"ಪಾಯಿಂಟ್ ಪಂಚರಂಗಿಗೆ ಕಾಯ್ತಾ ಇರ್ತೀನಿ ಬೇಗ ಹಾಕಿ ಬಿಡಿ"
ಯಾಕೋ ದನಿ ಬಂದೆಡೆ ತಿರುಗಿದೆ... ಗಿಜಿ ಗಿಜಿ ಗುಜು ಗುಜು.. ಶಬ್ದಮಾಲಿನ್ಯ ವಿಪರೀತವಾಗಿತ್ತು.. ಎಲ್ಲರಲ್ಲಿಯೂ ಒಂದೇ ಪ್ರಶ್ನೆ..
"ಯಾಕಿಷ್ಟು ಸದ್ದು.. ಏನಿದು ಸದ್ದು?"
ಉತ್ತರ ಹೊಳೆಯುತ್ತಿಲ್ಲ ಯಾರಿಗೂ.. ಕಡೆಗೆ ಮಂಜುನಾಥ ಕಾಪಾಡಪ್ಪ ಎಂದು ಮೊರೆ ಹೋದರು
"ದೇವರು ಪ್ರತ್ಯಕ್ಷನಾಗಿ.. ಹೋಗ್ರಯ್ಯ.. ನನ್ನ ತಲೆ ನೋವು ನನಗೆ.. ಇದರ ಮಧ್ಯೆ ನಿಮ್ಮದು ಬೇರೆ"
"ಏನಾಯ್ತು ಸ್ವಾಮೀ ಹೇಳಿ"
"ಸತ್ಯಲೋಕದಲ್ಲಿ ಸರಸ್ವತಿ ಇಲ್ಲ.. ವೈಕುಂಠದಲ್ಲಿ ಲಕ್ಷ್ಮಿ ಇಲ್ಲ... ವಿಷ್ಣು ಕಾಲು ಚಾಚಿ ನಿದ್ದೆ ಮಾಡಿಬಿಟ್ಟಿದ್ದಾನೆ.. ಬ್ರಹ್ಮನ ನಾಲ್ಕೂ ತಲೆಗೆ ನೋವು ಬಂದು ಔಷದಿಗಾಗಿ ಧನ್ವಂತ್ರಿ ಹತ್ತಿರ ಹೋಗಿದ್ದಾನೆ.. ನನಗೆ ಅವರಿಬ್ಬರನ್ನು ಹುಡುಕುವ ಕೆಲಸ ಕೊಟ್ಟಿದ್ದಾನೆ... ಅದಕ್ಕೆ ನಾನು ಈ ನಾಲ್ವರಿಗೆ ನನ್ನ ಅಂಶವನ್ನು ತುಂಬಿ ನಾಲ್ವರು ಈಶ್ವರರನ್ನು ಕಳಿಸಿದ್ದೇನೆ!"
ಆ ಮೂವರು ಈಶ್ವರ ಸ್ವರೂಪಿಗಳು ನಿಧಾನವಾಗಿ ಹುಡುಕುತ್ತಾ ಬಂದರು.. ಎಲ್ಲಿಗೆ ಜಯಚಾಮರಾಜ ರಸ್ತೆಯ ಕನ್ನಡ ಭವನಕ್ಕೆ.. ಅರೆ ನಮ್ಮ ನಯನ ಇಲ್ಲೇ ಇದೆ.. ನೆಡಿರೋ ಹುಡುಕೋಣ ಅಂದು ಒಳಗೆ ಹೊಕ್ಕರು..
ನೋಡಿದರೆ ಅಲ್ಲಿ ಸರಸ್ವತಿಯು ತನ್ನ ಪುತ್ರ ರತ್ನಗಳ ಪುಸ್ತಕದೊಳಗೆ ಕೂತಿದ್ದಾರೆ.. ಲಕ್ಷ್ಮಿಯು ಸರಸ್ವತಿ ಪುತ್ರನ ಕೈಯೊಳಗೆ ಅಡಗಿ ಕೂತಿದ್ದಳು..
ಯಾಕೋ ದನಿ ಬಂದೆಡೆ ತಿರುಗಿದೆ... ಗಿಜಿ ಗಿಜಿ ಗುಜು ಗುಜು.. ಶಬ್ದಮಾಲಿನ್ಯ ವಿಪರೀತವಾಗಿತ್ತು.. ಎಲ್ಲರಲ್ಲಿಯೂ ಒಂದೇ ಪ್ರಶ್ನೆ..
"ಯಾಕಿಷ್ಟು ಸದ್ದು.. ಏನಿದು ಸದ್ದು?"
ಉತ್ತರ ಹೊಳೆಯುತ್ತಿಲ್ಲ ಯಾರಿಗೂ.. ಕಡೆಗೆ ಮಂಜುನಾಥ ಕಾಪಾಡಪ್ಪ ಎಂದು ಮೊರೆ ಹೋದರು
"ದೇವರು ಪ್ರತ್ಯಕ್ಷನಾಗಿ.. ಹೋಗ್ರಯ್ಯ.. ನನ್ನ ತಲೆ ನೋವು ನನಗೆ.. ಇದರ ಮಧ್ಯೆ ನಿಮ್ಮದು ಬೇರೆ"
"ಏನಾಯ್ತು ಸ್ವಾಮೀ ಹೇಳಿ"
"ಸತ್ಯಲೋಕದಲ್ಲಿ ಸರಸ್ವತಿ ಇಲ್ಲ.. ವೈಕುಂಠದಲ್ಲಿ ಲಕ್ಷ್ಮಿ ಇಲ್ಲ... ವಿಷ್ಣು ಕಾಲು ಚಾಚಿ ನಿದ್ದೆ ಮಾಡಿಬಿಟ್ಟಿದ್ದಾನೆ.. ಬ್ರಹ್ಮನ ನಾಲ್ಕೂ ತಲೆಗೆ ನೋವು ಬಂದು ಔಷದಿಗಾಗಿ ಧನ್ವಂತ್ರಿ ಹತ್ತಿರ ಹೋಗಿದ್ದಾನೆ.. ನನಗೆ ಅವರಿಬ್ಬರನ್ನು ಹುಡುಕುವ ಕೆಲಸ ಕೊಟ್ಟಿದ್ದಾನೆ... ಅದಕ್ಕೆ ನಾನು ಈ ನಾಲ್ವರಿಗೆ ನನ್ನ ಅಂಶವನ್ನು ತುಂಬಿ ನಾಲ್ವರು ಈಶ್ವರರನ್ನು ಕಳಿಸಿದ್ದೇನೆ!"
