ಲೋ ಶ್ರೀ.. ಹಾಡಿನಲ್ಲಿಯೇ ಒಂದು ಕತೆ ಬರೆದುಕೊಡೋ... ಕಾಣದ ಕಡಲಿನ ಜೊತೆಯಲ್ಲಿ ತೇಲುತ್ತಾ ಪಯಣ ಮಾಡುವಾಗ ಮೂಡಿಬಂದ ಒಂದು ಕೋರಿಕೆ .. ನೋಡ್ತೀನಪ್ಪ.. ಒಳಗಿನ ಬಾಸ್ ಹೇಳಿದರೆ.. ಅವರು ಹೇಳಿದಂತೆ ಬರೆಯುತ್ತೇನೆ.. ನನ್ನದೇನಿದೆ. ಹೇಳುವವ ಒಳಗಿದ್ದಾರೆ.. ನಾ ಬರಿ ಉಕ್ತಲೇಖನ ತೆಗೆದುಕೊಳ್ಳುವವ ಅಷ್ಟೇ.. !!!
******
ವಿಜಯ್ ಮತ್ತು ವಿಜಯ ಅದ್ಭುತ ಸ್ನೇಹಿತರು.. ಪರಿಚಯ ಸ್ನೇಹಕ್ಕೆ ತಿರುಗಿ.. ಸ್ನೇಹ ಪ್ರೀತಿಯ ರಂಗನ್ನು ತುಂಬಿಕೊಳ್ಳುತ್ತಿತ್ತು..ಅದೇ ರಂಗು ಬಾನನ್ನು ತುಂಬಿ.. ದಿನಕರ ನನ್ನ ಕೆಲಸ ಆಯಿತು ಎಂದು ಮನೆಗೆ ಹೊರಡುವ ಸಮಯದಲ್ಲಿ ಕಡಲ ಕಿನಾರೆಯಲ್ಲಿ ಕುಳಿತು ವಿಜಯ್ ವಿಜಯನನ್ನು ಕೇಳಿದ..
"ಕಣೆ.. ಯಾವಾಗ ನಿನ್ನ ಮನೆಗೆ ಬರಲಿ.. ನಿನ್ನ ನೋಡಬೇಕು ಅನ್ನಿಸಿದರೆ ಯಾವಾಗ ಬರಬಹುದು ಪ್ಲೀಸ್ ಹೇಳು"
ಸಿನಿಮಾ ಹಾಡುಗಳ ಹುಚ್ಚು ಹಿಡಿದಿದ್ದ ವಿಜಯ ಅದೇ ದಾಟಿಯಲ್ಲಿ "ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ"
ತಲೆ ಕೆರೆದುಕೊಂಡ ವಿಜಯ್.. ಹಾಗೆ ವಿಜಯಳ ಮೊಗದ ಸೌಂದರ್ಯವನ್ನು ನೋಡುತ್ತಾ ಕೂತಿದ್ದ.. ಅವಳು ಹೇಳಿದ್ದ ಸಮ್ಮತಿಯ ಮಾತು ಅವನ ಹೃದಯದಲ್ಲಿ ಸರಿಗಮ ಹಾಡಿಸುತ್ತಿತ್ತು..
"ಕಣೆ.. ಲಗ್ ಜಾ ಗಲೇ ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ .. ನಿನ್ನ ಮಾತಿಗೆ ಒಂದು ಅಪ್ಪುಗೆ ನಿನಗೆ"
ವಿಜಯ.. ನಿನ್ನ ಮೊದಲ ಬಾರಿಗೆ ಕಂಡಾಗ ನನ್ನಲ್ಲಿ ಉಕ್ಕಿ ಬಂದ ಹಾಡು ಯಾವುದು ಗೊತ್ತೇ.. ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ .. ಅದ್ಯಾಕೋ ಗೊತ್ತಿಲ್ಲ ಪ್ರಥಮ ನೋಟದಲ್ಲಿಯೇ ಪ್ರೇಮ, ಪ್ರೀತಿ ಅಂತ ಬರಿ ಕಥೆ ಹೇಳ್ತಾರೆ ಅಂದುಕೊಂಡಿದ್ದೆ ಆದರೆ ಅದು ನಿಜ ಅಂತ ನಿನ್ನ ನೋಡಿದ ಮೇಲೆ ಅರಿವಾಯಿತು.. ಅದೇ ಖುಷಿಯಲ್ಲಿ ನಿನಗೆ ಬರೆದದ್ದು ಮೊದಲ ಪ್ರೇಮ ಪತ್ರ ಅದು ಯಾವ ಹಾಡು ಹೇಳುತ್ತಾ ಗೊತ್ತಾ.. ಲಿಕ್ ಹೇ ಜೋ ಕತ್ ತುಜೆ.. ಆ ಹಾಡು ಮತ್ತು ನಿನಗೆ ಬರೆದ ಪತ್ರದ ಪ್ರತಿಯನ್ನು ಓದಿ ಓದಿ ಖುಷಿ ಪಟ್ಟಿದ್ದೆ ..
ಆ ಪತ್ರದ ಬಗ್ಗೆ ಆಫೀಸಿನಲ್ಲಿ ಹೇಗೋ ಗೊತ್ತಾಗಿ.. ನನ್ನ ಕಿಚಾಯಿಸಿದಾಗ.. ನಾ ನಿನಗೆ ಹೇಳಿದ್ದು "ಆಜ್ ಕಲ್ ತೆರೆ ಮೇರೇ ಪ್ಯಾರ್ ಪೇ ಚರ್ಚೆ ಹರ್ ಝುಬಾನ್ ಫಾರ್ ಸಬ್ಕೋ ಮಾಲೂಮ್ ಹೇ ಔರ್ ಸಬ್ಕೋ ಖಬರ್ ಹೋಗಯೀ... " ನೀನು ತೋ ಕ್ಯಾ" ಎಂದು ಹೇಳಿ ನೀ ನನಗೆ ಧೈರ್ಯ ತುಂಬಿದ್ದೇ..
