಪಡದೆ.. ಪ್ರತಿಭೆಗಳನ್ನು ಗುರುತಿಸಿ.. ಆ ಕಲೆಗೆ.. ಕಲಾವಿದರಿಗೆ ಗೌರವ ಸಲ್ಲಿಸುವ ಪರಿ..... ಕಂಡು ನನ ಮನಸಿಗೆ ಬಂದದ್ದು
"ಜೇನುಗೂಡು ಆಗುವುದು
ಅನೇಕ ಜೇನುನೊಣಗಳಿಂದ
ಅನೇಕ ಜೇನುನೊಣಗಳು
ಅಲೆದು ಅಳೆದು ಹೂವಿನ ಹನಿಯನ್ನ
ಮೂಡಿಸುತ್ತದೆ ಜೇನಿನ ಗೂಡನ್ನ... ।
ಹನಿಹನಿಯಾಗಿದ್ದ ಸಿಹಿಯನ್ನು ಜೇನು ಮಾಡಿ
ಮನುಜರಿಗೆ ಹಂಚುವ ಕಾಯಕ ಮಾಡುವ ಆ ಜೇನುಗೂಡಿಗೂ
ಕರುನಾಡಿನ ಅಕ್ಷರವ ಅಕ್ಕರೆ ತುಂಬಿಸಿ ಪಸರಿಸುವ
ಈ ೩ಕೆ ತಂಡಕ್ಕೂ ಸಾಮ್ಯತೆ ಬಹಳ ಬಹಳ!!!
ಹೇಳಬೇಕಾದ್ದು ಸಾವಿರಾರು.. ಹೇಳೋದು ನೂರಾರು.. ಮನಸ್ಸಲ್ಲಿ ಕೂರುವುದು ಹತ್ತಾರು.. ಹೌದು ಎಷ್ಟು ನಿಜ ಈ ಮಾತು... ಸಂತ ಶಿಶುನಾಳ ಶರೀಫರನ್ನು ಕೆಲವೇ ಪದಗಳಲ್ಲಿ .. ಕೆಲವೇ ನಿಮಿಷಗಳಲ್ಲಿ ಪ್ರಸ್ತುತ ಪಡಿಸುವುದು ಸಾಗರವನ್ನು ಒಂದು ಬೊಗಸೆಯಲ್ಲಿ ಹಿಡಿದಂತೆ.. ಆದರೆ ಈ ಸಾಹಸವನ್ನು ನಮ್ಮೆಲ್ಲರ ಗುರುಗಳು ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಮಾಡಿದರು.. ಇದು ಸುಮ್ಮನೆ ಮಾತಾಡಿದುದು ಅಲ್ಲಾ.. ಬರಿ ಪರಿಚಯವೂ ಅಲ್ಲ.. ಸಂತರ ಸಮಗ್ರಹ ಸಾಹಿತ್ಯವನ್ನು.. ಸಂತರ ಜೀವನವನ್ನು ಕೆಲವು ನಿಮಿಷಗಳಲ್ಲಿ ಹಿಡಿದಿಟ್ಟ ಬಗೆ ಚೆನ್ನಾಗಿತ್ತು..
ಶರೀಫರ ಕೆಲವು ಆಯ್ದ ಪದಗಳನ್ನು ಸತೀಶ್ ನಾಯಕ್ ಮತ್ತು ಉಷಾ ಉಮೇಶ್ ಹಾಡಿದರು.. ಅದನ್ನು ಮತ್ತೆ ಹಿಂಜಿಸಿದ್ದು ಗುರುಗಳು.. ಅದರ ಅರ್ಥವಿಸ್ತಾರ.. ಅದರ ಒಳ ಮುಖವನ್ನು ಪರಿಚಯ ಮಾಡಿಕೊಟ್ಟದ್ದು ಸುಂದರವಾಗಿತ್ತು.. ಶರೀಫರ ಹಾಡು ಕೇಳುತ್ತೇವೆ.. ತಲೆದೂಗುತ್ತೇವೆ.. ಮನನ ಮಾಡುತ್ತೇವೆ.. ಮುಂದೆ ಅಂದರೆ? .. ಈ ಮುಂದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮಂಜುನಾಥ್ ಸರ್ ಅವರ ವಿಶ್ಲೇಷಣೆಯಿಂದ..
ಕಿರುತೆರೆ ಪ್ರತಿಭೆ ಶ್ರೀ ತೇಜಸ್ವಿ ಅವರು ೩ಕೆ ತಂಡಕ್ಕೆ ಮೊದಲಿಂದಲೂ ಚಿರಪರಿಚಿತ.... ಅವರ ಚುಟುಕು ಮಾತಿನಲ್ಲಿ ನನ್ನ ಗಮನ ಸೆಳೆದದ್ದು.. ಕನ್ನಡ ಭಾಷೆಗೆ ಅಳಿವಿಲ್ಲ... ಅದು ಇಂದಿಗೂ ನಿಲ್ಲುತ್ತದೆ ಉಳಿಯುತ್ತದೆ.. ಬೆಳೆಯುತ್ತಲೇ ಇರುತ್ತದೆ.... ತಾವು ನೆಡೆದು ಬಂದ ಹಾದಿಯನ್ನು ಚುಟುಕಾಗಿ ವಿವರಿಸುತ್ತಾ.. ವಿನಯವಿದ್ದಾಗ ಶಿಖರ ಏರಬಹುದು ಎನ್ನುವುದರ ಪ್ರತಿಬಿಂಬವಾಗಿ ಕಂಡರು..
ಸಮಯ ಕಳೆದದ್ದು ಅರಿವಾಗಲಿಲ್ಲ.. ಮನದಲ್ಲಿ ಕೂತ ಶರೀಫರ ತತ್ವ ಪದಾರ್ಥಗಳಿಗೆ ಮಿತಿಯಿರಲಿಲ್ಲ... ಅನುಭವದ ಪಾಕವನ್ನು ನಮ್ಮಲ್ಲಿ ಹಂಚಿಕೊಂಡ ಮಾತುಗಳಿಗೆ ಕೊನೆಯಿರಲಿಲ್ಲ
ಆ ಗುಂಗಿನಲ್ಲಿ ಇದ್ದ ನಮ್ಮನ್ನು.. ಬನ್ರಪ್ಪ.. ಇನ್ನೊಂದು ಲೋಕಕ್ಕೆ ಕರೆದೋಯ್ತೀವಿ.. ನೋಡಿ ಇದೆ... ಹಾ ಇದೆ ಬಸ್ಸನ್ನು ಹತ್ತಿ ಎಂದು ಅವರ ಜೊತೆಯಲ್ಲಿ ನಮ್ಮನ್ನು ಅರ್ಧಘಂಟೆಗೂ ಮಿಕ್ಕು ಸುತ್ತಾಡಿಸಿದರು ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮ ದಂಪತಿಗಳು..
