Saturday, September 8, 2018

ದೇವರು ನಕ್ಕೆ ನಗುತ್ತಾನೆ - ೪

 ದೇವರ ರುಜು ಅನ್ನುವ ಮಾತು ಕುವೆಂಪು ಅವರ ಪದ್ಯದಲ್ಲಿ ಮೂಡಿ ಬಂದಿತ್ತು.. ಹಾರುವ ಹಕ್ಕಿಗಳ ಸಾಲು.. ತೂಗಾಡುವ ಮರಗಿಡಗಳು.. ತೇಲಾಡುವ ಮೋಡಗಳು. ಹೀಗೆ ನೂರಾರು ರೂಪದಲ್ಲಿ ಕಾಣಬಹುದು.. !!!

ನಾನು ನನ್ನ ಮಗಳು ಕಾರಿನಲ್ಲಿ ದೂರದೂರಿಗೆ ಪಯಣ ಮಾಡಬೇಕಿತ್ತು . ಮೊದಲೇ ಪ್ಲಾನ್ ಮಾಡಿದ್ದರೂ.. ಕೆಲಸದ ಒತ್ತಡ.. ಮೊಬೈಲನ್ನು ಚಾರ್ಜ್ ಮಾಡಿರಲಿಲ್ಲ.. ಬಟ್ಟೆ ಬರೆಯೆಲ್ಲಾ ಪ್ಯಾಕ್ ಮಾಡಿಕೊಂಡು ಸಿದ್ಧವಾದೆವು.. ಮನೆಗೆ ಬೀಗ ಹಾಕುವ ಮೊದಲು ಒಮ್ಮೆ ಸುಮ್ಮನೆ ನನ್ನ ಲಗೇಜ್, ಕ್ಯಾಮೆರಾ ಬ್ಯಾಗ್, ಬ್ಯಾಟರಿ.. ಕನ್ನಡಕ ಹೀಗೆ ಎಲ್ಲವನ್ನು ಪರೀಕ್ಷಿಸುವ ಅಭ್ಯಾಸ.. ಕಾರಿನಲ್ಲಿ ಪೆಟ್ರೋಲ್ ಇತ್ತು.. ಹಾಗಾಗಿ ಅದನ್ನು ಪರೀಕ್ಷಿಸುವ ಅಗತ್ಯ ಬಿದ್ದಿರಲಿಲ್ಲ.. 

ಇನ್ನೇನು ಹೊರಡಬೇಕು.. ಅಚಾನಕ್ ಮೊಬೈಲ್ ಚಾರ್ಜ್ ನೆನಪಿಗೆ ಬಂತು.. ಸರಿ ಮೊಬೈಲ್ ಚಾರ್ಜರ್ USB ಕೇಬಲ್ ಮಾತ್ರ ಕಾರಿನೊಳಗೆ ಇತ್ತು adapterನ ತೆಗೆದು ಡಿಕ್ಕಿಯ ಬ್ಯಾಗಿನಲ್ಲಿಟ್ಟೆ... ನನ್ನ ಮೊಬೈಲ್ ಚಾರ್ಜ್ ಕಮ್ಮಿ ಇದ್ದರಿಂದ.. ಹೊರಟ ತಕ್ಷಣ ಚಾರ್ಜ್ ಹಾಕುವಂತೆ ಮಗಳಿಗೆ ಹೇಳಿದೆ.. 

ಒಂದು ಮೂವತ್ತು ಕಿಮಿ ಪಯಣ ಮಾಡಿದ ಮೇಲೆ.. ಅವಳು ನನ್ನ ಮೊಬೈಲ್ ಕಿತ್ತು.. ತನ್ನ ಮೊಬೈಲ್ ಸಿಕ್ಕಿಸಿದಳು.. ನಾನು.. ಒಯೆ ಚಾರ್ಜ್ ಕಮ್ಮಿ ಇದೆ.. ನಂದು ಪೂರ್ತಿ ಆಗಲಿ ಆಮೇಲೆ ನೀನು ಚಾರ್ಜ್ ಮಾಡಿಕೊ ಎಂದೇ.. ತುಸು ಗಂಭೀರ ಧ್ವನಿಯಲ್ಲಿ.. 