"ಹೌದು ಕಣೋ ವಿಜಯ್.. ನೀ ಸಿಗುವ ತನಕ ನನ್ನ ಮನಸ್ಸು ಬರಿಕಾಗದವಾಗಿತ್ತು .. ನೀ ಬಂದ ಮೇಲೆ ಕೋರಾ ಕಾಗಜ್ ಥಾ ಏ ಮ್ಯಾನ್ ಮೇರಾ ಲಿಕ್ ಲಿಯಾ ನಾಮ್ ಉಸ್ಪೇ ತೇರಾ.. "
"ಕಣೆ ನೀ ಅಂದು ಒಪ್ಪಿಗೆ ಕೊಟ್ಟ ದಿನ . ಆಫೀಸಿನಲ್ಲಿ ಖುಷಿಯಿಂದ ಓಡಾಡಿದ್ದೆ .. ಅಂದಿನ ಕೆಲಸವೆಲ್ಲಾ ಹೂವಿನ ಸರ ಎತ್ತಿದಂತೆ ಆಗಿತ್ತು.. ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ ಎಂದು ಹಾಡುತ್ತಾ ಖುಷಿಯಿಂದ ಕೆಲಸಾ ಸಾಗಿತ್ತು.. ನಾ ಕುಶಿಯಾಗಿದ್ದನ್ನ ನೋಡಿ..ನನ್ನ ಸಹೋದ್ಯೋಗಿ.. ಲೋ ಬಾಬೂಜಿ ಧೀರೆ ಚಲನಾ.. ಸಾಂನೆ ಝರಾ ಸಂಬಲ್ನ ಎಂದಳು ನಾನು ಅದಕ್ಕೆ ತಲೆ ಕೆಡಿಸಿಕೊಳ್ಳಲಿಲ್ಲ ... ತಕ್ಷಣ ನಾ ಮಾಡಿದ ಕೆಲಸ.. ಕ್ಯಾಂಟೀನಿಗೆ ಹೋಗಿ .. ಒಂದು ಸ್ಟ್ರಾಂಗ್ ಕಾಫಿ ಕೂಡಿದೆ.. ನಿನಗೆ ಕರೆ ಮಾಡಿದೆ ನಿನ್ನ ಮೊಬೈಲ್ ಹಲೋ ಟ್ಯೂನ್ ಕಭಿ ಕಭಿ ಮೇರೇ ದಿಲ್ ಮೇ ಖಯಾಲ್ ಆತಾ ಹೇ ಕೆ ಜೈ ತುಜುಕೋ ಬನಾಯ ಗಯಾ ಹೇ ಮೇರೇಲಿಯೇ... ಅಲ್ವೇನೆ
ನಿನ್ನ ಮಾತಿಗೆ ಏನು ಹೇಳಲಿ ವಿಜಯ್ ನಗುವ ನಯನ ಮಧುರ ಮೌನ..ಮೌನಂ ಸಮ್ಮತಿ ಲಕ್ಷಣಂ ಅಲ್ಲವೇ .. ರಾತ್ರಿ ಮಲಗಿದರೆ ಒಂದೇ ರಾಗ ಕೌನ್ ಹೇ ಜೋ ಸಪನೋ ಮೇ ಆಯಾ.. ನಿದ್ದೆಯಿಂದ ಎದ್ದು ಕಣ್ಣು ಬಿಟ್ಟರೆ ನಿನ್ನ ಹೆಸರೇ.. ಮತ್ತೆ ಕಣ್ಣು ಮುಚ್ಚಿ ನಿದ್ದೆ ಮಾಡಿದರೆ ಅದೇ ಹಾಡು.. ನಿಧಾನಕ್ಕೆ ನಿದ್ದೆಯಲ್ಲೂ ನೀನೆ.. ಕನಸಲ್ಲೂ ನೀನೆ.. ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ.. ಬೆಳದಿಂಗಳಿನ ರಾತ್ರಿ ಎದ್ದು ಮನೆಯ ಹೊರಗಿನ ಅಂಗಳದಲ್ಲಿ ನೆಡೆಯುತ್ತಿದ್ದರೆ ನಾವಿಬ್ಬರು ಕೈ ಕೈ ಹಿಡಿದುಕೊಂಡು ಮರಳಿನ ದಂಡೆಯ ಮೇಲೆ ಬೆಳದಿಂಗಳಿನಲ್ಲಿ ಆಜಾ ಸನಮ್ ಮಧುರ್ ಚಾಂದಿನಿ ಹೈ ಹಮ್ ಹಾಡುತ್ತಾ ಹೋದಂತೆ ಭಾಸವಾಗುತ್ತದೆ ..
ಹೀಗೆ ಮಾತಾಡುತ್ತಾ ಕೂತಿದ್ದರು.. ಬಾನಿನ ರಂಗು ದಟ್ಟವಾಗುತ್ತ ಹೋಗುತ್ತಿತ್ತು.. ಜನಸಂಖ್ಯೆ ಹೆಚ್ಚುತ್ತಲೇ ಇತ್ತು.. ಜೊತೆಯಲ್ಲಿ ಹಣ್ಣು, ತಿಂಡಿ, ತಿನಿಸುಗಳನ್ನು ಮಾರುವವರು ಕೂಡ.. ಇದರ ಜೊತೆಯಲ್ಲಿ ಕೆಲವರ ಕಲಾಗಾರಿಕೆಯೂ ಮೂಡಿ ಬರುತ್ತಿತ್ತು .. ಕೊಳಲು ಮಾರುವವ.. ಸುಶ್ರಾವ್ಯವಾಗಿ ಎಹೆಸಾನ್ ತೇರಾ ಹೋಗಾ ಮುಜುಪರ್.. ಹಾಡು ನುಡಿಸಿಕೊಂಡು ಹೋಗುತ್ತಿದ್ದ..
ಕೇಳಲು ಮಧುರವಾಗಿತ್ತು..
ವಿಜಯ ಎದ್ದು ನಿಂತು.. "ಕಣೋ ಬಾರೋ ಹಾಗೆ ಒಂದು ವಾಕಿಂಗ್ ಹೋಗಿ ಬರೋಣ.. " ವಿಜಯ್ ಕೈ ಕೊಡೆ ಅಂದ .. ಜೊತೆಯಲಿ ಜೊತೆಯಲಿರುವೆನು ಹೀಗೆ ಎಂದು..ಕಣ್ಣು ಮಿಟುಕಿಸಿದ..