ವಾಹ್.. ತಂಬೂರಿ ಮೀಟುತ್ತ.. ಅವರ ಕಂಚಿನ ಕಂಠದಲ್ಲಿ ಮೂಡುತ್ತಿದ್ದ ತತ್ವಪದಗಳು ಎಷ್ಟು ಸರಳವಾಗಿದ್ದವು ಅಂದರೆ.. ಅರೆ ಪದಗಳನ್ನು ಇಷ್ಟು ನಾಜೂಕಾಗಿ.. ಸಲೀಸಾಗಿ ಹಾಡಬಹುದೇ ಎನ್ನಿಸುತ್ತಿತ್ತು.. ಆದರೆ ಪ್ರತಿ ತತ್ವಪದಗಳ ಸಾಲುಗಳಲ್ಲಿ ಅಡಗಿ ಕೂತಿರುತ್ತಿದ್ದ ಅರ್ಥಗಳು.. ಪಾರಮಾರ್ಥಿಕ ತತ್ವಗಳು ಅರೆ ವಾಹ್ ಅನಿಸುವಂತೆ ಮಾಡುತ್ತಿದ್ದವು..
ಎಲ್ಲಿಂದ ನೀ ಬಂದೆ ಏನ್ ತಂದೆ
ಬೆಟ್ಟದ ರಾಯ ಕುಣಿದಾಡ್ತಿತ್ತ..
ಮಾತು.. ಪದ.. ಹಾಡು.. ತತ್ವ..
ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ
ಪ್ರತಿಯೊಂದು ತತ್ವ ಪದಗಳನ್ನು ಹಾಡಿದ ಮೇಲೆ ಸಿಗುತ್ತಿದ್ದ ಕರತಾಡನಗಳಿಗೆ ದಂಪತಿಗಳು ಹೇಳುತ್ತಿದ್ದದು.. ಈ ಚಪ್ಪಾಳೆಗಳೇ ನಮಗೆ ಉತ್ತೇಜನ ನೀಡುವ ಟಾನಿಕ್ಕು ಎನ್ನುವ ಅರ್ಥ ಬರುವ ಮಾತುಗಳನ್ನು ಹೇಳುತ್ತಿದ್ದರು..
ಅವರ ತತ್ವ ಪದಗಳಲ್ಲಿ ನನಗೆ ಕಾಣುತ್ತಿದ್ದುದು..
ಜೀವನ ಸುಂದರವಾಗಿದೆ
ಜೀವನ ದೇವರು ಕೊಟ್ಟ ಭಿಕ್ಷೆ
ಜೀವನ ನಮ್ಮ ಕೈಯಲ್ಲಿದೆ
ಜೀವನ ಒಂದು ಉದ್ಯಾನವನ
ಜೀವನ ಒಂದು ಜೀವಿಸುವ ವನ
"ಕಷ್ಟ ಕಾರ್ಪಣ್ಯಗಳು ಬರುತ್ತವೆ..ಕೆಲವು ಇರುತ್ತವೆ .. ಕೆಲವು ಹೋಗುತ್ತವೆ.. ಇನ್ನೂ ಕೆಲವು ಮಂಡಾಟ ಮಾಡಿಕೊಂಡು ನಮ್ಮನ್ನು ಗೋಳು ಹುಯ್ಕೊತಾವೆ... ಆದರೆ ಆಗ ನಾವು ಭಗವಂತನಲ್ಲಿ ಬೇಡಿಕೊಳ್ಳುವ ಪರಿ ಹೇಗಿರುತ್ತೆ ಅಂದರೆ... ನೋಡು ಶಿವ ಕಷ್ಟಕೋಟಲೆಗಳನ್ನು ಕೊಡು.. ಬೇಡ ಅನ್ನೋಲ್ಲ .. ಅದು ನಮ್ಮ ನಮ್ಮ ಪಾಪ ಪುಣ್ಯಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದ್ದು.. ಆದರೆ ಅದನ್ನು ಕೊಡುವಾಗ ಅದರ ಜೊತೆಯಲ್ಲಿ.. ಆ ಕಷ್ಟಗಳನ್ನು ಎದುರಿಸುವ.. ಜಯಿಸುವ.. ಮನೋಸ್ಥೈರ್ಯವನ್ನು ಕೊಡು.. ಉತ್ತರವಿದ್ದಾಗ ಪ್ರಶ್ನೆಗಳು ಇರಲೇ ಬೇಕು.. ಪ್ರಶ್ನೆ ಇದೆ ಎಂದರೆ ಅದಕ್ಕೆ ಉತ್ತರ ನೀ ಸಿದ್ಧಮಾಡಿರಲೇ ಬೇಕು.. ಏನಂತೀಯಾ"
ಹೀಗೆ ದೇವರ ಜೊತೆಯಲ್ಲಿ ಹುಸಿಮುನಿಸಿನಿಂದ.. ಹಾಗೆಯೇ ದೋಸ್ತಿ ಮಾಡಿಕೊಂಡು ಮುನ್ನುಗ್ಗಬೇಕು..
ನಾಗರಹೊಳೆ ಚಿತ್ರದಲ್ಲಿ ಬರುವ ಹಾಡಿನ ಸಾಲಿನಂತೆ
"ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ..
ಮುಂದೆ ನುಗ್ಗಿ ಹೋದ್ರೆ ತಾನೇ
ದಾರಿ ಕಾಣೋದು ನಮ್ಗೆ...
ಇಲ್ಲೇ ಸ್ವರ್ಗ ..
ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು"
ಈ ದಂಪತಿಗಳ ಹಾಸ್ಯ ಮಿಶ್ರಿತ ಮಾತುಗಳು.. ಜೊತೆಯಲ್ಲಿ ಅವರ ಸಂಸಾರದಲ್ಲಿ ತಾವುಂಡ ನೋವನ್ನು, ನೋವು
ಎಂದುಕೊಳ್ಳದೆ ಅದನ್ನು ಭಗವಂತನ ದಯೆ ಎಂದು ಹೇಳುತ್ತಾ ಜೀವನದ ಸಾರ್ಥಕತೆಯನ್ನು ಬಿಂಬಿಸುತ್ತಿರುವ ಈ ದಂಪತಿಗಳಿಗೆ ಕರುನಾಡಿನ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು.. ಆ ಪ್ರಶಸ್ತಿಯ ಹಿರಿಮೆಯನ್ನು ಹೆಚ್ಚು ಮಾಡಿಕೊಂಡಿತು..
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಮಹೇಶ್ ಮೂರ್ತಿ ಸೂರತ್ಕಲ್ ಅವರ ಮಾತುಗಳು ಈ ಸಮಾರಂಭಕ್ಕೆ ಕಲಶ ತೊಡಿಸಿತ್ತು.. ಈ ತಂಡಕ್ಕೆ ಅಧ್ಯಕ್ಷರು ರೂಪಕ್ಕ ಅವರು.. ಇನ್ನು ನನ್ನನ್ನು ಇಲ್ಲಿ ಕೂರಿಸಿದ್ದಾರೆ ಅಷ್ಟೇ.. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಇಡುತ್ತಿದ್ದೇವೆ.. ವಿನಯವಂತಿಕೆ ಎಂದರೆ ಇದೆ ಅಲ್ಲವೇ..
