ಮೀನು ಸಡಗರದಿಂದ ಓಡಾಡುತ್ತಿತ್ತು..ಅಲ್ಲೇ ನಿಧಾನವಾಗಿ ಬರುತಿದ್ದ ಬಟಾಣಿ ಕೇಳಿತು
"ಏನಪ್ಪಾ ಮೀನಣ್ಣ..ಏನು ಬಹಳ ಖುಷಿಯಲ್ಲಿದ್ದೀಯ?"
"ಹೌದು ಬಟಾಣಿ..ಇವತ್ತು ಸುಮಧುರ ದಿನ..ನಿನಗೆ ಕಾಯ್ತಾ ಇದ್ದೆ"
"ಏನಪ್ಪಾ ಅದು ನಾನು ನೀನು ಎಷ್ಟು ಒಳ್ಳೆಯ ಗೆಳೆಯರು...ನನಗೆ ದಯವಿಟ್ಟು ಹೇಳು?"
"ನಮ್ಮ ಜೀವನವನ್ನು ಅಭ್ಯಸಿಸಿ..ನಾವು ಬರಿ ತಿನ್ನಲಷ್ಟೇ ಅಲ್ಲ ..ಅಧ್ಯಯನಕ್ಕೂ ನೆರವಾಗುತ್ತೇವೆ.ಅಂತ ತಿಳಿದ ಅನೇಕರಲ್ಲೊಬ್ಬರು ನಮ್ಮ ಪ್ರೀತಿಯ ಡಾಕ್ಟರ್ ಅಜಾದ್...ಅವರಿಂದ ನಮಗೂ ಒಂದು ಹೆಸರು..ನಮ್ಮಿಂದ ಅವರಿಗೂ ಒಂದು ಗೌರವ.. ಅಲ್ಲವೇ.."
"ಹೌದು ಮೀನಣ್ಣ..ನನ್ನ ಸಿಪ್ಪೆಯಿಂದ ಬೇರ್ಪಡಿಸಿ ಪಾತ್ರೆಯಲ್ಲಿ ಹಾಕಿ ಬೇಯಿಸಿ ಮುಗಿಸುತ್ತಿದ್ದ ಜನರ ಮಧ್ಯೆ ... ನನ್ನನ್ನು ಪುಸ್ತಕದ ಪುಟದ ಮೇಲೆ ನನ್ನ ಮುದ್ದಾದ ಬೈತಲೆ ತೆಗೆದುಕೊಂಡಿರುವ ಚಿತ್ರ ಹಾಕಿ..ನನ್ನನ್ನು ಜಗಜ್ಜಾಹಿರು ಮಾಡಿದ ಕವಿ ಅಜಾದ್ ಬಹು ಅಪರೂಪದ ವ್ಯಕ್ತಿ.. ಅವರು ಅಂದರೆ ನನಗೆ ಬಹಳ ಇಷ್ಟ..ಗೌರವ..."
ಬಟಾಣಿ ಚಿಕ್ಕಿ! |
"ಹೌದು ಬಟಾಣಿ...ಜಲನಯನ ಅಂತ ಕರೆದು ನನ್ನನ್ನು ಪದಗಳ ಶರಧಿಯಲ್ಲಿ ಈಜಾಡಲು ಬಿಟ್ಟಿದ್ದಾರೆ..."
ಜಲ ನಯನ! |
"ಮೀನಣ್ಣ ಇಂದು ಅವರು ಸಂಸಾರ ಸಾಗರದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದಾರೆ...ಅಜಾದ್ ಸರ್ ಮತ್ತು ಅವರ ಸಂಸಾರದ ಸಾರಥಿ ಅಬಿದ ಮೇಡಂ ಮತ್ತು ಅವರ ಸುಖಿ ಸಂಸಾರಕ್ಕೆ ಶುಭಕಾಮನೆಗಳು...ಸದಾ ಅವರ ಸಂಸಾರ... ಸುಖ ಸಂಸಾರದ ಸಾಗರದಲ್ಲಿ ನೆಮ್ಮದಿ ಎನ್ನುವ ಮೀನು...ಬಟಾಣಿ ಎನ್ನುವ ಸಂತಸದ ಜೊತೆ ಚಿಕ್ಕಿ ಚುಕ್ಕಿ ಬಿಡಿಸುತ್ತ ಸಂಭ್ರಮಿಸಲಿ. ಎಂದು ಹಾರೈಸೋಣ..ಬಾ ಗೆಳೆಯ..."