ಕಣ್ಣು ಮಿಟುಕಿಸಬೇಡ ಕಣೋ.. ನನ್ನೆದೆ ಚುರಾಲಿಯ ಹೇ ತುಂನೇ ಜೋ ದಿಲ್ ಕೋ.. ನಜರ್ ನಹಿ ಚುರಾನಾ ಸನಮ್ ಹಾಡು ಹಾಡಲುಶುರುಮಾಡುತ್ತದೆ ..
ಜೋ ವಾದಕಿಯಾ ಹೊ ನಿಭಾನ ಪಡೆಗಾ ಕೊಳಲಿನವ ಈ ಮಧುರ ಗೀತೆಯನ್ನು ನುಡಿಸುತ್ತಾ ಹೋದ ವಿಜಯ ವಿಜಯ್ ಇಬ್ಬರೂ ಗೊಳ್ ಎಂದು ನಗಲು ಶುರು ಮಾಡಿದರು.. ಅದೆಂಗೆ ಅವನಿಗೆ ಗೊತ್ತಾಯಿತು ನಾವಿಬ್ಬರು ಮಾತಾಡಬೇಕಿದ್ದುದು..
ಕಾಕತಾಳೀಯ ಕಣೋ.. ಆದರೆ ಎಷ್ಟು ಸರಿಯಾದ ಸಮಯಕ್ಕೆ ಆ ಹಾಡು ಬಂತಲ್ವಾ.. ಸೂಪರ್ ಸೂಪರ್..
ಇನ್ನೂ ಕೈ ಚಾಚಿಕೊಂಡು ಕೂತೆ ಇದ್ದ ವಿಜಯ್ ನಾ ನೋಡಿ.. ಪಿಯಾ ತೂ ಅಬ್ ತೋ ಆಜಾ ಎಂದಳು.. ವಿಜಯ್ ಇನ್ನೂ ಯಾವುದೇ ಗುಂಗಿನಲ್ಲಿಯೇ ಕಳೆದುಹೋಗಿದ್ದ.. ಹಿಂದಿನ ನೆನಪುಗಳು ಅವನಿಗೆ ಖುಷಿ ನೀಡುತ್ತಿತ್ತು .. ಕೈಯನ್ನು ಹಿಂದಕ್ಕೆ ತೆಗೆದುಕೊಂಡು ಪುಕಾರುತಾ ಚಲಾ ಹೂ ಮೇ ಎಂದು ನಿಧಾನವಾಗಿ ಮರಳಿನ ಮೇಲೆ ಹೆಜ್ಜೆ ಇಡುತ್ತಾ ಹೊರಟಳು ವಿಜಯ..
ಏ ಮೇರಾ ದಿಲ್ ಯಾರ್ ಕಾ ದೀವಾನಾ ಎಂದು ಕೂಗುತ್ತಾ ವಿಜಯಾಳ ಹಿಂದೆ ಓಡಿದ ವಿಜಯ್.. ದಿನಕರ ಭುವಿಯಿಂದ ಕಡಲಿನೊಳಗೆ ಜಾರಿಹೋಗಿದ್ದ .. ಕತ್ತಲೆ ತುಂಬಿತ್ತು .. ತಣ್ಣಗೆ ಗಾಳಿ ಬೀಸುತ್ತಿತ್ತು .. ಕಡಲಿನ ಅಲೆಗಳ ಮೊರೆತ.. ವಿಜಯ್ ಮೊಬೈಲ್ ಏ ರಾತೇ ಏ ಮೌಸಮ್ ನದೀ ಕಾ ಕಿನಾರ ಏ ಚಂಚಲ್ ಹವಾ ಎಂದು ಕೂಗುತ್ತಿತ್ತು..ಮೊಬೈಲ್ ತೆಗೆದ ಅನಾಮಧೇಯ ಕರೆ.. ಯಾರ ಹೆಸರೋ ಗೊತ್ತಿಲ್ಲ.. ನಾಮ್ ಗಮ್ ಜಾಯೆಗಾ ಎಂದು ಕೊಳ್ಳುತ್ತಾ ಹಲೋ ಎಂದ.. ಜೋಕೇ ನಾ ಬಳ್ಳಿಯ ಮಿಂಚು .. ಲೋ ವಿಜಯ್ ನಾನು ಕಣೋ.. ಗೊತ್ತಾಗಲಿಲ್ವ .. ಸುಮ್ಮನೆ ರೇಗಿಸೋಕೆ ಆ ರೀತಿಯ ಹಾಡು ಹೇಳಿದೆ.. ಇದು ನಮ್ಮ ಪಕ್ಕದ ಆಫೀಸಿನ ನಂಬರ್ .. ಅಂದ ಹಾಗೆ.. ಕಸ್ಟಮರ್ ಫೋನ್ ಮಾಡಿದ್ದರು.. ಒಂದು ಪ್ರಾಬ್ಲಮ್ ಇದೆ ಅಂತೇ.. ಇಮೇಲ್ ಕಳಿಸಿದ್ದಾರಂತೆ ಬಾಸ್ ನಿನಗೆ ಹೇಳೋಕೆ ಹೇಳಿದರು.. ಅದಕ್ಕೆ ಕರೆ ಮಾಡಿದೆ .. ಓಕೆ . ಮೇಡಂ ಜೊತೆ ಇದ್ದೀಯಲ್ವ... ಎಂಜಾಯ್.. have a nice evening ಕಣೋ"
ಧನ್ಯವಾದಗಳು ಅಂತ ಕೂಡ ಹೇಳಲಿಲ್ಲ.. ವಿಜಯ ಆಗಲೇ ಬಲು ಮುಂದಕ್ಕೆ ಸಾಗಿದ್ದಳು .. ದೀವಾನಾ ಹುವಾ ಬಾದಲ್ .. ಅಲ್ಲ ಅಲ್ಲ ದೀವಾನಾ ಹುವಾ ಪಾಗಲ್ .. ಕಣೆ ನಿಂತ್ಕೊಳೋ.. ಓಡುತ್ತಾ ಹೋಗೋ ಹೋಗಿ ಕೈ ಹಿಡಿದು ನಿಲ್ಲಿಸಿದ .. .. ನೋಡು ಕಣೆ.. ಕಾಣದ ಕಡಲಿಗೆ ಹಂಬಲಿಸಿದ ಮನ ನಮ್ಮಿಬ್ಬರದು ಅಲ್ಲಾ ಸರಿಯಾಗಿ ಯೋಚಿಸಿ ಹೆಜ್ಜೆ ಇಡುತ್ತಿದ್ದೇವೆ .. ನಮ್ಮ ಬಾಳಿನಲ್ಲಿ ಹಾಡಿದರೆ .. ಅದು ಒಂದೇ ಹಾಡು.. ಸಂತೋಷಕ್ಕೆ ಹಾಡು ಸಂತೋಷಕ್ಕೆ.. ಅಷ್ಟೇ.. ನಾನು ಒಪ್ಪಿಯಾಯಿತು... ನೀನು ಒಪ್ಪಿಯಾಗಿದೆ .. ನಮ್ಮಿಬ್ಬರ ದುಡಿಮೆ ನಮ್ಮ ಸುಂದರ ಪರಿವಾರ ಕಟ್ಟಿಕೊಳ್ಳಲು ಬೇಕಾದಷ್ಟು.. ನನ್ನ ನಿನ್ನ ಮನೆಯವರು ಆಗಲೇ "ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ" ಅಂತ ಹೇಳಿದ್ದಾರೆ ಆದರೆ ನಮ್ಮಿಬ್ಬರ ಜಾತಿಗಳು ಒಂದೇ.. ಮತ ಒಂದೇ.. ಹಾಗಾಗಿ ಯೋಚನೆ ಎನ್ನುವ ತರ್ಕಕ್ಕೆ ಅವಕಾಶವೇ ಇಲ್ಲ..
