ರಾಮ: ಪ್ರಿಯಸಖಿ, ಶಿವ ಧನುಸ್ಸನ್ನು ಮುರಿದು, ನಿನ್ನ ವರಿಸಿದಾಗ ಆದ ಸಂತೋಷ
ಹೇಳ ತೀರದು
ಹೇಳ ತೀರದು
ಸೀತೆ: ಹೌದು ಪ್ರಾಣಕಾಂತ, ನನಗು ತುಂಬಾ ಖುಷಿಯಾಯಿತು, ನಿಮ್ಮ ಜೊತೆ,
ನಿಮ್ಮ ಅನುಜರ ಜೊತೆ, ಅತ್ತೆ ಮಾವಂದಿರ ಜೊತೆ ಜೀವನ ಎಷ್ಟು ಸುಂದರ.
ರಾಮ: ನಮ್ಮ ಎರಡು ಮುತ್ತು ರತ್ನಗಳು ಎಲ್ಲಿ?
ಸೀತೆ: ಪ್ರಿಯ ಸಖ ಒಂದು ವಿಜಯಭಾರತಿ ಶಾಲೆಗೆ ಮುಂದಿನ ತರಗತಿಗೆ ಸೇರಿಕೊಳ್ಳಲು ಮಾವನ ಜೊತೆ ಹೋಗಿದೆ, ಇನ್ನೊಂದು ಸ್ನಾನ ಮಾಡಿಸಲು ಅತ್ತೆಯವರು ಕರೆದುಕೊಂಡು
ಹೋಗಿದ್ದಾರೆ
ರಾಮ: ಹೌದ, ನಮ್ಮ ರತ್ನಗಳು ಬರಲಿ, ಬಂದ ಮೇಲೆ, ಅಪ್ಪ, ಅಮ್ಮ, ನಮ್ಮ
ಕೋರವಂಗಲದ ಸದಸ್ಯರೆಲ್ಲರ ಬಳಿ ಹಾರೈಕೆಗಳನ್ನು ಪಡೆಯೋಣ....
ನೋಡು ನೋಡು ಆಗಲೇ ನನ್ನ ಲ್ಯಾಪ್- ಟಾಪ್ ನಲ್ಲಿ ಒಂದು ಮೇಲ್ ಬರ್ತಾ ಇದೆ.
ನೋಡು ನೋಡು ಆಗಲೇ ನನ್ನ ಲ್ಯಾಪ್- ಟಾಪ್ ನಲ್ಲಿ ಒಂದು ಮೇಲ್ ಬರ್ತಾ ಇದೆ.
ಸೀತೆ: ಹೌದುಸ್ವಾಮಿ, ಎಂಟು ವರ್ಷಗಳು ಹೆಂಗೆ ಕಳೆದು ಹೋದವು...
ತಿಳಿಯಲೇ ಇಲ್ಲ...ನಿಮ್ಮ ಕುಟುಂಬದ ಸದಸ್ಯಳಾಗಿರೋಕೆ ಹೆಮ್ಮೆ ಅನ್ನಿಸುತ್ತಿದೆ.
ಅಷ್ಟರಲ್ಲೇ ಬಾಗಿಲಿನ ಕರೆ ಘಂಟೆ ಕೂಗತೊಡಗಿತು!!!!!!
ಸೀತೆ ಬಾಗಿಲು ತೆರೆದಾಗ...ಸಮಸ್ತ ಕೋರವಂಗಲದ ಬಂಧು-ಭಾಂದವರು
ನೆರೆದಿದ್ದರು ವಿವಾಹ ಮಹೋತ್ಸವದ ಶುಭಾಶಯ ತಿಳಿಸೋಕೆ...
No comments:
Post a Comment