ಸುಂದರ ಸಂಸಾರ! |
"ಹೈ...ಬಟಾಣಿ..ಎಷ್ಟು ಸುಂದರವಾದ ಪದಗಳನ್ನು ಜೋಡಿಸಿ ಶುಭಾಶಯಗಳನ್ನು ಸಿದ್ಧ ಮಾಡಿದೀಯ..ನೀನು ನನ್ನ ಗೆಳೆಯ ಎನ್ನುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ.."
ಅಜಾದ್ ಸರ್..ಅಬಿದ ಮೇಡಂ..ವೈವಾಹಿಕ ಜೀವನದ ಬೆಳ್ಳಿಯ ಹಬ್ಬದಲ್ಲಿ ನಿಮ್ಮ ಸುಖಿ ಸಂಸಾರ ಸುವರ್ಣ ಪಥದತ್ತ ಸಾಗಲಿ..ಎಂದು ಬ್ಲಾಗ್ ಲೋಕದ ಎಲ್ಲ ನಕ್ಷತ್ರಗಳ ಜೊತೆಯಲ್ಲಿ ನಿಮ್ಮ ಮಿತ್ರರಾದ ಮೀನಣ್ಣ ಹಾಗು ಬಟಾಣಿ ನಿಮಗೆ ಈ ಸಂತಸದ ಘಳಿಗೆಯಲ್ಲಿ ಶುಭಾಶಯಗಳನ್ನು ಕೋರುತಿದ್ದೇವೆ!!!
ಅಜಾದ್ ಸರ್ ಮತ್ತು ಅವರ ಶ್ರೀಮತಿಯವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು.... :)
ReplyDelete& ಡಿಫರೆಂಟ್ ಆಗಿ ವಿಶ್ ಮಾಡಿದ ಶ್ರೀ bro ಗೂ ಅಭಿನಂದನೆಗಳು....
ಸುಷ್ಪ ಪುಟ್ಟಿ ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆಯಿರೋ ಎಂದು ಪುರಂದರದಾಸರು ಹೇಳಿದ್ದಾರೆ..ಹಾಗೆಯೇ ಅವರ ಭಾವವನ್ನು ಜೋಡಿಸಿ ಅವರಿಗೆ ಒಂದು ಮಾಲಿಕೆ ಅರ್ಪಣೆ..ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗಳಿಗೆ...
DeleteHappy Marriage anniversary ...
ReplyDeleteTumbaa vibhinnavaagi heLiddeeri Shrikant Bhai...
ಧನ್ಯವಾದಗಳು ದಿನಕರ್ ಸರ್..ಪ್ರತಿಯೊಂದು ಜೀವಿಯು ಸಂತಸದಲ್ಲಿರಲಿ ಎಂದು ಬಯಸುವ ಮನಸಿನ ಲೋಕವೇ ಈ ಬ್ಲಾಗ್ ಲೋಕ..ಆ ಲೋಕದಲ್ಲಿನ ಒಂದು ಅನರ್ಘ್ಯ ರತ್ನಕ್ಕೆ ಕೊಂಚ ಭಿನ್ನವಾಗಿ ಶುಭ ಹಾರೈಸೋಣ ಎನ್ನಿಸಿತು..
