Sunday, December 9, 2012

" ಅವಳು ಮತ್ತೊಬ್ಬಳು " ರಶ್ಮಿ (ತೆಂಡೂಲ್ಕರ್) ಕಾಸರಗೋಡು - 09.12.12

ಚಿಕ್ಕವನಾಗಿದ್ದಾಗಿನಿಂದಲೂ ನಮ್ಮ ದೇಶದ ಅ(ನ)ಧಿಕೃತ ರಾಷ್ಟ್ರೀಯ ಆಟವೇ ಆಗಿ ಹೋಗಿರುವ ಕ್ರಿಕೆಟ್ ಬಗ್ಗೆ ತುಸು ಕಾಳಜಿ ಇತ್ತು...೧೯೮೩ ರಲ್ಲಿ ಕಪಿಲ್ ಡೆವಿಲ್ಸ್ ವಿಶ್ವ ಕಪ್ ಗೆದ್ದಾಗ ಅದು ಇನ್ನಷ್ಟು ಹೆಚ್ಚಿತು.  ಆಗ ಪಿಂಚ್ ಹಿಟ್ಟರ್ ಆಟವನ್ನು ಶುರು ಮಾಡಿದ್ದ ಕೃಷ್ಣಮಾಚಾರಿ ಶ್ರೀಕಾಂತ್ ತುಂಬಾ ಪ್ರಸಿದ್ಧಿಯಾಗಿದ್ದರು. ನನ್ನ ಶಾಲಾ ದಿನಗಳಲ್ಲಿ ನನ್ನ ಸಹಪಾಟಿಗಳು ನನ್ನ ಕೆ.ಎಂ. ಶ್ರೀಕಾಂತ್ ಅನ್ನುವ ಬದಲು  ಕೃಷ್ಣಮಾಚಾರಿ ಶ್ರೀಕಾಂತ್ ಎಂದು ಕರೆಯುತಿದ್ದಿದ್ದು ಬಾಣಲೆಯಲ್ಲಿ ಪೂರಿ ಉಬ್ಬಿದಷ್ಟೇ ಸುಲಭವಾಗಿ ಮನಸ್ಸು ಹಾರಾಡುತಿತ್ತು....

ಅರೆ ಏನೋ ಬರೆಯುತಿದ್ದಾನೆ ಈ ಕ(ವಿ)ಪಿರಾಯ ಎಂದು ಮುನಿಸಿಕೊಳ್ಳಬೇಡಿ...ತನ್ನ ಹೆಸರಿನ ಜೊತೆಗೆ ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನ ಹೆಸರನ್ನು ಸೇರಿಸಿಕೊಂಡು ಕಿಚ್ಚೆಬ್ಬೆಸಿಕೊಳ್ಳುವಷ್ಟು ಕ್ರೀಡಾಭಿಮಾನ ಮೆರೆಯುತ್ತಿರುವ                                      ರಶ್ಮಿ (ತೆಂಡೂಲ್ಕರ್) ಕಾಸರಗೋಡು ಅವರ ಎರಡನೇ ಕೃತಿಯಾದ " ಅವಳು ಮತ್ತೊಬ್ಬಳು " ಲೋಕಾರ್ಪಣೆ ಸಮಾರಂಭಕ್ಕೆ ಹೋದಾಗ ಮನದಲ್ಲಿ ಹಾರಾಡಿದ ಮಾತುಗಳು ಈ ಲೇಖನಕ್ಕೆ ಮುನ್ನುಡಿಯಾಯಿತು.

ಕ್ರಿಕೆಟ್ ಅಂಗಣದಂತೆ ನಿಧಾನವಾಗಿ ಪುಸ್ತಕ ಪ್ರೇಮಿಗಳು, ಬ್ಲಾಗ್ ಲೋಕದ ತಾರೆಗಳು, ಜಗಮಗಿಸುವ ಸಿನಿಮಾ, ರಂಗಭೂಮಿಯ ನಕ್ಷತ್ರಗಳು ಪತ್ರಿಕಾ ಲೋಕದ ಧ್ರುವತಾರೆಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಮಾಂತ್ರಿಕ ಸ್ಪರ್ಶ ಉಳ್ಳವರು ಎಲ್ಲರೂ ನಿಧಾನವಾಗಿ ಆಸೀನರಾಗುತಿದ್ದರು.