ನಮ್ಮ ಸುಮಧುರ ಮನಸ್ಸಿನ ೩ಕೆ ತಂಡ.. ಈ ಕಲಾವಿದರನ್ನು ಗೌರವಿಸಿ ತಾಯಿ ಭುವನೇಶ್ವರಿಗೆ ಒಂದು ಸುಂದರ ನೆನಪಿನ ಕಾಣಿಕೆಯನ್ನು ಅರ್ಪಿಸಿದ್ದು ಈ ವರ್ಷದ ರಾಜ್ಯೋತ್ಸವದ ವಿಶೇಷತೆ ಅಂತ ನನ್ನ ಮನಸ್ಸಿಗೆ ಅನಿಸಿತು..
"ಶರಣು ಶರಣಾರ್ಥಿ ಎನ್ನುತ್ತಾರೆ ಜಂಗಮರು... ಅಂದರೆ ಶರಣರಿಗೆ ಶರಣು ಮತ್ತು ಆ ಶರಣರಲ್ಲಿ ಮನೆಮಾಡಿರುವ ಆ ಪರಶಿವನಿಗೆ ಶರಣು ಅಂತ .. ದೇವರು ಕೂಡ ಹೇಳುವುದು ಅದನ್ನೇ.. ನೀ ನನಗೆ ಕೈಮುಗಿ ಸಂತಸ ಪಡುತ್ತೇನೆ.. ಆದರೆ ನನ್ನ ಭಕ್ತನಿಗೆ ನೀ ಕೈ ಮುಗಿದರೆ.. ನೀ ಎರಡು ಜೀವಕ್ಕೆ ಶರಣಾಗುತ್ತೀಯ.. ಒಂದು ಭಕ್ತನಿಗೆ.. ಇನ್ನೊಂದು ಆ ಭಕ್ತನಲ್ಲಿ ಇರುವ ನನಗೆ.. "
ಹೌದು.. ನೀ ಮಾಯೆಯೋ ನಿನ್ನೊಳಗೆ ಮಾಯೆಯೋ ಎನ್ನುವ ಕನಕ ದಾಸರ ಪದದಂತೆ.. ಒಂದಕ್ಕೊಂದು ಹಾಸು ಹೊಕ್ಕಾಗಿ ನಿಲ್ಲುವ ಪರಿ.. ಅನುಭವಿಸಿದರೇ ಮಾತ್ರ ಅರಿವಾಗುತ್ತೆ.. "ಕೋಡಗನ ಕೋಳಿ ನುಂಗಿತ್ತಾ" ಎನ್ನುತ್ತಾ.. ಅದು ಕೊಡಗಲ್ಲನ ಕೋಳಿ ನುಂಗಿತ್ತಾ.. ಅಂದರೆ ಒಂದರೊಳಗೆ ಒಂದು ಸೇರಿಕೊಳ್ಳುವ.. ಅಥವಾ ನಾವುಗಳು ನಮ್ಮತನದೊಳಗೆ ಸೇರಿಕೊಳ್ಳುವ ಒಂದು ವಿಶಿಷ್ಟ ಪರಿ.. ಎನ್ನುತ್ತಾ ಆ ತತ್ವ ಪದದ ವಿಸ್ತರಣೆ ಮಾಡಿದ್ದು.. ಈ ದಂಪತಿಗಳ ತತ್ವ ಪದಗಳು.. ಇವರಿಗೆ ಗೌರವ ಪ್ರಧಾನ ಮಾಡಿದ ರೀತಿ... ಅರೆ ಒಂದು ಪುಟ್ಟ ಕಾರ್ಯಕ್ರಮ ನಮ್ಮ ಪುಟ್ಟ ಮನಸ್ಸಲ್ಲಿ ಇಷ್ಟು ದೊಡ್ಡದಾಗಿ ಕೂರಬಹುದೇ ಎನ್ನುವಾಗ ಮೂಡಿ ಬಂದ ಪದ ಹೀಗಿದೆ
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ತತ್ವ ಪದಗಳು ಮನದೊಳಗೆ ಇಳೀತಾ ತಂಗಿ
ಮನದೊಳಗೆ ತತ್ವ ಪದಗಳು ಇಳಿದಿತ್ತಾ
ದಂಪತಿಗಳು ಹೇಳಿದ ಅರ್ಥ ನುಂಗಿ
ಗುರುಗಳು ಪೇಳಿದ ಮಾತುಗಳ ನುಂಗಿ
ಬಂದ ಸ್ನೇಹಿತರ ಪ್ರೀತಿಯ ನುಂಗಿ
ಕಡೆಯಲ್ಲಿ ಸಮೋಸ ಅಂಬಡೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ!!!!
ಸುಮಾರು ಮೂರು ತಾಸುಗಳ ಈ ಕಾರ್ಯಕ್ರಮ ಹೈವೇ ನಲ್ಲಿ ಸಾಗುವ ಬಂಡಿಯಂತೆ.. ಸಲೀಸಾಗಿ ಸಾಗಿತು.. ಮಧ್ಯೆ ಮಧ್ಯೆ ತುಸು ನವಿರಾದ ಹಾಸ್ಯ.. ಚುಟುಕುಗಳು.. ಸಾಗುತ್ತಿದ್ದವು..
ತಂಡದ ಪ್ರತಿಯೊಬ್ಬರ ಪರಿಶ್ರಮ ಕಾರ್ಯಕ್ರಮ ಅಚ್ಚುಕಟ್ಟಿನಲ್ಲಿ ಕಾಣುತ್ತಿತ್ತು.. ಲೇಖನದಲ್ಲಿ ಹೆಸರಿಸದೆ ಇದ್ದರೂ ಅವರ ಪರಿಶ್ರಮಕ್ಕೆ ಕೊರತೆ ಇರಲಿಲ್ಲ.. ಎಲ್ಲವೂ ಸೂತ್ರಬದ್ಧ.. " ನಾಯಕ ನಾನೇ ನನ್ನ ಕಥೆಗೆ" ಎನ್ನುವ ಸಾಲನ್ನು ಸ್ವಲ್ಪ ಉಲ್ಟಾ ಪಲ್ಟಾ ಮಾಡಿದಾಗ ಸಿಗುವ ಹಾಡು
ನಾವಿಂದು ಹಾಡುವ ಹಾಡಿಗೆ ಕೊನೆಯಿಲ್ಲ
ಕೊನೆಯಿಲ್ಲ ಈ ಸಂಭ್ರಮಕ್ಕೆ ಕಾರಣ ನೀವೇಯೆಲ್ಲಾ
ನೀವೇಯೆಲ್ಲಾ ಎಲ್ಲ ಮನಸ್ಸಿಟ್ಟು ಬಂದೀರಿ
ಬಂದಿರಿ ನಮ್ಮ ಕರಗಳಿಗೆ ಜೊತೆಯಾದಿರಿ
ಜೊತೆಯಾದಿರಿ ಸಂಭ್ರಮಕ್ಕೆ ಕಾರಣರಾದಿರಿ..
ಕಾರಣರಾದಿರಿ ಆದ್ರಿ ನಮ್ಮ ಕಥೆಗೆ ನೀವೇ ನಾಯಕ
ನಾಯಕ ನೀವೇ ನಮ್ಮ ಕಥೆಗೆ..ನಿರ್ದೇಶಕ ಆ ಭಗವಂತ
ಭಗವಂತ ಆಡಿಸಿದ ಹಾಗೆ ಆಡುವ ಹಾಡುವ ಮಕ್ಕಳು ನಾವೆಲ್ಲಾ.. !!!
ಈ ಕರುನಾಡಿನ ಸಂಭ್ರಮವನ್ನು ಬರಿ ಒಂದು ಉತ್ಸವ ಎಂದು ಪರಿಗಣಿಸದೆ ಪ್ರತಿಭೆಗಳನ್ನು ಗುರುತಿಸುವ ಗೌರವಿಸುವ ಕಾರ್ಯ ನೆಡೆಯಿತು... ಪ್ರಬಂಧ ಸ್ಪರ್ಧೆ ಆಯೋಜಿಸಿ ಪ್ರತಿಭೆಗಳನ್ನು ಗುರುತಿಸಿದ್ದು ವಿಶೇಷವಾಗಿತ್ತು.. ಶ್ರೀ ಪ್ರಕಾಶ್ ಜಿಂಗಾಡೆ ಮೊದಲನೇ ಬಹುಮಾನ.. ಮಂಜುನಾಥ ಹಿಲಿಯಾಣ ಎರಡನೇ ಬಹುಮಾನ ಮತ್ತು ಸಮಾಧಾನಕರ ಬಹುಮಾನ ದೃಷ್ಟಿ ಎಸ್ ಅವರಿಗೆ ಸಿಕ್ಕಿತು..
ಈ ಕರುನಾಡಿನ ಸಂಭ್ರಮಕ್ಕೆ ಜೊತೆ ನಿಂತವರು ಹಲವಾರು ಮಧುರ ಮನಸ್ಸುಗಳು.. ಎಲೆ ಮರೆಯ ಕಾಯಿಗಳ ಹಾಗೆ ಸದ್ದಿಲ್ಲದೇ ತಮ್ಮ ಸೇವೆಯನ್ನು ಮಾಡುತ್ತಾ ಬಂದವರು ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿ ೩ಕೆ ತಂಡದ ಇನ್ನೊಂದು ಮೈಲುಗಲ್ಲನ್ನು ಸ್ಥಾಪಿಸಿದರು..
ಈ ತಂಡಕ್ಕೆ ಒಂದು ಅಮೂಲ್ಯ ಚಿತ್ರವನ್ನು ಗುರುತಾಗಿ ನೋಡಬೇಕೆಂದು ಹಂಬಲಿಸುತ್ತಿದ್ದ ನನ್ನ ಮನಸ್ಸಿಗೆ ಕಂಡದ್ದು ಈ ಚಿತ್ರ.. ಮುತ್ತುರತ್ನಗಳನ್ನು ಪೋಣಿಸಿದ ಮಾಲಿಕೆಯೇ ಈ ೩ಕೆ ತಂಡ!!!
ಒಂದು ಪುಟ್ಟ ಮಾತಿನೊಂದಿಗೆ ಈ ಲೇಖನ ಮುಗಿಸುತ್ತೇನೆ.. ಆರಂಭದಲ್ಲಿ ಹೇಳಿದ್ದೆ.. ಇದು ೩ಕೆ ಅಲ್ಲಾ.. ೩ತ ಅಂತ ಅಂದರೆ
ತತ್ವ..
ತಮಾಷೆ..
ತತ್ವಜ್ಯೋತಿ
ಈ ಮೂರು ಒಂದೇ ಕಡೆ ಸಿಕ್ಕ ತಾಣ ಈ ಕಾರ್ಯಕ್ರಮ..
3ಕೆ ಅಂದ್ರೆ.. ಕನ್ನಡ ಕಥನ ಕವನ... ಕಥೆ ಕವನ ಕಾವ್ಯ.. ಕಥೆ ಕಾದಂಬರಿ ಕನ್ನಡ... ಎಂಗೆ ಲಾಗಾ ಹಾಕಿದರೂ ಕಾಲು ಕೆಳಗೆ ಅನ್ನುವಂತೆ ಮೂರು ಬಗೆಯಲ್ಲಿ ಕ ಅಕ್ಷರಗಳು ಜೊತೆಯಾಗಿ ನಿಂತು ೩ಕೆ ಎಂದು ಸಾರುತ್ತವೆ....
ಅದೆಲ್ಲ ಸರಿ ೩ತ ಅಂದ್ರಲ್ಲ ಅದಕ್ಕೆ ಹೇಳಿ ಅಂದ್ರಾ.. ಈ ಲೇಖನದ ಕೊನೆ ಭಾಗವನ್ನು ನೋಡಿ.. ಅಲ್ಲಿ ಉತ್ತರ ಸಿಗುತ್ತದೆ..
ಅರೆ ಅರೆ ಇರಿ ಸ್ವಾಮೀ ಜರ್ ಅಂಥಾ ಸ್ಕ್ರೋಲ್ ಮಾಡಬೇಡಿ.. ಒಸಿ ಸಮಾಧಾನ ಇರಲಿ.. ಅಲ್ಲವೇ..
ಫಿಲಂ ಕಡೆತನಕ ನೋಡಿದರೆ ಸ್ವಾರಸ್ಯ.. ನೋಡಿ... ಅಯ್ಯೋ... ಓದಿ ಆಮೇಲೆ ಗೊತ್ತಾಗುತ್ತದೆ..
೩ತ ಅಂದ್ರೆ ಏನೂ ಅಂತ.. !!!
******
ನೋಡು ನೋಡುತ್ತಲೇ ಒಂದು ವರ್ಷದ ಉದ್ದಿನ ಮೂಟೆ ಉರುಳೇ ಹೋಯಿತು.. ಕಳೆದ ವರ್ಷ ಇದೆ ನವೆಂಬರ್ ೨೬ ರಂದು... ಉತ್ಸಾಹ ತುಂಬಿದ ಹಬ್ಬದ ವಾತಾವರಣ ಇದೆ ಅಂಗಳದಲ್ಲಿ ಮೂಡಿತ್ತು... ಅದನ್ನು ಇನ್ನೊಂದು ಹಂತಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಈ ದಿನ ಸಾಗಿತ್ತು ..
ಅನತಿದೂರದಿಂದಲೇ ಆಹ್ವಾನಿಸುವ ಫಲಕ |
ಹೊಟ್ಟೆ ತುಂಬಿದವರಿಗೆ ಹಸಿವಿನ ಅರ್ಥವಾಗೋಲ್ಲ
ಹಸಿವಿದ್ದವರಿಗೆ ಸುಖದ ಅನುಭವವಿರೋಲ್ಲ!
ಹಸಿವಿನಲ್ಲಿ ಸುಖವುಂಡವರು ಜ್ಞಾನಿಗಳು
ದುಃಖದಲ್ಲಿ ನಗುವ ಕಂಡವರು ತತ್ವಜ್ಞಾನಿಗಳು!