ತಿರುಗಿದ ವಿಜಯ.. "ಕಣೋ.. ನಿನಗೆ ಇದುವರೆಗೂ ಹೇಳದೆ ಸತಾಯಿಸಿದ್ದ ಒಂದೇ ಮಾತು .. ಈಗ ಹೇಳುತ್ತೇನೆ.. ಐ ಲವ್ ಯು.. ನಾ ನಿನ್ನ ಪ್ರೀತಿಸುತ್ತೇನೆ.. "
ವಿಜಯ್ ಮರು ಮಾತಾಡದೆ ಗಟ್ಟಿಯಾಗಿ ತಬ್ಬಿಕೊಂಡ.. ಕೊಳಲು ಮಾರುವವನು .. "ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ.. ಆಡದೆ ಉಳಿದಿಹ ಮಾತು ನೂರಿದೆ"
ಇಬ್ಬರ ಅಪ್ಪುಗೆ ಗಟ್ಟಿಯಾಯಿತು .. ಇಬ್ಬರ ಕಣ್ಣಲ್ಲೂ ಹನಿಗಳು.. ಆನಂದದ ಹನಿಗಳು.. !!!
****
ಮಾಮೂಲಿ ದಿನವಾಗಿತ್ತು.. ಸರಿ ಏನೂ ಕೆಲಸವಿರಲಿಲ್ಲ.. ಆದಷ್ಟು ಹಾಡು ಕೇಳೋಣ ಅಂತ ಮನಸ್ಸು ಮಾಡಿದ್ದೆ.. ಬೆಳಿಗ್ಗೆ ನಿತ್ಯ ಕರ್ಮಗಳನ್ನೆಲ್ಲ ಮುಗಿಸಿ.. ತಿಂಡಿ ತಿಂದು ಕಾಲು ಚಾಚಿ ಕೂತಿದ್ದಾಗ.. ಗೆಳೆಯ ಗುರುಪ್ರಸಾದ್ ಕರೆ.. ಶ್ರೀಕಾಂತಣ್ಣ... ಸಂಜೆ ೫.೩೦ ರಿಂದ ೮.೩೦ ತನಕ ಕನ್ನಡ ಮತ್ತು ಹಿಂದಿ ಹಾಡುಗಳ ಕಾರ್ಯಕ್ರಮವಿದೆ.. ಮನೆಯ ಹತ್ತಿರವೇ.. ಬರ್ತೀರಾ.. ನೀವು ಬಂದರೆ ಚೆನ್ನಾಗಿರುತ್ತೆ ಅಂದರು..
ಹಾಡುಗಳು..ಅದರಲ್ಲೂ ಹಳೆಯ ಹಾಡುಗಳು ಎಂದರೆ ಮೈಯೆಲ್ಲಾ ಕಿವಿ ನನಗೆ.. ಎರಡನೇ ಮಾತಿಗೆ ಅವಕಾಶವೇ ಇಲ್ಲ.. ಬರ್ತೀನಿ ಅಂದೇ..ಮನೆಯನ್ನು ತಲುಪಲು ನಕ್ಷೆ ಕಳಿಸಿದ್ದರು.. ಅದರ ಜಾಡು ಹಿಡಿದು ಐದಕ್ಕೆ ಅವರ ಮನೆಯ ಮುಂದೆ..
ಅವರ ಮನೆಯ ಪರಿಚಯ.. ಉಭಯಕುಶಲೋಪರಿ ಸಾಂಪ್ರತ ... ಹತ್ತು ನಿಮಿಷದಲ್ಲಿ ಸಭಾಂಗಣದಲ್ಲಿ ಇದ್ದೆವು .. zeal fitness ನಾಗರಭಾವಿ ಇವರು ಆಯೋಜಿಸಿದ್ದ ಮಧುರ ಸಂಗೀತ ಕಾರ್ಯಕ್ರಮ ಎಂದು ಗೊತ್ತಾಯಿತು.. ಮೊದಲ ಸ್ವಲ್ಪ ಹೊತ್ತು ಆಯೋಜಕರ ಫಿಟ್ನೆಸ್ ಕೇಂದ್ರದ ಪರಿಚಯ.. ಮುಂದೆ ಹತ್ತನೇ ನಿಮಿಷ.. ಸಂಗೀತದ ಆಣೆಕಟ್ಟು ಒಡೆಯಲಾಯಿತು.. ಮುಂದೆ ಹರಿದಿದ್ದು ಬರೋಬ್ಬರಿ ೨೭ ಗೀತಾ ಮಾಧುರ್ಯ.. ಬಹುಪಾಲು ಹಿಂದಿ.. ಕೆಲವು ಕನ್ನಡ ಹಾಡುಗಳ ಮಾಲೆ ಕಟ್ಟಲಾಗಿತ್ತು.. ಕನ್ನಡದ ಹಾಡುಗಳು ಕೆಲವೇ ಕೆಲವಾದರೂ ಅದು ಕೊಟ್ಟ ಪ್ರತಿಕ್ರಿಯೆ ಅದ್ಭುತವಾಗಿತ್ತು.. ಸಂಗೀತಕ್ಕೆ ಭಾಷೆಯ ಒತ್ತಡ ಇಲ್ಲ.. ಅಲ್ಲವೇ..