ಮುದ್ದು ಪುಟಾಣಿಯ ಸುಮಧುರ ಗೀತೆಯೊಂದಿಗೆ ಶುರುವಾದ ಕಾರ್ಯಕ್ರಮ ನಿಧಾನವಾಗಿ ಕಾವೇರತೊಡಗಿತು...ಶ್ರೀಮತಿ. ಸುಮತಿಯವರ ಸುಲಲಿತ ನಿರೂಪಣೆ ಸುಶ್ರಾವ್ಯ ಸಂಗೀತ ನಾದದಂತೆ ನಾವು ತಲೆದೂಗುವಂತೆ ಉಲಿಯುತ್ತಿತ್ತು...ನಂತರ ವೇದಿಕೆಯ ಮೇಲಿನ ಪ್ರತಿಯೊಬ್ಬ ಗಣ್ಯರ ಪರಿಚಯ, ಅವರ ಸಾಧನೆಗಳು, ಪರಿಶ್ರಮಗಳು, ಅದರ ಮಜಲುಗಳನ್ನ ಸುಲಲಿತವಾಗಿ ಪರಿಚಯ ಮಾಡಿಕೊಟ್ಟ ಅವರ ಪ್ರತಿಭೆ ಅಭಿನಂದನೀಯ.

ಮೊದಲಿಗೆ ಮಾತು ಆರಂಭಿಸಿದ ಕಿರುತೆರೆ ಹಾಗೂ ರಂಗಭೂಮಿ ಖ್ಯಾತಿಯ ಶ್ರೀಮತಿ. ಜಯಲಕ್ಷ್ಮಿ ಪಾಟೀಲ್ ಪುಸ್ತಕದ ಭಾವ ಪರಿಚಯವನ್ನು ಮಾಡಿಕೊಟ್ಟರು. ಮಹಿಳೆ ಎನ್ನುವ ಒಂದು ಪದವೇ ಸಾಕು ಶಕ್ತಿ ತುಂಬಲು, ಅಂತಹ ಅನೇಕ ಮಹಿಳಾ ಮಣಿಗಳ ಪುಸ್ತಕದ ಬಗ್ಗೆ ಹೇಳಿದ ಮಾತುಗಳು ಒಂದೊಂದು ನುಡಿಮುತ್ತುಗಳು.

ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಶ್ರೀ. ಪುಂಡಲೀಕ ಹಾಲಂಬಿಯವರು ಕನ್ನಡ ನಾಡು, ಬರವಣಿಗೆ ಭಾಷೆ, ಲೇಖಕಿಯ ಪರಿಶ್ರಮ ಎಲ್ಲದರ ಬಗ್ಗೆ ಹೊರಬಂದ ಮಾತುಗಳು ಯಾವುದೇ ಸಾಧನೆಯ ಹಾದಿಯಲ್ಲಿರುವ ವ್ಯಕ್ತಿಗೆ ಜೀವ ಚೈತನ್ಯ ತುಂಬುವ ಹುಮ್ಮಸ್ಸಿನ ಶಕ್ತಿಯುತ ಔಷಧಿ.

ಬಣ್ಣದ ಜಗತ್ತು ವರ್ಣಮಯ ಅಲ್ಲಿ ಎಲ್ಲವು ಕನಸುಗಳ ಲೋಕವೇ ಎನ್ನುವ ಮಾತನ್ನು ಆಡುತ್ತಲೇ ತಮ್ಮೊಳಗಿನ ಓದುಗಾರ್ತಿಯನ್ನ ಪರಿಚಯ ಮಾಡಿಕೊಟ್ಟ ಕನ್ನಡದ ಪ್ರತಿಭೆ ನೀತು ಅವರ ನಿರರ್ಗಳ ಮಾತು ಸಿನಿಮಾ ಜಗತ್ತಿನ ಹಾಯಿ ದೋಣಿಯಲ್ಲಿ ಪಯಣಿಸಿದ ಅನುಭವ ಮೂಡಿಸಿ ಕೊಟ್ಟಿತು.