ಮಗಳು ನಗುತ್ತ.. "ಅಪ್ಪ ಏನೂ ನಿಮ್ಮ ತಲೆ.. ಕಾರಿನಲ್ಲಿ ಹೇಗಿದ್ದರೂ ಮೂರು ಚಾರ್ಜಿಂಗ್ ಪಾಯಿಂಟ್ ಇದೆ.. ಕೇಬಲ್ ತಂದಿದ್ದಾರೆ ಸಾಕಿತ್ತು.. ಇಬ್ಬರ ಮೊಬೈಲ್ ಚಾರ್ಜ್ ಆಗ್ತಾ ಇತ್ತು.. 

ಹೆದ್ದಾರಿಯಲ್ಲಿ ರಸ್ತೆಯ ನೋಡುತ್ತಾ ಹಾಗೆ ತಲೆ ಎತ್ತಿ ಆಗಸವ ನೋಡಿದೆ ... ಮೋಡಗಳು ಕಪ್ಪಾಗುತ್ತಿದ್ದವು.. ಬೆಳ್ಳನೆ ರವಿಯ ಕಿರಣಗಳು ಕಾರ್ಮೋಡಗಳಿಂದ ಹೊರಗೆ ಇಣುಕುತಿತ್ತು.. ಜೊತೆಯಲ್ಲಿ ದೇವರ ಹುಸಿನಗೆಯ ಜೊತೆ.. ಕಿರೀಟಧಾರಿ ದೇವರು ಹಣೆಯನ್ನು ಒಮ್ಮೆ ಬಡಿದುಕೊಂಡು "ಏನೋ ಶ್ರೀ ನಿನ್ನ ಕತೆ.. " ಎಂದಾಗ ನನ್ನ ಪೆನ್ ಡ್ರೈವಿನಲ್ಲಿ "ದೊಡ್ಡವರೆಲ್ಲ ಜಾಣರಲ್ಲ.. ಚಿಕ್ಕವರೆಲ್ಲ ಕೋಣರಲ್ಲ" ಹಾಡು ಬರುತಿತ್ತು.. ನಾನು ನಕ್ಕೆ ದೇವರು ನಕ್ಕ.. !



*****

ವಿಷ್ಣುವರ್ಧನ್ ಅವರ ಸುಪ್ರಭಾತ ಚಿತ್ರದ ಹುಚ್ಚಭಿಮಾನಿ ನಾನು.. ಚಿತ್ರದ ಮೊದಲಾರ್ಧ ಅಮೋಘವಾಗಿದೆ.. ಖಿನ್ನತೆಯಿಂದ ಬಳಲುವ ಮಂದಿಗೆ ಉತ್ತಮ ಟಾನಿಕ್ ಇದೆ ಆ ಚಿತ್ರದಲ್ಲಿ.. ಅದಿರಲಿ.. ವಿಷ್ಣು ತೊದಲುವಿಕೆಯಿಂದ ಬಳಲುವಾಗ ಅವನಕ್ಕ ಶ್ರೀವಿದ್ಯಾ ಹೇಳಿಕೊಡುವ ಔಷಧಿ.. ನಗರದಿಂದ ದೂರ ಹೋಗಿ ಒಬ್ಬನೇ ಮಾತಾಡುತ್ತಾ ಇರು.. ಸಲೀಸಾಗಿ ನಿನ್ನ ತೊದಲುವಿಕೆ ಮಾಯವಾಗುತ್ತದೆ.. ಅದು ವಿಷ್ಣುವಿಗೆ ಫಲಕಾರಿಯಾಗುತ್ತದೆ.. ಚಿತ್ರದಲ್ಲಿ ಮಾನು ನೀವೇಕೆ ಈ ಬೆಟ್ಟದಲ್ಲಿ ಬಂದು ನೆಲೆಯಾಗಿದ್ದೀರಾ ಎಂದಾಗ.. ವಿಷ್ಣು ತಮ್ಮ ಸಮಸ್ಯೆ ಹೇಳಿ.. ಈಗ ಬೆಟ್ಟ ಗುಡ್ಡಗಳು, ಪೆಟ್ರೋಲ್ ಬಂಕ್, ಬೈಕ್ ಎಲ್ಲದರ ಜೊತೆ ಮಾತಾಡುತ್ತೇನೆ ಎನ್ನುತ್ತಾರೆ.. ನನ್ನದು ಅದೇ ರೀತಿಯ ಸ್ವಭಾವ.. ನನ್ನ ಮೊಬೈಲು, ಕಾರು, ಬೈಕು.. ಯಾವುದೇ ಇರಲಿ ಅದರ ಜೊತೆಯಲ್ಲಿ ಒಂದು ಬಾಂಧವ್ಯ ಬೆಳೆಸಿಕೊಂಡಿರುತ್ತೇನೆ..

