Wednesday, March 21, 2018

ಜ್ಞಾನದ ಆಣೆಕಟ್ಟಿಗೆ ಒಂದು ಕಾಗಜ :-)

"ಸರ್ ಸರ್..!"

"ಏನಪ್ಪಾ?"

"ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳನ್ನು  ಬೀದಿಯಲ್ಲಿ ಮಾರುತ್ತಿದ್ದರೆಂದು ಕೇಳಿದ್ದೆ.."  

"ಹೌದು ನೀ ಕೇಳಿದ್ದು ನಿಜಾ ಆರೇಳು ಶತಮಾನಗಳ ಹಿಂದೆ.. ಇವಾಗ ಏನು ಸಮಾಚಾರ?" 

"ಸರ್..  ಅದೇ ತರಹ ಸುಂದರ ಮಾತುಗಳು ,ಒಳ್ಳೆಯ ಅರ್ಥವಿಸ್ತಾರ..ಮುಂತಾದ ಮನಸ್ಸಿಗೆ ನೆಮ್ಮದಿ ಕೊಡುವ ಮಾತುಗಳನ್ನು ಮಾರುವ / ಹಂಚಿಕೊಳ್ಳುವ  ತಾಣವಿದೆಯೇ..  ಇವುಗಳು ಹೇರಳವಾಗಿ ಸಿಗುವ ಜಾಗವಿದೆಯೇ.."

"ನೀ ಭೂಲೋಕಕ್ಕೆ ಬಂದಿರುವುದು ಸರಿಯಾಗಿದೆ.. ಮತ್ತು  ಸರಿಯಾದ ವ್ಯಕ್ತಿಯ ವಿಳಾಸವನ್ನೇ ಕೇಳುತ್ತಿರುವೆ.. ನೋಡು  ಈ ಮನುಜರು ಕಾಡುವ ಸಮಯದಲ್ಲಿ ಸಮಯವನ್ನು ಕಾಡುವುದಕ್ಕೆ ಫೇಸ್ಬುಕ್. .. ವಾಟ್ಸಾಪ್ ಮಾಧ್ಯಮವನ್ನು ಬಳಸುತ್ತಿದ್ದಾರೆ.. ಅದರಲ್ಲಿ   ಶ್ರೀಯುತ ... .. .. .. ... ... ... ... ... ಇವರನ್ನು  ಹುಡುಕು.. ನೀ ಹುಡುಕಿದ್ದಕ್ಕಿಂತ ಹೆಚ್ಚಿಗೆ ಸಿಗುತ್ತದೆ ..ಇದು ಖಂಡಿತವಾದ ಮಾತು!!!"

ಟಕ್ ಅಂತ ಮೊಬೈಲ್ ತೆಗೆದು ಹುಡುಕಿಯೇ ಬಿಟ್ಟಾ.. ಸಿಕ್ಕೇ  ಬಿಟ್ಟಿತು ಹುಡುಕುತ್ತಿದ್ದ ತಾಣ.. 
 
ಹುಡುಕಿದ ತಾಣವಾವುದು ಗೊತ್ತೇ? 

ಕಗ್ಗಗಳನ್ನು ರಸವಾಗಿ ಎಲ್ಲರಿಗೂ ತಲುಪುವುವಂತೆ ಹಂಚಿದ... ಸ್ತೋತ್ರಗಳನ್ನು ಲಘುವಾಗಿ ಅರ್ಥೈಸುವಂತೆ ಹಂಚುತ್ತಿರುವ ಶ್ರೀಯುತ  ತಿರುಮಲೈ ಅವರು 

ಇವರ ಸಾಹಿತ್ಯ ಕೃಷಿಯನ್ನು ಕಂಡು  ಕಗ್ಗಗಳ ಪಿತಾಮಹರೇ ಇವರಿಗೆ ಕನಸಲ್ಲಿ ಬಂದು ಆಶೀರ್ವದಿಸುತ್ತಾರೆ..  ಕಗ್ಗಗಳು ಆಯ್ತು ಮುಂದಕ್ಕೆ ಎಂದುಕೊಂಡಾಗ ಇನ್ನೊಂದು ಹಾದಿಗೆ ಹೊರಳಿ ಸಂಸ್ಕೃತ ಶ್ಲೋಕಗಳನ್ನು, ಸ್ತೋತ್ರಗಳನ್ನು ಅರ್ಥೈಸಿಕೊಂಡು ತಮ್ಮ ಬಳಗಕ್ಕೆ ಹಂಚಿಕೊಳ್ಳುತ್ತಿದ್ದಾರೆ.. 