ಕನ್ನಡ ಪ್ರಭದ ಶ್ರೀ. ರಾಧಾಕೃಷ್ಣ ಭಡ್ತಿ ಅವರಿಗೆ ನೀರಿನಿಂದ ನೀರೆಯರ ಬಗ್ಗೆ ಮಾತಾಡುವ ಬಡ್ತಿ ಕೊಡಿಸಿದ ಈ ಸಮಾರಂಭದಲ್ಲಿ  ಅವರ ಮಾತುಗಳು ಬ್ಲಾಗ್ ಲೋಕ, ಸಾಹಿತ್ಯ ಲೋಕ, ಪತ್ರಿಕಾ ರಂಗ, ಭಾಷೆಯ ಅಭಿಮಾನ ವಿಷಯಗಳು ನಿರಾಳವಾಗಿ ನಮ್ಮ ಮನದಲ್ಲಿ ಹರಿದಾಡಲು ಶುರುಮಾಡಿದವು..

ಅಧ್ಯಕ್ಷ ಸ್ಥಾನದಲ್ಲಿದ್ದ ಹಿರಿಯ ಪತ್ರಕರ್ತರಾದ ಶ್ರೀ. ಜೋಗಿಯವರ ವಾಸ್ತವ ಮಾತುಗಳು, ಮಹಾಭಾರತದ ಸಣ್ಣ ಕತೆಯನ್ನು ವಾಸ್ತವಕ್ಕೆ ಹೋಲಿಸಿ ಮಾತಾಡಿದ ರೀತಿ ಗಮನಸೆಳೆಯಿತು.

ಇನ್ನೇನು ವಿಶೇಷ ಕಾರ್ಯಕ್ರಮವಿದೆ ಎನ್ನುವಾಗ ಮಹಿಳ ಮಣಿ ಕ್ರಿಕೆಟ್ ಬ್ಯಾಟನ್ನು ಬಿಟ್ಟು ಮೈಕ್ ಮುಂದೆ ನಿಂತರು.  ಈಗಿನ ಟ್ವೆಂಟಿ -೨೦ ಹೊಡಿ ಬಡಿ ಆಟಕ್ಕಿಂತ ರಭಸವಾಗಿದ್ದ ಮಾತುಗಳು ಶುರುವಾದವು ಲೇಖಕಿ ರಶ್ಮಿ ಕಾಸರಗೋಡು ಅವರಿಂದ.  ನಾವು ಬರಿ ಸಚಿನ್ ಸ್ಟ್ರೈಟ್ ಡ್ರೈವ್ ಬೌಂಡರಿ, ಸಿಕ್ಸರ್ ನೋಡಿದ್ದ ನಮಗೆ ಈ ಚುರುಕು ಮಾತುಗಳು, ಹೃದಯದಿಂದ ಮೂಡಿಬಂದ ಅನುಭಾವ ಅನಿಸಿಕೆಗಳು ವಾಹ್ ಎನ್ನುವಂತೆ ಮಾಡಿತು. ಈಕೆ ಬರಿ ಲೇಖಕಿ ಮಾತ್ರವಲ್ಲ ಅದ್ಭುತ ಮಾತುಗಾರ್ತಿ ಎನ್ನುವುದು ಅವರೇ ಹೇಳಿದ ಆಶುಭಾಷಣ ಸ್ಪರ್ಧೆಗಳ ಮಾತುಗಳಿಂದ ಧೃಡಪಟ್ಟಿತ್ತು...ಸ್ಲಾಗ್ ಓವರಿನ ಬ್ಯಾಟಿಂಗಿನಂತೆ ರನ್ನಗಳನ್ನ ರಶ್ಮಿಬಾರಿಸಿಬಿಟ್ಟರು....