ನಿಜ ಅನ್ನಿಸುತ್ತದೆ.. ದೇವರಿಗೆ ಸವಾಲು ಹಾಕುವ ಬದಲು.. ದೇವರ ಮೇಲಿನ ನಂಬಿಕೆಯ ಹೆಗಲ ಮೇಲೆ ಕೈಹಾಕಿ..
"ನೋಡು ಶಿವ..
ಕಷ್ಟ ಕೊಡುತ್ತೀಯಾ
ಕ್ವಾಟ್ಲೆ ಕೊಡುತ್ತೀಯಾ
ಜೀವನ ರೋಸತ್ತಿ ಹೋಗುವಂತೆ ಮಾಡ್ತೀಯ
ಮಾಡು ತೊಂದರೆ ಇಲ್ಲ
ಆದರೆ
ಒಂದು ಮಾತು ನಿನಗೆ..
ಈ ದೇಹ ಮನಸ್ಸು ಎಂದೂ ಬಾಗದು
ಕಷ್ಟ ಕೊಡುವಾಗ
ನಿಭಾಯಿಸುವ ಕಲೆಯನ್ನು
ನಿಭಾಯಿಸುವಾಗ
ತಾಳ್ಮೆಯನ್ನು
ತಾಳ್ಮೆಯ ಜೊತೆಯಲ್ಲಿ
ನಗುವನ್ನು ಕೊಡುವುದಾದರೆ
ನನ್ನ ಜೋಳಿಗೆಯಲ್ಲಿ ಕಷ್ಟಗಳೆಂಬ ಜ್ಞಾನ ದೀವಟಿಗೆಯನ್ನು ಹಾಕು .. ಇಲ್ಲವಾದರೆ ರೈಟ್ ಹೇಳು.."
ಈ ರೀತಿಯ ಮಾತುಗಳು ಹೇಳಬೇಕಾದರೆ.. ತಾಕತ್ತು ಬೇಕು.. ಅದು ಸುಮ್ಮನೆ ಬರುವುದಿಲ್ಲ..
"ಬೆಟ್ಟ ಕೊರೆದು
ದಾರಿ ಮಾಡಿ
ನೀರು ನುಗ್ಗೋ ಹಾಗೆ
ಮುಂದೆ ನುಗ್ಗಿ
ಹೋದ್ರೆ ತಾನೇ ದಾರಿ ಕಾಣೋದು ನಮ್ಗೆ"
ಎನ್ನುವ ನಾಗರಹೊಳೆ ಚಿತ್ರದ ಹಾಡಿನಂತೆ.. ನುಗ್ಗಿ ನೆಡೆದಾಗ ಭಗವಂತನು ಸೊಂಟ ಬಾಗಿಸಿ ದಾರಿ ದೀಪವಾಗುತ್ತಾನೆ ಎನ್ನುತ್ತದೆ ಜಾನಪದ ಮಾತುಗಳು..
ಏನಪ್ಪಾ ಇದು "ಮಾಮರವೆಲ್ಲೋ ಕೋಗಿಲೆಯೆಲ್ಲೂ.. ಏನೀ ಸ್ನೇಹ ಸಂಬಂಧ.. ಎಲ್ಲಿಹದೊ ಈ ಅನುಬಂಧ" ಎನ್ನುವ ಹಾಡಿನಂತೆ.. ಇದನ್ನು ಜೋಡಿಸಿಸುವುದು ಏಕೇ ಅಂತೀರಾ.. ಇಲ್ಲೇ ಇರೋದು ನೋಡಿ ಮಜಾ..
ಒಂದು ಗ್ರಾಮದಿ ಹೊರಗಿನ ಪ್ರಪಂಚ ಕಾಣದ ಒಂದು ಮುಗ್ಧ ಜೋಡಿ... ತಮ್ಮ ಸಂಧ್ಯಾಕಾಲದಲ್ಲಿ ನೂರಾರು ಭಾವನೆಗಳ ಮಧ್ಯೆ.. ನೂರಾರು ಭಾವನೆಗಳ ನಡುವಲ್ಲಿ... ಬೆಂದ ಮನೆಯಲ್ಲಿ ಗಳು ಹಿರಿದದ್ದೇ ಲಾಭ ಎನ್ನುವಂತೆ ಇವರ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡ ಪಿತಾಮಹರುಗಳ ನಡುವಲ್ಲಿ ಇದ್ದರೂ.. ತಮ್ಮ ಕಲೆಯೇ ಮೈಯೆತ್ತಿ ಬಂದಂತೆ ಅದರೊಡನೆ ಒಡನಾಡುತ್ತಾ ತಮ್ಮ ಬವಣೆಯ ಬಟ್ಟೆಯನ್ನು ಪದಗಳ ಶಾಖದಲ್ಲಿ ಒಣಗಿಸಿಕೊಂಡು ಸಾರ್ಥಕ ಬದುಕು ನೆಡೆಸುತ್ತಿರುವ ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮನವರ ತತ್ವ ಪದಗಳ ಸುನಾಮಿಗೆ ಮನಸ್ಸು ಮೂಕವಾಗಿದ್ದು ಸಹಜ..
ಇಂತಹ ಕಲಾವಿದರ ಹೃದಯದಲ್ಲಿ ಶಾರದೆ ಇರುತ್ತಾಳೆ ಸದಾ |
... ಕಾರ್ಯಕ್ರಮದ ಆರಂಭವನ್ನು ಶುರುಮಾಡಿದ ಅರುಣ್.. ನಾಡಗೀತೆಗೆ ಜೊತೆಯಾಗುವಂತೆ ಮಾಡಿದರು.. ನಂತರ ಒಂಬತ್ತು ವರ್ಷಗಳ ಹಿಂದೆ ಇದೆ ದಿನ ಉಗ್ರವಾದಿಗಳ ಜೊತೆ ಹೋರಾಡುತ್ತಾ ತಮ್ಮ ಪ್ರಾಣವನ್ನೇ ಬಲಿಕೊಟ್ಟ ಭಾರತದ ವೀರ ಮಕ್ಕಳ ನೆನಪಿಗೆ ಒಂದು ಅರೆ ಘಳಿಗೆ ಮೌನದ ವಾತಾವರಣ ನಿರ್ಮಾಣ ಮಾಡಿ ಅವರ ನಿಸ್ವಾರ್ಥ ಸೇವೆಗೆ ಒಂದು ಗೌರವ ಸೂಚಿಸಿದ ಮೇಲೆ.. ದೀಪಂ ಜ್ಯೋತಿ ಪರಬ್ರಹ್ಮ ಎನ್ನುತ್ತಾ ದೀಪ ಬೆಳಗಿ.. ನಂತರ ಪ್ರಾರ್ಥನೆ ಗೀತೆ ಶ್ರೀಮತಿ ಉಷಾ ಉಮೇಶ ಅವರಿಂದ ಮೊದಲಾಯಿತು..
ವೇದಿಕೆಯಲ್ಲಿ ಆಸೀನರಾಗಿದ್ದವರೆಲ್ಲ ಘಟಾನುಘಟಿಗಳೇ..
