"ಶತಮಾನಂ ಭವತಿ
ಶತಾಯುಹ್ ಪುರುಷಃ ಶತೇಂದ್ರಿಯಃ
ಆಯುಶ್ಯೇವೆಂದ್ರಿಯೇ ಪ್ರತಿತಿಷ್ಠತಿ"
ಚಿಕ್ಕ ವಯಸ್ಸಿನಿಂದಲೂ ಈ ಶ್ಲೋಕ ಮಾತಾ-ಪಿತೃ, ಗುರುಹಿರಿಯರಿಗೆ ನಮಸ್ಕರಿಸಿದಾಗೆಲ್ಲ ಕಿವಿಯ ಮೇಲೆ ಬೀಳುತ್ತಿತ್ತು..
ಯಾರಾದರು ನೂರು ವಸಂತಗಳನ್ನು ಹೇಗೆ ಜೀವನ ಮಾಡಿ ಸುಖಿಸುತ್ತಾರೆ...ಇದೆಲ್ಲ ಸಾಧ್ಯವೇ....ಯಾರಾದರು ಕಣ್ಣಿಗೆ ಕಾಣುವ ಉದಾಹರಣೆಗಳು ಇದೆಯಾ ಎಂದು ಕೊಳ್ಳುತಿದ್ದಾಗ ತಟ್ಟನೆ ನೆನಪಿಗೆ ಬರುತಿದ್ದುದು ನಮ್ಮ ಕರುನಾಡಿನ ಮಾಂತ್ರಿಕ ತಾಂತ್ರಿಕ ಮೇಧಾವಿ ಸರ್. ಎಂ.ವಿ...ಅವರ ನಂತರ ಶ್ರೀ ಶಿವಕುಮಾರ ಸ್ವಾಮಿಗಳು ...ಕಾಯಕವೇ ಕೈಲಾಸ ಎಂಬುದನ್ನು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದ ಈ ಮಹನೀಯರು ಸದಾ ಸ್ಮರಣೀಯರು..
ಸರಿ ನೂರು ಯುಗಾದಿ ಹಬ್ಬವನ್ನು ನೋಡಲು ಹೇಗಿರಬೇಕು..ಎನ್ನುವ ಪ್ರಶ್ನೆ ಬಂದಾಗ...
೧. ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡರೆ ಸಾಕು
೨. ಆಟದಲ್ಲಿ, ಪಾಠದಲ್ಲಿ, ಜೀವನದಲ್ಲಿ ಕ್ರಮ ಬದ್ಧವಾಗಿದ್ದರೆ ಸಾಕು..
೩. ಇಷ್ಟವಾದ ಕೆಲಸವನ್ನು ಕಷ್ಟವಾದರೂ ಸರಿ ಮಾಡಬೇಕು
೪. ಅಡ-ತಡೆಗಳು ದಾಟಿದರೆ ಅಲ್ಲವೇ ಮನುಜನ ಜನುಮದ ಗುರಿ ಸಾಧ್ಯ..
೫. ಇವಕ್ಕೆಲ್ಲ ಸಾಥ್ ನೀಡುವುದು ನಮ್ಮ ದೇಹ..ಅದನ್ನೇ ಶಿಸ್ತಿನಲ್ಲಿ ಇಟ್ಟರೆ..ಮೇಲೆ ಹೇಳಿದ ಎಲ್ಲವು ಸಾಧ್ಯ..
ಅಲ್ಲವೇ ಎಂದು ನನಗೆ ನಾನೇ ಕೇಳಿದಾಗ...ಹೌದು ಹೌದು ಎಂದಿತು ನನ್ನ ಮನಸು...ಯಾಕೆಂದರೆ...ಕಳೆದ ವರುಷ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಬೆಂಗಳೂರಿನಲ್ಲಿ ನಡೆದಾಗ ಶತಕದ ಸಮೀಪದ ಪ್ರಾಯದ ಯುವ ಮನಸನ್ನು ನೋಡಿದ ತಣ್ಣನೆ ಅನುಭವವಾಯಿತು...