ಸುಂದರ, ಸರಳ, ಕಾರ್ಯಕ್ರಮವನ್ನು ಅಭಿಮಾನ, ಗೆಳೆತನ, ವಿಶ್ವಾಸ ಇವುಗಳನ್ನೆಲ್ಲ ತುಂಬಿಕೊಂಡು ಬಂದಿದ್ದವರಿಗೆ ಒಂದು ಭಾನುವಾರ ಬೆಳಗನ್ನು ಅಚ್ಚುಕಟ್ಟಾಗಿ ಸಾರ್ಥಕತೆಯಿಂದ ಕಳೆದ ಬಗ್ಗೆ ಹೆಮ್ಮೆಯಿತ್ತು. ನೆಮ್ಮದಿಯಿಂದ ತುಂಬಿಬಂದ ಭಾರವಾದ ಹೃದಯಗಳನ್ನು ಹೊತ್ತು ತಮ್ಮ ತಮ್ಮ ಮನೆಗೆ ತೆರೆಳುತಿದ್ದಾಗ ಅಲ್ಲೇ ನಿಂತು ನೋಡುತಿದ್ದ ರಶ್ಮಿ...ಸಚಿನ್ ಶತಕ ಬಾರಿಸಿದಾಗ ಆಗಸಕ್ಕೆ ಮುಖ ಮಾಡಿ ಧನ್ಯತೆಯನ್ನು ಅನುಭವಿಸುತ್ತಿದ್ದ ರೀತಿ ನೆನಪಿಗೆ ಬಂತು.

ಈ ಸುಂದರ ಕಾರ್ಯಕ್ರಮಕ್ಕೆ ಹಾಜರಾಗಲು ಸೂಚಿಸಿದ ಇಟ್ಟಿಗೆ ಸಿಮೆಂಟ್ ಬ್ಲಾಗಿನ ಶ್ರೀ ಪ್ರಕಾಶ ಹೆಗಡೆಯವರಿಗೆ ವಂದನೆಗಳು.

ರಶ್ಮಿ ನಿಮ್ಮ ಎಲ್ಲ ಪ್ರಯತ್ನಗಳಲ್ಲಿ ಸಾಧನೆಗಳ ಹಾದಿಯಲ್ಲಿ ಯಶ ನಿಮ್ಮದಾಗಲಿ ಸೂರ್ಯನ ಯಶಸ್ಸಿನ ರಶ್ಮಿ ನಿಮ್ಮ ಬಾಲ ಪಥದಲ್ಲಿ ಸದಾ ಪಸರಿಸುತ್ತಿರಲಿ ಎನ್ನುವ ಹಾರೈಕೆಯೊಂದಿಗೆ ನಿಮ್ಮ ಎರಡನೇ ಕೃತಿ "ಅವಳು ಮತ್ತೊಬ್ಬಳು" ಲೋಕರ್ಪನೆಯ ಸಂಧರ್ಭದಲ್ಲಿ  ಬ್ಲಾಗ್ ಲೋಕದ ಸ್ನೇಹಮಯ ಹೃದಯಗಳ ಪರವಾಗಿ ಶುಭಕೊರುತಿದ್ದೇನೆ..

30 comments:

  1. ಧನ್ಯವಾದಗಳು ಶ್ರೀಕಾಂತ್.. ಒಂದೊಳ್ಳೆ ಕಾರ್ಯಕ್ರಮದ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ. ಅಭಿನಂದನೆಗಳು ರಶ್ಮಿ..

    ReplyDelete
    Replies
    1. ಸುಗುಣ ಮೇಡಂ ನಿಮ್ಮ ಪ್ರತಿಕ್ರಿಯೆ ನನ್ನನ್ನು ಹಕ್ಕಿಯ ಹಾಗೆ ಹಾರಾಡಿಸುತ್ತಿದೆ..ಧನ್ಯವಾದಗಳು

      Delete
  2. ಒಂದು ಒಳ್ಳೆಯ ಕಾರ್ಯಕ್ರಮದ ಬಗ್ಗೆ ಅಚ್ಚುಕಟ್ಟಾಗಿ ಶಾರ್ಟ್ & ಸ್ವೀಟ್ ಆಗಿ ಹೇಳಿದ್ದಿರಿ ಅಣ್ಣಯ್ಯ...
    ಅಭಿನಂದನೆಗಳು...