ಮುಂದೆ ಹರಿದಿದ್ದು .. ಬೊಂಬಾಟ್ ಹಾಡುಗಳು.. ಗಾಯಕ ಶ್ರೀ ಮಹೇಶ್ ಪ್ರಿಯದರ್ಶನ್, ಗಾಯಕ ಸುಧೀರ್, ಗಾಯಕಿ ಶೃತಿ, ಗಾಯಕಿ ಅನುರಾಧ ಭಟ್.. ಮತ್ತು ಸ್ಪೆಷಲ್ ಗಾಯಕ ಶ್ರೀ ಚೈತನ್ಯ.. ಬರಿ ಹಾಡು ಕಷ್ಟ ಅಲ್ಲವೇ ಅದಕ್ಕೆ ಬೇಕಾಗಿದ್ದು ಸೊಗಸಾದ ವಾದ್ಯ ವೃಂದ.. ಪ್ರತಿಭಾ ಗಣಿಗಳೇ ವೇದಿಕೆಯಲ್ಲಿ ಇದ್ದರು.. ಕೀಬೋರ್ಡ್ ಶ್ರೀ ಕೃಷ್ಣ ಉಡುಪ, ಇನ್ನೊಂದು ಕೀ ಬೋರ್ಡ್ ಶ್ರೀ ಹರ್ಷ, ಕೊಳಲು ಶ್ರೀ ರಮೇಶ್, ಡ್ರಮ್ಸ್ ಶ್ರೀ ಕೃಷ್ಣ, ಡೋಲಕ್ ಶ್ರೀ ಶಿವಮೂರ್ತಿ, ಮತ್ತು ತಬಲಾ ಶ್ರೀ ಪ್ರದ್ಯುಮ್ನ..
ಒಂದಾದ ಮೇಲೆ ಒಂದರಂತೆ ಬರೋಬ್ಬರಿ ಇಪ್ಪತೇಳು ಹಾಡುಗಳು ಅನುಕ್ರಮವಾಗಿ ಮೂಡಿಬಂತು.. ಆ ಹಾಡುಗಳ ಪಟ್ಟಿ ಈ ಕೆಳಕಂಡಂತೆ..
ಒಂದಾದ ಮೇಲೆ ಒಂದರಂತೆ ಬರೋಬ್ಬರಿ ಇಪ್ಪತೇಳು ಹಾಡುಗಳು ಅನುಕ್ರಮವಾಗಿ ಮೂಡಿಬಂತು.. ಆ ಹಾಡುಗಳ ಪಟ್ಟಿ ಈ ಕೆಳಕಂಡಂತೆ..
೦೧) ಜಬ್ ದೀಪ್ ಜಲೇ ಆನಾ... ಜಬ್ ಶಾಮ್ ಧಲೇ ಆನಾ (ಶೃತಿ ಮತ್ತು ಸುಧೀರ್)
೦೨) ಲಗ್ ಜಾ ಗಲೇ ಲಗ್ ಜಾ ಗಲೇ ಕೀ ಫಿರ್ ಯಹ್ ಹಸೀನ್ ರಾತ್ ಹೋ (ಶೃತಿ)
೦೩) ಬೆಳದಿಂಗಳೊಂದು ಹೆಣ್ಣಾಗಿ ಬಂದಂತೆ ಕಂಡೆ (ಮಹೇಶ್)
೦೪) ಲಿಕ್ ಹೇ ಜೋ ಕತ್ ತುಜೆ (ಸುಧೀರ್)
೦೫) ಆಜ್ ಕಲ್ ತೆರೆ ಮೇರೇ ಪ್ಯಾರ್ (ಸುಧೀರ್ ಮತ್ತು ಅನುರಾಧ ಭಟ್)
೦೬) ಕೋರಾ ಕಾಗಜ್ ಥಾ ಏ ಮ್ಯಾನ್ ಮೇರಾ ಲಿಕ್ ಲಿಯಾ ನಾಮ್ ಉಸ್ಪೇ ತೇರಾ (ಮಹೇಶ್ ಮತ್ತು ಶೃತಿ)
೦೭) ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ (ಸುಧೀರ್ ಮತ್ತು ಅನುರಾಧ ಭಟ್)
೦೮) ಬಾಬೂಜಿ ಧೀರೆ ಚಲನಾ.. ಸಾಂನೆ ಝರಾ ಸಂಬಲ್ನ(ಶೃತಿ)
೦೯) ಕಭಿ ಕಭಿ ಮೇರೇ ದಿಲ್ ಮೇ (ಸುಧೀರ್ ಮತ್ತು ಅನುರಾಧ ಭಟ್)
೧೦) ನಗುವ ನಯನ ಮಧುರ ಮೌನ (ಮಹೇಶ್ ಮತ್ತು ಶೃತಿ)
೧೧) ಕೌನ್ ಹೇ ಜೋ ಸಪನೋ ಮೇ ಆಯಾ (ಸುಧೀರ್)
೧೨) ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ (ಶೃತಿ)
೧೩) ಆಜಾ ಸನಮ್ ಮಧುರ್ ಚಾಂದಿನಿ ಹೈ ಹಮ್ (ಮಹೇಶ್ ಮತ್ತು ಶೃತಿ)
೧೪) ಎಹೆಸಾನ್ ತೇರಾ ಹೋಗಾ ಮುಜುಪರ್ (ಮಹೇಶ್)
೧೫) ಜೊತೆಯಲಿ ಜೊತೆಯಲಿರುವೆನು ಹೀಗೆ ಎಂದು (ಮಹೇಶ್ ಮತ್ತು ಶೃತಿ)
೧೬) ಚುರಾಲಿಯ ಹೇ ತುಂನೇ ಜೋ ದಿಲ್ ಕೋ (ಸುಧೀರ್ ಮತ್ತು ಶೃತಿ)
೧೭) ಜೋ ವಾದಕಿಯಾ ಹೊ ನಿಭಾನ ಪಡೆಗಾ (ಮಹೇಶ್ ಮತ್ತು ಅನುರಾಧ)