ಒಮ್ಮೆ ಒಂದು ಮುಖ್ಯ ಕೆಲಸಕ್ಕಾಗಿ ಹೊರಟಿದ್ದೆ.. ಅರ್ಧ ದಾರಿಯಲ್ಲಿ ತಿಂಡಿಗೆ ನಿಲ್ಲಿಸಿದಾಗ.. ಒಂದು ವಿಚಿತ್ರ ಯೋಚನೆ ಬಂತು ..ತಿಂಡಿ ತಿಂದು.. ಕಾರಿನಲ್ಲಿ ಹೊರಟಾಗ.. ಯಾವ ಹಾಡು ಬರುತ್ತದೆಯೋ ಅದು ನನ್ನ ಕೆಲಸದ ಪರಿಣಾಮ ಹೇಳುತ್ತದೆ ಎನ್ನಿಸಿತು.. ಸರಿ ಆರಾಮಾಗಿ ತಿಂಡಿ ತಿಂದು.. ಕಾರು ಸ್ಟಾರ್ಟ್ ಮಾಡಿದೆ.. ದಿಲ್ ಚಾಹ್ತಾ ಹೈ ಚಿತ್ರದಡಿ "ತನ್ಹಾಹಾಯಿ..." ಹಾಡು ಬಂತು..


ಒಮ್ಮೆ ನಕ್ಕು ಸುಮ್ಮನಾದೆ.. ಅದನ್ನು ಮರೆತು ಹೋದೆ ಕೂಡ.. ಸ್ಥಳ ತಲುಪಿ ನನ್ನ ಕೆಲಸದ ಕಡೆ ಗಮನ ಕೊಟ್ಟೆ.. ವಾಪಸ್ ಬರುವಾಗ ದಿನದಲ್ಲಿ ನೆಡೆದ ಘಟನೆ ಮೆಲುಕು ಹಾಕಿದಾಗ.. ನನ್ನ ಕಾರು ಬೆಳಿಗ್ಗೆಯೇ ನನ್ನ ಕೆಲಸದ  ಫಲಿತಾಂಶವನ್ನು ಕೊಟ್ಟಿತ್ತು.. ಕಾರಿನ ಡ್ಯಾಶ್ ಬೋರ್ಡಿನಲ್ಲಿದ್ದ ಗಣಪ ವಿಗ್ರಹ ನೋಡಿದೆ.. ಸೊಂಡಿಲೆತ್ತಿ ನಕ್ಕ ಗಣಪ.. ಇರಲಿ ಬಿಡು ಶ್ರೀ.. ಇದೊಂದು ಅನುಭವ ಅಷ್ಟೇ.. ಎಂದನು.. ಆಗಸ ನೋಡಿದೆ ದೇವರು ನಸು ನಗುತ್ತಿದ್ದ..