    ReplyDelete
    Replies
    1. ಪಿ.ಎಸ್ ..ನಿಮ್ಮ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು...ಈ ಸಮಾರಂಭ ನನಗೆ ಅರಿವಿಲ್ಲದೆ ಮನಕ್ಕೆ ತುಂಬಾ ಮುದ ಕೊಟ್ಟಿದೆ...ಕಾರಣ ಮಾತ್ರ ಗೊತ್ತಿಲ್ಲ...

      Delete
  3. ನಮಸ್ತೆ...

    ನನ್ನ ಕಾರ್ಯಕ್ರಮದ ಬಗ್ಗೆ ಎಷ್ಟೊಂದು ಸೊಗಸಾಗಿ ಬರೆದಿದ್ದೀರಾ..ನನ್ನಿ...ನಿಮ್ಮ ಈ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ

    -ರಶ್ಮಿ ಕಾಸರಗೋಡು

    ReplyDelete
    Replies
    1. ರಶ್ಮಿ..ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನಿಸಿದ ನಿಮಗೂ...ಹಾಗು ಮತ್ತೆ ಹೇಳಿದ ಪ್ರಕಾಶಣ್ಣ ಅವರಿಗೂ ಧನ್ಯವಾದಗಳು...ನಿಮ್ಮ ಪುಸ್ತಕ ಓದಿ ನನ್ನ ಅನಿಸಿಕೆ ತಿಳಿಸುವೆ.ಅಭಿನಂದನೆಗಳು ಕಾರ್ಯಕ್ರಮ ಫುಲ್ ಸಿಕ್ಸರ್..ಸೂಪರ್.

      Delete
  4. ಶ್ರೀಕಾಂತ್ ಸರ್. ಕಾರ್ಯಕ್ರಮದ ವಿವರಗಳನ್ನು ಚುಟುಕಾಗಿ ಚೆನ್ನಾಗಿ ಪರಿಚಯಿಸಿದ್ದೀರಿ...
    ಕನ್ನಡಪ್ರಭದಲ್ಲಿ ಅವರ ಲೇಖನಗಳನ್ನು ಓದುತ್ತಿರುತ್ತೇನೆ. ರಶ್ಮಿ ತೆಂಡುಲ್ಕರ್ ತುಂಬಾ ಚೆನ್ನಾಗಿ ಬರೆಯುತ್ತಾರೆ..
    ನನಗೆ ಮತ್ತೊಂದು ಕಡೆ Photography assignment ಇದ್ದಿದ್ದರಿಂದ ಒಂದೊಳ್ಳೆಯ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡೆ.
    ರಶ್ಮಿಯವರಿಗೆ ಅಭಿನಂದನೆಗಳು.

    ReplyDelete
    Replies
    1. ಶಿವೂ ಸರ್..ನಿಮ್ಮ ಕ್ಯಾಂಡಿಡ್ ಕ್ಯಾಮೆರಾ ಇದ್ದಿದ್ದರೆ ಇನ್ನಷ್ಟು ಸೊಗಸಿರುತಿತ್ತು...ಇರಲಿ..ಇನ್ನೊಂದು ಅವಕಾಶ ಸಿಕ್ಕೆ ಸಿಗುತ್ತದೆ..ಸುಂದರ ಪ್ರತಿಕ್ರಿಯೆ ನಿಮ್ಮದು..ಸಂತಸವಾಯಿತು..

      Delete
  5. ಶ್ರೀ....

    ತುಂಬಾ ಸುಂದರ..
    ಭಾವಪೂರ್ಣ ಕಾರ್ಯಕ್ರಮ ಅದಾಗಿತ್ತು...........

    ReplyDelete
    Replies
    1. ಪ್ರಕಾಶಣ್ಣ ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಕಡಿಮೆ..ಒಳ್ಳೆಯ ಕಾರ್ಯಕ್ರಮಕ್ಕೆ ಬರ ಹೇಳಿದ್ದು..ತುಂಬಾ ಖುಷಿಯಾಯಿತು...ಅತಿ ಮನಸನ್ನು ಮುದಗೊಳಿಸಿದ ಕಾರ್ಯಕ್ರಮ ಇದಾಗಿತ್ತು...