Deleteಶ್ರೀಮನ್ ಬಲು ವಿಭಿನ್ನ ನಿಮ್ಮ ಹಾರೈಕೆ. ಬಲು ಆಪ್ಯಾಯ ನಿಮ್ಮ ಆತ್ಮೀಯತೆ. ಬ್ಲಾಗ್ ಒಂದು ಅಪೂರ್ವ ಲೋಕಕ್ಕೆ ನಮ್ಮನ್ನು ಕರೆದೊಯ್ದರೆ ಇಲ್ಲಿ ಸಿಕ್ಕ ಸ್ನೇಹಿತರು ಆತ್ಮೀಯತೆ ಮಹಾಪೂರವನ್ನೇ ಹರಿಸಿದ್ದಾರೆ. ಶ್ರೀಮನ್ ಈ ಆತ್ಮೀಯರಲ್ಲೊಬ್ಬರು. ವಿಭಿನ್ನರು. ಧನ್ಯವಾದ
ReplyDeleteಅಜಾದ್ ಸರ್..ಈ ಮಾಲಿಕೆ ನಿಮಗೆ ಖುಷಿ ತಂದಿದೆ ಎಂದರೆ ಧನ್ಯನಾದೆ..ಮುತ್ತು ಹಾರವನ್ನು ಸೇರಿದ ಹಾಗೆ ಸಂತಸ ಬಂದಿತು ನನ್ನ ಮನಕೆ. ಧನ್ಯವಾದಗಳು ನಿಮ್ಮ ಅಭಿಮಾನದ ಮಹಾಪೂರಕ್ಕೆ.:-)
Deleteಅಜಾದ್ ಸರ್ ಹಾರ್ದಿಕ ಶುಭಾಶಯಗಳು ನಿಮಗೆ, ಬೆಳ್ಳಿ ಹಬ್ಬದ ಸಂಭ್ರಮ ಸ್ವರ್ಣ ಸಂಭ್ರಮ ವಾಗಲಿ .ನಿಮ್ಮ ಕುತುಮ್ದಲ್ಲಿ ವ್ಸಂತಸದ ಹೊನಲು ಹರಿಯಲಿ. ಇನ್ನು ಈ ಸಂತಸದ ವಿಚಾರವನ್ನು ನಿಮ್ಮದೇ ರೀತಿಯಲ್ಲಿ ವಿಶೇಷವಾಗಿ ತಿಳಿಸಿದ ಶ್ರೀ ಕಾಂತ್ ನಿಮಗೆ ಅಭಿನಂದನೆಗಳು.
ReplyDeleteಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
ಬಾಲೂ ಸರ್ ಎಂತಹ ಮಾತು..ಸೊಗಸಾಗಿದೆ.ನಿಮ್ಮ ಪ್ರೋತ್ಸಾಹಕ್ಕೆ ನಾ ಚಿರ ಋಣಿ..
Deleteಶ್ರೀಕಾಂತ್ ವಿಶಿಷ್ಟ ರೀತಿಯ ತುಂಬಾ ಸುಂದರ ಹಾರೈಕೆ ...ಶುಭಾಶಯಗಳು ...ಅಜ್ಹಾದ್ ಭಾಯ್ ದಂಪತಿಗಳಿಗೆ... :)
ReplyDeleteಏನೆಂದು ನಾ ಬರೆಯಲಿ ನಿಮ್ಮ ಪ್ರತಿಕ್ರಿಯೆಗೆ ಸಹೋದರಿ..ತುಂಬಾ ಸೊಗಸಾಗಿದೆ..ಧನ್ಯವಾದಗಳು
Deleteಮೊದಲಿಗೆ ಗೆಳೆಯ ಆಜಾದನಿಗೆ ಶುಭಾಶಯಗಳು.......
ReplyDeleteಶ್ರೀಕಾಂತು..
ನಿಮ್ಮ ಸೃಜನಶೀಲತೆಗೆ ನಮ್ಮ ನಮನಗಳು....
ಆಜಾದನಿಗೆ ಬಲು ಚಂದದ ಉಡುಗೋರೆಕೊಟ್ಟಿದ್ದೀರಿ... ಜೈ ಹೋ... !!
ಪ್ರಕಾಶಣ್ಣ ಬ್ಲಾಗ್ ಲೋಕದ ರತ್ನಗಳನ್ನು ಪರಿಚಯ ಮಾಡಿಕೊಟ್ಟ ಕೀರ್ತಿ ನಿಮಗೆ ಸೇರಬೇಕು...ಈ ಪ್ರೋತ್ಸಾಹದ ನುಡಿಗಳಿಗೆ ನಾ ನಿಮಗೆ ಸದಾ ಆಭಾರಿ..