ನಾಲ್ವರು ಈಶ್ವರರು |
ಆ ಮೂವರು ಈಶ್ವರ ಸ್ವರೂಪಿಗಳು ನಿಧಾನವಾಗಿ ಹುಡುಕುತ್ತಾ ಬಂದರು.. ಎಲ್ಲಿಗೆ ಜಯಚಾಮರಾಜ ರಸ್ತೆಯ ಕನ್ನಡ ಭವನಕ್ಕೆ.. ಅರೆ ನಮ್ಮ ನಯನ ಇಲ್ಲೇ ಇದೆ.. ನೆಡಿರೋ ಹುಡುಕೋಣ ಅಂದು ಒಳಗೆ ಹೊಕ್ಕರು..
ಸರಸ್ವತಿ ಮತ್ತು ಲಕ್ಷ್ಮಿಯ ಸಮಾಗಮ |
ನೋಡಿದರೆ ಅಲ್ಲಿ ಸರಸ್ವತಿಯು ತನ್ನ ಪುತ್ರ ರತ್ನಗಳ ಪುಸ್ತಕದೊಳಗೆ ಕೂತಿದ್ದಾರೆ.. ಲಕ್ಷ್ಮಿಯು ಸರಸ್ವತಿ ಪುತ್ರನ ಕೈಯೊಳಗೆ ಅಡಗಿ ಕೂತಿದ್ದಳು..
ಇಲ್ಲಿಂದ ನೋಡಿ ಆರಂಭವಾಯಿತು ಅವರಿಬ್ಬರ ಹರಿಕಥೆ!
*********
ಶಾಲಿವಾಹನ ಶಕೆಯಲ್ಲಿ ಒಮ್ಮೆ ಸರಸ್ವತಿ, ಲಕ್ಷ್ಮಿ ಇಬ್ಬರು ಅಲೆದಾಡುತ್ತಾ ಬರುವಾಗ
"ಅರೆ ಅಲ್ಲಿ ನೋಡು.. ಅಲ್ಲಿ ನೋಡು ಧಾರವಾಡದಿಂದ ಬೇಂದ್ರೆ ಅಜ್ಜ ಶಿಶುನಾಳದಿಂದ ಶರೀಫ ಅಜ್ಜ ನೆಡೆದಾಡುತ್ತ ಬರುವಂತೆ, ನಮ್ಮ ಜೊತೆಯಲ್ಲಿ ಮಾತಾಡುವಂತೆ, ಅವರ ಮಾತುಗಳನ್ನು ಅನುಭವಿಸುವಂತೆ ಮಾಡುವ ಬ್ಲಾಗ್ ಲೋಕದ ಕಾಕ ಸುನಾಥ ಕಾಕ ಬರುತ್ತಿದ್ದಾರೆ.. ಆಹಾ ಎಂಥಹ ಭಾಗ್ಯ ನಮ್ಮದು ಇಂತಹ ಮೇರು ವ್ಯಕ್ತಿತ್ವವನ್ನು ಕಂಡ ನಾವೇ ಧನ್ಯರು.. ಬ್ಲಾಗ್ ಲೋಕದ ಅಂಬರದಲ್ಲಿ ಶ್ರೀ ಸುನಾಥ ಕಾಕ ಎಂದೇ ಹೆಸರಾದ ಶ್ರೀ ಎಸ್ ಎಲ್ ದೇಶಪಾಂಡೆಯವರು ಸರಳ ಸಜ್ಜನಿಕೆಗೆ ಒಂದು ಕಾವ್ಯಮಯ ಹೆಸರು.. ಪ್ರತಿಯೊಬ್ಬರನ್ನು ಮಾತಾಡಿಸುವ ರೀತಿ, ಎಲ್ಲರ ಲೇಖನಗಳಿಗೆ ಅವರು ಕೊಡುವ ಪ್ರತಿಕ್ರಿಯೆ ಆಹಾ ನಿಜಕ್ಕೂ ಒಂದು ವರವೇ ಸರಿ.. .. "ದೇಸಿ" ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸುವ ಇಂತಹ ಪುತ್ರರತ್ನವನ್ನು ಪಡೆದ ಕರುನಾಡು ನಿಜಕ್ಕೂ ಹೆಮ್ಮೆಯ ನಾಡು..
"ಬದರಿನಾಥ ಎಂಬ ಹೃದಯಂಗಮ ಕವಿಯು ತನ್ನ ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಸನ್ಮಾನಿಸಿ ತಾನು ಗುರು ಕಾಣಿಕೆಯನ್ನು ಸಲ್ಲಿಸಿದ್ದೆ ಅಲ್ಲದೆ.. ಗುರುಗಳು ಹೇಳಿಕೊಟ್ಟ ಪ್ರತಿ ಅಕ್ಷರಕ್ಕೂ ಅವರು ಹೆಮ್ಮೆ ಪಡುವಂತೆ ಕವನಗಳನ್ನು ರಚಿಸಿ ಓದುಗರ ಮನಸ್ಸನ್ನು ಸೂರೆಗೊಂಡಿದ್ದಾರೆ. ನಾನು ನನ್ನದು ಎನ್ನುವ ಈ ಪ್ರಪಂಚದಲ್ಲಿ ನಾವು ನಮ್ಮವರು ಎನ್ನುವ ಕಾಳಜಿ ಇರುವ ಅಶೋಕ್ ಶೆಟ್ಟಿ ಅಂಥಹ ಸುಮಧುರ ಸ್ನೇಹಿತ ಜೊತೆ ಇರುವಾಗ ಇಂತಹ ಸುಮಧುರ ಪ್ರಯತ್ನಕ್ಕೆ ಯಾವಾಗಲೂ ನಮ್ಮಿಬ್ಬರ ಆಶೀರ್ವಾದ ಇದ್ದೆ ಇರುತ್ತದೆ . ಅದೇ ತಾನೇ ನಮಗೆ "ಕುಶಿ . ನಮ್ಮ ಮನೆಯ ದೀಪ" ಅಲ್ಲವೇ ಲಕ್ಷ್ಮಿ ಎಂದರು ದೇವಿ ಸರಸ್ವತಿ..
