"ಆಕಾಶ ಬಾಗಿದೆ
ನಿನ್ನಂದ ನೋಡಲೆಂದು...
ಆನಂದ ಹೊಂದಲೆಂದು
ನೋಡಲ್ಲಿ ಮೋಹಿನಿ ಕಾಮಿನಿ ಭಾಮಿನಿ
ಆಕಾಶ ಬಾಗಿದೆ.... "
ಬ್ರಹ್ಮ ದೇವನಿಂದ ಎರವಲು ತಂದಿದ್ದ ಅಚ್ಚಿನಿಂದ ಸುಂದರ ಮುಖಾರವಿಂದವನ್ನು ಕೆತ್ತಿದ ಮೇಲೆ.. ಕೊಂಚ ವಿರಮಿಸಲು ತಂಗಾಳಿಯಲ್ಲಿ ಹಾಗೆ ನಡೆದುಕೊಂಡು ಹೋಗುತಿದ್ದ... ಮೆಲ್ಲನೆ ತಿಳಿ ಸಂಗೀತ ತೇಲಿ ಬರುತ್ತಿತ್ತು
"ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು..
ಗಂಧರ್ವ ಗಾನವಾಣಿ...
" " " " " "
ಎಂದೋ ಮೆಚ್ಚಿದೆ ನಾನು..
ನಿನ ಎಂದೋ ಮೆಚ್ಚಿದೆ ನಾನು"
"ಏನು ಮಯ ಶಿಲ್ಪಿಗಳೇ ಯಾವುದೋ ಒಂದು ಸುಂದರ ಶಿಲ್ಪ ತಯಾರಾಗುತ್ತಿದೆ.. "
"ಹೌದು ನಾರದರೆ..ಬ್ರಹ್ಮನ ಅಣತಿಯಂತೆ ಸುಂದರ ಕಲಾಕೃತಿ ಮಾಡುತಿದ್ದೆ.. ಅದೇನೋ ನೋಡಿ ಕನ್ನಡ ಚಿತ್ರಗೀತೆಗಳು ಎಷ್ಟು ಸ್ಫೂರ್ತಿ ಕೊಡುತ್ತದೆ.. ಅಲ್ಲವೇ"
"ಹೌದು ಶಿಲ್ಪಿಗಳೇ.. ಆ ಸಾಹಿತ್ಯ, ಪದಜೋಡಣೆ, ಅದಕ್ಕೆ ಕೊಡುವ ಸಂಗೀತ ಸಂಯೋಜನೆ... ನಾನು ಮತ್ತು ತುಂಬುರ ಕೂಡ ಅಷ್ಟೊಂದು ಸೊಗಸಾಗಿ ಕೊಡಲಾಗುವುದಿಲ್ಲ ಅನ್ನಿಸುತ್ತೆ.. "
"ಸರೀ ನಾರದರೆ ಶಿಲ್ಪ ಕೆತ್ತನೆ ಮುಗಿಯುತ್ತಾ ಬಂದಿದೆ.. ನಿಧಾನವಾಗಿ ಅದರ ವಾರಸುದಾರರಿಗೆ ತಲುಪಿಸಬೇಕು.. ಸರಿ ನಾ ಹೊರಡುತ್ತೇನೆ.. "
ಶುಭವಾಗಲಿ ಮಯ ಶಿಲ್ಪಿಗಳೇ... ಅರೆ ನೋಡಿ ಒಂದು ಹಾಡು ನನ್ನ ಮೊಬೈಲ್ ನಲ್ಲಿ ಕೇಳಿ ಬರುತ್ತಿದೆ...
"ಆಕಾಶದಿಂದ ಧರೆಗಿಳಿದ ರಂಬೆ
ಇವರೇ ಇವರೇ ಕರಾವಳಿಯ ಗೊಂಬೆ
ಚೆಲುವಾದ ಗೊಂಬೆ
ಚಂದನದ ಗೊಂಬೆ"
ಘಟ್ಟದ ರಸ್ತೆಯಲ್ಲಿ ಆ ಮೂರ್ತಿಯನ್ನು ಜೋಪಾನ ಮಾಡುತ್ತಾ, ಪ್ರಕೃತಿ ಸೊಬಗನ್ನು ಸವಿಯುತ್ತಾ ಅ ತಂಗಾಳಿಯಲ್ಲಿ ಹಾಗೆ ಮೈ ಮರೆತು ತನ್ನ ಪಾಡಿಗೆ ತಾನು ಹಾಡುತ್ತಾ ಹೋಗುತ್ತಾನೆ..
