Thursday, August 8, 2013

ಹಾಗೆಯೇ ಆರಿಸಿಕೊಂಡೆ ಆಗ ಮೂಡಿಬಂದದ್ದು .......!!!





























***********
"ಅರೆ ಇದೇನಿದು ಏನಾಯ್ತು ಅಣ್ಣಯ್ಯ? ಬರಿ ಖಾಲಿ ಖಾಲಿ?"

"ಹೌದು ಕಣೋ.. ಕೀಲಿ ಮನೆಯಲ್ಲಿ ಬರೆಯುತ್ತಾ ಹೋದೆ.. ಅಕ್ಷರ ಬಣ್ಣ ಬಣ್ಣ ಇರಲಿ ಅಂತ ಕೆಲ ಬಣ್ಣವನ್ನು ಆಯ್ಕೆ ಮಾಡಿಕೊಂಡೆ.. ಆದರೆ ಆ ವರ್ಣ ಚಕ್ರ ಒಮ್ಮೆ ಗಿರ್ರ್ ಅಂತ ತಿರುಗಿತು..ಹಾಗೆಯೇ ಆರಿಸಿಕೊಂಡೆ ಆಗ ಮೂಡಿಬಂದದ್ದು ಮೂಡಬಿದ್ರಿಯ ಶುಭ್ರ ಬಿಳುಪಿನ ಬಣ್ಣ.."

"ಸಾವಿರ ಕಂಭದ ಬಸದಿಯ ಊರಲ್ಲಿ ಉಗಮವಾದ ಕೂಸು.. ಉದ್ಯಾನ ನಗರಿಯಲ್ಲಿ ಮೌನರಾಗದಲ್ಲಿ ಹಾಡುತ್ತಾ ಕನಸು ಕಂಗಳನ್ನು ಬಿಡುತ್ತಾ ಅನೇಕರ ಅಣ್ಣಂದಿರ ಹೃದಯ ಕಮಲದಲ್ಲಿ ಮುದ್ದಿನ ಪುಟ್ಟಿಯಾಗಿ ನಿಂತಿರುವ ಪುಟ್ಟಿ ಸುಷ್ಮಾಳಿಗೆ ಹುಟ್ಟು ಹಬ್ಬದ ಶುಭಾಶಯಗಳು... ಸುಂದರ ನಗುವಿನ ಪುಟ್ಟ ತಂಗಿಯ ದೊಡ್ಡ ಕನಸುಗಳು ಕೆನ್ನೆಯಲ್ಲಿನ ಗುಳಿಯಂತೆಯೇ ಸುಂದರವಾದ ನನಸಾಗಲಿ.. ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ... ಎನ್ನುವಂತೆ ಮುದ್ದಿನ ತಂಗಿಯಾದ ಪುಟ್ಟಿ ಸುಷ್ಮಾಳಿಗೆ ಶುಭ ಹಾರೈಕೆಗಳು... ಹುಟ್ಟು ಹಬ್ಬದ ಶುಭಾಶಯಗಳು... "

"ಧನ್ಯವಾದಗಳು ಅಣ್ಣಯ್ಯ.. ತುಂಬಾ ಖುಷಿಯಾಗುತ್ತಿದೆ.. ಬ್ಲಾಗ್ ಲೋಕದಲ್ಲಿ ಸಿಕ್ಕಿರುವ ಅನೇಕ ಸಹೃದಯರ ಸ್ನೇಹ ಪುಷ್ಪ ನನ್ನ ಪಾಲಿಗೆ ಸಿಕ್ಕಿರುವುದು ನನ್ನ ಪುಣ್ಯ ಅಣ್ಣಯ್ಯ.. "

"ಮತ್ತೆ ಹೇಗೆ ಕಳೆದೆ ನಿನ್ನ ಹುಟ್ಟು ಹಬ್ಬದ ದಿನವನ್ನ ಹೇಗಿತ್ತು... ?"

