ಚಾಣಕ್ಯ ಒಂದು ಬಾರಿ ಎ ಟು ಜೆಡ್ ಡಿಪಾರ್ಟ್ಮೆಂಟಲ್ ಸ್ಟೋರ್ಗೆ ಹೋಗಿದ್ದಾಗ...
"ಇಲ್ಲಿ ಎಲ್ಲವು ಸಿಗುತ್ತದೆ ಅಲ್ಲವೇ..."
"ಹೌದು ಆಚಾರ್ಯರೇ ಎಲ್ಲವು ಸಿಗುತ್ತೆ"
"ಹಾಗಾದರೆ ನನಗೆ ನಾನೇ ಬರೆದ ಕೆಲವು ಪುಸ್ತಕಗಳು ಬೇಕಿತ್ತು"
"ಕ್ಷಮಿಸಿ ಆಚಾರ್ಯರೇ...ಪುಸ್ತಕಗಳು ಇಲ್ಲೀ ಖಾಲಿ ಆಗಿದೆ..."
"ಎಲ್ಲಿ ಸಿಗುತ್ತೆ..ನನಗೆ ಕೆಲವು ಬೇಕಾಗಿತ್ತು"
"ಪದ್ಮನಾಭನಗರದಲ್ಲಿ ನಿಮ್ಮ ತರಹ ಜ್ಞಾನೋತ್ತಮರು...ಗುಣೋತ್ತಮರು ಇದ್ದಾರೆ..."
"ಸರಿ ಹಂಗಾದ್ರೆ ಅಲ್ಲಿಗೆ ಹೋಗ್ತಿನಿ"
ಆಚಾರ್ಯರು ಬಾಗಿಲ ಬಳಿ ಬಂದು ಕರೆ ಘಂಟೆ ಮಾಡ್ತಾರೆ...
ಕುಮಾರಸ್ವಾಮಿಗಳು ಬಂದು ಬಾಗಿಲು ತೆಗೆದಾಗ..ಅವರಿಗೆ ಆಶ್ಚರ್ಯ, ಖುಷಿ ತಡೆಯಲಾಗದೆ..ಆಚಾರ್ಯರನ್ನ
ಒಳಗೆ ಬರ ಮಾಡಿಕೊಳ್ತಾರೆ
"ಕುಮಾರಸ್ವಾಮಿಗಳೇ ನಿಮಗೆ ನನ್ನ ಆಶಿರ್ವಾದಗಳು..ನಿಮ್ಮ ಹುಟ್ಟು ಹಬ್ಬಕ್ಕಾಗಿ ಶುಭಾಶಯ ಕೋರಲು ಬಂದೆ..."
"ನಿಮ್ಮ ಜ್ಞಾನ ತಪಸ್ಸಿನ ಬಗ್ಗೆ ಕೇಳಿದ್ದೆ..ಆಶೀರ್ವದಿಸಲು ಬಂದೆ..ನಿಮಗೆ ಅರೋಗ್ಯ ಭಾಗ್ಯ, ಶಾಂತಿ, ಸುಖ ಸಿಗಲಿ ಎಂದು ಹರಸುತ್ತೇನೆ"
ಕುಮಾರ ಚಿಕ್ಕಪ್ಪ ನಮ್ಮ ಕೋರವಂಗಲ ಕುಟುಂಬದ ಚಾಣಕ್ಯನಂತಿರುವ ನಿಮಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು...