ಇಪ್ಪತ್ತೈದು ...
ವಸಂತಗಳು ನೋಡಿದ ವಯಸ್ಸು...
ವರ್ಷಗಳು ಸಾಗಿದ ಉದ್ಯೋಗ...
ವಾರಗಳು ಓಡಿದ ಚಲನ ಚಿತ್ರ...
ಸಂಚಿಕೆ ಬಿಡುಗಡೆಯಾದ ಪತ್ರಿಕೆ...
ಇಪ್ಪತ್ತೈದು ...ರಜತ...ಬೆಳ್ಳಿ...ಸಂಭ್ರಮ...
ಈ ಪದವೇ ಎಷ್ಟು ಚಂದ ಕೇಳಲು...
ರಾಮು ಮಾವ ಅವರ ಮಾತಾ ಪಿತೃಗಳು (ನಂಜಪ್ಪ ಹಾಗು ವೆಂಕಟಲಕ್ಷ್ಮಮ್ಮ ) |
ಇವೆಲ್ಲ ನಮ್ಮ ಮಾನಸ ಪಟಲದಲ್ಲಿ ಹಾಗೆಯೇ ಉಳಿದುಬಿಡುತ್ತದೆ..
ಅಂತಹ ಒಂದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮಿಂದು ಎದ್ದ ದಂಪತಿಗಳು
ಸಡಗರದಿಂದ ಓಡಾಡಿ ಬಂಧು ಮಿತ್ರರನ್ನು ಕರೆದು
ಯಾರಿಗೂ ಗುಟ್ಟು ಬಿಟ್ಟುಕೊಡದೆ..
ಬಂದವರೆಲ್ಲರೂ ಸಿಹಿ ಭೂರಿ ಭೋಜನ ಉಂಡು...
ಎಲೆ ಅಡಿಕೆ ಮೆದ್ದು ಹಾಯಾಗಿ ಕುಳಿತು
ಲೋಕಾರೂಡಿ ಮಾತಾಡುತಿದ್ದಾಗ
ತಣ್ಣಗೆ ಅಂದಿನ ಸಂಭ್ರಮದ ವಿಚಾರ ಹೇಳಿದಾಗ
ಎಲ್ಲರಿಗೂ ಹಾಗೆ ಆನಂದಸಾಗರದಲ್ಲಿ ತೇಲಿದ ಅನುಭವ..
ವಿವಾಹ ಬಂಧನ ಎಷ್ಟು ಸುಮಧುರ, ಮಧುರ, ಅಮರ
ಇದನ್ನು ನೋಡಿ ಸಂತಸಪಡಬೇಕಾದ ಸುಂದರ ಸಂಸಾರ
ನಮ್ಮ ರಾಮು ಮಾವ ಹಾಗು ಭಾರತಿ ಅತ್ತೆ ಅವರದು...
ಮಾತಾ-ಪಿತೃಗಳ ಸದಾ ಆಶೀರ್ವಾದದ ಅಭಯಹಸ್ತ
ವೆಚ್ಚಕ್ಕೆ ಸ್ವಲ್ಪ ಹೊನ್ನು..
ಮನ, ಮನೆ ಮೆಚ್ಚಿದ ಮನದನ್ನೆ...
ಮನವರಿತ ಸುತ..
ಎಲ್ಲವನ್ನು ಒಂದೇ ಸೂರಿನಡಿ ಇರಿಸಿಕೊಂಡ "ಕಲ್ಲೇಶ"ನ ಕೃಪೆ...
ಇವೆಲ್ಲ ಇರುವಾಗ ಸ್ವರ್ಗದ ಹಂಗೇಕೆ..
ಕಲ್ಲೇಶ ಕೃಪಾ. |
ರಾಮು ಮಾವ..ಭಾರತಿ ಅತ್ತೆ..
ಎಂದೆಂದೂ ಹೀಗೆ ನಗಬೇಕು ..
ಎಲ್ಲರ ಬಾಳಲ್ಲಿ ಆನಂದ ತರಬೇಕು...
ಸ್ವರ್ಗ ನಾಚುತ್ತ ಕಾಲಡಿ ಬರಬೇಕು...
ಎಂದೂ ಜೊತೆಯಾಗಿ ನೀವು ಹೀಗೆ ಇರಬೇಕು...
ರಾಮು ಮಾವ, ಭಾರತಿ ಅತ್ತೆ , ಭಾರ್ಗವ |
ರಾಮು ಮಾವ ಭಾರತಿ ಅತ್ತೆ ನಿಮ್ಮ ವೈವಾಹಿಕ ಜೀವನದ ಬೆಳ್ಳಿ ಹಬ್ಬಕ್ಕೆ ನಿಮ್ಮ ಪ್ರೀತಿಯ ಅಕ್ಕ-ಭಾವ (ವಿಶಾಲು-ಮಂಜಣ್ಣ) ಅವರಿಂದ ಒಂದು ನೆನಪಿನ ಕಾಣಿಕೆ...
ಆತ್ಮೀಯ ಶ್ರೀಕಾಂತ,
ReplyDeleteಚನ್ನಾಗಿದೆ. ಆಗ ತೆಗೆದ ಇನ್ನಷ್ಟು ಫೋಟೋಗಳ ಕತೆ ಏನು? ಶಾರದಳ ಪ್ರಶ್ನೆ.
ಆದಿ ದಂಪತಿಗಳ ವೈವಾಹಿಕ ಜೀವನದ ಬೆಳ್ಳಿ ಹಬ್ಬಕ್ಕೆ ನಮ್ಮದೂ ಅಭಿನಂದನೆಗಳಿದೆ.
ReplyDeleteಅವರ ಮನೆಯ ಸುಗ್ರಾಸ ಭೋಜನದಲ್ಲಿ ಮೆನು ಏನಿತ್ತು ಶ್ರೀಕಾಂತಣ್ಣ?
ಇಲ್ಲಿ ಕಲ್ಲೇಶ ಕೃಪೆ ಎಂದರೆ ಇವರು ಯಾವ ಕಡೆಯ ದೇವರು?
ಚಿಕ್ಕಪ್ಪ...ನಿಮ್ಮ ಪ್ರಶ್ನೆ..ಮಡದಿಯ ಮನದಲ್ಲಿ ಮೂಡಿ ಬಂದಿದೆ..ಮುಂದಿನ ಹಾಸನ ಭೇಟಿಯಲ್ಲಿ ಫೋಟೋಗಳು ಸಿಗತ್ತವೆ...
ReplyDeleteಬದರಿ ಸಾರ್...ಹೊಳಲಕೆರೆ ಇವರ ಊರು..ಕಲ್ಲೇಶ ಅವರ ಮನೆದೇವರು...ಮೆನು ಬಹಳ ಚೆನ್ನಾಗಿತ್ತು..ಇಂತಹ ಸಮಾರಂಭಗಳಲ್ಲಿ ಭೋಜನ ಬಲು ಜೋರಾಗಿರುತ್ತೆ...
ReplyDelete