      Delete
    2. ಆತ್ಮೀಯ ಶ್ರೀಕಾಂತ,
      ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಆಹ್ವಾನ ನಂಗೂ ಇತ್ತು. ಆದರೆ, ನಿನ್ನ ವರದಿ ಇಷ್ಟು ಬೇಗ ಬರುತ್ತೆ ಅಂತ ಖಂಡಿತ ಗೊತ್ತಿರಲಿಲ್ಲ. ಶಾರ್ಟ್ ಅಂಡ್ ಸ್ವೀಟ್ ಆಗಿ ನಿನ್ನದೇ ಆದ ಸೂಪರ್ ಸ್ಟೈಲಿನಲ್ಲಿ ಬರೆದ್ದಿದ್ದಿಯ. ಪುಸ್ತಕ ಓದಿದ ಮೇಲೆ ನಿನ್ನ ಪುಸ್ತಕ ವಿಮರ್ಶೆಯು ಬರಲಿ.
      ನಿನ್ನ ರಿಪೋರ್ಟ್ ಓದಿದರೆ ನೀನೆ ಬೇರೆ, ನಿನ್ನ ಸ್ಟೈಲೇ ಬೇರೆ ಅನಿಸುತ್ತೆ!!!

      Delete
    3. ಸುಂದರ ಪ್ರತಿಕ್ರಿಯೆ ಚಿಕ್ಕಪ್ಪ..ತಾಂತ್ರಿಕತೆ ಬಂದು ವಿಶ್ವವೇ ಒಂದು ಹಳ್ಳಿಯಾಗಿರುವಾಗ..ಹಳ್ಳಿಯಲ್ಲಿ ನಡೆಯುವ ಒಂದು ಕಾರ್ಯಕ್ರಮ ಬಯಲಿಗೆ ಮುಟ್ಟುವುದು ಎಷ್ಟರ ಹೊತ್ತು ಹೇಳಿ..ಅಲ್ಲವೇ..ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ..ಮತ್ತು ಹಾರೈಕೆಗಳಿಗೆ..

      Delete
  6. ಕಾರ್ಯಕ್ರಮದ ವರ್ಣನೆ ನೋಡಿಯೇ ಮತ್ತೆ ಹೊಟ್ಟೆ ಉರಿಯಿತು.

    ಮಿಸ್ಸಾಯಿತಲ್ಲ ಶ್ರೀಮಾನ್ !

    ReplyDelete
    Replies
    1. ಬದರಿ ಸರ್ ಒಂದು ಈನೋ ಇಲ್ಲವೇ ಒಂದು ಗೋಲಿ ಸೋಡಾ ಕುಡಿದು ಬಿಡಿ...ಯೋಚನೆ ಬೇಡ ಸರ್ ಇನ್ನೊಮ್ಮೆ ಅವಕಾಶ ಸಿಗುತ್ತೆ ಮತ್ತೆ ಸಿಗುವ..

      Delete
  7. naanu karyakaramakke bandashTE khushiyaaytu....
    nimma nirupaNe chennaagide..

    ReplyDelete
    Replies
    1. ಧನ್ಯವಾದಗಳು ದಿನಕರ್ ಸರ್...ಕಾರ್ಯಕ್ರಮ ಅಚ್ಚುಕಟ್ಟು...ರಶ್ಮಿಯವರ ರ(ಭ)ಸ ಭಾಷಣ ಇದರ ಹೈ ಲೈಟ್...

      Delete
  8. Power Play ಯಲ್ಲಿಯೇ ಒಳ್ಳೆಯ ಸ್ಕೋರನ್ನ ಹೊಡೆಯುವ ಮುಖೇನ ಒಳ್ಳೆಯ ಆರಂಭವನ್ನೇ ಕೊಟ್ಟು, ಕಾರ್ಯಕ್ರಮದ ಬಗ್ಗೆ ಚೆಂದನೆಯ ರಂಗನ್ನ ಕೊಟ್ಟಿದ್ದೀರ ತುಂಬಾ ಇಷ್ಟವಾಯ್ತು.

