Friday, May 25, 2012

ಪ್ರಕಾಶ ಅಣ್ಣ - ಆಶಾ ಅತ್ತಿಗೆ ನಿಮಗೆ ವಿವಾಹ ದಿನದ ಶುಭಾಶಯಗಳು

ಶಿವ ತನ್ನೊಳಗೆ ತಾನು ನಗುತಿದ್ದಾಗ ಪಾರ್ವತಿ..

"ಏನೂಂದ್ರೆ ಒಬ್ಬರೇ ನಗುತ್ತ ಇದ್ದೀರಾ? ಏನು ಸಮಾಚಾರ...!!!"

"ಏನಿಲ್ಲ ಪಾರು..ನಾನು ನನ್ನ ಮಡದಿಯನ್ನ ತಲೆಯ ಮೇಲೆ ಕೂರಿಸಿಕೊಂಡೆ.."

"ಅದಕ್ಕೆ"

"ಪೂರ ಕೇಳು...ನಮ್ಮ ಲಕ್ಷ್ಮಿಕಾಂತ ವಕ್ಷಸ್ಥಲದಲ್ಲಿ ತನ್ನ ಮನದನ್ನೆಯನ್ನ ಇರಿಸಿಕೊಂಡ

"ಹೂಊಊ"

ನಮ್ಮ ಚತುರ್ಮುಖ ಸರಸುವನ್ನು ಸದಾ ತನ್ನ ಬಳಿಯಲ್ಲಿಯೇ ಇರಿಸಿಕೊಂಡು ಸುಮಧುರ ವೈಣಿಕ ಗಾನವನ್ನು ಸವಿಯುತಿದ್ದಾನೆ"

"ಸರಿ"

"ಭೂಲೋಕದಲ್ಲಿ ಇವರೆಲ್ಲರನ್ನು ಮೀರಿಸಿದ ಒಬ್ಬ ಬ್ರಹ್ಮ ಇದ್ದಾರೆ"

"ಹೌದೆ!! ಯಾರು ಅದು"?

"ತನ್ನ ಕುಶಲತೆಯಿಂದ ಗೃಹ, ಮನೆಗಳನ್ನೂ ಕಟ್ಟುತ್ತ..ಅಷ್ಟೇ  ಕುಶಾಗ್ರಮತಿಯಿಂದ ಪದಗಳನ್ನು ಜೋಡಿಸುತ್ತ..ಎಷ್ಟೋ ಸ್ನೇಹಿತರಿಗೆ ಒಳ್ಳೆಯ ಸ್ನೇಹಿತರಾಗಿ , "ತಂಗಿಯರಿಗೆ" ಅಣ್ಣನಾಗಿ, ತೆಳ್ಳಗಿರುವರಿಗೆ "ಡುಮ್ಮಣ್ಣನಾಗಿ" ರಂಜಿಸುತ್ತಿರುವ...ಪ್ರಕಾಶ..ತನ್ನ ಹೆಸರಲ್ಲೇ ತನ್ನ ಮನದನ್ನೆಗೆ ಜಾಗ ಕೊಟ್ಟಿರುವುದು ಎಷ್ಟು ಚೆಂದ ಅಲ್ವ..."

"ಓಹ್ ಹೌದು..ನಾನು ಅವರ ಬಗ್ಗೆ ಕೇಳಿದ್ದೆ..ಅವರ "ಹೆಸರೇ ಬೇಡ"..."ಇದೆ ಅದರ ಹೆಸರು" ಪುಸ್ತಕಗಳನ್ನು ಓದಿದ್ದೆ..ಎಷ್ಟು ಶಾಣೆ ಇದೆ ಅವರ ಬರಹ.....ಓಹ್ ಹೌದು..ಇಂದು ಅವರ ವಿವಾಹವಾದ ದಿನ...ಅಲ್ಲವೇ"

"ಹೌದು ಪಾರು..ಅದಕ್ಕೆ ನಿನಗೆ ಅವರ ಪರಿಚಯ ಮಾಡಿಸೋಣ ಅಂತ ಅಂದುಕೊಂಡರೆ..ನಿನಗೆ ಅವರ ಬಗ್ಗೆ ಎಲ್ಲವು ಗೊತ್ತು..ಒಳ್ಳೆಯದೇ ಆಯಿತು ಬಿಡು..."

"ಹೌದೂ ಅಂದ್ರೆ...ಅವರಿಗೆ ಸದಾ ಅವರ ಆಶಯ, ಕನಸು, ಮನಸು, ಗೆಲುವು ಎಲ್ಲವು ಸಿಮೆಂಟ್, ಮರಳು, ನೀರಿನ ಹಾಗೆ ಬೆರೆತು..ಯಶಸ್ವಿ ಆಶಾ ಕಟ್ಟಡದಲ್ಲಿ ಪ್ರಕಾಶಮಾನರಾಗಿ ಆಶಿಶ್  ಸೌಧದಲ್ಲಿ  ಸುಖ ಸಂತೋಷದಲ್ಲಿ ಬೆಳಗಲಿ ಎಂದು ಹಾರೈಸೋಣ..."