ಎಂಥಾ ಸೌಂದರ್ಯ ನೋಡು
ನಮ್ಮಾ ಕರುನಾಡ ಬೀಡು
ಗಂಧದ ಗೂಡಿದು"
"ಓಹ್ ಆಗಲೇ ಶ್ಯಾಮಿಲಿ ಸಭಾ ಭವನಕ್ಕೆ ಬಂದುಬಿಟ್ಟಿದ್ದೇನೆ... ಆ ಘಟ್ಟಗಳ ಇಳಿಜಾರಿನ ರಸ್ತೆಯಲ್ಲಿ ಪ್ರಕೃತಿಯ ಸುಂದರ ಮಡಿಲಲ್ಲಿ ಪಯಣಿಸಿದ್ದು ತಿಳಿಯಲೇ ಇಲ್ಲ.. ಕ್ಷಮಿಸಿ ನೀವು ತಾನೇ "ರೋಹಿತ್"....?
"ಹೌದು ನಾನೇ ...... "ರೋಹಿತ್ "
"ತುಂಬಾ ಸಂತೋಷವಾಯಿತು ನಿಮ್ಮ ಭೇಟಿ ಮಾಡಿ... ಇದೋ ಈ ಸುಂದರ ಶಿಲ್ಪ ಸಮಸ್ತ ಬ್ಲಾಗ್ ಲೋಕದ ಮುದ್ದು ಸಹೋದರಿ "ಸುಲತ"... ಇನ್ನು ಮುಂದೇ ನಿಮ್ಮ ಹೃದಯದ ರಾಣಿ.... !
"ಇನ್ನು ಮುಂದೇ ನಿಮ್ಮ ಹೃದಯದ ರಾಣಿ.... !" ಇನ್ನು ಮುಂದೆ ನನ್ನ ಹೃದಯದ ರಾಣಿ......! ಹೃದಯದ ರಾಣಿ ಈ ಮಾತುಗಳು ಕೇಳುತ್ತಲೇ ರೋಹಿತ್ ಮನಸ್ಸು ಆಕಾಶದಲ್ಲಿ ಹಾರಾಡಲು ಶುರುವಾಯಿತು.. ಅವರಿಗರಿವಿಲ್ಲದೆ ಹಾಡಾಯಿತು
"ನಾಚಿಕೆ ಇನ್ನೇಕೆ ಅಂಜಿಕೆ ಇನ್ನೇಕೆ
ನಾನಿಲ್ಲಿ ಇರುವಾಗ"
ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲೂ |
ಮೊಬೈಲ್ ರಿಂಗಾಗ ತೊಡಗಿತು
"ಏನೀ ಸ್ನೇಹಾ ಸಂಬಂಧಾ..
ಎಲ್ಲಿಯದೋ ಈ ಅನುಬಂಧ"
"ನಗೆ ಎಂಬ ಬಳ್ಳಿ ನಾಚುತ್ತಾ ನಿಂತಾಗ
ಉಗಮವಾಗಿದ್ದು ನಗೆಯ ಮಾಲಿಕೆ
ಪಾರ್ವತಿ ಬೆವರಿನಿಂದ ಉಗಮವಾದ ಗಣಪನ ಹಾಗೆ
ಸುಂದರ ಬಳ್ಳಿಯಿಂದ ಮೂಡಿದ್ದು
"ಸುಲತ" ಎಂಬ ನಗುವಿನ ಬಳ್ಳಿ
ಬ್ಲಾಗ್ ಲೋಕದ ಈ ಸುಂದರ ಬಳ್ಳಿಗೆ
ಮರಳುಗಾಡಿನ (ರೋ)ಹಿತಕರ ಆಸರೆಯಲ್ಲಿ
ಸಾಗಲಿ ನಿಮ್ಮ ಸುಂದರ ದಾಂಪತ್ಯ..
