ವೆನಿಲಾ: ಬಾಳೆ ಗಿಡವೇ, ಇವತ್ತು ನನ್ನ ಬಹು ಮುಖ್ಯ ಸಂತೋಷದ ದಿನ..
ಬಾಳೆ: ಏನ್ ಸಮಾಚಾರ ವೆನಿಲಾ, ಏನು ಅಷ್ಟು ಖುಷಿ
ವೆನಿಲಾ: ಕಳಸಾಪುರಕ್ಕೆ ನನ್ನನ್ನು ಪರಿಚಯಿಸಿದ ನನ್ನ ಜನ್ಮಧಾತನ ಹುಟ್ಟು ಹಬ್ಬ
ಬಾಳೆ: ಹೌದಾ!!!!!! ಬಹಳ ಒಳ್ಳೆಯ ಸಮಾಚಾರ...
ವೆನಿಲಾ: ನನ್ನ ಯಜಮಾನರು ನನ್ನನ್ನು ನೋಡಲು ಬಂದಾಗ ಹೇಗೆ ಸ್ವಾಗತ ಮಾಡೋದು?
ಬಾಳೆ: ಬಹಳ ಸುಲಭ, ನೀನು ಸುವಾಸನೆಗೆ ಹೆಸರು ಅಲ್ವ, ಅವರು ಬರುವ ಹಾದಿಯೆಲ್ಲ ಗಮ ಗಮ ಪರಿಮಳ ಬರುವ ಹಾಗೆ ಮಾಡು, ನಾನು ರಸಬರಿತ ಹಣ್ಣುಗಳನ್ನು ಕೊಡುತ್ತೇನೆ, ತೆಂಗಿನ ಮರ, ಒಳ್ಳೆಯ ಎಳನೀರು ಕೊಡುತ್ತೇನೆ ಅಂತ ಹೇಳ್ತಾ ಇದೆ ನೋಡು, ಅದಕೆ ಒಳ್ಳೆ ಫಸಲು ಕೊಡುತ್ತೇನೆ ಅಂತ ಹೇಳ್ತಾ ಇದ್ದಾನೆ, ಇದರ ಜೊತೆಗೆ ಕೆರೆ ಏರಿಯ ಮೇಲೆ ನೋಡು, ಕೋರವಂಗಲದ ಕುಟುಂಬ ಸದಸ್ಯರೆಲ್ಲ ಒಳ್ಳೆಯ ಶುಭಾಶಯಗಳನ್ನು ಕೋರುತ್ತ ನಿಂತಿದ್ದಾರೆ..ಇದೆಲ್ಲವೇ ಸುಯೋಗ..
ವೆನಿಲಾ: ಹೌದು, ಹೌದು, ತುಂಬಾ ಖುಷಿಯಾಗುತ್ತ ಇದೆ, ನೀವೆಲ್ಲರೂ ನನ್ನ ಜೊತೆ ಇರುವುದು...
ಸ್ವಾಮಿ ನಿಮಗೆ ಜನ್ಮ ದಿನ ಸದಾ ಖುಷಿ ಇರಲಿ, ಬರಲಿ, ತರಲಿ ಅಂತ ಕೋರುತ್ತೇವೆ
ಇಂತಿ ನಿಮ್ಮ
ವೆನಿಲಾ, ಬಾಳೆ, ತೆಂಗು, ಅದಕೆ ಹಾಗು ನೀವು ಪ್ರೀತಿಯಿಂದ ಬೆಳೆಸಿದ ನಮ್ಮ ಕುಟುಂಬದ ಎಲ್ಲರಿಂದಲೂ ಶುಭ ಹಾರೈಕೆಗಳು
krushikana kanmanigalu .
ReplyDelete