"ಚೆನ್ನಾಗಿತ್ತು ಅಣ್ಣಯ್ಯ.. .. ಆಫೀಸ್ ನಲ್ಲಿ ಸಹೋದ್ಯೋಗಿಗಳು.. ನನ್ನ ಗೆಳತಿಯರು, ಬ್ಲಾಗ್ ಲೋಕದ ತಾರೆಗಳು ಎಲ್ಲರೂ  ಕರೆ ಮಾಡಿ ಶುಭಾಷಯ ಕೋರಿದರು.. ಇದಕ್ಕಿಂತ ಬೇರೆ ಏನು ಬೇಕು ಅಣ್ಣಯ್ಯ ಅಲ್ವ.. ದೂರದ ಊರಿಂದ ಬಂದು ಇಲ್ಲಿಯೇ ಬೆಳೆಯುತ್ತಿರುವ ನನಗೆ ನಿಮ್ಮೆಲ್ಲರ ಅಭಿಮಾನದ ಪ್ರೀತಿಯೇ ನನಗೆ ಬೆಳೆಯಲು ದಾರಿ ತೋರುತ್ತಿದೆ.. ತುಂಬಾ ಖುಷಿಯಾಗುತ್ತಿದೆ ಅಣ್ಣಯ್ಯ.. ಆದರೂ....  "

"ಹ ಹ ಹ.. ನಿನ್ನ ಮನದಲ್ಲಿರುವ ಗೊಂದಲ ನನಗೆ ಅರ್ಥವಾಗುತ್ತಿದೆ... ಎಲ್ಲಿ ಒಮ್ಮೆ ಮುಂದೇ ನೋಡು.. "

"ಏನಿದೆ ಅಣ್ಣಯ್ಯ.. " ಎನುತ್ತಾ ಮುಂದೆ ತಿರುಗಿ ನೋಡಿದರೆ......... :-)

ಕಣ್ಣ ಮುಂದೆ.. ಸಾವಿರ ಕಂಬಗಳು ಮುಂದೆ ದೀಪಾವಳಿಯ ಪಟಾಕಿಗಳು, ನಕ್ಷತ್ರ ಕಡ್ಡಿಗಳು, ಹೂವಿನ ಕುಂಡಗಳು  ಬೆಳಗಲು ಶುರುಮಾಡಿದವು.. ಪುಟ್ಟಿ ಸುಷ್ಮಾಳ ಕಣ್ಣಲ್ಲಿ ಮಿಂಚು..
************
ರಾಮನ ವಾನರ ಸೇನೆ ರಾಮೇಶ್ವರದ ಧನುಷ್ಕೋಟಿಯ ಹತ್ತಿರ ಬೀಡು ಬಿಟ್ಟಿತ್ತು..... ಸಾಗರವನ್ನು ಲಂಘಿಸಿ ಸೀತಾ ಮಾತೆಯ ದರುಶನ ಮಾಡಿ ಅವರ ಕ್ಷೇಮ ಸಮಾಚಾರವನ್ನು ಹೇಳಬೇಕಿತ್ತು.. ಆದರೆ ಸಾಗರವನ್ನು ದಾಟಲು ಯಾರು ಸಮರ್ಥರಿರಲಿಲ್ಲ.. ಆದರೆ ಎಲ್ಲರೂ ಆಗ ಮಾಡುತ್ತಿದೆ, ಈಗ ಮಾಡುತ್ತಿದ್ದೆ.. ಅದು ಇದು ಅಂತ ಸಬೂಬು ಹೇಳುತ್ತಾ ತಮ್ಮ ಪರಾಕ್ರಮ(?) ಕೊಚ್ಚಿಕೊಳ್ಳುತ್ತಿದ್ದರು... 


