Monday, May 14, 2012


ಆಶಾ ದೇವಿ ಹಾಗು ವಿಷ್ಣು ಜನುಮದಿನ ಶುಭಾಶಯಗಳು (.ತಡವಾಗಿ)ಗಣೇಶ : ಎಲವೋ ಶ್ರೀಕಾಂತ ...ನಿನ್ನೆ ನಿಮ್ಮ ಕುಟುಂಬ ಇಬ್ಬರದು ಜನ್ಮ ದಿನವಾಗಿತ್ತು..ನಿನ್ನ ಕಡೆಯಿಂದ  
            ಯಾವ ಮಿನ್ಚಂಚೆ ಕೂಡ  ಬರಲಿಲ್ಲ

ಶ್ರೀ: ಹೌದು ಭಗವಂತ...ನಿನ್ನೆ ನಾನು ಕ್ಷೀರ ಸಾಗರಕ್ಕೆ ಹೋಗಿದ್ದೆ..ಹಾಗಾಗಿ ಕಳಿಸಲು ಆಗಲಿಲ್ಲ..

ಗಣೇಶ : ಏನು?!...ಕ್ಷೀರ ಸಾಗರವೇ.? ಅಲ್ಲಿ ನಾರಾಯಣ ಮತ್ತು ಲಕ್ಷ್ಮಿ ಅಮ್ಮನವರ ಕುಟುಂಬ 
            ಕ್ಷೇಮವಾಗಿರುವರೆ?

ಶ್ರೀ: ಇಲ್ಲ..ನಾನು ಹೋಗಿದ್ದು..ಭಾರತ ಭೂಪಟದಲ್ಲಿ ಗೋವಾದಲ್ಲಿರುವ ಒಂದು ಜಲಪಾತ ಅದು..

ಗಣೇಶ: ಓಹ್ ಸರಿ ಸರಿ..ಹಾಗಾದರೆ..ನಾನೇ ಅವರಿಬ್ಬರಿಗೆ ಆಶಿರ್ವಾದಮಾಡುತ್ತೇನೆ..ಸರಿ ನಾ...

ಶ್ರೀ: ನಿಮ್ಮ ಮಾತಿಗೆ ಎದುರಾಡುವರು ಈ ಭುವನದಲ್ಲಿ ಅವರಾರಿರುವರು...ಸರಿ  ಹಾಗೆಯೇ ಮಾಡಿರಿ 

ಗಣೇಶ: ಆಶಾ ಜನುಮದಿನದ ಶುಭಾಶಯಗಳು...ಹಿಂದುಸ್ಥಾನವು ಎಂದು ಮರೆಯದ ನನ್ನ ತರಹ ಮುದ್ದಾದ 
           ಒಂದು ಆರೋಗ್ಯಪೂರ್ಣ ಪುತ್ತಳಿ ಜನ್ಮಿಸಲಿ..
          ವಿಷ್ಣುವೇ ನನ್ನನ್ನು ನೂರಾರು ಬಗೆಯಲ್ಲಿ ಚಿತ್ರಿಸಿ..ನನ್ನನ್ನು ಇನ್ನು ಸುಂದರವಾಗಿ, ಅನೇಕ ಭಂಗಿಯಲ್ಲಿ 
          ಚಿತ್ರಿಸುವ ಕಲೆ ನಿನಗೆ ಸಿದ್ಧಿಸಲಿ.
          ನಿಮ್ಮಿಬ್ಬರಿಗೂ ಜನುಮದಿನ ಶುಭಾಶಯಗಳು..ತಡವಾಗಿಯಾದರೂ ನನ್ನ ಆಶೀರ್ವಾದ ನಿಮಗೆ 
          ತಲುಪಲಿ...
    
ಇಂತಿ ನಿಮ್ಮ
ಶ್ರೀ ಗಣೇಶ 
S/O ಮಂಜುನಾಥ 
ವಿಭೂತಿ ಬೀದಿ..
ರುದ್ರಾಕ್ಷಿ ಪುರ 
ನಂದಿ ದುರ್ಗಾ, ಪಾರ್ವತಿ ಹೋಬಳಿ
ಕೈಲಾಸ ೫೬೦೦೪೦

No comments:

Post a Comment