ಮತ್ತಷ್ಟು ದೇವರ  ಜೊತೆಯಲ್ಲಿ ನಗುತ್ತಾ ಅದರ  ಕಥೆ ಹೇಳಲು ಬರುವೆ ಮತ್ತೊಮ್ಮೆ :-)

12 comments:

  1. Nice one Sri. Waiting for next one...

    ReplyDelete
    Replies
    1. Thank you Satisha.. yaavaga devaru naguttaano.. avaaga innondu baraha barutte .. alliya tanaka break :-)

      Delete
  2. Sometimes the coincidences of life are more miraculous than the facts. Good one sri :)

    ReplyDelete
    Replies
    1. Thank you CB..yeah you are right..miracles do happen..thank you

      Delete
  3. ಸುಂದರ ಸರಳವಾದ ಬರವಣಿಗೆ ಶ್ರೀ.... ಒಂದು ಪಯಣವನ್ನುವಿಷಯವನ್ನಾಗಿ ಆರಿಸಿಕೊಂಡು ಬರೆದಿರುವ ಚಿಕ್ಕದಾದ ಚೊಕ್ಕವಾಗಿರುವ ಬರಹ ಹೀಗೆ ನಿನ್ನ ಬರಹ ಸಾಗಲಿ ಎಂದು ಆಶಿಸುವೆ

    ReplyDelete
  4. ಚೆನ್ನಾಗಿದೆ ಶ್ರೀ... ಮುಂದೆ ಸಾಗಲಿ ನಿನ್ನ ಪ್ರಯಾಣ ಬರಹದೊಂದಿಗೆ

    ReplyDelete
  5. Super ede ANNA

    ReplyDelete
  6. ಅಲೆಮಾರಿಯ‌ ಅಂತರಂಗ ಸುಲಲಿತವಾಗಿ ತೆರೆದುಕೊಂಡಿದೆ.

    ನನಗೂ ದಿನೇಶ್ ಬಾಬೂರವರ ಸುಪ್ರಭಾತ ಬಲು ಇಷ್ಟ. ಚಿತ್ರದ ಎಲ್ಲಾ ವಿಭಾಗಗಳೂ ಉತ್ತಮವಾಗಿ ಅರೆತು ಬೆರೆತ ಅಪರೂಪದ ಚಿತ್ರ.

    ನಾವೂ ಹೀಗೆ ಹಾಡುಗಳ ಮೂಲಕ ಲೆಕ್ಕಾಚಾರ ಮಾಡುವವರೇ. ಇಂದು ಬೆಳ್ಳಂಬೆಳಿಗ್ಗೆ ಕಿವಿಗೆ ಬಿದ್ದ ಹಾಡು ಪಲ ಪಲ್ ದಿಲ್ ಕೇ ಪಾಸ್ ತುಮ್ ರೆಹತೀಹೋ...
    ಬ್ಲಾಗ್ ತೆರೆದರೆ ಶ್ರೀಮಾನ್‌ರ ಈ ಬರಹ. ಹೌದಲ್ಲವೇ ವಿಜಯನಗರ ಸಾಮ್ರಾಜ್ಯಾಧಿಪತಿಗಳು ಹೃದಯಕ್ಕೆ ಬಲು ಸಮೀಪದ ಮಹಾನುಭಾವರು. ಹಾಗಾಗಿ, ಕೇಳಿದ ಹಾಡಿಗೂ ಶ್ರೀಮಾನ್‌ರ ಚೆಂದದ ಬರಹಕ್ಕೂ ತಾಳೆ ಸಿಕ್ಕಿತಲ್ಲ!

    ದಿಲ್ ಖುಷ್ ಹುವಾ...

    ReplyDelete