ಒಂದು ದೊಡ್ಡ ಬಂಡೆಯ ಮೇಲೆ ಹನುಮಂತ ಸುಮ್ಮನೆ ಕುಳಿತ್ತಿದ್ದ.. ಅದನ್ನ ನೋಡಿದ ಜಾಂಬುವಂತ.. "ಅಲ್ಲಾ ಹನುಮ ಎಲ್ಲರೂ ಅದು ಇದು ಅಂತ ಮಾತಾಡುತಿದ್ದಾರೆ ಆದರೆ ನೀನು ಮಾತ್ರ ತುಟಿ ಪಿಟಿಕ್ ಅನ್ನದೆ ಕುಳಿತಿರುವೆ.. ನಿನಗೆ ಶಕ್ತಿ ಇದೆ, ನಿನ್ನಲ್ಲಿ ಆತ್ಮ ವಿಶ್ವಾಸವಿದೆ, ಛಲವಿದೆ, ನಿನ್ನ ಸಹೋದರರ ಒಳಿತನ್ನು ಯೋಚಿಸುವ ಒಲವಿದೆ, ವಿನಯವಿದೆ ಇನ್ನು ಯಾಕೆ ಯೋಚನೆ.. ಹೊರಡು ವೀರ ಹೊರಡು... " ಎಂದು ಹೇಳುತ್ತಾ ಹನುಮನನ್ನು ಹುರಿದುಂಬಿಸಲು ಯತ್ನಿಸಿದ ಜಾಂಬುವಂತ. 

ಅದಕ್ಕೆ ಏನು ಪ್ರತಿಸ್ಪಂದಿಸದ ಹನುಮ.. "ಅಣ್ಣಾ ಜಾಂಬುವಂತ ನನ್ನ ವಿಚಾರ ಬಿಡು.. ನೋಡು ನನ್ನಷ್ಟೇ ಛಲವಿರುವ, ಶಕ್ತಿಯಿರುವ, ವಿನಯವಿರುವ, ಭ್ರಾತೃ ಮಮತೆ ತುಂಬಿಕೊಂಡಿರುವ, ಆತ್ಮ ವಿಶ್ವಾಸವಿರುವ ಒಂದು ಮುದ್ದು ಕಂದ ಅಲ್ಲಿ ಕುಳಿತಿದೆ.. ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿಕೊಂಡು ಸಹಸ್ರ ಬಸದಿಯ ಊರಿಂದ ರವಿ ಮೂಡುವ ದಿಕ್ಕಿನ ತಟದಿಂದ ಉದ್ಯಾನನಗರಿಗೆ ಬಂದು ಎಲ್ಲರ ಮುದ್ದಿನ ತಂಗಿಯಾಗಿ, ಮಗಳಾಗಿ ಮಿಂಚುತ್ತಿರುವ ಆ ಪುಟ್ಟಿಯನ್ನು ನೋಡು.. ಆ ಮಗುವಿಗೆ ನಮ್ಮೆಲ್ಲರ ಆಶೀರ್ವಾದ ಬೇಕಿದೆ.. ಅಲ್ಲವೇ... ಸೀತಾಮಾತೆಯನ್ನು ಹುಡುಕಿ ಬರುವೆ.. ಹಾಗೆಯೇ ಈ ಮಗುವಿಗೆ ಶುಭವಾಗಲಿ ಎಂದು ಹೇಳಬೇಕು ಅಲ್ವೇ" 