ಪ್ರಕಾಶಿಶ್  (ಪ್ರಕಾಶ..ಆಶಾ..ಆಶೀಶ್) ಸುಖ, ಸಂತೋಷ, ನೆಮ್ಮದಿ ನಿಮ್ಮದಾಗಲಿ..

8 comments:

 1. Super Srikant.. Prakashish tumba chennagide.. Dummu annanige Shubhaashayagalu...:)

  ReplyDelete
 2. ಪ್ರೀತಿಯ ಶ್ರೀಕಾಂತ್ ಮಂಜುನಾಥ್...

  ನಿಮ್ಮ ಕಲ್ಪನೆಗೆ..
  ಸ್ನೇಹ.. ಪ್ರೀತಿಗೆ ವಂದನೆಗಳು...

  ಒಂದು ವಿಷಯ ಹೇಳಲೇ ಬೇಕು...

  ನಾನು ಮೊದಲು ಗೆಳೆಯರಿಗೆ ಪತ್ರ.. ಶುಭಾಶಯ ಪತ್ರ ಕಳಿಸುವಾಗ "ಪ್ರಕಾಶೀಶ್" ಅಂತ ಪತ್ರ ಮುಗಿಸುತ್ತಿದ್ದೆ..

  ನಿಮಗೆ ಅದು ಹೇಗೆ ಹೊಳಿತೋ.. !!

  ನಿಮಗೂ..
  ನಿಮ್ಮ ಕುಟುಂಬ..
  ಬಂಧು ಬಳಗದಲ್ಲಿ ಯಾವಾಗಲೂ ನಗು.. ಸಂತಸ ತುಂಬಿರಲಿ...

  ಮತ್ತೊಮ್ಮೆ ಮಗದೊಮ್ಮೆ ಧನ್ಯವಾದಗಳು...

  ReplyDelete
 3. ಧನ್ಯವಾದಗಳು ಸಂಧ್ಯಾ ಅವರೇ..ನಿಮ್ಮ ಪ್ರೋತ್ಸಾಹ ದಾಯಕ ಶಬ್ಧಗಳು ಇನ್ನು ಹುಮ್ಮಸನ್ನು ತುಂಬುತ್ತದೆ..

  ReplyDelete
 4. ಪ್ರಕಾಶ್ ಜಿ..
  ಒಳ್ಳೆಯ ಸಂಸ್ಕಾರ, ಒಳ್ಳೆಯ ತನ, ಒಳ್ಳೆಯ ಮನೋಭಾವ..ಇವೆಲ್ಲ ಸುಲಭದಲ್ಲಿ ಸಿಗುವ ಸರಕಲ್ಲ..
  ಅದು ನಿಮ್ಮಲ್ಲಿ ಹಾಗು ನಿಮ್ಮ ಕುಟುಂಬದಲ್ಲಿ ಸದಾ ಇದೆ...
  ಆ ಸಂಸ್ಕರ ಬೆಳೆಸಿದ, ಉಳಿಸಿದ ನಿಮ್ಮ ತಾಣಕ್ಕೆ ನನ್ನ ಒಂದು ಸಣ್ಣ ನುಡಿ ಮುತ್ತುಗಳು...
  ಮನುಜನಿಗೆ ಹೆಸರು ಗುರುತಿಸುವುದಕ್ಕೆ ಬೇಕು ನಿಜ..ಆದ್ರೆ ಮಳೆ ಬಿಲ್ಲಿನಂತೆ ಒಂದಕ್ಕೆಒಂದು ಹೊಂದಿಕೊಂಡು ಬರುವ ನಾಮ ವಿಶೇಷಗಳು ಯಾವಾಗಲು ವಿಶೇಷವಲ್ಲವೆ..
  ಬರಹ ನಿಮಗೆ ಮೆಚ್ಚುಗೆಯಾಗಿದ್ದಲ್ಲಿ ಅದೇ ನನಗೆ ಖುಷಿ..

  ReplyDelete
 5. ಪ್ರಕಾಶ್ ಸಾರ್, ನನಗೆ ಸದಾ ಆದರ್ಶವಾದ ದಾಂಪತ್ಯ ನಿಮ್ಮದು. ನಿಮಗೆ ಸದಾ ಕಾಲವೂ ಭಗವಂತನು ನೆಮ್ಮದಿ ಮತ್ತು ಆರೋಗ್ಯ ಕೊಟ್ಟು ಕಾಪಾಡಲಿ, ನಿಮ್ಮ ಮನೆ ನಂದ ಗೋಕುಲವಾಗಲಿ.

  ReplyDelete
 6. ವಿವಾಹ ದಿನದ ಶುಭಾಶಯಗಳು ಪ್ರಕಾಶಣ್ಣ ಆಶಾಕ್ಕ :)

  ReplyDelete
 7. Happy anniversary to you Prakashanna... May you blessed with happiness and success in your life..

  ReplyDelete
 8. ಹರಸಿ..
  ಹಾರೈಸಿ ಶುಭ ಕೋರಿದ ಎಲ್ಲ ಹೃದಯ ಮನಸ್ಸುಗಳಿಗೆ..
  ನಮ್ಮಿಬ್ಬರ ಪ್ರೀತಿಯ ವಂದನೆಗಳು..

  ReplyDelete