೧೮) ಪಿಯಾ ತೂ ಅಬ್ ತೋ ಆಜಾ (ಮಹೇಶ್, ಶೃತಿ ,ಮತ್ತು ಸುಧೀರ್)
೧೯) ಪುಕಾರುತಾ ಚಲಾ ಹೂ ಮೇ (ಸುಧೀರ್)
೨೦) ಏ ಮೇರಾ ದಿಲ್ ಯಾರ್ ಕಾ ದೀವಾನಾ (ಅನುರಾಧ)
೨೧) ಏ ರಾತೇ ಏ ಮೌಸಮ್ ನದೀ ಕಾ ಕಿನಾರ ಏ ಚಂಚಲ್ ಹವಾ (ಚೈತನ್ಯ ಮತ್ತು ಶೃತಿ)
೨೨) ನಾಮ್ ಗಮ್ ಜಾಯೆಗಾ (ಮಹೇಶ್ ಮತ್ತು ಶೃತಿ)
೨೩) ಜೋಕೇ ನಾ ಬಳ್ಳಿಯ ಮಿಂಚು (ಶೃತಿ)
೨೪) ದೀವಾನಾ ಹುವಾ ಬಾದಲ್ (ಸುಧೀರ್ ಮತ್ತು ಅನುರಾಧ)
೨೫) ಕಾಣದ ಕಡಲಿಗೆ ಹಂಬಲಿಸಿದ ಮನ (ಮಹೇಶ್)
೨೬) ಸಂತೋಷಕ್ಕೆ ಹಾಡು ಸಂತೋಷಕ್ಕೆ (ಮಹೇಶ್)
೨೭) ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ (ಮಹೇಶ್, ಸುಧೀರ್ ಮತ್ತು ಸಂಗಡಿಗರು)
ಪ್ರತಿಯೊಂದು ಹಾಡಿಗೂ ಪ್ರೇಕ್ಷಕರ ಪ್ರತಿಕ್ರಿಯೆ.. ಇನ್ನೊಮ್ಮೆ ಇನ್ನೊಮ್ಮೆ ಇನ್ನೊಂದು ಸಲ ಎಂದು ಹೇಳಿಬರುತ್ತಿದ್ದ ಬೇಡಿಕೆ.. ಒಂದು ಅದ್ಭುತ ಸಂಗೀತ ಸಂಜೆಗೆ ಸಾಕ್ಷಿಯಾಗಿತ್ತು.. ಮೂರು ಘಂಟೆಗಳು ಮೂರು ನಿಮಿಷ ಕಳೆದ ಹಾಗೆ ಸಾಗಿತ್ತು..
ಪ್ರತಿಯೊಬ್ಬ ಕಲಾವಿದರ ಪರಿಶ್ರಮ ಎದ್ದು ಕಾಣುತ್ತಿತ್ತು... ಚುಟುಕು ಚುಟುಕಾಗಿ ವೇದಿಕೆಗೆ ಬಂದು ಹಾಡುಗಳ ಹೆಸರು ಮತ್ತು ಗಾಯಕರ ಹೆಸರಿನ ಜೊತೆಯಲ್ಲಿ ಆ ಹಾಡಿನ ಜೊತೆ ತಳುಕು ಹಾಕಿಕೊಂಡಿದ್ದ ಚಿಕ್ಕ ಚಿಕ್ಕ ಸಂಗತಿಗಳನ್ನು ಕನ್ನಡ, ಇಂಗ್ಲಿಷ್, ಮತ್ತು ಹಿಂದಿ ಭಾಷೆಯಲ್ಲಿ ಬಿತ್ತರಿಸುತ್ತಿದ್ದ ನಿರೂಪಕಿಯ ಮಾತುಗಳು ಸೊಗಸಾಗಿದ್ದವು.. ಇಡೀ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಅಚ್ಚುಕಟ್ಟುತನ.. ಒಂದು ನಿಮಿಷ ಬಿಡುವಿಲ್ಲದೆ ೨೭ ಹಾಡುಗಳನ್ನ ಹಾಡಿದ ಗಾಯಕರು.. ಜೊತೆಯಲ್ಲಿ ಅಷ್ಟು ಹಾಡುಗಳಿಗೆ ದಣಿವರಿಯದೆ ಸಂಗೀತ ನೀಡಿದ ಸಂಗೀತಗಾರರಿಗೆ ಈ ಅಕ್ಷರಗಳ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ..
ಮಂದ ಸ್ಥಾಯಿ ಉಚ್ಚ ಸ್ಥಾಯಿ.. ಯುಗಳ ಗೀತೆ, ಯಾವುದೇ ಹಾಡು ಕೊಡಿ ಚಚ್ಚಿ ಬಿಸಾಕುತ್ತಿದ್ದ ಗಾಯಕಿ ಶೃತಿ.. ಅವರ ಧ್ವನಿಯ ಏರಿಳಿತ ಸೂಪರ್ ಇತ್ತು.. ಒಂದೆರಡು ಹಾಡು ಕೇಳಿದ ತಕ್ಷಣ.. ಮುಂದಿನ ಹಾಡು ಇದು ಎಂದು ತಕ್ಷಣ ನಮಗೆ ಗಾಯಕಿ ಶೃತಿ ಎನ್ನುವುದು ಮನಸ್ಸಿಗೆ ಬರುತ್ತಿತ್ತು.. ಮತ್ತು ಅದು ನಿಜವೂ ಆಗುತ್ತಿತ್ತು.. ಈ ಗಾಯಕಿಯ ಪ್ರತಿಭೆಗೊಂದು ಸಲಾಂ..