Deleteಶ್ರೀಕಾಂತ್ ಸರ್...
ReplyDeleteಒಂದು ಅದ್ಬುತ ಲೇಖನದ ಮೂಲಕ ಅಜಾದ್ ದಂಪತಿಗಳ ಮದುವೆ ವಾರ್ಷಿಕೋತ್ಸವ ಸಂಭ್ರಮಕ್ಕೆ ಅದ್ಬುತ ಗಿಪ್ಟ್ ಕೊಟ್ಟಿದ್ದೀರಿ...ತುಂಬಾ ಇಷ್ಟವಾಯ್ತು.
ಶಿವೂ ಸರ್ ನಿಮ್ಮ ಮೆಚ್ಚುಗೆಯ ನುಡಿಗಳು ಹಲವಾರು ಫೋಟೋಗಳನ್ನು ಜೂಮ್ ಮಾಡಿ ತೋರಿಸಿದಂತೆ ಖುಷಿಯಾಯಿತು..ಧನ್ಯೋಸ್ಮಿ..
Deleteಮೊದಲ ಇಪ್ಪತೈದು
ReplyDeleteವರ್ಷಗಳ ಮೆಟ್ಟಿಲಲೇ
ಮುಂದೆ ತಾಕುವ
ಸಂಸಾರ ವರ್ಷಗಳ
ನೆಮ್ಮದಿಯ ಮೀಟು.
ವಾವ್ ಆದಿ ದಂಪತಿಗಳೇ ನಿಮಗೆ ಅಲ್ಲಾಹು, ಅಜ್ಜಯ್ಯ, ಬುದ್ಧ ಮತ್ತು ತಂದೆ ಏಸುವಿನ ಕೃಪೆ ಅನುಗಾಲವಿರಲಿ.
ನಿಮ್ಮ ಮನಸ್ಸಿನಂತೆಯೇ ಸಂಸಾರ ನೌಕೆ ಖುಷಿ ಸಾಗರದಿ ತೇಲಲಿ.
ಕವಿ ಹೃದಯ ಬದರಿ ನಿಮ್ಮದು..ಎಂತಹ ಸುಂದರ ಕವಿತ್ವ..ಸೊಗಸಾಗಿದೆ..ನೂರು ಪದಗಳಿಗಿಂತಲೂ..ಕೆಲ ಪದಗಳಲ್ಲಿ ಹೊರಸೂಸುವ ಭಾವ ಸುಂದರ...
Deleteಸುಂದರ ಹಾರೈಕೆ :)
ReplyDeleteಎಸ್ ಎಸ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Deletesuper.. chennagi wish madiddeeri shreekanth
ReplyDeleteಧನ್ಯವಾದಗಳು ಸುಗುಣ ಮೇಡಂ..
Deleteತುಂಬಾ ಸೊಗಸಾಗಿ ಶುಭಾಷಯ ಕೋರುವ ಬರಹ :-)
ReplyDeleteತುಂಬಾ ಇಷ್ಟವಾಯಿತು ಶ್ರೀಕಾಂತ್ ಸಾರ್. ನಿಮ್ಮ ಈ ಶುಭಾಶಯ ಕೋರುವ ಬರಹ ಓದಿ, ನಾನು ಒಮ್ಮೆ ಈ ಥರ ಟ್ರೈ ಮಾಡಬೇಕೆನದೆನಿಸಿದೆ :D ಆಜಾದ್ ಸಾರ್ ಅವರ "ಹಾಸ್ಯಪ್ರಜ್ಞೆಯನ್ನ" ಸಾರುವ ಒಂದು ಘಟನೆಯನ್ನ ಮೆಲುಕು ಹಾಕಿದ್ದರೆ ಇನ್ನೂ ಚೆನ್ನಾಗಿರ್ತಿತ್ತು. :-) "ಶ್ರೀಮತಿ ಮತ್ತು ಶ್ರೀ.ಆಜಾದ್ ಅವರಿಗೆ ಶುಭಾಶಯಗಳು :-)
ಧನ್ಯವಾದಗಳು ರಾಘವ...ಹೌದು ನಿಮ್ಮ ಮಾತು ಸರಿ..ಆಜಾದ್ ಅವರ ಹಾಸ್ಯ ಪ್ರಜ್ಞೆ ಅದ್ಭುತ...ನಿಮ್ಮ ಸಲಹೆ ಸ್ವೀಕರಿಸಿರುವೆ.