ವೇದಿಕೆಯಲ್ಲಿ ಪ್ರತಿಭಾ ಪ್ರಚಂಡರು |
"ಜೇನುಗೂಡು ಆಗುವುದು
ಅನೇಕ ಜೇನುನೊಣಗಳಿಂದ
ಅನೇಕ ಜೇನುನೊಣಗಳು
ಅಲೆದು ಅಳೆದು ಹೂವಿನ ಹನಿಯನ್ನ
ಮೂಡಿಸುತ್ತದೆ ಜೇನಿನ ಗೂಡನ್ನ... ।
ಹನಿಹನಿಯಾಗಿದ್ದ ಸಿಹಿಯನ್ನು ಜೇನು ಮಾಡಿ
ಮನುಜರಿಗೆ ಹಂಚುವ ಕಾಯಕ ಮಾಡುವ ಆ ಜೇನುಗೂಡಿಗೂ
ಕರುನಾಡಿನ ಅಕ್ಷರವ ಅಕ್ಕರೆ ತುಂಬಿಸಿ ಪಸರಿಸುವ
ಈ ೩ಕೆ ತಂಡಕ್ಕೂ ಸಾಮ್ಯತೆ ಬಹಳ ಬಹಳ!!!
ಹೇಳಬೇಕಾದ್ದು ಸಾವಿರಾರು.. ಹೇಳೋದು ನೂರಾರು.. ಮನಸ್ಸಲ್ಲಿ ಕೂರುವುದು ಹತ್ತಾರು.. ಹೌದು ಎಷ್ಟು ನಿಜ ಈ ಮಾತು... ಸಂತ ಶಿಶುನಾಳ ಶರೀಫರನ್ನು ಕೆಲವೇ ಪದಗಳಲ್ಲಿ .. ಕೆಲವೇ ನಿಮಿಷಗಳಲ್ಲಿ ಪ್ರಸ್ತುತ ಪಡಿಸುವುದು ಸಾಗರವನ್ನು ಒಂದು ಬೊಗಸೆಯಲ್ಲಿ ಹಿಡಿದಂತೆ.. ಆದರೆ ಈ ಸಾಹಸವನ್ನು ನಮ್ಮೆಲ್ಲರ ಗುರುಗಳು ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಮಾಡಿದರು.. ಇದು ಸುಮ್ಮನೆ ಮಾತಾಡಿದುದು ಅಲ್ಲಾ.. ಬರಿ ಪರಿಚಯವೂ ಅಲ್ಲ.. ಸಂತರ ಸಮಗ್ರಹ ಸಾಹಿತ್ಯವನ್ನು.. ಸಂತರ ಜೀವನವನ್ನು ಕೆಲವು ನಿಮಿಷಗಳಲ್ಲಿ ಹಿಡಿದಿಟ್ಟ ಬಗೆ ಚೆನ್ನಾಗಿತ್ತು..
ಶರೀಫರ ಕೆಲವು ಆಯ್ದ ಪದಗಳನ್ನು ಸತೀಶ್ ನಾಯಕ್ ಮತ್ತು ಉಷಾ ಉಮೇಶ್ ಹಾಡಿದರು.. ಅದನ್ನು ಮತ್ತೆ ಹಿಂಜಿಸಿದ್ದು ಗುರುಗಳು.. ಅದರ ಅರ್ಥವಿಸ್ತಾರ.. ಅದರ ಒಳ ಮುಖವನ್ನು ಪರಿಚಯ ಮಾಡಿಕೊಟ್ಟದ್ದು ಸುಂದರವಾಗಿತ್ತು.. ಶರೀಫರ ಹಾಡು ಕೇಳುತ್ತೇವೆ.. ತಲೆದೂಗುತ್ತೇವೆ.. ಮನನ ಮಾಡುತ್ತೇವೆ.. ಮುಂದೆ ಅಂದರೆ? .. ಈ ಮುಂದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮಂಜುನಾಥ್ ಸರ್ ಅವರ ವಿಶ್ಲೇಷಣೆಯಿಂದ..
ಕಿರುತೆರೆ ಪ್ರತಿಭೆ ಶ್ರೀ ತೇಜಸ್ವಿ ಅವರು ೩ಕೆ ತಂಡಕ್ಕೆ ಮೊದಲಿಂದಲೂ ಚಿರಪರಿಚಿತ.... ಅವರ ಚುಟುಕು ಮಾತಿನಲ್ಲಿ ನನ್ನ ಗಮನ ಸೆಳೆದದ್ದು.. ಕನ್ನಡ ಭಾಷೆಗೆ ಅಳಿವಿಲ್ಲ... ಅದು ಇಂದಿಗೂ ನಿಲ್ಲುತ್ತದೆ ಉಳಿಯುತ್ತದೆ.. ಬೆಳೆಯುತ್ತಲೇ ಇರುತ್ತದೆ.... ತಾವು ನೆಡೆದು ಬಂದ ಹಾದಿಯನ್ನು ಚುಟುಕಾಗಿ ವಿವರಿಸುತ್ತಾ.. ವಿನಯವಿದ್ದಾಗ ಶಿಖರ ಏರಬಹುದು ಎನ್ನುವುದರ ಪ್ರತಿಬಿಂಬವಾಗಿ ಕಂಡರು..
ಸಮಯ ಕಳೆದದ್ದು ಅರಿವಾಗಲಿಲ್ಲ.. ಮನದಲ್ಲಿ ಕೂತ ಶರೀಫರ ತತ್ವ ಪದಾರ್ಥಗಳಿಗೆ ಮಿತಿಯಿರಲಿಲ್ಲ... ಅನುಭವದ ಪಾಕವನ್ನು ನಮ್ಮಲ್ಲಿ ಹಂಚಿಕೊಂಡ ಮಾತುಗಳಿಗೆ ಕೊನೆಯಿರಲಿಲ್ಲ
ಆ ಗುಂಗಿನಲ್ಲಿ ಇದ್ದ ನಮ್ಮನ್ನು.. ಬನ್ರಪ್ಪ.. ಇನ್ನೊಂದು ಲೋಕಕ್ಕೆ ಕರೆದೋಯ್ತೀವಿ.. ನೋಡಿ ಇದೆ... ಹಾ ಇದೆ ಬಸ್ಸನ್ನು ಹತ್ತಿ ಎಂದು ಅವರ ಜೊತೆಯಲ್ಲಿ ನಮ್ಮನ್ನು ಅರ್ಧಘಂಟೆಗೂ ಮಿಕ್ಕು ಸುತ್ತಾಡಿಸಿದರು ಶ್ರೀ ತಂಬೂರಿ ಜವರಯ್ಯ ಮತ್ತು ಶ್ರೀಮತಿ ಬೋರಮ್ಮ ದಂಪತಿಗಳು..