ಭಾವಗೀತೆ, ಕುಣಿಯುವ ಹಾಡು, ಭಾವಪೂರ್ಣ ಹಾಡು, ರಮಣೀಯ ಪ್ರೇಮಗೀತೆ.. ಎಲ್ಲದ್ದಕ್ಕೂ ಸೈ ಎಂದು ಹಾಡುತ್ತಿದ್ದ ಮಹೇಶ್ ಪ್ರಿಯದರ್ಶನ್ ಅದ್ಭುತ.. ಅವರ ಎನರ್ಜಿ ಕಂಡು ನನಗೆ ಅವರ ಹಸ್ತ ಲಾಘವ ಮಾಡುವ ಆಸೆ ಆಗುತ್ತಿತ್ತು.. ಆದರೆ ಒಂದಾದ ಮೇಲೆ ಒಂದು ಹಾಡುಗಳು ಬರುತ್ತಲೇ ಇದ್ದವು.. ಜೊತೆಯಲ್ಲಿ ವೇದಿಕೆಯ ಮೇಲೆ ಹತ್ತಿ ನಾಚಿಕೆ.. ಮತ್ತು ಸಭಾ ಮರ್ಯಾದೆ ನನ್ನನ್ನು ಹಿಂದಕ್ಕೆ ಉಳಿಸಿತು.. ಕಡೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಪಾದಕ್ಕೆ ಪಾದರಸ ಕಟ್ಟಿಕೊಂಡಂತೆ ಕುಣಿದದ್ದು ಸೂಪರ್ ಇತ್ತು.. ಮಹೇಶ್ ಸರ್ ನಿಮಗೆ ಒಂದು ಸಲ್ಯೂಟ್..
ಹಿಂದಿ ಹಾಡುಗಳ ಉಚ್ಚಾರಣೆ.. ಅದಕ್ಕೆ ಬೇಕಾದ ಭಾವ.. ಗಟ್ಟಿ ಧ್ವನಿ.. ಸರಾಗವಾಗಿ ಹಾಡುತ್ತಿದ್ದ ಶೈಲಿ ಸುಧೀರ್ ಅವರದ್ದು.. ಅನೇಕ ಹಾಡುಗಳನ್ನು ಸರಾಗವಾಗಿ ಹಾಡಿದ ಸುಧೀರ್.. ಅವರ ಧ್ವನಿ ಇಷ್ಟವಾಯಿತು .. ಹಾಡುವಾಗ ತನ್ಮಯವಾಗಿ ಹಾಡುತ್ತಿದ್ದ ರೀತಿಗೆ ಅಭಿನಂದನೆಗಳು..
ಮರೆಯಲ್ಲಿ ನಿಂತು ಹಾಡುವ ರೀತಿಯಲ್ಲಿ ಹಾಡಿದ ಅನುರಾಧ.. ಎಲ್ಲಾ ಗಾಯಕ ಜೋಡಿಯ ಜೊತೆಗೆ ಸರಾಗವಾಗಿ ಹಾಡುತ್ತಿದ್ದುದು ಸಂಗೀತ ಸಂಜೆಗೆ ಮೆರುಗು ನೀಡುತ್ತಿತ್ತು.. ಈಕೆಯ ಧ್ವನಿಯ ಇಂಚರ ಇಷ್ಟವಾಗುತ್ತಿತ್ತು .. ಇನ್ನಷ್ಟು ಹಾಡುಗಳು ಚೆನ್ನಾಗಿರುತ್ತಿತ್ತು ಅನ್ನಿಸುತ್ತಿತ್ತು.... ಈ ಗಾಯಕಿಯ ಧ್ವನಿಗೆ ಒಂದು ಸಲಾಂ..
ಈ ಸಂಗೀತ ಸಂಜೆಗೆ ಇನ್ನೊಂದು ಆಶ್ಚರ್ಯ ಕಾಡಿತ್ತು.. ಚಿತ್ರಕೂಟ ಶಾಲೆಯ ಮುಖ್ಯಸ್ಥರಾದ ಶ್ರೀ ಚೈತನ್ಯ ಅವರು ಹಾಡಿದ್ದು.. ಸರಳ ಸಂಗೀತದ ಏ ರಾತೇ ಏ ಮೌಸಮ್ ಹಾಡಿಗೆ ಶೃತಿಯೊಡನೆ ಹಾಡಿದ್ದು ಎಲ್ಲರಲ್ಲಿಯೂ ಖುಷಿಯ ವಾತಾವರಣ ಮೂಡಿಸಿತು..
ಮಂದ ಸ್ಥಾಯಿ ಉಚ್ಚ ಸ್ಥಾಯಿ.. ಯುಗಳ ಗೀತೆ, ಯಾವುದೇ ಹಾಡು ಕೊಡಿ ಚಚ್ಚಿ ಬಿಸಾಕುತ್ತಿದ್ದ ಗಾಯಕಿ ಶೃತಿ.. ಅವರ ಧ್ವನಿಯ ಏರಿಳಿತ ಸೂಪರ್ ಇತ್ತು.. ಒಂದೆರಡು ಹಾಡು ಕೇಳಿದ ತಕ್ಷಣ.. ಮುಂದಿನ ಹಾಡು ಇದು ಎಂದು ತಕ್ಷಣ ನಮಗೆ ಗಾಯಕಿ ಶೃತಿ ಎನ್ನುವುದು ಮನಸ್ಸಿಗೆ ಬರುತ್ತಿತ್ತು.. ಮತ್ತು ಅದು ನಿಜವೂ ಆಗುತ್ತಿತ್ತು.. ಈ ಗಾಯಕಿಯ ಪ್ರತಿಭೆಗೊಂದು ಸಲಾಂ..