"ನಿನ್ನ ಮಾತು ನಿಜ ಹನುಮ.. ಹೌದು ಮನುಜ ಕುಲದಲ್ಲಿ ಹುಟ್ಟಿದ ಮೇಲೆ ಅವರದ್ದು ಸಾಹಸ ಬದುಕು.. ಮೌನರಾಗದಲ್ಲಿ, ಅದೇ ತಾಳದಲ್ಲಿ, ಎರಡು ಕಣ್ಣಲ್ಲಿ ಕಾಣುವ ಕನಸು ತುಂಬಾ ಇಷ್ಟವಾಗುತ್ತೆ.. ಆ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇನೆ.. ಅಲ್ಲಿ ನೋಡು ಆ ವಾನರರು ಒಂದು ಕಲ್ಲನ್ನು ರಾಮ ಎಂದು ಹೇಳಿ ನೀರಿಗೆ ಹಾಕಿದರೆ ತೇಲುತ್ತದೆ.. ಹಾಗೆಯೇ ನಗು ನಗುತ್ತಾ ಬಂದ ಜೀವನವನ್ನು ಸ್ವೀಕರಿಸಿ.. ಅಣ್ಣಾವ್ರ "ನಗುತಾ ನಲಿ ನಲಿ ಏನೇ ಆಗಲಿ" ಹಾಡಿನಂತೆ ಇದ್ದರೇ ಜೀವನದ ಹಾದಿ ಮಂಜಿನ ಹನಿಗಳನ್ನು ಹೊದ್ದು ಮಲಗಿರುವ ಹೂವಿನ ಹಾದಿಯಂತೆ ಇರುತ್ತದೆ" 

"ಹೌದು ಜಾಂಬುವಂತ.. ಆ ಪುಟ್ಟಿಗೆ ಸುಮಧುರ ಶುಭಾಶಯಗಳನ್ನು ಹೇಳುತ್ತಲೇ.. ಆ ಮಗುವಿನ ಆಸೆ ಆಕಾಂಕ್ಷೆ, ಗುರಿ ಎಲ್ಲವೂ  ಶ್ರೀ ರಾಮನ ಬಾಣದಂತೆ ಸರಿಯಾದ ಗುರಿ ಸೇರಲಿ ಎಂದು ಹಾರೈಸೋಣ.. ಪುಟ್ಟಿ ಸುಷ್ಮಾ ಹುಟ್ಟು ಹಬ್ಬದ ಶುಭಾಶಯಗಳು... "
***********
ಇದೀಗ ಬಂದ ಸುದ್ದಿ.. ಸುಷ್ಮಾ ಪುಟ್ಟಿ ಈ ಲೇಖನ ಓದಿದ ಮೇಲೆ ಜೋರಾಗಿ ನಕ್ಕಿದ್ದನ್ನ ಕೇಳಿದ ರಾಮನಗರದ ಹಾದಿಯಲ್ಲಿರುವ ಕೆಂಗಲ್ ಹನುಮಂತರಾಯ ಒಮ್ಮೆ ಜೋರಾಗಿ ನಕ್ಕನಂತೆ ಹಾಗೂ ಆಶೀರ್ವಾದವಾಗಿ ಒಮ್ಮೆ ಕೆಂಗಲ್ ನಲ್ಲಿನ ಹನುಮಂತನ ದೇವಸ್ಥಾನಕ್ಕೆ ಭೇಟಿ ನೀಡಬೇಕು ಎಂದು ಆದೇಶಪೂರ್ವಕವಾಗಿ ಆಶೀರ್ವಾದ ನೀಡಿದನಂತೆ!!!!!

24 comments:

  1. ಪ್ರೀತಿಯ ಮುದ್ದಕ್ಕಾ ,
    ಜನುಮ ದಿನದ ಪ್ರೀತಿಯ ಶುಭಾಶಯ ನಿಮಗೆ ...

    ಭಾವಗಳ ತೇರಲ್ಲೇ ಜೊತೆಯಾಗಿ, ಬ್ಲಾಗಿಗರ ಮೊದಲ ಆತ್ಮೀಯತೆ ತೋರಿ,ಮುದ್ದಕ್ಕನಾಗಿ,ತರಲೆ ಗೆಳತಿಯಾಗಿ,ಒಂದಿಷ್ಟು ನನ್ನದೇ ಭಾವಗಳ ಒಡತಿಯಾಗಿ,
    ಮೌನರಾಗದಿ ಬ್ಲಾಗಿರನ್ನೆಲ್ಲಾ ಮೋಡಿ ಮಾಡೋ ಸುಷ್ಮಕ್ಕಾ ಅಂದ್ರೆ ಎಲ್ರಿಗೂ ಇಷ್ಟ :)
    ಹೀಗೊಬ್ಬ ಗೆಳತಿ ನಂಗೂ ತೀರಾ ಹತ್ತಿರವಾಗಿದ್ದು ನನ್ನ ಖುಷಿ ..