ವಾಹ್.. ತಂಬೂರಿ ಮೀಟುತ್ತ.. ಅವರ ಕಂಚಿನ ಕಂಠದಲ್ಲಿ ಮೂಡುತ್ತಿದ್ದ ತತ್ವಪದಗಳು ಎಷ್ಟು ಸರಳವಾಗಿದ್ದವು ಅಂದರೆ.. ಅರೆ ಪದಗಳನ್ನು ಇಷ್ಟು ನಾಜೂಕಾಗಿ.. ಸಲೀಸಾಗಿ ಹಾಡಬಹುದೇ ಎನ್ನಿಸುತ್ತಿತ್ತು.. ಆದರೆ ಪ್ರತಿ ತತ್ವಪದಗಳ ಸಾಲುಗಳಲ್ಲಿ ಅಡಗಿ ಕೂತಿರುತ್ತಿದ್ದ ಅರ್ಥಗಳು.. ಪಾರಮಾರ್ಥಿಕ ತತ್ವಗಳು ಅರೆ ವಾಹ್ ಅನಿಸುವಂತೆ ಮಾಡುತ್ತಿದ್ದವು..
ಬೆಟ್ಟದ ರಾಯ ಕುಣಿದಾಡ್ತಿತ್ತ..
ಪ್ರತಿಯೊಂದು ತತ್ವ ಪದಗಳನ್ನು ಹಾಡಿದ ಮೇಲೆ ಸಿಗುತ್ತಿದ್ದ ಕರತಾಡನಗಳಿಗೆ ದಂಪತಿಗಳು ಹೇಳುತ್ತಿದ್ದದು.. ಈ ಚಪ್ಪಾಳೆಗಳೇ ನಮಗೆ ಉತ್ತೇಜನ ನೀಡುವ ಟಾನಿಕ್ಕು ಎನ್ನುವ ಅರ್ಥ ಬರುವ ಮಾತುಗಳನ್ನು ಹೇಳುತ್ತಿದ್ದರು..
ಅವರ ತತ್ವ ಪದಗಳಲ್ಲಿ ನನಗೆ ಕಾಣುತ್ತಿದ್ದುದು..
ಜೀವನ ಸುಂದರವಾಗಿದೆ
ಜೀವನ ದೇವರು ಕೊಟ್ಟ ಭಿಕ್ಷೆ
ಜೀವನ ನಮ್ಮ ಕೈಯಲ್ಲಿದೆ
ಜೀವನ ಒಂದು ಉದ್ಯಾನವನ
ಜೀವನ ಒಂದು ಜೀವಿಸುವ ವನ
"ಕಷ್ಟ ಕಾರ್ಪಣ್ಯಗಳು ಬರುತ್ತವೆ..ಕೆಲವು ಇರುತ್ತವೆ .. ಕೆಲವು ಹೋಗುತ್ತವೆ.. ಇನ್ನೂ ಕೆಲವು ಮಂಡಾಟ ಮಾಡಿಕೊಂಡು ನಮ್ಮನ್ನು ಗೋಳು ಹುಯ್ಕೊತಾವೆ... ಆದರೆ ಆಗ ನಾವು ಭಗವಂತನಲ್ಲಿ ಬೇಡಿಕೊಳ್ಳುವ ಪರಿ ಹೇಗಿರುತ್ತೆ ಅಂದರೆ... ನೋಡು ಶಿವ ಕಷ್ಟಕೋಟಲೆಗಳನ್ನು ಕೊಡು.. ಬೇಡ ಅನ್ನೋಲ್ಲ .. ಅದು ನಮ್ಮ ನಮ್ಮ ಪಾಪ ಪುಣ್ಯಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದ್ದು.. ಆದರೆ ಅದನ್ನು ಕೊಡುವಾಗ ಅದರ ಜೊತೆಯಲ್ಲಿ.. ಆ ಕಷ್ಟಗಳನ್ನು ಎದುರಿಸುವ.. ಜಯಿಸುವ.. ಮನೋಸ್ಥೈರ್ಯವನ್ನು ಕೊಡು.. ಉತ್ತರವಿದ್ದಾಗ ಪ್ರಶ್ನೆಗಳು ಇರಲೇ ಬೇಕು.. ಪ್ರಶ್ನೆ ಇದೆ ಎಂದರೆ ಅದಕ್ಕೆ ಉತ್ತರ ನೀ ಸಿದ್ಧಮಾಡಿರಲೇ ಬೇಕು.. ಏನಂತೀಯಾ"
ಹೀಗೆ ದೇವರ ಜೊತೆಯಲ್ಲಿ ಹುಸಿಮುನಿಸಿನಿಂದ.. ಹಾಗೆಯೇ ದೋಸ್ತಿ ಮಾಡಿಕೊಂಡು ಮುನ್ನುಗ್ಗಬೇಕು..
ನಾಗರಹೊಳೆ ಚಿತ್ರದಲ್ಲಿ ಬರುವ ಹಾಡಿನ ಸಾಲಿನಂತೆ
"ಬೆಟ್ಟ ಕೊರೆದು ದಾರಿ ಮಾಡಿ
ನೀರು ನುಗ್ಗೋ ಹಾಗೆ..
ಮುಂದೆ ನುಗ್ಗಿ ಹೋದ್ರೆ ತಾನೇ
ದಾರಿ ಕಾಣೋದು ನಮ್ಗೆ...
ಇಲ್ಲೇ ಸ್ವರ್ಗ ..
ಇಲ್ಲೇ ನರಕ
ಮೇಲೇನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮಧ್ಯೆ
ಮೂರು ದಿನದ ಬಾಳು"
ಈ ದಂಪತಿಗಳ ಹಾಸ್ಯ ಮಿಶ್ರಿತ ಮಾತುಗಳು.. ಜೊತೆಯಲ್ಲಿ ಅವರ ಸಂಸಾರದಲ್ಲಿ ತಾವುಂಡ ನೋವನ್ನು, ನೋವು
ಎಂದುಕೊಳ್ಳದೆ ಅದನ್ನು ಭಗವಂತನ ದಯೆ ಎಂದು ಹೇಳುತ್ತಾ ಜೀವನದ ಸಾರ್ಥಕತೆಯನ್ನು ಬಿಂಬಿಸುತ್ತಿರುವ ಈ ದಂಪತಿಗಳಿಗೆ ಕರುನಾಡಿನ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟು.. ಆ ಪ್ರಶಸ್ತಿಯ ಹಿರಿಮೆಯನ್ನು ಹೆಚ್ಚು ಮಾಡಿಕೊಂಡಿತು..
ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀ ಮಹೇಶ್ ಮೂರ್ತಿ ಸೂರತ್ಕಲ್ ಅವರ ಮಾತುಗಳು ಈ ಸಮಾರಂಭಕ್ಕೆ ಕಲಶ ತೊಡಿಸಿತ್ತು.. ಈ ತಂಡಕ್ಕೆ ಅಧ್ಯಕ್ಷರು ರೂಪಕ್ಕ ಅವರು.. ಇನ್ನು ನನ್ನನ್ನು ಇಲ್ಲಿ ಕೂರಿಸಿದ್ದಾರೆ ಅಷ್ಟೇ.. ನಾವೆಲ್ಲರೂ ಅವರ ಮಾರ್ಗದರ್ಶನದಲ್ಲಿ ಹೆಜ್ಜೆ ಇಡುತ್ತಿದ್ದೇವೆ.. ವಿನಯವಂತಿಕೆ ಎಂದರೆ ಇದೆ ಅಲ್ಲವೇ..