ಭಾವಗೀತೆ, ಕುಣಿಯುವ ಹಾಡು, ಭಾವಪೂರ್ಣ ಹಾಡು, ರಮಣೀಯ ಪ್ರೇಮಗೀತೆ.. ಎಲ್ಲದ್ದಕ್ಕೂ ಸೈ ಎಂದು ಹಾಡುತ್ತಿದ್ದ ಮಹೇಶ್ ಪ್ರಿಯದರ್ಶನ್ ಅದ್ಭುತ.. ಅವರ ಎನರ್ಜಿ ಕಂಡು ನನಗೆ ಅವರ ಹಸ್ತ ಲಾಘವ ಮಾಡುವ ಆಸೆ ಆಗುತ್ತಿತ್ತು.. ಆದರೆ ಒಂದಾದ ಮೇಲೆ ಒಂದು ಹಾಡುಗಳು ಬರುತ್ತಲೇ ಇದ್ದವು.. ಜೊತೆಯಲ್ಲಿ ವೇದಿಕೆಯ ಮೇಲೆ ಹತ್ತಿ ನಾಚಿಕೆ.. ಮತ್ತು ಸಭಾ ಮರ್ಯಾದೆ ನನ್ನನ್ನು ಹಿಂದಕ್ಕೆ ಉಳಿಸಿತು.. ಕಡೆಯಲ್ಲಿ ಕುಲದಲ್ಲಿ ಕೀಳ್ಯಾವುದೋ ಹಾಡಿಗೆ ಪಾದಕ್ಕೆ ಪಾದರಸ ಕಟ್ಟಿಕೊಂಡಂತೆ ಕುಣಿದದ್ದು ಸೂಪರ್ ಇತ್ತು.. ಮಹೇಶ್ ಸರ್ ನಿಮಗೆ ಒಂದು ಸಲ್ಯೂಟ್..
ಹಿಂದಿ ಹಾಡುಗಳ ಉಚ್ಚಾರಣೆ.. ಅದಕ್ಕೆ ಬೇಕಾದ ಭಾವ.. ಗಟ್ಟಿ ಧ್ವನಿ.. ಸರಾಗವಾಗಿ ಹಾಡುತ್ತಿದ್ದ ಶೈಲಿ ಸುಧೀರ್ ಅವರದ್ದು.. ಅನೇಕ ಹಾಡುಗಳನ್ನು ಸರಾಗವಾಗಿ ಹಾಡಿದ ಸುಧೀರ್.. ಅವರ ಧ್ವನಿ ಇಷ್ಟವಾಯಿತು .. ಹಾಡುವಾಗ ತನ್ಮಯವಾಗಿ ಹಾಡುತ್ತಿದ್ದ ರೀತಿಗೆ ಅಭಿನಂದನೆಗಳು..
ಮರೆಯಲ್ಲಿ ನಿಂತು ಹಾಡುವ ರೀತಿಯಲ್ಲಿ ಹಾಡಿದ ಅನುರಾಧ.. ಎಲ್ಲಾ ಗಾಯಕ ಜೋಡಿಯ ಜೊತೆಗೆ ಸರಾಗವಾಗಿ ಹಾಡುತ್ತಿದ್ದುದು ಸಂಗೀತ ಸಂಜೆಗೆ ಮೆರುಗು ನೀಡುತ್ತಿತ್ತು.. ಈಕೆಯ ಧ್ವನಿಯ ಇಂಚರ ಇಷ್ಟವಾಗುತ್ತಿತ್ತು .. ಇನ್ನಷ್ಟು ಹಾಡುಗಳು ಚೆನ್ನಾಗಿರುತ್ತಿತ್ತು ಅನ್ನಿಸುತ್ತಿತ್ತು.... ಈ ಗಾಯಕಿಯ ಧ್ವನಿಗೆ ಒಂದು ಸಲಾಂ..
ಈ ಸಂಗೀತ ಸಂಜೆಗೆ ಇನ್ನೊಂದು ಆಶ್ಚರ್ಯ ಕಾಡಿತ್ತು.. ಚಿತ್ರಕೂಟ ಶಾಲೆಯ ಮುಖ್ಯಸ್ಥರಾದ ಶ್ರೀ ಚೈತನ್ಯ ಅವರು ಹಾಡಿದ್ದು.. ಸರಳ ಸಂಗೀತದ ಏ ರಾತೇ ಏ ಮೌಸಮ್ ಹಾಡಿಗೆ ಶೃತಿಯೊಡನೆ ಹಾಡಿದ್ದು ಎಲ್ಲರಲ್ಲಿಯೂ ಖುಷಿಯ ವಾತಾವರಣ ಮೂಡಿಸಿತು..
ಒಂದು ಸುಂದರ ಸಂಜೆಯನ್ನು ಕಳೆದ ಅನುಭವ ನನಗೆ.. ಇದಕ್ಕೆ ಕಾರಣ ಗೆಳೆಯ ಗುರುಪ್ರಸಾದ್.. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ Zeal fitness ಸಂಸ್ಥೆ, ಚಿತ್ರಕೂಟ ಶಾಲೆಯ ಆಡಳಿತ ವರ್ಗ.. ಜೊತೆಯಲ್ಲಿ ಅದ್ಭುತ ಸಾತ್ ಕೊಟ್ಟ ಜೀವ ಸ್ವರ ತಂಡದ ಸಂಗೀತ ಪರಿಶ್ರಮ..
ಇದೆ ಕಾರ್ಯಕ್ರಮದಲ್ಲಿ ಮೊದಲನೇ ವಾರ್ಷಿಕೋತ್ಸವ ಆಚರಿಸಿದ Zeal fitness ಸಂಸ್ಥೆಗೆ ಶುಭಾಶಯಗಳನ್ನು ಕೋರುತ್ತಾ ಇಂದಿನ ಕಾರ್ಯಕ್ರಮದ ಕೆಲವು ತುಣುಕುಗಳು ನಿಮಗಾಗಿ..
ಸೊಗಸಾದ ಗಾಯನ.. ಸೊಗಸಾದ ಸಂಗೀತ.. ಒಂದು ಶನಿವಾರದ ಸಂಜೆಯನ್ನು ಸಾರ್ಥಕತೆಯಿಂದ ಕಳೆದ ಅನುಭವ.. ಇದಕ್ಕೆ ಕಾರಣರಾದ ಗೆಳೆಯ ಗುರುಪ್ರಸಾದ್ ಅವರಿಗೆ ಅನಂತ ಧನ್ಯವಾದಗಳು ಮತ್ತು ಈ ಲೇಖನವನ್ನು ಗುರುಪ್ರಸಾದ್ ಅವರ ಜೊತೆಗಿನ ಗೆಳೆತನಕ್ಕೆ ಒಂದು ಉಡುಗೊರೆ