ಹೀಗೆ ಸ್ವರ್ಗ ಲೋಕದಲ್ಲಿ ರಂಗಸ್ವಾಮಿ ದಂಪತಿಗಳು ವಿಹಾರ ಮಾಡುತ್ತಿದ್ದಾಗ ನಡೆದ ಒಂದು ಸಂಭಾಷಣೆ
ರಂಗಸ್ವಾಮಿ : ಎನ್ರೆ, ಭೂಲೋಕದಲ್ಲಿ ನಮ್ಮ ಮಕ್ಕಳು, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಎಲ್ಲರು ಕ್ಷೇಮವಾಗಿದ್ದರೆ.  ನನಗೆ ಬಹಳ ಸಂತೋಷ ಆಗ್ತಾ ಇದೆ.  ನಾವು ಪಟ್ಟ ಕಷ್ಟ, ನಮ್ಮ ಮುಂದಿನ ಪೀಳಿಗೆಗೆ ಬಾರದಿರಲಿ ಅಂತ ಅಶಿರ್ವದಿಸುತ್ತೇನೆ
ನರಸು : ಹೌದು ರೀ, ನನಗು ತುಂಬಾ ಖುಷಿ ಆಗುತ್ತಿದೆ, ನಮ್ಮ ಮಕ್ಕಳ, ಮೊಮ್ಮಕ್ಕಳ, ಏಳಿಗೆ, ಯಶಸ್ಸು, ನನಗೆ ಬಹಳ ಸಂತಸ ತಂದಿದೆ.  ಎಲ್ಲರು ಅವರವರ ಜೀವನದಲ್ಲಿ ಸುಖ ಸಮೃದ್ದಿ ಕಂಡಿದ್ದಾರೆ.  
ರಂಗಸ್ವಾಮಿ : ಇಂದ್ರ ಹೇಳಿದ, ಅಪ್ಪು, ಮಂಜಣ್ಣ, ಕೃಷ್ಣ, ನಾಗರಾಜ, ಕುಮಾರ, ಗೌರಿ, ನಾಗಲಕ್ಷ್ಮಿ (ಬಯಲಹಳ್ಳಿ) ಎಲ್ಲರಿಗು ಸ್ವಲ್ಪ ಅರೋಗ್ಯದಲ್ಲಿ ತೊಂದರೆ ಇತ್ತು ಅಂತ, ಈಗ ಹೆಂಗಿದ್ದಾರೋ ತಿಳಿಯಬೇಕು.  
ನರಸು : ಏನೋ ಯೋಚನೆ ಇಲ್ಲ, ನಮ್ಮ ಆಶೀರ್ವಾದ, ನಮ್ಮ ಹಾರೈಕೆ ಅವರನ್ನ ವಜ್ರ ಕವಚದಂತೆ ಕಾಪಾಡುತ್ತೆ.  ಇಂದು ಯುಗಾದಿ ಹಬ್ಬ ಅಲ್ವ, ಬೇವು ಬೆಲ್ಲ ತಿಂದು ದೇಹವು ವಜ್ರವಾಗುತ್ತದೆ. ಎಲ್ಲರು ಯುಗಾದಿ ಹಬ್ಬದಲ್ಲಿ ಖುಷಿ ಪಡ್ತಾ ಇದ್ದಾರೆ.   ನಾನು ಜನವರಿ ೨೯ಕ್ಕೆ ಹೋಗಿದ್ದಾಗ, ಎಲ್ಲ ಮಕ್ಕಳು, ಮೊಮ್ಮಕ್ಕಳು, ಸೊಸೆಯರನ್ನ, ಮರಿಮೊಮ್ಮಕ್ಕಳನ್ನ ನೋಡಿದೆ, ಖುಷಿ ಆಯಿತು.  ಎಲ್ಲರು ಎಷ್ಟು ಒಗ್ಗಟ್ಟಾಗಿ, ಬೆರೆಯುತ್ತಾ ಕೆಲಸ ಮಾಡುತ್ತಾರೆ, ನೋಡಿದರೆ ಮನಸಿಗೆ ಬಹಳ ಮುದ ಕೊಡುತ್ತೆ.
ರಂಗಸ್ವಾಮಿ : ಹಾ ಹೌದು, ಕಶ್ಯಪ ಮುನಿಗಳು ಹೇಳ್ತಾ ಇದ್ದರು ಇದರ ಬಗ್ಗೆ.  ನನ್ನ ಕುಟುಂಬ ಸಂತೋಷದಿಂದ, ಅರೋಗ್ಯದಿಂದ ಇರಲಿ.  ನಾನು ಜೂನ್-ಜುಲೈನಲ್ಲಿ ಹೋಗಿ ನೋಡಿ ಬರುತ್ತೇನೆ.  
ನರಸು : ಇಲ್ಲ, ಅಷ್ಟು ದೂರ ಕಾಯಬೇಕಿಲ್ಲ, ಮೇ ತಿಂಗಳಲ್ಲಿ, ನಮ್ಮ ಮೊಮ್ಮಕ್ಕಳು, ನಿಮಗೆ ಮಾಡಿದಂತೆ, ಜನ್ಮ ಶತಾಬ್ಧಿ ಆಚರಿಸುತ್ತಾರೆ.  ಅದರ ಬಗ್ಗೆ ಮಾತಾಡಿಕೊಳ್ತಾ ಇದ್ದರು, ಅದು ನನಗೆ ಕಿವಿಗೆ ಬಿತ್ತು. 
ಏನೇ ಅಗಲಿ, ನಮ್ಮ ಕುಟುಂಬದ ಹೆಸರು ಉಳಿಸೋಕೆ ಚಿನ್ನದಂಥ ಮಕ್ಕಳು, ಮೊಮ್ಮಕ್ಕಳು, ಸೊಸೆಯಂದಿರು, ಅಳಿಯಂದಿರು  ಇದ್ದಾರೆ.  
ರಂಗಸ್ವಾಮಿ : ಹೌದು ಕಣ್ರೆ, ತುಂಬಾ ಅದೃಷ್ಟಶಾಲಿಗಳು ನಾವಿಬ್ಬರು.   ಹೊಸ ವರುಷ, ಹೊಸ ಹರುಷ, ತರಲಿ ಅಂತ ಹೇಳುತ್ತಾ, ನಮ್ಮ ಕುಟುಂಬಕ್ಕೆ ಯುಗಾದಿ ಹಬ್ಬದ ಶುಭ ಹಾರೈಕೆ ಹೇಳೋಣ.
ಅಜ್ಜ-ಅಜ್ಜಿಯ ಈ ನುಡಿಮುತ್ತುಗಳು ಬಂದ ಮೇಲೆ, ನಮ್ಮ ಯುಗಾದಿಯಾ ಹಬ್ಬ ಸಂತಸದಾಯಕವಾಗಿರುತ್ತೆ..
ಸಮಸ್ತ ಕೋರವಂಗಲ ಕುಟುಂಬಕ್ಕೆ ಯುಗಾದಿಯ ಶುಭಾಶಯಗಳು.
No comments:
Post a Comment