"ಹೌದು ಸರಸ್ವತಿ ನಿನ್ನ ಮಾತು ನಿಜ... ಅರೆ ಅಲ್ಲಿ ನೋಡು.. ಪಶ್ಚಿಮ ಘಟ್ಟಗಳ ತಿರುವು ಮುರುವು ರಸ್ತೆಯಂತೆ ಕಥೆಗಳಿಗೆ ಅಪೂರ್ವ ತಿರುವು ಕೊಡುತ್ತಾ ದಾರಿ ದೀವಿಗೆಯಾದ ಅಣ್ಣನನ್ನು ಸನ್ಮಾನಿಸುತ್ತಾ ಅವರ ಹಿರಿಮೆಯಲ್ಲಿ ತನ್ನ ಗರಿಮೆ ಕಾಯ್ದುಕೊಳ್ಳುವ ಬ್ಲಾಗ್ ಲೋಕದ ಪಡೆಯಪ್ಪ ಎಂದು ನಾಮಾಂಕಿತರಾದ ದಿನಕರ ಮೊಗೆರ ಅವರ ಸಂತಸವನ್ನು ನೀನು ಕಾಣೆಯ. ಅವರ ಪ್ರಥಮ ಕೃತಿ ಚಾರ್ಮಾಡಿ ಘಟ್ಟದಷ್ಟೇ ಹಿತಕರ, ರೋಮಾಂಚಕಾರಿ.. ಅಷ್ಟೇ ವಸ್ತು ನಿಷ್ಠ ಪ್ರಸ್ತುತಿ..ಬಹಳ ಹಿತಕರ ವಾತಾವರಣವನ್ನು "ಸೃಷ್ಟಿ" ಮಾಡುತ್ತದೆ ಹೌದು ತಾನೇ ಸರಸ್ವತಿ !"
"ತಮ್ಮ ಬರವಣಿಗೆಯನ್ನು ಇಷ್ಟಪಟ್ಟು ಬರೆಯುವ ಸ್ಪುರದ್ರೂಪಿ ಈ ಮಹೇಶ್ ಶ್ರೀ ದೇಶಪಾಂಡೆಯವರು.. ತಮ್ಮ ಮನಸ್ಸಿಗೆ ಅನ್ನಿಸಿದ ಅಕ್ಷರಗಳನ್ನು ಮಾಲೆಯನ್ನಾಗಿ ಮಾಡಿ ಅದಕ್ಕೆ ಕವನದ ರೂಪಕೊಟ್ಟು ಶತಪಥ ತಿರುಗುತ್ತಾ ತನ್ನ ಒಡಲಲ್ಲಿ ಜಿನುಗಿದ ಭಾವಗಳನ್ನು ಸುಳಿದಾಡುತ್ತ "ಸೃಷ್ಟಿ"ಯ ಸುಂದರ ಮಡಿಲಿಗೆ ಹಾಕಿರುವ ಈ ಘಳಿಗೆ ಒಂದು ಸುಂದರ ಸೃಷ್ಟಿಯೇ ಸರಿ"
"ಹೌದು ಸರಸ್ವತಿ ಇವತ್ತು ನೀನು ಇವರ ಪುಸ್ತಕಗಳ ಒಳಗೆ ಕೂತು ಬಿಡುಗಡೆಗೊಳ್ಳುತ್ತಿರುವೆ... ಯಾರು ಯಾರು ಬಂದಿದ್ದಾರೆ ಹೇಳುವೆಯ"
"ಸುಂದರವಾಗಿರುವ ಐ ಪಿ ಎಸ್ ಅಧಿಕಾರಿ ಶ್ರೀ ಎಂ ನಂಜುಂಡಸ್ವಾಮಿ, ಅವಧಿ ಎನ್ನುವ ಅಂತರ್ಜಾಲ ಪತ್ರಿಕೆಯ ಪ್ರಧಾನ ಸಂಪಾದಕರು ಶ್ರೀ ಜಿ ಏನ್ ಮೋಹನ್, ಕಿರುತೆರೆಯಲ್ಲಿ ಮಂಗಳತ್ತೆ ಎಂದೇ ಖ್ಯಾತಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್, ಸುವರ್ಣ ವಾಹಿನಿಯ ಪ್ರಧಾನ ಛಾಯಗ್ರಾಹಕರು ಶ್ರೀ ಸತ್ಯಬೋಧ ಜೋಷಿ.. ಇವರ ಜೊತೆಯಲ್ಲಿ ಲೇಖಕರಾದ ಶ್ರೀ ಸುನಾಥ ದೇಶಪಾಂಡೆ, ಶ್ರೀ ಬದರಿನಾಥ ಪಲವಳ್ಳಿ, ಶ್ರೀ ದಿನಕರ್ ಮೊಗೆರ, ಮತ್ತು ಶ್ರೀ ಮಹೇಶ ದೇಶಪಾಂಡೆ.. ಇವರೆಲ್ಲ ವೇದಿಕೆಯಲ್ಲಿ ಆಸೀನರಾಗಿದ್ದಾರೆ.. "
ಓಹ್ ಸುಂದರ ಸಮಾರಂಭಕ್ಕೆ ಸುಂದರ ಆರಂಭ ಬೇಕು... ಬುದ್ದಿವಂತೆ, ಚತುರಮತಿ, ಅಪಾರ ಜ್ಞಾನ ವಾಹಿನಿ ಕುಮುದಾವಲ್ಲಿ ಅವರ ಆರಂಬಿಕ ಮಾತುಗಳು ಸೊಗಸಾಗಿತ್ತು. ಇಡಿ ಕಾರ್ಯಕ್ರಮ ಅವರ ಸುಂದರ ನಿರೂಪಣೆಯಿಂದ ಶೋಭಾಯಮಾನವಾಗಿತ್ತು.. ಹಳಿ ತಪ್ಪಿದಂತೆ ಕಂಡಾಗ ಮತ್ತೆ ಆ ರೈಲು ಗಾಡಿಯನ್ನು ಮತ್ತೆ ಹಳಿಗೆ ತಂದು ಕಾರ್ಯಕ್ರಮ ಒಂದು ಸಂತಸದ ಪೆಟ್ಟಿಗೆ ಯನ್ನಾಗಿ ಮಾಡಿದ ಅವರ ಪರಿಶ್ರಮ ನಿಜಕ್ಕೂ ಶ್ಲಾಘನೀಯ.