ಪ್ರಶಸ್ತಿಗೆ ಒಂದು ಗೌರವ |
ನಾ ಕಂಡ ಅತ್ಯುತ್ತಮ ತಂಡ.. ೩ಕೆ |
ಹೌದು.. ನೀ ಮಾಯೆಯೋ ನಿನ್ನೊಳಗೆ ಮಾಯೆಯೋ ಎನ್ನುವ ಕನಕ ದಾಸರ ಪದದಂತೆ.. ಒಂದಕ್ಕೊಂದು ಹಾಸು ಹೊಕ್ಕಾಗಿ ನಿಲ್ಲುವ ಪರಿ.. ಅನುಭವಿಸಿದರೇ ಮಾತ್ರ ಅರಿವಾಗುತ್ತೆ.. "ಕೋಡಗನ ಕೋಳಿ ನುಂಗಿತ್ತಾ" ಎನ್ನುತ್ತಾ.. ಅದು ಕೊಡಗಲ್ಲನ ಕೋಳಿ ನುಂಗಿತ್ತಾ.. ಅಂದರೆ ಒಂದರೊಳಗೆ ಒಂದು ಸೇರಿಕೊಳ್ಳುವ.. ಅಥವಾ ನಾವುಗಳು ನಮ್ಮತನದೊಳಗೆ ಸೇರಿಕೊಳ್ಳುವ ಒಂದು ವಿಶಿಷ್ಟ ಪರಿ.. ಎನ್ನುತ್ತಾ ಆ ತತ್ವ ಪದದ ವಿಸ್ತರಣೆ ಮಾಡಿದ್ದು.. ಈ ದಂಪತಿಗಳ ತತ್ವ ಪದಗಳು.. ಇವರಿಗೆ ಗೌರವ ಪ್ರಧಾನ ಮಾಡಿದ ರೀತಿ... ಅರೆ ಒಂದು ಪುಟ್ಟ ಕಾರ್ಯಕ್ರಮ ನಮ್ಮ ಪುಟ್ಟ ಮನಸ್ಸಲ್ಲಿ ಇಷ್ಟು ದೊಡ್ಡದಾಗಿ ಕೂರಬಹುದೇ ಎನ್ನುವಾಗ ಮೂಡಿ ಬಂದ ಪದ ಹೀಗಿದೆ
ಕೋಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ
ಕೋಡಗನ ಕೋಳಿ ನುಂಗಿತ್ತಾ
ತತ್ವ ಪದಗಳು ಮನದೊಳಗೆ ಇಳೀತಾ ತಂಗಿ
ಮನದೊಳಗೆ ತತ್ವ ಪದಗಳು ಇಳಿದಿತ್ತಾ
ದಂಪತಿಗಳು ಹೇಳಿದ ಅರ್ಥ ನುಂಗಿ
ಗುರುಗಳು ಪೇಳಿದ ಮಾತುಗಳ ನುಂಗಿ
ಬಂದ ಸ್ನೇಹಿತರ ಪ್ರೀತಿಯ ನುಂಗಿ
ಕಡೆಯಲ್ಲಿ ಸಮೋಸ ಅಂಬಡೆ ನುಂಗಿತ್ತಾ ತಂಗಿ
ಕೋಡಗನ ಕೋಳಿ ನುಂಗಿತ್ತಾ!!!!
ಸುಮಾರು ಮೂರು ತಾಸುಗಳ ಈ ಕಾರ್ಯಕ್ರಮ ಹೈವೇ ನಲ್ಲಿ ಸಾಗುವ ಬಂಡಿಯಂತೆ.. ಸಲೀಸಾಗಿ ಸಾಗಿತು.. ಮಧ್ಯೆ ಮಧ್ಯೆ ತುಸು ನವಿರಾದ ಹಾಸ್ಯ.. ಚುಟುಕುಗಳು.. ಸಾಗುತ್ತಿದ್ದವು..
ತಂಡದ ಪ್ರತಿಯೊಬ್ಬರ ಪರಿಶ್ರಮ ಕಾರ್ಯಕ್ರಮ ಅಚ್ಚುಕಟ್ಟಿನಲ್ಲಿ ಕಾಣುತ್ತಿತ್ತು.. ಲೇಖನದಲ್ಲಿ ಹೆಸರಿಸದೆ ಇದ್ದರೂ ಅವರ ಪರಿಶ್ರಮಕ್ಕೆ ಕೊರತೆ ಇರಲಿಲ್ಲ.. ಎಲ್ಲವೂ ಸೂತ್ರಬದ್ಧ.. " ನಾಯಕ ನಾನೇ ನನ್ನ ಕಥೆಗೆ" ಎನ್ನುವ ಸಾಲನ್ನು ಸ್ವಲ್ಪ ಉಲ್ಟಾ ಪಲ್ಟಾ ಮಾಡಿದಾಗ ಸಿಗುವ ಹಾಡು
ನಾವಿಂದು ಹಾಡುವ ಹಾಡಿಗೆ ಕೊನೆಯಿಲ್ಲ
ಕೊನೆಯಿಲ್ಲ ಈ ಸಂಭ್ರಮಕ್ಕೆ ಕಾರಣ ನೀವೇಯೆಲ್ಲಾ
ನೀವೇಯೆಲ್ಲಾ ಎಲ್ಲ ಮನಸ್ಸಿಟ್ಟು ಬಂದೀರಿ
ಬಂದಿರಿ ನಮ್ಮ ಕರಗಳಿಗೆ ಜೊತೆಯಾದಿರಿ
ಜೊತೆಯಾದಿರಿ ಸಂಭ್ರಮಕ್ಕೆ ಕಾರಣರಾದಿರಿ..
ಕಾರಣರಾದಿರಿ ಆದ್ರಿ ನಮ್ಮ ಕಥೆಗೆ ನೀವೇ ನಾಯಕ
ನಾಯಕ ನೀವೇ ನಮ್ಮ ಕಥೆಗೆ..ನಿರ್ದೇಶಕ ಆ ಭಗವಂತ
ಭಗವಂತ ಆಡಿಸಿದ ಹಾಗೆ ಆಡುವ ಹಾಡುವ ಮಕ್ಕಳು ನಾವೆಲ್ಲಾ.. !!!
ಮಹನೀಯರ ಜೊತೆಯಲ್ಲಿ ೩ಕೆ ತಂಡ |
ಮೊದಲನೇ ಬಹುಮಾನ |
ಎರಡನೇ ಬಹುಮಾನ |
ಸಮಾಧಾನಕರ ಬಹುಮಾನ |
ಒಂದು ದೊಡ್ಡ ಪರಿವಾರ |
ಮುತ್ತುರತ್ನಗಳು ಈ ತಂಡದವರು |
ತತ್ವ..
ತಮಾಷೆ..
ತತ್ವಜ್ಯೋತಿ
ಈ ಮೂರು ಒಂದೇ ಕಡೆ ಸಿಕ್ಕ ತಾಣ ಈ ಕಾರ್ಯಕ್ರಮ..