ಚಿರನೂತನವಾಗಿರಲಿ ನಿಮ್ಮಿಬ್ಬರ ಅನುಬಂಧ"
"ಹ ಹ ಹ... ಎಸ್ ಎಸ್ ಪುಟ್ಟಿ ಈ ಹಾಡು ನಿಮಗಾಗಿ.. ನಿಮ್ಮ ವಿವಾಹ ಮಹೋತ್ಸವಕ್ಕಾಗಿ"
"ನೂರೊಂದು ನೆನಪು
ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
ಸಿಂಧೂರ ಬಿಂದು
ನಗಲಮ್ಮ ಎಂದು
ಎಂದೆಂದೂ ಇರಲಮ್ಮ ಈ ದಿವ್ಯ ಬಂಧ"
"ನೀವು ಹೇಳಿದ್ದು ಮಾಡಿದ್ದೇನೆ... ಇವರ ವಿವಾಹ ಕಾರ್ಯಕ್ರಮ ಪೂರ್ತಿ ನೋಡಿ ನಂತರ ನಾನು ಹೊರಡುತ್ತೇನೆ ಆಗಬಹುದೇ..."
ಓಕೆ ಆಗಬಹುದು.. ಬ್ಲಾಗ್ ಲೋಕದ ಎಲ್ಲಾ ಸದಸ್ಯರ ಪರವಾಗಿ ನೀವು ಅಲ್ಲಿರುವುದು ನಮಗೆ ಖುಷಿ ಕೊಟ್ಟಿದೆ..
ಚಿತ್ರ ಕೃಪೆ - ನಿಮ್ಮೊಳಗೊಬ್ಬ ಬಾಲೂ |
ಉಡುಪಿ ಕೃಷ್ಣನ ಅನುಗ್ರಹ ಸದಾ ಈ ದಂಪತಿಗಳ ಮೇಲೆ ಇರಲಿ ಎಂದು ಹಾರೈಸಿರಿ ಮಯ ಶಿಲ್ಪಿಗಳೇ.. ಹಾಗೆಯೇ ಮರಳುಗಾಡಿನ ರಾಜಕುಮಾರನಿಗೆ ಈ ಹಾಡು ಕೇಳಿಸಿ ಮತ್ತು ಯಾವಾಗಲೂ ಹಾಡುತ್ತಿರುವಂತೆ ಹೇಳಿ"
"..... ಸುಲತ... ನಿನ್ನ ನಗುವು ಹೂವಂತೆ... ನಿನ್ನ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ..
ರೋಹಿತ್ ನಿಮ್ಮ ನಗುವು ಹೂವಂತೆ.. ನಿಮ್ಮ ನುಡಿಯು ಹಾಡಂತೆ
ಬದುಕಿನ ಅನುಕ್ಷಣ ನಮಗೆ ಸಂತೋಷವೇ... "
ಚಿತ್ರ ಕೃಪೆ - ಎಸ್ ಎಸ್ |
Wish you happy married life to RSS!
Sundara aatmeeya haaraike hotta lekhana.
ReplyDeleteChennagi kavana bhavana poniddeeri.
Sulatha ninna vaivahika jeevanakke sakalavoo subhavaagalendu haaraisutteve
chanda chanda..... navadampatigalige shubha haaraikegaLu.... :)
ReplyDeleteನಗುತ್ತಾ ಅಣ್ಣಾ ಎನ್ನುವ , ನಮ್ಮ ಕುಟುಂಬಗಳ ಜೊತೆ ಬೆರೆತು ನಮ್ಮ ಮನೆಯ ಹುಡುಗಿ ಎನ್ನುವ ಭಾವನೆ ಮೂಡಿಸಿದ ಪ್ರೀತಿಯ ತಂಗಿ. ನಮ್ಮೆಲ್ಲರ ಪರವಾಗಿ ಸುಂದರ ಕಲ್ಪನೆಗಳ ಪದಗಳ ಚಿತ್ತಾರ ಮೂಡಿಸಿದ ನಿಮ್ಮ ಉಡುಗೊರೆ ಸದಾ ನೆನಪಿನಲ್ಲಿ ಉಳಿಯುತ್ತದೆ . ಪ್ರೀತಿಯ ತಂಗಿ ಸುಲತಗೆ ನನ್ನ ಹೃದಯ ಪೂರ್ವಕ ಶುಭ ಹಾರೈಕೆಗಳು
ReplyDeleteಅಪರೂಪದ ಚಲುವೆ ನಮ್ಮ ಸುಲತಾ. ಇಲ್ಲಿ ನೀವು ಬಳಸಿರುವ ಎಲ್ಲ ಗೀತೆಗಳಿಗೂ justify ಮಾಡಬಲ್ಲ ವ್ಯಕ್ತಿತ್ವ ಆಕೆಯದು.