    ಮನದ ಜೋಳಿಗೆಯಲೇ ನಾಜೂಕು ಭಾವಗಳ ಮಹಲ ಕಟ್ಟಿಕೊಳೋ ಕನಸು ಕಂಗಳ ಹುಡುಗಿಗೆ ,
    once again yappy yappy b'day

    ಶ್ರೀಕಾಂತಣ್ಣ ,ಎಂದಿನಂತೆ ಚಂದ :)
    ಆತ್ಮೀಯರ ಜನುಮ ದಿನಕ್ಕೆ ನೀವು ಕಟ್ಟಿಕೊಡೋ ಭಾವವ ಓದೋಕಂತಾನೇ ಕಾಯ್ತಿರ್ತೀನಿ ನಾನೂ :)
    ಪ್ರೀತಿಯ ಅಕ್ಕಂಗೆ ಪ್ರೀತಿಯ ಅಣ್ಣ ಕಟ್ಟಿಕೊಟ್ಟ ಸಾಲು ಸಾಲು ಭಾವಗಳ ಜನುಮ ದಿನದ ಉಡುಗೊರೆ ತುಂಬಾ ಇಷ್ಟವಾಯ್ತು .

    ReplyDelete
    Replies
    1. ಪುಟ್ಟಕ್ಕಾ...
      ಈ ನಿನ್ನ ಮುದ್ದು ಮುದ್ದು ಅಕ್ಕರೆಯ ಮಾತುಗಳಿಗೆ ಏನೆನ್ನಲಿ..?
      ಥ್ಯಾಂಕ್ಸ್ಸು ಕಣೆ ಹುಡುಗಿ...

      Delete
  2. ನನಗೆ ಸದಾ ಅಚ್ಚರಿಯಲ್ಲಿ ಕೆಡವುವ ಹನಿಗಳ ಮೂಲಕ ಮನ ಗೆದ್ದ ಅಪರೂಪದ ಕವಿಯತ್ರಿ ಸುಷ್ಮಾ. ಶ್ರೀಮಾನ್ ಒಳ್ಳೆಯ ಜನುಮದಿನದ ಉಡುಗೊರೆ ಈ ನಿಮ್ಮ ಬ್ಲಾಗ್ ಬರಹ. ಭೇಷೂ...

    ಆಕೆ ಮೂಡಬಿದಿರೆಯಲ್ಲಿದ್ದಾಗಲೂ ಮತ್ತು ಬೆಂಗಳೂರಿಗೆ ಬಂದ ಮೇಲೂ ನನಗೆ 'ಬದಲಾಗಲೇ ಇಲ್ಲವಲ್ಲ ಈ ಹುಡುಗಿ' ಎನ್ನುವ ಇನ್ನೊಂದು ಅಚ್ಚರಿಗೆ ಈಡು ಮಾಡಿದಾಕೆ.

    ಹನಿಗಳಿಗೂ, ಕವಿತೆಗಳಿಗೂ ಮತ್ತು ಪ್ರಬಂಧ ಶೈಲಿಗೂ ಸೈ ನಮ್ಮ ಸುಷ್ಮಾ.

    ಈ ಕೆಳಗಿನ ಸಾಲುಗಳು ಅವರ ಮನಸ್ಥಿತಿಯನ್ನು ತೋರುವ ಭಾವ:
    "ಹೃದಯದ ಭಾಷೆಗೆ ಮಾತೇಕೆ
    ಅಲ್ಲೊಂದು ಪುಟ್ಟ ತಣ್ಣಗಿನ ನಗು ಇರುವಾಗ?"