"ನಂತರ ಉಷಾ ಉಮೇಶ ಅವರ ಪ್ರಾರ್ಥನಾ ಗೀತೆ, ನಂತರ ಶುರುವಾಯಿತು ನಿಜಕ್ಕೂ ಒಂದು ಸ್ಮರಣೀಯ ಘಳಿಗೆ.. "
ಸುಂದರ ಸುವರ್ಣ ಸಂಭ್ರಮ! |
"ವೇದಿಕೆಯಲ್ಲಿದ್ದ ಎಲ್ಲರೂ ಪ್ರೇಕ್ಷಕರ ಕರತಾಡನದ ನಡುವೆ ಪುಸ್ತಕದಲ್ಲಿದ್ದ ಸರಸ್ವತಿಯನ್ನು "ಪ್ರಕಾಶ"ಕ್ಕೆ ತಂದರು.. ವೇದಿಕೆಯ ಮಹನೀಯರೆಲ್ಲ ಪುಸ್ತಕಗಳ ಬಗ್ಗೆ ತಮ್ಮ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು, ಮೆಚ್ಚುಗೆಗಳನ್ನು ಚುಟುಕು ಮಾತುಗಳಲ್ಲಿ ತಮ್ಮ ಧನ್ಯತೆಯನ್ನು ಸಲ್ಲಿಸಿದರು.. "
ಆತ್ಮೀಯ ಮಾತುಗಾರಿಕೆ - ಶ್ರೀ ಸುನಾಥ ದೇಶಪಾಂಡೆ |
ಮನಮೋಹಕ ನಿರೂಪಣೆ - ಶ್ರೀಮತಿ ಕುಮುದವಲ್ಲಿ |
ಸುಂದರ ಅಧಿಕಾರಿ ಶ್ರೀ ನಂಜುಂಡಯ್ಯ |
ಸುಮಧುರ ಮಾತುಗಳ ಸರದಾರಿಣಿ ಮಂಗಳತ್ತೆ ಅಲಿಯಾಸ್ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ |
ಪ್ರಧಾನ ಛಾಯಗ್ರಾಹಕರು ಶ್ರೀ ಸತ್ಯಬೋಧ ಜೋಷಿ |
ನಮ್ಮೆಲ್ಲರ ಪ್ರೀತಿಯ ದಿನಕರ್ ಸೆರೆಯಾದದ್ದು ಹೀಗೆ ಉಮೇಶ್ ಮತ್ತು ಪ್ರಕಾಶಣ್ಣ ನ ಪ್ರೀತಿಯ ಬಂಧನದಲ್ಲಿ |
ಮಹೇಶ್ ದೇಶಪಾಂಡೆ ಯವರ ಮಾತುಗಾರಿಕೆ |
ಪ್ರೀತಿಯ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಗಾಯನದ ಹಾದಿಯಲ್ಲಿ |
ಅವಧಿಯ ಶ್ರೀ ಜಿ ಏನ್ ಮೋಹನ್ ಸುಂದರ ಮಾತುಗಳು |
"ಎಲ್ಲರನ್ನು ಸನ್ಮಾನಿಸಿ ಸಡಗರದಿಂದ ಸ್ವಾಗತ ಭಾಷಣ ಮಾಡಿದ ಎಲ್ಲರ ಸಹೃದಯ ಮಿತ್ರ ಶ್ರೀ ಅಶೋಕ್ ಶೆಟ್ಟಿಯವರಿಗೆ, ಸೊಗಸಾದ ವಂದನಾರ್ಪಣೆ ಮಾತುಗಳನ್ನು ಹೇಳಿದ ಶ್ರೀ ಉಮೇಶ್ ದೇಸಾಯಿಯವರಿಗೆ, ಮತ್ತು ನಮ್ಮೆಲ್ಲರ ಕೊಳಲು ಬ್ಲಾಗ್ ಲೇಖಕ ಸುಂದರ, ಸಿರಿವಂತ ಮನಸ್ಸಿನ, ಹಾಗೂ ಸಿರಿ ಕಂಠದ ಡಾಕ್ಟರ್ ಡಿ ಟಿ ಕೃಷ್ಣಮೂರ್ತಿ ಇವರೆಲ್ಲ ಕಾರ್ಯಕ್ರಮವನ್ನು ಉತ್ತಮ ಮಜಲಿಗೆ ಕೊಂಡೊಯ್ದರು.. ಅಲ್ವ ಲಕ್ಷ್ಮಿ"
"ಇವರೆನ್ನಲ್ಲ ಒಂದೇ ಭಾವ ಬಂಧನದಲ್ಲಿ ಬೆಸೆಯುವ ಇಟ್ಟಿಗೆ ಸಿಮೆಂಟ್ ಬ್ಲಾಗ್ ಕತೃ ಅಮೋಘ ಹಾಸ್ಯ ಪ್ರಜ್ಞೆ ಇರುವ, ಹೃದಯವಂತ ಶ್ರೀ ಪ್ರಕಾಶ್ ಹೆಗಡೆ ಮತ್ತು ಗೆಳೆತನಕ್ಕೆ ಒಂದು ಉತ್ತಮ ಉದಾಹರಣೆಯಾಗುವ ಶ್ರೀ ಆಜಾದ್ ಸರ್ ಮತ್ತು ಪ್ರತಿಯೊಬ್ಬರ ಹೆಸರನ್ನು ಹೇಳದೆ ಇದ್ದರೂ ಬ್ಲಾಗ್ ಲೋಕದ ತಾರೆಗಳು ಎಂದರೆ ಸಾಕು ಎನ್ನುವ ಬ್ಲಾಗ್ ಲೋಕದ ಕಲಾ ಮಣಿಗಳು ಸೇರಿ ಮುನ್ನೆಡೆಸಿದ ಈ ಕಾರ್ಯಕ್ರಮ ಒಂದು ನವಿರಾದ ಘಳಿಗೆಗಳು ಎಂದರೆ ತಪ್ಪಿಲ್ಲ ಅಲ್ಲವೇ ಸರಸ್ವತಿ"