ReplyDeleteಕಾರಣಾಂತರಗಳಿಂದ 'ಕೈ' ಪಕ್ಷವಾಗಿರುವ ನಾನು ಯಥಾ ಪ್ರಕಾರ ಮದುವೆಗೆ ಕೈ ಕೊಟ್ಟೆ. ಕ್ಷಮೆ ಇರಲಿ.
ಸುಲತಾ ಮತ್ತು ರೋಹಿತರ ಬಾಳಿನಲ್ಲಿ ನಿಜವಾದ ನವರಾತ್ರಿ ಇಂದಿನಿಂದ ಆರಂಭವಾಗಲಿ. ಅವರ ಬಾಳ ಪಯಣ ಸುಲಲಿತವಾಗಿರಲಿ.
ಸುಂದರ ಕ್ಷಣಗಳಲ್ಲಿ
ReplyDeleteಬಂಧ ಬೆಸೆಯಲಿ ...
ಮುಡಿಮಲ್ಲಿಗೆಯು ಹಣೆ ಕುಂಕುಮವು
ನಗುತಲಿರಲಿ ..
ಲಜ್ಜೆಯಲಿ ಮುಖ ಬಾಗಿರಲು
ಹೊಳೆವ ಮೂಗುತಿಯದು
ಕೈ ಬಳೆಗಳಿಗೆ ಸ್ಪರ್ಧೆಯಾಗಲಿ..
ತಾಳಿಕಾಲುಂಗುರಗಳ ತೊಡಿಸುವಲ್ಲಿ
ವೇದಘೋಷಗಳು ಮೊಳಗಲಿ..
ಸಪ್ತಪದಿಯಲ್ಲಿ ...
Happy Married Life Dear...
So gud article....
ReplyDeletepreetiya tangige ellara shubha-haraike..........
jeevana hasanaagali.......
ಸುಲತ ಮದುವೆ ಫೋಟೊಗ್ರಫಿ ಮುಗಿಸಿ ಫೋಟೊಗಳನ್ನು ನೋಡುತ್ತಿದ್ದೇನೆ. ಇಬ್ಬರದೂ ಫೋಟೊಜನಿಕ್ ಮತ್ತು ನ್ಯಾಚುರಲ್ ಎಕ್ಸ್ ಪ್ರೆಷನ್ ಫೇಸ್. ಅವರ ಮದುವೆ ಫೋಟೊಗ್ರಫಿಯನ್ನು enjoy ಮಾಡಿದ್ದೇನೆ..ನನ್ನ ಕಡೆಯಿಂದಲೂ ಅವರಿಬ್ಬರಿಗೂ ಮದುವೆಯ ಶುಭಾಶಯಗಳು.
ReplyDeleteeternal smily sulatha akka :) sorry for d out date ...wishing you a very happy married life akkayya ..
ReplyDeleteAnd shrikantanna ,as usual a very nice innovative gift ...like like
ತುಂಬ ಚೆನ್ನಾಗಿದೆ ಗಿಫ್ಟ್. ಸುಪರ್ಬ್ ಆರ್ಟಿಕಲ್ " ಕ್ಯಾಮೆರಾದ ಬೆಳಕು ಸದಾ ಬೀರುತ್ತಲಿರಲಿ"... ಓದಿ ನಗು ಬಂತು. ನಿಮ್ಮೆಲ್ಲರ ವಿಶ್ವಾಸಕ್ಕೆ ನಾನು ಚಿರಋಣಿ.
ReplyDeleteಒಬ್ಬರೂ ಕೂಡ ಬಂದಿಲ್ಲ ಅನ್ನೋ ಬೇಜಾರು ಇನ್ನು ಇದೆ :( ಕಾಲ್ ಮಾಡಿದ್ದೆ ಮದುವೆಗೆ ಬಂದಿಲ್ಲ ಬಯ್ಯೋಣ ಅಂತ :P
ಈ ಅಂಗಳಕ್ಕೆ ಬಂದು ನನ್ನ ಪ್ರೀತಿಯ ಸಹೋದರಿಗೆ ಹರಸಿ ಶುಭಾಶಯಗಳನ್ನು ಸಲ್ಲಿಸಿದ ಎಲ್ಲರಿಗೂ ಧನ್ಯವಾದಗಳು
ReplyDelete