    ಇಂದು ನಿಮ್ಮ ಜನುಮಡಿನ ಖುಷಿಯಾಗಿರಿ ಎಂದೆಂದೂ ಎಂಬುದೇ ನಮ್ಮ ಹಾರೈಕೆ.

    ReplyDelete
    Replies
    1. ಸಾರ್,
      ಅಲ್ಲಿದ್ದಾಗಲೂ ಇಲ್ಲಿಗೆ ಬಂದಾಗಲೂ ಅದೇ ಪ್ರೋತ್ಸಾಹ ನಿಮ್ಮಿಂದ ದಕ್ಕಿದೆ ನನಗೆ.. ನಿಮ್ಮ ಪ್ರೀತಿಯಲ್ಲಿ ಕಿಂಚಿತ್ತೂ ವ್ಯತ್ಯಾಸವಾಗಿಲ್ಲದೇ ಇರುವಾಗ ನಾ ಹೇಗೆ ತಾನೇ ಬದಲಾಗಲಿ? ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುವಾಗ ಸದಾ ನಾನು ನಾನೇ..ಹೀಗೆ ಇದ್ದುಕೊಂಡು ನಿಮ್ಮೆಲ್ಲರ ಪ್ರೀತಿಯ ಮತ್ತಷ್ಟು ದೋಚುವ ಆಸೆಯಿಂದ...
      ಧನ್ಯವಾದಗಳು ಸರ್....

      Delete
  3. ನಮ್ಮ ಶ್ರೀಕಾಂತ್ ಸ್ನೇಹ್ಸ್ದ ಬಲೆಯಲ್ಲಿ ಬಿದ್ದರೆ , ಯಾರು ನೀಡ ಇಂತಹ ಅಮೂಲ್ಯ ಉಡುಗೊರೆ ದೊರೆಯುತ್ತದೆ, ಅಕ್ಷರಗಳಲ್ಲೇ ಮೋದಿ ಮಾಡುವ ಅವರ ಸ್ನೇಶಕ್ಕೆ ಶರಣು ಎನ್ನದೆ ವಿದಿಯಿಲ್ಲ, ಜನುಮದಿನದ ಹಾರ್ದಿಕ ಶುಭಾಶಯಗಳು ಸುಷ್ಮಾ,

    ReplyDelete
  4. ಸೂಪರ್ ಶ್ರೀಕಾಂತ್ ಜೀ .. ಹುಟ್ಟು ಹಬ್ಬದ ಶುಭಾಶಯಗಳು ಸುಷ್ಮಾ...

    ReplyDelete
    Replies
    1. ಧನ್ಯವಾದಗಳು ಮೇಡಂ ಜೀ...

      Delete
  5. ಅಣ್ಣಾ ನನ್ನ ಕೋತಿ ಗೆ ಚಂದದ ಶುಭಾಷಯ ಹೇಳಿದ್ದೀರಾ ... :)

    ಕನಸು ಕಂಗಳಲೆ ಮೌನ ರಾಗ ಹಾಡುವ ಮುದ್ದಿನ ಗೆಳತೀ ...

    ಹ್ಯಾಪಿ ಬರ್ತ್ ಡೇ ಕಣೆ ...

    ಕೆನ್ನೆಗುಳಿಯಲ್ಲಿ ಯಾವತ್ತಿಗೂ ನಗು ತುಂಬಿರಲಿ ...