    ಶುಭಾಶಯಗಳು :-)

    ReplyDelete
    Replies
    1. ವಾಹ್ ಚಿಕ್ಕ ಮಾತಿನಲ್ಲೇ ಇಡಿ ಸಾರಾಂಶ ಹೇಳಿ ಬಿಟ್ಟಿರಿ...ಧನ್ಯವಾದಗಳು ರಾಘವ...

      Delete
  9. ಕಾರ್ಯಕ್ರಮಕ್ಕೆ ನಾನೇ ಹಾಜರಾದ ಅನುಭವ, ಪ್ರಕಾಶ ಹೇಳಿದ್ದ ಹೋಗ್ತೀನಿ ಅಂತ.. ಅಂಜಲಿ ರಾಮಣ್ಣ ಸಹ ಪುಸ್ತಕ ಲೋಕಾರ್ಪಣೆ ಮಾಡಿದ್ದು ಅಂದೇ ಅಲ್ಲವೇ/// ಭರ್ಜರಿ ಕಾರ್ಯಕ್ರಮಗಳು..ತಕ್ಕ ವಿವರಣೆ ಶ್ರೀಕಾಂತ್ ಚನ್ನಾಗಿದೆ/.

    ReplyDelete
    Replies
    1. ಅಜಾದ್ ಸರ್ ತುಂಬು ಹೃದಯದ ಧನ್ಯವಾದಗಳು..ಪ್ರಕಾಶಣ್ಣ ಕರೆದರೂ ನಾನು ಹೋದೆ.ಒಂದು ಸುಂದರ ಕಾರ್ಯಕ್ರಮ ನೋಡಿದ ಅನುಭವ ನನಗಾಯಿತು...ಅಂದೇ ಅಂಜಲಿ ರಾಮಣ್ಣ ಅವರ ಪುಸ್ತಕಗಳು ಲೋಕಾರ್ಪಣಗೊಂಡಿತು ಅನ್ನಿಸುತ್ತೆ

      Delete
  10. ಶ್ರೀ ಸಾರ್..

    ಯಾರದ್ದೇ ಬೌಲಿಂಗ್ ಇರಲಿ ನೀವ್ ಮಾತ್ರ ಇನ್ ಫಾರ್ಮ್ ಬ್ಯಾಟ್ಸಮನ್.. :) :)

    ಗೂಗ್ಲಿ.. ಯಾರ್ಕರ್.. ಫುಲ್ ಟಾಸ್.. ಬೌನ್ಸೆರ್.. ಯಾವ ಬೌಲರ್ ಎಂಥಾ ಬಾಲ್ ಗಾದರೂ ನಿಮ್ಮ ಪ್ರತಿಕ್ರಿಯೆ ಮಾತ್ರ ಅದ್ಭುತ.. :) :)

    ಬಹುಷಃ ಬ್ಲಾಗ್ ಲೋಕದ ಒಬ್ಬ ಅದ್ಭುತ ಬ್ಯಾಟ್ಸಮನ್ ನೀವು..

    ಬ್ಲಾಗ್ ಲೋಕದ ಯಾವ ಅಂಗಳದಲ್ಲಾದರೂ ನಿಮ್ಮ ಬ್ಯಾಟಿಂಗ್ ಯಾವತ್ತಿಗೂ ವಿಭಿನ್ನ & ವೈಭವಯುಕ್ತ ಅನ್ನೋಕೆ ಈ ಲೇಖನವೂ ಒಂದು ಸಾಕ್ಷಿ..

