Sunday, April 24, 2011

Koravangaladalli K B C - Jnanesha

ಅಮಿತಾಬ್  ಕೆ. ಬಿ. ಸಿ. ಕಾರ್ಯಕ್ರಮದಲ್ಲಿ ಕೇಳಿರುವ ಕೆಲವು ಪ್ರಶ್ನೆಗಳು 

೧. ಏಪ್ರಿಲ್ ೨೪ ಯಾವುದಕ್ಕೆ ಹೆಸರುವಾಸಿ
     ೧   ಅಣ್ಣಾವರ ಜನುಮದಿನ ೨. ಸಚಿನ್ ಜನುಮದಿನ ೩. ವಾರದಲ್ಲಿ ಒಂದು ವಾರ ೪. ಎಂಟರ ನಂಟು (೪ ಕ್ಷ ೨ = ೮)

೨. ಅಣ್ಣಾವ್ರು ಯಾವುದಕ್ಕೆ ಹೆಸರು ವಾಸಿ
     ೧   ಕನ್ನಡ ಸಿನಿಮಾ ಅಭಿನಯ   ೨. ಗಾಯನ  ೩. ಅಭಿನಯ ಮತ್ತು ಗಾಯನ  ೪. ಅಭಿಮಾನಿ ದೇವರುಗಳು 

೩. ಈ ಕೆಳಗಿನ ಸಂಭಾಷಣೆ ಯಾವತ್ತು ನಡೆದಿದ್ದು
    ೧. ಅಣ್ಣಾವ್ರಿಗೆ ದಾದಾ ಸಾಹೇಬ್ ಫಾಲ್ಕೆ ಬಂದಾಗ ೨. ಸಚಿನ್ ಅಮೋಘ ಶತಕ ಬಾರಿಸಿ ಇಂಡಿಯಾ ಸೋತಾಗ ೩.    
        ಜ್ಞಾನೇಶ್ ಸಿ. ಎ ಮುಗಿಸಿದಾಗ ೪. ಶ್ರೀಕಾಂತನಿಗೆ ತಲೆ ಕೆಟ್ಟು ಬರೆದಾಗ 

"ಅಮಿತಾಬ್ : ಅಣ್ಣಾವ್ರೆ ನಮಸ್ಕಾರ, ಕೂಲಿ ಸಿನಿಮಾದಲ್ಲಿ ಅಭಿನಯ ಮಾಡಿ ಅಂತ ನಾನು ಕೇಳಿದ್ರು ನೀವು ಮಾಡಲಿಲ್ಲ

 ಅಣ್ಣಾವ್ರು : ಬಚ್ಚನ್ ಸಾಹೇಬ್ರೆ, ಬಚ್ಚನ್ ಸಾಹೇಬ್ರೆ, ನಮಸ್ಕಾರ...ಹೌದು ಅದು ನನ್ನ ಅಭಿಮಾನಿ ದೇವರುಗಳು ಒತ್ತಾಯ   
               ಮಾಡಲಿಲ್ಲ..

ಅಮಿತಾಬ್ : ಹೋಗ್ಲಿ ಬಿಡಿ, ನಾನು ಅಮೃತಧಾರೆ ಎನ್ನುವ ಸಿನಿಮಾ ಮಾಡಿದಾಗ ನಿಮ್ಮ ಜನ್ಮ ದಿನದಲ್ಲಿ 
                  ಪಾಲುಗೊಂಡಿದ್ದೆ..ಅಂದಹಾಗೆ ಇನ್ನಿಬ್ಬರು ಅತಿಥಿಗಳು ಬರಬೇಕಿತ್ತು

ಅಣ್ಣಾವ್ರು : ಹೌದು, ನೀವು ಹೇಳಿದ್ದಿರಿ, ಇಬ್ಬರನ್ನ ಕರೆದು ಕೊಂದು ಬರ್ತಿರ ಅಂತ..ಅಂದ ಹಾಗೆ ಯಾರವರು?

