ಹಿರಣ್ಯಕಶಿಪು ಘನಘೋರ ತಪಸ್ಸು ಮಾಡುತ್ತಿದ್ದ.. ಇಡೀ ಭೂಮಂಡಲ, ಉಳಿದ ಲೋಕಗಳು ಆ ತಪದ ತಾಪ ತಡೆಯಲಾಗದೆ ಕಂಪಿಸುತ್ತಿತ್ತು.. ಆ ಕಾವು ಎಲ್ಲರನ್ನೂ ಸುಡುತಿತ್ತು.. ಈ ವರ್ಷದ ಬೆಂಗಳೂರಿನ ಹಾಗೂ ಭಾರತದ ಉಳಿದ ಕಡೆಯಂತೆ ಬಿಸಿಲಿನ ಝಳದಂತೆ ಸುಡುತಿತ್ತು..
ಬ್ರಹ್ಮನಿಗೆ ಬೇರೆ ದಾರಿ ಕಾಣಲಿಲ್ಲ.. ಲೋಕಗಳನ್ನು ಈ ಬಾಧೆಯಿಂದ ರಕ್ಷಿಸಲು ಸಂಕಲ್ಪ ಮಾಡಿದ.. ಜೊತೆಗೆ ಸ್ವಲ್ಪ ಹೊತ್ತು ಧ್ಯಾನದಲ್ಲಿ ಕೂತು.. ಹಿರಣ್ಯಕಶಿಪು ಏನೇನು ವರಗಳನ್ನು ಬೇಡಬಹುದು .. ಜೊತೆಗೆ ಆ ವರಗಳು ಸಿಕ್ಕಮೇಲೆ ಹಿರಣ್ಯಕಶಿಪು ಎಲ್ಲಾ ಲೋಕಗಳನ್ನು ಗೋಳಾಡಿಸುವುದು ಮತ್ತು ದೇವತೆಗಳನ್ನು ಪೀಡಿಸುವುದು ಇದನ್ನು ರಕ್ಷಿಸುವುದರ ಬಗ್ಗೆ ಅದೇ ಹೇಳ್ತೀವಲ್ಲ ವೈರಸ್ ಮತ್ತೆ ಅದಕ್ಕೆ ಪ್ರತಿ Anti ವೈರಸ್ ತರಬೇಕಲ್ಲ ಅದಕ್ಕಾಗಿ ಮಹಾಮಹಿಮ ತನ್ನ ಪಿತ ವಿಷ್ಣುವಿನ ಹತ್ತಿರ ಅದಕ್ಕೆ ಉಪಾಯಗಳನ್ನು ತಿಳಿದು ಭೂಲೋಕದ ಕಡೆಗೆ ಹೊರಟಾಗ.. ಸರಸ್ವತಿ ಓಡೋಡಿ ಬಂದು.. ಇದೇನು ಮತ್ತೆ ಹೊರಟಿರಿ.. ಇರಿ ಅಂತ ಹೇಳಿ ಆಕೆ ಒಂದು ಚೀಟಿಯನ್ನು ಕೊಡುತ್ತಾಳೆ.. ಅದನ್ನು ಪಡೆದು ವಿಷಲ್ ಹೊಡೆಯುತ್ತಾ ಭುವಿಗೆ ಬರುವ ಬ್ರಹ್ಮ..
"ಮಗು ಹಿರಣ್ಯಕಶಿಪು.. ನಿನಗೇನು ವರ ಬೇಕು ಕೇಳಿಕೊ" ಎಂದಾಗ
ಸರಸತಿಯ ಪ್ರಿಯಕರನೇ ಬ್ರಹ್ಮನೇ
ಸ್ಮರಣೆ ಮಾತ್ರದಿ ಬಂದು
ಸಲಹುವ ಹಂಸ ವಾಹನನೇ...
ಪರಮ ಕರುಣಾಮೂರ್ತಿ
ನಿನ್ನೀ ಚರಣಕಮಲದಿ ಶಿರವನಿಡುತಲಿ
ವರವನೊಂದನು ಬೇಡುವೆನು
ವರವನೊಂದನು ಬೇಡುವೆನು
ಕೃಪೆ ಮಾಡಿ ಹರಸೆನ್ನಾ
ಕೃಪೆ ಮಾಡಿ ಹರಸೆನ್ನಾ
ಓ... ಬ್ರಹ್ಮದೇವಾ.. ಓ... ಬ್ರಹ್ಮದೇವಾ..
(ಅಣ್ಣಾವ್ರ ಶೈಲಿಯಲ್ಲಿ ಹಾಡಿಕೊಳ್ಳಿ)
ಬ್ರಹ್ಮ ನಸುನಗುತ್ತಾ "ಮಗು ಹಿರಣ್ಯಕಶಿಪು ನಿನಗೇನು ವರಬೇಕು ಕೇಳಿಕೋ" ಅಂತ ಮತ್ತೊಮ್ಮೆ ಹೇಳುತ್ತಾನೆ
ಹಿರಣ್ಯಕಶಿಪು ಅಣ್ಣಾವ್ರ ಶೈಲಿಯಲ್ಲಿ "ಬ್ರಹ್ಮದೇವ ನನ್ನ ಕೋರಿಕೆ ಹಾ.. " ಅನ್ನುವಾಗ ಬ್ರಹ್ಮ ನಾಲ್ಕನೇ ಕೈಯಿಂದ ಸರಸ್ವತಿ ಕೊಟ್ಟ ಚೀಟಿಯನ್ನು ಬೀಳಿಸುತ್ತಾನೆ.. ಅದರಿಂದ ಬೆಳಕೊಂದು ಹೊರಗೆ ಬಂದು ಹಿರಣ್ಯನ ಕಣ್ಣನ್ನು ಕೋರೈಸುತ್ತದೆ.. ಆ ಬೆಳಕನ್ನೇ ನೋಡುತ್ತಾ .. ತಪಸ್ಸು ಮಾಡುವಾಗ ಅರಮನೆಯಿಂದ ತಂದಿದ್ದ ಟ್ರಾಲಿ ಬ್ಯಾಗ್ ನೋಡುತ್ತಾ
ವಾರದ ಆರಂಭವೇ ಆಗಲಿ
ವಾರದ ಅಂತ್ಯವೇ ಆಗಲಿ
ವಾರದ ಮಧ್ಯವೇ ಆಗಲಿ
ವಾರದ ಒಳಗೆ ಆಗಲಿ
ನೀನು ಸೃಷ್ಟಿಸಿರುವ ಅಣು ರೇಣು ತೃಣಕಾಷ್ಠಗಳ ಜೊತೆಯಲ್ಲಿ
ಕಾರಿನಲ್ಲಿನಾಗಲಿ, ಬೈಕಿನಲ್ಲಾಗಲಿ
ರೈಲಿನಲ್ಲಿಯಾಗಲಿ, ವಿಮಾನದಲ್ಲಿಯಾಗಲಿ
ಕ್ಯಾಬಿನಲ್ಲಾಗಲಿ, ಸೈಕಲ್ಲಿನಾಗಲಿ
ಅನವರತ ನನ್ನ ಟ್ರಾಲಿ ಬ್ಯಾಗ್ ಸದಾ ಸುತ್ತುತ್ತಿರುವಂತೆ
ಅನುಗ್ರಹಿಸು ದೇವಾ"
DFR DFR ಅದ್ಭುತ ಪಯಣಿಗರು ನೀವು..