Monday, May 28, 2012

ಮಗುವಿನ ವಿವಾಹದ ಮೊದಲ ವಾರ್ಷಿಕೋತ್ಸವ


ಓಹ್ ಗಣೇಶ..ಆಗಲೇ ಒಂದು ವರುಷ ಆಗಿ ಬಿಟ್ಟಿದೆ..ಎಂತಹ ಸುವರ್ಣ ಘಳಿಗೆ ಮತ್ತೆ ಬಂದಿದೆ..

ನನ್ನ ಗುರುಗಳು ಇವತ್ತು ಏನಾದರು ತರಲೆ ಬ್ಲಾಗ್ ಕಲಿಸಿರುತ್ತಾರೆ..ಅದು ಪಕ್ಕ..

ಮೇಲ್ ಬಾಕ್ಸ್ ಚೆಕ್ ಮಾಡಿದಾಗ ಯಾವುದು ಮೇಲ್ ಇರೋದಿಲ್ಲ..

ಗುರುಗಳೇ..ಯಾಕೆ ಹೀಗೆ ಮಾಡಿದಿರಿ...ಅಂತ ಕೇಳೋಕೆ ಫೋನ್ ಮಾಡೋಣ ಅಂದುಕೊಳ್ಳುವಷ್ಟರಲ್ಲಿ..

ಪಿಂಗ್...ಟಾಸ್ಕ್ ಬಾರ್ ಬ್ಲಿಂಕ್ ಆಗೋಕೆ ಶುರುವಾಗುತ್ತೆ..
"ಮಗುವೆ ಗುಡ್ ಮಾರ್ನಿಂಗ್..." "ಮಗು ಎಂದಿದೆ ಮಂಜಿನ ಬಿಂದು..."

"ಮಗು ನಲಿ ಎಂದಿದೆ ಜೀವನದ ಬಿಂದು.."

"ಸುಂದರವಾದ ಜೀವನದಲ್ಲಿ ಒಂದು ಹೊಸತನ ಪ್ರಾರಂಭವಾದ ದಿನ..."

"ವಿಧ್ಯೆ ಇದೆ...ಶ್ರೀ ಇದೆ..ಅದಕ್ಕೆ ಕಳಶವಾಗಿ ನವೀನವಾದ ಹೊಸತನ ಇದೆ.."

"ಇದೆ ಅಲ್ವೇ ಜೀವನದ ಅಮೂಲ್ಯ ಕ್ಷಣಗಳು..."

"ಮಗುವೆ ಮೊದಲ ವರುಷದ ಹರುಷ ಸದಾಕಾಲ ನಾವಿನ್ಯತೆ ಇಂದ ಅವಿರತವಾಗಿ ನಿನ್ನ ಬಾಳಲ್ಲಿ ಇರಲಿ..."
ನನ್ನ ಶುಭ ಹಾರೈಕೆಯನ್ನು ನವೀನ ಅವರಿಗೂ ತಿಳಿಸು"

ಗುರುಗಳೇ..ನೀವು ಎಷ್ಟು ವಿಚಿತ್ರಾನೋ..ನಿಮ್ಮ ಹಾರೈಕೆ ಕೂಡ ಅಷ್ಟೇ ವಿಚಿತ್ರ...? ನಿಮ್ಮ ಹಾರೈಕೆಗೆ ಶಿರ ಬಾಗಿ ವಂದಿಸುವೆನು...

"ಮಗುವೆ ನಿನಗೋಸ್ಕರ...ಕೆಲವು ಸಾಲುಗಳು!!!!!!!!!!!    
ಎಂತ ಸೊಗಸು ಮಗುವಿನ ಮನಸು..
ಎಂಥ ಸೊಗಸು ಮಗುವಿನ ಕನಸು...
ಕನಸೆಲ್ಲ ನನಸಾಗಲಿ..ನನಸಾದ ಕನಸೆಲ್ಲ ಸಿದ್ಧಿಸಲಿ...
ಸಿದ್ದವಾದ ಕನಸೆಲ್ಲ ಮತ್ತೆ ನನಸಾಗಲಿ..
ಜೀವನ ಮಂಗಳಮಯವಾಗಿರಲಿ...
ಮಂಗಳದ ಈ ಸುದಿನ ಮಧುರವಾಗಲಿ..

No comments:

Post a Comment