    ಖುಷಿ ಆಯಿತು.. :) :) ಚೆನ್ನಾಗಿ ನಿರೂಪಿಸಿದ್ರಿ.. ಅಲ್ಲಲ್ಲ ಬ್ಯಾಟಿಂಗ್ ಮಾಡಿದ್ರಿ.. ;) ;)

    ನಿಮ್ಮ ಫಾರ್ಮ್ ಯಾವತ್ತಿಗೂ ಹೀಗೆ ಇರಲಿ.. :) :)

    ReplyDelete
    Replies
    1. ಸತೀಶ್ ನಿಮ್ಮ ಪ್ರತಿಕ್ರಿಯೆ ಮೊದಲ ಬಾಲ್ ನಲ್ಲೆ..ಸಿಕ್ಸರ್ ಹೊಡೆದಷ್ಟು ಸಂತೋಷವಾಯಿತು..ಧನ್ಯವಾದಗಳು ನಿಮ್ಮ ಅಭಿಮಾನಕ್ಕೆ.

      Delete
  11. kaaryakramada varnaneyannu
    missmaadikondevalla endukolluvante
    varnisiruva nimage dhanyavaadagalu.

    ReplyDelete
    Replies

    1. ಧನ್ಯವಾದಗಳು ನಿಮ್ಮ ಸಂತಸಭರಿತ ಕೆಲ ಮಾತುಗಳಲ್ಲಿ ಸಮುದ್ರದಷ್ಟು ವಿಶ್ವಾಸ ತೋರುತ್ತದೆ..

      Delete
  12. ಒಳ್ಳೆ ಕಾರ್ಯಕ್ರಮವೊಂದರ ಬಗ್ಗೆ ಸೊಗಸಾದ ವಿವರಣೆ :-)
    ಕೃಷ್ಣಮಾಚಾರಿ ಶ್ರೀಕಾಂತ್ ಅವರಂತೆಯೇ ಹೆಸರಿಟ್ಟುಕೊಂಡ ನೀವು ಒಳ್ಳೇ ಕಾಮೆಂಟ್ರಿಯನ್ನೂ ನೀಡಿದ್ದೀರಿ..
    ರಶ್ಮಿಯವರಿಗೆ ಅಭಿನಂದನೆಗಳು ..
    ಅವರಿಗೆ ತೆಂಡೂಲ್ಕರ್ ಅಂತ ಏಕೆ ಹೆಸರೂ ಅಂತಲೂ ತಿಳಿಸಿದಿದ್ದರೆ ನಮ್ಮಂತ ಹೊಸಬರಿಗೆ ಅನುಕೂಲವಾಗುತ್ತಿತ್ತೇನೋ :-)

    ReplyDelete
    Replies
    1. ಧನ್ಯವಾದಗಳು ಪ್ರಶಾಂತ್...ಹಾಗು ನನ್ನ ಲೋಕಕ್ಕೆ ಸ್ವಾಗತ...
      ರಶ್ಮಿಯವರಿಗೆ ಸಚಿನ್ ತೆಂಡೂಲ್ಕರ್ ಬಗ್ಗೆ ಅಭಿಮಾನ...ಹಾಗೂ ಅವರ ಅಭಿಮಾನಿ ಹಾಗಾಗಿ ರಶ್ಮಿ ಕಾಸರಗೋಡು ಎನ್ನುವ ಹೆಸರನ್ನು ರಶ್ಮಿ ತೆಂಡೂಲ್ಕರ್ ಅಂತ ಬ್ಲಾಗ್ ಲೋಕದಲ್ಲಿ ಪ್ರಚಲಿತರಾಗಿದ್ದಾರೆ..

      Delete
  13. ಓ, ಸರಿ ಸರಿ :-)
    ನನ್ನೆಸುರು ಪ್ರಶಸ್ತಿ ಅಂತಲೇ , ಪ್ರಶಾಂತ್ ಅಲ್ಲ :-)

    ReplyDelete
    Replies
    1. ಒಹ್ ಸರಿ ಸರಿ ...ಈಗ ಗೊತ್ತಾಯ್ತು.ಹಾಗೆಯೆ ಕರೆಯುತ್ತೇನೆ..ಧನ್ಯವಾದಗಳು

      Delete
  14. ಕಾರ್ಯಕ್ರಮದ ವಿವರಣೆ ಚೆನ್ನಾಗಿದೆ

    ReplyDelete
    Replies
    1. ಧನ್ಯವಾದಗಳು ದೀಪ ಸ್ಮಿತಾ (ಇನಿ ದನಿ)

      Delete