ಹಿರಿ ಕಿರಿಯರನ್ನು ಸನ್ಮಾನಿಸುವ, ಅವರ ಆಶೀರ್ವಾದ ಅಭಿನಂದನೆಗಳನ್ನು ಪಡೆಯುವ ಬ್ಲಾಗ್ ಲೋಕದ ಶ್ರಮ ಸಂಪ್ರದಾಯ ನಿಜಕ್ಕೂ ಅನುಕರಣೀಯ... ಅಕ್ಷರ ಸಂಬಂಧ ರಕ್ತ ಸಂಬಂಧಕ್ಕಿಂತ ದೊಡ್ಡದು ಎಂದು ಪ್ರತಿಪಾದಿಸಿದ ಈ ಕಾರ್ಯಕ್ರಮ ನಿಜಕ್ಕೂ ಒಂದು ಅಮರ ಸಂದೇಶ ಸಾರುತ್ತದೆ. ದೀಪಾವಳಿ ಹಬ್ಬ, ಭಾನುವಾರ, ಸಾಲು ಸಾಲು ರಜ ಇಷ್ಟಿದ್ದರೂ ತುಂಬಿ ತುಳುಕುತ್ತಿದ್ದ ಸಭಾಂಗಣ, ಆಸಕ್ತರಿಂದ ಕೂಡಿದ್ದ ಸಭೆಯಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲದಿದ್ದರೂ ನಿಂತೇ ನೋಡಿ ಇಡಿ ಸಮಾರಂಭವನ್ನು ಕಣ್ಣಲ್ಲಿ, ಕ್ಯಾಮರದಲ್ಲಿ ತುಂಬಿಕೊಂಡು ಬಂದ ಪ್ರೇಕ್ಷಕರು ದೇವರ ಕಡೆಗೆ ತಿರುಗಿ
"ದೇವರೇ ಸರಸ್ವತಿ ಲಕ್ಷ್ಮಿ ಒಂದೇ ಕಡೆ ನೆಲೆಸಿರುವ ಈ ಬ್ಲಾಗ್ ಲೋಕದಲ್ಲಿ ಸದಾ ನಗು ಲವಲವಿಕೆ ತುಂಬಿರಲಿ" ಎನ್ನುವಲ್ಲಿಗೆ ಈ ಹರಿಕಥೆ ಮುಕ್ತಾಯ ವಾಯಿತು..
ಆದರೆ ಇದು ಅಂತ್ಯವಲ್ಲ ಆರಂಭ... !!!
Super....ishtottu ee blog update aagodanne kaayta idde...thanks nimage
ReplyDeleteಧನ್ಯವಾದಗಳು ರಶ್ಮಿ.. ನೀವು ಹೇಳಿದ ಲೈನ್ ತಲೇಲಿ ಗುನುಗ್ತಾ ಇತ್ತು ಅದೇ ಲೈನ್ಸ್ ಇಂದ ಪ್ರಾರಂಭ ಮಾಡಿದೆ.. ಈ ಲೇಖನದ ಯಶಸ್ಸಿನ ಭಾಗ ನಿಮಗೂ ಸೇರುತ್ತೆ.. ಸುಂದರ ಅನಿಸಿಕೆಗೆ ಧನ್ಯವಾದಗಳು
Deleteಅಂತ್ಯವಲ್ಲ ಆರಂಭ... !!!
ReplyDeleteಮಹೇಶ ಪ್ರತಿಕ್ರಿಯೆಗೆ ಧನ್ಯವಾದಗಳು.. ಮಹೇಶ ಇರುವ ಕಡೆ ನಗುವಿಗೆಲ್ಲಿಯ ಕೊರತೆ.. ಸೂಪರ್
Deleteಶ್ರೀಕಾಂತಣ್ಣಾ,
ReplyDeleteಇಷ್ಟು ಚಂದದ ಅಣ್ಣಂದಿರು ಇರೋವಾಗ ಬ್ಲಾಗ್ ಲೋಕ ಒಂದು ನಗೆ ಲೋಕವೇ ಹೌದು ...ನಗು ,ಮಾತು ,ಹರಟೆಯ ನಂತರದಲ್ಲಿ ಉಳಿಯೋದು ಪ್ರೀತಿ ವಿಶ್ವಾಸ ಒಂದೇ .
ಹೀಗೊಂದು ಅಣ್ಣನ ಬ್ಲಾಗ್ ನಾ ನಿರೀಕ್ಷಿಸಿದ್ದೆ ..ಆದರಿಷ್ಟು ಬೇಗ ,ಇಷ್ಟು ಚಂದದಿ ಇಡೀ ಕಾರ್ಯಕ್ರಮವನ್ನ ಮತ್ತೆ ಮನಕ್ಕೆ ತಟ್ಟಿದ್ದು ಇನ್ನೂ ಖುಷಿ ಆಯ್ತು.
ಇರಲಿರಲಿ ಈ ಸ್ನೇಹ ಬಹುಕಾಲ ಹೀಗೆ .
ಅಂತ್ಯವಲ್ಲದ ಈ ಆರಂಭದ ಖುಷಿಯಲ್ಲಿ ನಂಗೂ ಒಂದು ಪಾಲು ಸಿಕ್ಕಿದ್ದು ನನ್ನ ಖುಷಿ.
ಇಷ್ಟವಾಯ್ತು ಈ ಭಾವ ಬರಹ :)
ಬಿಪಿ ನಿನ್ನಂಥಹ ಸುಂದರ ಪುಟಾಣಿ ನಮ್ಮ ಜೊತೆಯಲ್ಲಿ ಇರುವಾಗ ಪ್ರತಿ ದಿನವು ಒಂದು ನಗೆ ಕೂಟವೇ.. ತುಂಬಾ ಇಷ್ಟವಾಯಿತು ನಿನ್ನ ಪ್ರತಿಕ್ರಿಯೆ.. ಬರೆಯಲು ಪ್ರೇರೇಪಿಸುವ ಈ ನಿನ್ನ ಪ್ರತಿಕ್ರಿಯೆಗೆ ಧನ್ಯವಾದಗಳು
Deleteಶ್ರೀಕಾಂತ್
ReplyDeleteಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂದಿತ್ತು !!!! ಎಲ್ಲ ಸ್ನೇಹಿತರನ್ನು ಭೇಟಿ ಖುಷಿ ತಂದಿತು ....