ಚಿತ್ರ ಕೃಪೆ - ಅಂತರ್ಜಾಲ |
ಚಿತ್ರ ಕೃಪೆ - ಅಂತರ್ಜಾಲ - ಸತೀಶ್ ಶೃಂಗೇರಿ |
ಯಾಕೆಂದರೆ..ಆ ಶ್ಲೋಕದಲ್ಲಿರುವ ಪ್ರತಿಯೊಂದು ಪದಕ್ಕೆ ಅರ್ಥಸಹಿತ ಸಾಕ್ಷ್ಯವಾಗಿರುವ ನಮ್ಮ ನೆಚ್ಚಿನ ಅಜ್ಜಯ್ಯ ಜಿ.ವಿ. ಆ ಶ್ಲೋಕವನ್ನು ಅಮರಗೊಳಿಸಿದ್ದಾರೆ...
ಅವರ ಪೀಳಿಗೆಯಲ್ಲೇ ಹುಟ್ಟಿರುವ ನಮಗೆ, ಅವರ ಜೀವನಶೈಲಿ ಮಾದರಿಯಾಗಿರಲಿ...
ಅಜ್ಜಯ್ಯನ ಬಗ್ಗೆ ಬರೆಯೋಣ ಅಂದಾಗ..ನನ್ನ ಮನಸಾಕ್ಷಿ ನನ್ನ ದೇಹದಿಂದ ಹೊರಗೆ ಬಂದು ನಿಂತು...ಕಿರುಚಿತು..
"ಆನೆಯ ಎತ್ತರಕ್ಕೆ ಹೊಗಳಲು ಪದಗಳು ತಲುಪಲು ಸಾಧ್ಯವೇ...
ಮಿಂಚಿನ ಕಣ್ಣು ಕೋರೈಸುವ ಕಾಂತಿಯ ಮುಂದೆ ಮಿನುಗುವ ದೀಪವೆ...
ಲಕ್ಷಾಧೀಶ ಆಗಿದ್ದರೆನಂತೆ ಮಾತಾಡುವಾಗ ಪದಗಳಿಗೆ ತಿಣುಕಾಡಿದಂತೆ
ಆಗುತ್ತದೆ..ಸುಮ್ಮನೆ ಶುಭಾಶಯಗಳನ್ನು ಕೋರಿಬಿಡು.." ಅಂದಿತು..
ಅಲ್ಲವೇ ಎಷ್ಟು ನಿಜ..ಮನಸಾಕ್ಷಿ ಮಾತು..!
ಅಜ್ಜಯ್ಯ ನಿಮಗೆ ಶತಮಾನದ ಸಹಸ್ರ ನಮಸ್ಕಾರಗಳು, ಅಭಿನಂದನೆಗಳು...ಹಾಗೂ ಹುಟ್ಟು ಹಬ್ಬದ ಶುಭಾಶಯಗಳು
ಕನ್ನಡದನಾಡಿನ ರನ್ನದ ರತುನ...ಇವರ ಬಗ್ಗೆ ಲೇಖನ..ನನ್ನ ಪಾಯಿಂಟ್ ಪಂಚರಂಗಿ ಬ್ಲಾಗಿನ ಸುವರ್ಣ ಕಾಣಿಕೆ..ವಾಹ್...ನನ್ನ ಬ್ಲಾಗ್ ಜೀವನ ಧನ್ಯವಾಯಿತು...!!!!
ಪ್ರೊ. ಜಿ.ವಿ. ಆದರ್ಶಪ್ರಾಯ, ಅತ್ಯುನ್ನತ ವ್ಯಕ್ತಿತ್ವದ ದಾರ್ಶನಿಕ.
ReplyDeleteನಿಮ್ಮ ಈ ಬರಹ ನಮ್ಮನ್ನು ಅವರ ಬಳಿಗೆ ಇನ್ನಷ್ಟು ಕರೆದೊಯ್ಯಿತು.