    ನೆನಪಿರಲಿ ನಿಂಗೆ ನಕ್ಕರೆ ಮಾತ್ರ ಕೆನ್ನೆಯಲ್ಲಿ ಗುಳಿ ಬೀಳುತ್ತೆ ... :) :)

    ReplyDelete
    Replies
    1. ನಿಮ್ಮೆಲ್ಲರ ಪ್ರೀತಿ ದೊರಕಿದೆ.. ಖುಷಿಯಾಗಿರಲು ಇದಕ್ಕಿಂತ ದೊಡ್ಡ ಕಾರಣ ಬೇಕೆನೇ ಹುಡುಗಿ... ಚಂದದ ಹಾರೈಕೆಗೆ ಧನ್ಯವಾದಗಳು... :)

      Delete
  6. ಪ್ರೀತಿಯ ಸುಷ್ಮಾ ಹುಟ್ಟು ಹಬ್ಬದ ಶುಭಾಷಯಗಳು.... :-)

    ಶ್ರೀಕಾಂತ್ ಎಂದಿನಂತೆ ಚಂದದ ಸಾಲುಗಳು..... :-)

    ReplyDelete
    Replies
    1. ಧನ್ಯವಾದಗಳು ಅಕ್ಕಾ ...

      Delete
  7. ಅಣ್ಣಯ್ಯಾ...
    ಮನ ತುಂಬಿ ಬಂತು ನಿಮ್ಮ ಆಶೀರ್ವಾದ ತುಂಬಿದ ಶುಭಾಶಯ ಕಂಡು... ಸಂತೋಷ ನೂರ್ಪಟ್ಟಗಿದೆ.. ಕಾರಣ ನೀವುಗಳೇ..
    ಈ ಖುಷಿಗೆ ಥ್ಯಾಂಕ್ಸ್ ಗಳು ಕಮ್ಮಿಯೇ..
    ಆದರೂ...
    ಧನ್ಯವಾದಗಳು ಅಣ್ಣಯ್ಯ ಚಂದದ ಉಡುಗೊರೆಗೆ.. ಈ ವಿಶ್ವಾಸಕ್ಕೆ.. ಈ ಪ್ರೀತಿಗೆ...

    ReplyDelete
  8. ಲೇಖನ ಓದಿದ ಮೆಚ್ಚಿದ ಪುಟ್ಟಿ ಸುಷ್ಮಾಗೆ ಹರಸಿದ, ಹಾರೈಸಿದ ಎಲ್ಲರಿಗೂ ಧನ್ಯವಾದಗಳು

    ReplyDelete
  9. nivu bareda reeti super.... Birthday wish maaDida reeti tumbaa khushiyaaytu sir....

    May god bless Sushma..

    ReplyDelete
    Replies
    1. ಧನ್ಯವಾದಗಳು ದಿನಕರ ಸಾರ್

      Delete
    2. ದಿನಕರ್ ಸರ್ ತುಂಬಾ ಧನ್ಯವಾದಗಳು..
      ನಿಮ್ಮ ಆಶೀರ್ವಾದ ಇಂತೆಯೇ ಇರಲಿ...

      Delete
  10. ಚಂದದ ಬರಹ.
    ಸ್ವಲ್ಪ ತಡವಾಯ್ತು ಆದರೂ ಶುಭಾಶಯಗಳು ಸುಷ್ಮಾ :)

    ReplyDelete
  11. wonderful way to wish somebody on their birthday :) superb writing ..... and many many happy returns of the day to Sushma :)

    ReplyDelete
    Replies
    1. ಅಣ್ಣಯ್ಯ ಆಲ್ವೇಸ್ ಸುಪರ್ಬ್ ...

      ಧನ್ಯವಾದಗಳು ಮೇಡಂ....

      Delete
  12. Very nice....ನನ್ನೂರಾದ ಮೂಡಬಿದ್ರೆಯ ಬಗ್ಗೆ, ಸಾವಿರಕಂಬದ ಬಸದಿಯ ಬಗ್ಗೆ, ಹಾಗೆಯೇ ನೀವು ಹುಟ್ಟು ಹಬ್ಬದ ಸುಭಾಶಯ ಕೋರಿದ ರೀತಿ ಓದಿ ತುಂಬಾ ಖುಶಿಯಾಯಿತು.

    ReplyDelete