ವಾವ್. ಶಶಿ ಮೇಡಂ ನನ್ನ ಲೋಕಕ್ಕೆ ಸ್ವಾಗತ.. ತುಂಬಾ ಖುಷಿ ಯಾಯಿತು ನಿಮ್ಮ ಪ್ರತಿಕ್ರಿಯೆ ನೋಡಿ.ಧನ್ಯವಾದಗಳು.
Deletenice article..do you mind if you share the snap on FB especially the one in which i am..
ReplyDeleteಧನ್ಯವಾದಗಳು ಉಮೇಶ್ ಸರ್.. ಖಂಡಿತ ಶೇರ್ ಮಾಡಿಕೊಳ್ಳುವೆ.. ಫೇಸ್ಬುಕ್ ನಲ್ಲಿ ಫೋಟೋಗಳನ್ನು ಹಾಕಿದ್ದೇನೆ
Delete"ಆದರೆ ಇದು ಅಂತ್ಯವಲ್ಲ ಆರಂಭ... !!!"
ReplyDeleteಅಂದರೆ ಶ್ರೀಮಾನ್ ಉಳಿದ ಫೋಟೋಗಳು ಹೊಸ ಸೀರೀಸಿನಲ್ಲಿ ಬರುತ್ತವೆ ಅಂತ ಇದ್ದೀತು.
ಸರಸ್ವತಿ ಇದ್ದಾಳೆ ok ಆದರೆ ನನ್ನ ಪ್ರಕಾಶಕ ಅಶೋಕ್ ಅವರಿಗೂ ಲಕ್ಷ್ಮೀ ಸಂಪೂರ್ಣ ಕಟಾಕ್ಷ ಅನುಗ್ರಹಿಸಲಿ ಎಂಬುದೇ ನನ್ನ ಏಕೈಕ ಆಸೆ.
ತುಂಬಾ ಒಳ್ಳೆಯ ಚಿತ್ರ ಬರಹ ಸಾರ್.
ಬದರಿ ಸರ್ ಸ್ನೇಹದ ಸೆಳೆತ ಸದಾ ಎಲ್ಲರನ್ನು ಅರಳಿಸುತ್ತದೆ.. ಸುಂದರ ಲೋಕದ ಸದಸ್ಯರಾದ ನೀವೆಲ್ಲ ನಮ್ಮ ಜೊತೆಯಲ್ಲಿ ನಿಂತಿರುವುದೇ ಒಂದು "ಕುಶಿ"ಯ ವಿಷಯ.. ಸುಂದರ ಪ್ರತಿಕ್ರಿಯೆ ನಿಮ್ಮದು ಹಾಗೆಯೇ ಸುಂದರ ಮನಸ್ಸು ನಿಮ್ಮದು ಹಾಗು ಅಶೋಕ್ ಸರ್ ಅವರದು ಧನ್ಯವಾದಗಳು
DeleteSundara lekhanada motala suttu ..tale suttuva eradane suttu matte barali kaayteve
ReplyDeleteಹ ಹ ಅಜಾದ್ ಸಾರ್ ಇದ್ದ ಕಡೆ ನಗುವಿಗೆ ಸ್ವಾತಂತ್ರ ಎಲ್ಲರೆಡೆಯು ಹರಿಯುತ್ತದೆ.. ಸೂಪರ್ ಸರ್ ಧನ್ಯವಾದಗಳು
Deleteತಲೆ ಸುತ್ತುವಂತಹ ಫೋಟೋಗಳನ್ನು ಹಾಕಿದ್ದೇನೆ ಎರಡನೇ ಸುತ್ತಿನಲ್ಲಿ
ಒಳ್ಳೆಯ ಚಿತ್ರಗಳೊಂದಿಗೆ ವಿವರಣೆ ಸೊಗಸಾಗಿದೆ ...
ReplyDeleteಮಹೇಶ್ ಸರ್ ಧನ್ಯವಾದಗಳು. ನೀವೆಲ್ಲ ಇಲ್ಲಿ ಇದ್ದಿದ್ದರೆ ಇನ್ನಷ್ಟು ಮೆರುಗು ಇರುತ್ತಿತ್ತು.. ನಿಮ್ಮ ಪ್ರತಿಕ್ರಿಯೆಗೆ ನಾನು ಅಭಾರಿ
Deleteಚೆಂದದ ವರದಿ ಕಾರ್ಯಕ್ರಮದ ಬಗ್ಗೆ... ಅಲ್ಲಿನ ಎಲ್ಲರ ಸಂಭ್ರಮ ಸಡಗರ ಹೇಳತೀರದು! ನಿಜವಾಗಿ ಅದೊಂದು ಬ್ಲಾಗಿಗರ ದೀಪಾವಳಿಯಾಗಿತ್ತು! ಹಬ್ಬದ ಸಡಗರಕ್ಕೆ ಮೆರಗು ಕೊಟ್ಟ ಕಾರ್ಯಕ್ರಮ.
ReplyDeleteನಿಮ್ಮ ನಗುವೇ ನಮಗೆ ಬರೆಯುವುದಕ್ಕೆ ಸ್ಫೂರ್ತಿ.. ಹ ಹ ಹ.. ಸೂಪರ್ ಕಾಮೆಂಟ್ ಅಂಡ್ ಸೂಪರ್ ಮ್ಯಾನ್ ನೀವು.. ಧನ್ಯವಾದಗಳು ಪ್ರದೀಪ್
Deleteಸಕ್ಕತ್ ನಿರೂಪಣೆ... ನಾವು ಮಿಸ್ ಮಾಡಿದ ಕಾರ್ಯಕ್ರಮವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ.. ಅಂತ್ಯವಲ್ಲದ ಆರಂಭ ಪ್ರಾರಂಭವಾಗಲಿ ಕಾಯುತ್ತೇವೆ .. ಪೋಟೋಗಳು ಮಸ್ತ್ ಇದಾವೆ.
ReplyDeleteಅಕ್ಕಯ್ಯ ಪ್ರತಿ ಲೇಖನವನ್ನು ಇಷ್ಟಪಟ್ಟು ಓದುವ ನಿಮ್ಮ ತಾಳ್ಮೆಗೆ ಶರಣು.. ತುಂಬಾ ಇಷ್ಟವಾಯಿತು ಬದರಿ ಸರ್ ಪುಸ್ತಕದ ರಕ್ಷಾ ಪುಟ.. ಕಲಾವಿದೆ ನೀವು.. ಧನ್ಯವಾದಗಳು
Deleteಶ್ರೀಕಾಂತೂ....