ಆತ್ಮೀಯ ಶ್ರೀಕಾಂತ್,
ReplyDeleteನೂರು ಸಂವತ್ಸರಗಳನ್ನು ಗೆದ್ದ ಶ್ರೀ ಜಿ ವಿ ಯವರ ಬಗೆಗಿನ ಲೇಖನ ಚನ್ನಾಗಿದೆ. ಈ ಸಂದರ್ಭದಲ್ಲಿ ಎ ಏನ್ ಮೂರ್ತಿರಾಯರು ಶತಮಾನ ಪೂರೈಸಿದ ಸಂದರ್ಭದಲ್ಲಿ ಆಕಾಶವಾಣಿ ಹಾಸನ ಏರ್ಪಡಿಸಿದ್ದ ಸಂಭಾಷಣೆ ಕಾರ್ಯಕ್ರಮದಲ್ಲಿ ನನ್ನನ್ನು ಆಹ್ವಾನಿಸಿದ್ದರು. ಸುಮಾರು ಇಪ್ಪತ್ತು ಆಹ್ವಾನಿತರ ಪ್ರಶ್ನೆಗಳಿಗೆ ಎ ಏನ್ ಮೂರ್ತಿ ರಾಯರು ಉತ್ತರಿಸುತ್ತಿದ್ದರು . ಅಲ್ಲಿ ನಡೆದ ಸಂಭಾಷಣೆಯ ತುಣುಕು.
ಪ್ರ. ನೀವು ಒಂದು ನೂರು ವಸಂತಗಳನ್ನು ಪೂರೈಸಿದ್ದಿರ, ನಿಮಗೆ ಹೇಗೆ ಅನಿಸುತ್ತದೆ?
ಉ. ಅನಿಸುವುದೇನು? ಕೇವಲ ನೂರು ಮಾತ್ರ ಅನಿಸುತ್ತಿದೆ.
ಪ್ರ. ಹಾಗಾದರೆ ನೂರು ಕಡಿಮೆಯೇ?
ಉ. ಜಾಸ್ತಿಯೇ?
ಪ್ರ. ಅಲ್ಲಾ......ನೂರು ವರ್ಷ ಬದುಕುವುದು ಅಂದರೆ.....
ಉ . ನೂರುವರ್ಷ ಬದುಕುವುದಕ್ಕಿಂತ ಹೇಗೆ ನೂರು ವರ್ಷ ಬದುಕಿದ ಎನ್ನುವುದು ಬಹಳ ಮುಖ್ಯವಾಗುತ್ತದೆ. ಮಾಡಬೇಕಾದ ಕೆಲಸ ತುಂಬಾ ಇದ್ದಾಗ ನೂರು ವರ್ಷದ ಕಾಲ ಕಡಿಮೆಯಾಗುತ್ತದೆ.
ಎ ಏನ್ ಮೂರ್ತಿರಾಯರ ಆ ಜೀವನ ಪ್ರೇಮ ಮತ್ತು ಶ್ರದ್ಧೆ ಎಂತಹ ನಿರಾಶಾವಾದಿಗಳನ್ನು ಹೊಸ ಹುರುಪಿನಲ್ಲಿ ಇಡಬಹುದು. ನಿನ್ನ ಲೇಖನ ನನಗೆ ಈ ಮಾತನ್ನು ಜ್ನಾಪಿಸ್ತು. ಧನ್ಯವಾದಗಳು.
ಬದರಿ ಸರ್..ನನ್ನ ಬ್ಲಾಗ್ ಲೋಕ ಧನ್ಯವಾಯಿತು..ಇಂತಹ ಮಹನೀಯರ ಅಮೃತ ಘಳಿಗೆಯ ಬಗ್ಗೆ ಬರೆದಿದ್ದು..ಹೌದು ಅವರ ಜೀವನ ಶೈಲಿ, ನಿರ್ವಹಣೆ..ಇದರಿಂದ ಕಲಿಯುವುದು ಬೇಕಾದಷ್ಟಿದೆ...ಅವರು ನಡೆದ ಮಾರ್ಗ ನಮಗೆ ರಾಜ ಮಾರ್ಗ...ಧನ್ಯ್ವವಾದಗಳು ನಿಮಗೆ..
ReplyDeleteಚಿಕ್ಕಪ್ಪ..ನೂರು ವಸಂತಗಳನ್ನು ಕಂಡ ಮಾನವ ಜೀವಿ ಸುಮ್ಮನೆ ಕಳೆದಿರುವುದಿಲ್ಲ...ಅದಕ್ಕೆ ಉದಾಹರಣೆ ಅವರ ಜೀವನ ಸಾಪಲ್ಯ...ಚಟುವಟಿಕೆ ಮೊದಲ ಹೆಜ್ಜೆ...ಧನ್ಯವಾದಗಳು...
ReplyDelete