Deleteಶ್ರೀಕಾಂತ್ ಮೂಲಕ ಅಜಾದ್ ದಂಪತಿಗಳಿಗೆ ನನ್ನದೊಂದು ಬಡಾ ಸಲಾಮ್ !
ReplyDeleteWishing golden jubilee to Azad couple!!
-
with hearty blessings
- mshebbar
ತುಂಬಾ ಖುಷಿ ಆಯಿತು ಸರ್ ನಿಮ್ಮ ಪ್ರತಿಕ್ರಿಯೆ ನನ್ನ ಪ್ರಪಂಚದಲ್ಲಿ..ಧನ್ಯೋಸ್ಮಿ
Deleteಆತ್ಮೀಯ ಶ್ರೀಕಾಂತ,
ReplyDelete"ಸಾಧನೆಯ ಹಾದಿಯಲ್ಲಿ ನಿರತನಾದವನಿಗೆ ಹೊಸ ದಾರಿ ಕಣ್ಣಿಗೆ ರಾಚುತ್ತವೆ " ಎಂದು ಆಂಗ್ಲ ಕವಿ ಹೇಳಿದ್ದನ್ನು ನಿನ್ನ ಬರಹದಲ್ಲಿ ಕಂಡೆ. ನಿನ್ನ ಸಾಧನೆಯಲ್ಲಿ ನಿರಂತರ ಶೋಧನೆ! ಹೊಸತರದ ಅನ್ವೇಷಣೆ ! ಕಾಣುತ್ತಿದೆ. ಪ್ರತಿಯೊಂದರಲ್ಲೂ ಏನಾದರೊಂದು ಹೊಸತನ ಇರಲೇಬೇಕು ಎಂದು ಹಂಬಲಿಸುವ ನಿನ್ನ ಜೀವನೋತ್ಸಾಹಕ್ಕೆ HATS OFF.
ನಿನ್ನ ಹೊಸತನದ ಪ್ರಸ್ತುತಿಗೆ ತುಂಬು ಹೃದಯದ ಶ್ಲಾಘನೆ......
ಚಿಕ್ಕಪ್ಪ..ಸುಂದರವಾಗಿದೆ ನಿಮ್ಮ ವಿಶ್ಲೇಷಣೆ..ಹೊಸತನ ಇದ್ದಾಗ ಹಳೆತನ ಇನ್ನಷ್ಟು ಹೊಳಪನ್ನು ತುಂಬಿಕೊಂಡು ಹೊಳೆಯುತ್ತ ಸಹಯೋಗ ನೀಡುತ್ತದೆ..ಆ ಧಾವಂತದಲ್ಲಿ ಅರಸಿಹೋಗುವ ಒಂದು ಪ್ರಯತ್ನ ನನ್ನದು..ನಿಮ್ಮ ಹಾರೈಕೆಗೆ, ಹುರುಪು ನೀಡಿದ್ದಕ್ಕೆ ಧನ್ಯವಾದಗಳು
Deleteಆಜಾದ್ ಸರ್ ಬ್ಲಾಗ್ ಬಗ್ಗೆ ಗೊತ್ತಿತ್ತು.. ಮತ್ತಷ್ಟು ವಿಷಯಗಳನ್ನು ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು :-)
ReplyDeleteಧನ್ಯವಾದಗಳು ಪ್ರಶಾಂತ್..ನನ್ನ ಲೋಕಕ್ಕೆ ಸ್ವಾಗತ..
Delete