ReplyDeleteಬಹಳ ಚೆನ್ನಾಗಿದೆ...
ಪುರಾಣದ ಕಲ್ಪನೆಯೊಂದಿಗೆ ಪ್ರಸ್ತುತ ಪಡಿಸುವ ನಿಮ್ಮ ಪರಿಗೆ ಉಘೆ... ಉಘೆ !
ಧನ್ಯವಾದಗಳು ಪ್ರಕಾಶಣ್ಣ.. ಒಂದು ಸುಂದರ ಭಾನುವಾರ ಕಳೆದ ಸಾರ್ಥಕತೆಗೆ ಪುರಾಣದ ಕಥೆ ಸಾಥ್ ನೀಡಿತು.. ಏನೇ ಬರೆದರೂ ದೇವತೆಗಳ ಲೋಕಕ್ಕೆ ಹೋಗದೆ ನನ್ನ ಲೇಖನಿ (ಕೀಲಿ ಮಣೆ) ಮುಂದೆ ಸಾಗದು.. ಹ ಹ ಹ ಹ ಹ.. ಸುಂದರ ಗೆಳೆಯರ ಜೊತೆ ನಲಿದು ಕುಣಿದು ಕಳೆದ ಸಮಯ.. ನಿಮ್ಮ ಮನೆಗೆ ಭೇಟಿ ಎಲ್ಲವು ಸುಮಧುರ ಬಂಗಾರದ ಕ್ಷಣಗಳು.. ನಿಮ್ಮ ಪ್ರತಿಕ್ರಿಯೆ ನನ್ನ ಖುಷಿ ಹೆಚ್ಚಿಸಿತು..
Deleteಶ್ರೀಕಾಂತಣ್ಣ ನಿಮ್ಮ ಬರಹಕ್ಕೆ ನೀವೇ ಸಾಟಿ ಅದಕ್ಕೆ ಪ್ರತಿಕ್ರಿಯೆ ನೀಡಲು ನನ್ನಲ್ಲಿ ಬರವಣಿಗೆಯ ಅರಿವಿಲ್ಲ ಒಂದೇ ಪದದಲ್ಲಿ ಹೇಳುವುದಾದರೆ ಅತ್ಯುತ್ತಮದಲ್ಲಿ ಅತ್ಯುತ್ತಮ ಬರಹ ಧನ್ಯವಾದಗಳು.......
ReplyDeleteಇಷ್ಟು ದಿನ ನನ್ನ ಫೋಟೋಗಳನ್ನು ನೋಡಿ ನಾನೇ ಬೇಸರ ಪಟ್ಟುಕೊಳ್ಳುತ್ತಿದ್ದೆ ಮೊತ್ತ ಮೊದಲ ಬಾರಿಗೆ ನಾನಿರುವ ಒಂದು ಚಿತ್ರ ನನಗೆ ಇಷ್ಟವಾಗಿದೆ ಅಂದರೆ ಅದು ನೆನ್ನೆ ನೀವು ತೆಗೆದಿರುವ ಫೋಟೋ ಅದಕ್ಕಾಗಿ ತುಂಬು ಮನದ ವಂದನೆಗಳು
ಸತೀಶ್ ನಿಮ್ಮ ಸುಂದರ ಮನಸ್ಸಿಗೆ ಧನ್ಯವಾದಗಳು.. ನಿಮ್ಮ ನಿರ್ಮಲ ನಗು, ನಿರ್ಮಲ ಮನಸ್ಸು ಎಲ್ಲವೂ ಸೊಗಸು ಅದೇ ಚಿತ್ರದಲ್ಲಿ ಮೂಡಿ ಬಂದಿದೆ. ಲೇಖನಗಳು ಬರೆದದ್ದು ಸಾರ್ಥಕ ಎನ್ನುವ ಭಾವ ನೀಡುತ್ತದೆ ನಿಮ್ಮ ಅನಿಸಿಕೆ ಓದಿದಾಗ.. ಧನ್ಯವಾದಗಳು
Deleteಶ್ರೀಕಾಂತ್ ನಿಮ್ಮ ಪದಗಳ ಮೋಡಿಗೆ ಒಳಗಾಗದ ಜನರೇ ಇಲ್ಲಾ, ಚಿತ್ರಗಳು ಪೂರಕವಾಗಿವೆ, ಸನ್ನಿವೇಶ ಕಣ್ಣಿಗೆ ಕಟ್ಟಿದಂತೆ ಇದೆ, ನಿಮಗೆ ಅಭಿನಂದನೆಗಳು
ReplyDeleteನಿಮ್ಮ ಪ್ರತಿಕ್ರಿಯೆ ಹಾಲಿಗೆ ಜೇನು ಬೆರೆಸಿದಂತೆ.. ಸದಾ ಉತ್ಸಾಹದ ಚಿಲುಮೆಯಾಗಿರುವ ನಿಮ್ಮ ಮಾತುಗಳು ನನಗೆ ಇಷ್ಟವಾಗುತ್ತದೆ.. ಸುಂದರ ಪ್ರತಿಕ್ರಿಯೆಗೆ ಅಷ್ಟೇ ಸುಂದರ ಧನ್ಯವಾದಗಳು
Deleteಶ್ರೀಕಾಂತ್ ;ನಿಮ್ಮ ಮನಸ್ಸಿನಂತೆ ನಿಮ್ಮ ಬರಹವೂ,ಚಿತ್ರಗಳೂ ಸುಂದರ.ನಿಮ್ಮ ಒಡನಾಟ ತುಂಬಾ ಖುಷಿ ಕೊಟ್ಟಿತು.ನಮ್ಮೆಲ್ಲರ ಸ್ನೇಹ ಸದಾ ಹೀಗೇ ಇರಲಿ ಎನ್ನುವ ಹಾರೈಕೆ.ಫೋಟೋಗಳಿಗೆ ಧನ್ಯವಾದಗಳು.