ಅಮಿತಾಬ್ : ಓಹ್ ಓಹ್ ಬಂದ್ರು, ಬಂದ್ರು, ಅಣ್ಣಾವ್ರೆ ಒಬ್ಬರು ಕ್ರಿಕೆಟ್ ಆಟದಲ್ಲಿ  ಈಶ, ಇನ್ನೊಬ್ಬರು ಜ್ಞಾನದಲ್ಲಿ ಈಶ..

ಅಣ್ಣಾವ್ರು : ಓಹ್ ಓಹ್ ಗೊತ್ತಾಯ್ತು, ಬನ್ನಿ ಜ್ಞಾನೇಶ್ ಅವರೇ, ನಮಸ್ಕಾರ ನಿಮ್ಮ ಪ್ರತಿಭೆಗೆ...ನಿಮ್ಮ ಹೆಸರಲ್ಲೇ ಮಹೇಶ್ವರ  
              ಇದ್ದಾನೆ...ಬನ್ನಿ ಬನ್ನಿ ಸಚಿನ್ ಅವರೇ, ನಿಮ್ಮನ್ನ ಹೊಗಳೋದು ಸೂರ್ಯನಿಗೆ ದೀಪ ಹಿಡಿದಂಗೆ 

ಅಮಿತಾಬ್ : ಅಣ್ಣಾವ್ರೆ. ಸಚಿನ್ ಬಾಯಿ, ಜ್ಞಾನೇಶ್ ಸಾಬ್,  ಕೇಕ್ ಕಟ್ ಮಾಡೋಣ, ನೀವು ಮೂವರೂ ನಿಮ್ಮ ಜನ್ಮ ದಿನವನ್ನು  
                  ನನ್ನ ಮನೆಯಲ್ಲಿ ಆಚರಿಸುತ್ತಾ ಇದ್ದೀರಾ, ತುಂಬಾ ಕುಶಿ ಆಗ್ತಾ ಇದೆ, ಜಯಾಜಿ, ಅಭಿ, ಐಶು ಕೇಕ್ ತನ್ನಿ.
                  ಕಾರ್ಯಕ್ರಮ ತುಂಬಾ ಚೆನ್ನಾಗಿದೆ...ನಮಸ್ಕಾರ ಮುಂದಿನ ವಾರ ಮತ್ತೆ ಬೇಟಿ ಆಗೋಣ."  
                 ಎಲ್ಲರೂ ಎದ್ದು ನಿಂತು, ಸಂಭ್ರಮ  ನೋಡ್ತಾ ಇದ್ದಾರೆ..

ಉತ್ತರಗಳು : 

೧. ಸಿನಿಮಾ ಜಗತ್ತಿನ ದೇವರು (ರಾಜಣ್ಣ), ಕ್ರಿಕೆಟ್ ಜಗತ್ತಿನ ದೇವರು (ಸಚಿನ್),ಜ್ಞಾನದ ಈಶ (ಜ್ನಾನೆಶ) ಹುಟ್ಟು ಹಬ್ಬ
೨. ಅಭಿಮಾನಿಗಳ ದೇವರು
೩. ಇದು ಜ್ನಾನೆಶನ ,ಅಣ್ಣಾವ್ರು , ಸಚಿನ್,  ಹುಟ್ಟು ಹಬ್ಬಕ್ಕೆ  ಒಂದು ದಶಕದ ಕೆಳಗೆ ಕೆ. ಬಿ. ಸಿ. ಯಲ್ಲಿ ಕೇಳಿದ ಒಂದು ಪ್ರಶ್ನೆಗಳ ಗುಚ್ಛ

ಬನ್ನಿ ಎಲ್ಲರು ಜ್ನಾನೆಶನ ಹುಟ್ಟು ಹಬ್ಬಕ್ಕೆ ಶುಭಾಶಯ ಹೇಳೋಣ

No comments:

Post a Comment