ReplyDeleteಧನ್ಯವಾದಗಳು ಡಾಕ್ಟರ್.. ನಿಮ್ಮ ಮಾತುಗಳು, ನಿಮ್ಮ ಹಾಡುಗಾರಿಕೆ ಜೋಗದ ಜಲಪಾತದಂತೆ ಸುಂದರ.. ಕಣಿವೆಯ ದೃಶ್ಯದಂತೆ ಮನೋಹರ.. ನಿಮ್ಮ ಸ್ನೇಹ ಲಭಿಸಿದ್ದು ಜೀವನದ ಅನೇಕ ಸುಂದರ ಅಂಶಗಳಲ್ಲಿ ಒಂದು. ನಿಮ್ಮ ಪ್ರತಿಕ್ರಿಯೆಗೆ, ಪ್ರೀತಿಗೆ ಸದಾ ಚಿರಋಣಿ.
Deleteಕಾರ್ಯಕ್ರಮದ ವಿವರಣೆಯನ್ನು ನಿಮ್ಮದೇ ರೀತಿಯಲ್ಲಿ ತುಂಬಾ ಚೆನ್ನಾಗಿ ವಿವರಿಸಿದ್ದೀರಿ..ತುಂಬಾ ದಿನದ ನಂತರ ಅನೇಕ ಗೆಳೆಯರನ್ನು ಬೇಟಿಯಾಗಿದ್ದು ತುಂಬಾ ಖುಷಿಕೊಟ್ಟಿತ್ತು.
ReplyDeleteಕ್ಯಾಮೆರ ಇಲ್ಲದೆ ಬಂದ ನಿಮ್ಮ ಮೇಲೆ ಸಿಟ್ಟಿದ್ದರು.. ಬಹಳ ದಿನಗಳಾದ ಮೇಲೆ ಭೇಟಿ ಮಾಡಿದ್ದು ಕುಶಿ ಕೊಟ್ಟಿತು. ಧನ್ಯವಾದಗಳು ಶಿವೂ ಸರ್
DeleteThis is Sri Style...............
ReplyDeleteVery Nice, Enjoyed reading through :)
Thank you DFR...your comments are energy booster all the way..Thanks again!
Delete
ReplyDeleteಕಾರ್ಯಕ್ರಮದ ಅಚ್ಚುಕಟ್ಟಿನ ನಿರೂಪಣೆ.. ಅದಕ್ಕೆಲ್ಲ ಫೋಟೋ ಚೌಕಟ್ಟು.. ಪ್ರತಿ ಕಾರ್ಯಕ್ರಮಗಳನ್ನು ಹೊಸತನದ ನಿರೂಪಣೆ ಕೊಡೋಕೆ ಸರಕುಗಳು ಎಲ್ಲಿಂದ ಸಿಗ್ತವೆ ?
ಪುರಾಣದ ಲಕ್ಷ್ಮಿ , ಸರಸ್ವತಿ, ಪಾರ್ವತಿ, ಆ ತ್ರಿಮೂರ್ತಿಗಳೆಲ್ಲ ನಿಮ್ಮಲ್ಲೇ ನೆಲೆಸಿರುವಂತಿದೆ..
Loved it ಅಣ್ಣಾ..
and love you...
ಸಂಧ್ಯಾ ಪುಟ್ಟಿ ತುಂಬಾ ಇಷ್ಟವಾಯಿತು ನಿನ್ನ ಪ್ರತಿಕ್ರಿಯೆ.. ಸಹೃದಯ ಸ್ನೇಹಿತರು ಇರುವಾಗ ದೇವತೆಗಳು ಜೊತೆಯಲ್ಲಿ ಇದ್ದ ಹಾಗೆ ಎನ್ನುತ್ತಾರೆ ಹಿರಿಯರು. ನೀವೆಲ್ಲರೂ ನನ್ನ ಜೊತೆಯಲ್ಲಿ ಇದ್ದೀರಿ ಹಾಗಾಗಿ ನನ್ನ ಕೈನಲ್ಲಿ ಇದನ್ನೆಲ್ಲಾ ಬರೆಯಲು ನೀವೇ ಪ್ರಚೋದಕರು. ಧನ್ಯವಾದಗಳು
Deleteಆತ್ಮೀಯ ಕಾರ್ಯಕ್ರಮದ ಬಗ್ಗೆ ಅಷ್ಟೇ ಆತ್ಮೀಯವಾದ ಬರಹ.
ReplyDeleteವಂದನೆಗಳೊಂದಿಗೆ
ಮೊದಲ ಬಾರಿಗೆ ನಿಮ್ಮನ್ನ ಭೇಟಿ ಮಾಡಿದ್ದು ಬಹಳ ಕುಶಿ ತಂದಿತು ಸಹೋದರಿ ಸ್ವರ್ಣ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ
Deleteಸುಂದರವಾದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂದಷ್ಟೇ ಖುಷಿಯಾಯ್ತು ನಿಮ್ಮ ಬರವಣಿಗೆಯನ್ನ ನೋಡಿ :)
ReplyDeleteಜೊತೆಗೆ ಅಷ್ಟೇ ಸುಂದರವಾದ ಚಿತ್ರಗಳು :)
ಧನ್ಯವಾದಗಳು ರಾಘವ... ಬಹುದಿನಗಳನಂತರ ನಮ್ಮ ಲೋಕಕ್ಕೆ ಭೇಟಿ ನೀಡಿದ್ದೀರಿ ಕುಶಿಯಾಯಿತು..
DeleteThank you sir....
ReplyDeleteCongratulations sirji on your first edition of the book!
Deleteಅಣ್ಣಯ್ಯಾ .... ನಾನು ಕಾರ್ಯಕ್ರಮಕ್ಕೆ ಬರಲಾಗಲಿಲ್ಲವಾದರೂ ನಿಮ್ಮ, ಬಾಲು ಸರ್ ನ ಬ್ಲಾಗ್ ಬರಹ, ಫೋಟೋಸ್ ನೋಡಿ ಕಾರ್ಯಕ್ರಮ ನೋಡಿ ಬಂದಷ್ಟೇ ಸಂತಸವಾಯಿತು...
ReplyDeleteಎಂದಿನಂತೆ ತುಂಬಾ ಚಂದ ನಿಮ್ಮ ಚಿತ್ರ ಮತ್ತು ಬರಹ,....
ಧನ್ಯವಾದಗಳು ಪಿ ಎಸ್. ಮಹಾಭಾರತದ ಕಾಲದಿಂದಲೂ ದೂರದರ್ಶನ ಹುಟ್ಟಿಕೊಂಡ ನಾಡು ನಮ್ಮದು ಅಲ್ಲವೇ.
Delete