ವಿಜಯನಗರದ ಕಾಲದಲ್ಲಿ ಮುತ್ತು ರತ್ನಗಳು ವಜ್ರ ವೈಡೂರ್ಯಗಳು ರಸ್ತೆಯಲ್ಲಿ ಬಿಕರಿಯಾಗುತ್ತಿದ್ದವು .. ಆ ಆಭರಣಗಳ ರಾಶಿಯನ್ನು ಬೀಗ ಹಾಕಿ ಜೋಪಾನ ಮಾಡುತ್ತಾ ಹೆಚ್ಚಿನ ಬೆಲೆಗೆ ಮಾರುತ್ತಿರುವ ಈ ಕಾಲದಲ್ಲಿ,  ಕಳುವಾಗದ.. ಖಾಲಿಯಾಗದ.. ಮುಚ್ಚಿಟ್ಟುಕೊಳ್ಳಲಾಗದ ಜ್ಞಾನ ಸಂಪತ್ತನ್ನು ಹೆಕ್ಕಿ ಹೆಕ್ಕಿ ತಮ್ಮ ಬಳಗಕ್ಕೆ ತಲುಪಿಸುತ್ತಿರುವುದು ಒಂದು ಮಹಾನ್ ಸಾಧನೆಯೇ ಹೌದು.. 

ಹತ್ತೇ ಹತ್ತು ನಿಮಿಷ ಇವರ ಬಳಿ ಮಾತಾಡಿದರೂ ಸಾಕು .. ಜ್ಞಾನ ಭಂಡಾರವನ್ನೇ ಹೊತ್ತು ಸಾಗುತ್ತೇವೆ..ಸಂಗೀತ , ಆಧ್ಯಾತ್ಮ, ಜ್ಞಾನ, ಸಂಸ್ಕಾರ, ಊಟೋಪಚಾರ, ಮೃದು ಮಾತು ಇವೆಲ್ಲ ಇವರ ಸ್ವತ್ತು.. 

ಇಂದು ಶ್ರೀಯುತ ರವಿ ತಿರುಮಲೈ ಅವರ ಜನುಮದಿನ .. ಬರೆಯೋದಕ್ಕೆ ಏನಿದೆ ಅಂತ ಯೋಚನೆ ಬಂತು.. ಕಾರಣ ಕಳೆದ ನಾಲ್ಕು ವರ್ಷಗಳಿಂದ ಕಗ್ಗ ರಸಧಾರೆ ಪುಸ್ತಕ ಹೊರಬರುತ್ತಿತ್ತು.. ಅದರ ಮರೆಯಲ್ಲಿ ಮನಕ್ಕೆ ತೋಚಿದ ಬಾಲ ಭಾಷೆಯಲ್ಲಿ ಒಂದಷ್ಟು ಪದಗಳನ್ನು ಕೂಡಿಸಿಡುತ್ತಿದ್ದೆ.. ಈ ಬಾರಿ ಡಿವಿಜಿ ಅಜ್ಜ ಕೂಡ ಶ್ರೀಕಾಂತ ಅದೇನೂ ಕಿಸೀತೀಯ ನೋಡೋಣ ಅಂತ ರೇಗಿಸುತ್ತಾ ನನ್ನ ಹುಮ್ಮಸ್ಸನ್ನು ಹೆಚ್ಚು ಮಾಡಿದಂತೆ ಕನಸು ಬಿತ್ತು. 

ಅದೇನು ಬರೀತೀ  ನೋಡೇ ಬಿಡ್ತೀನಿ ..

ಇತ್ತ ಅಜ್ಜ  ಅತ್ತ ಗುರುಗಳಾದ   ಶ್ರೀ ರವಿ ಅವರು.. ಇತ್ತ ಧರಿ ಅತ್ತ ಪುಲಿ ತರಹ ಆಗದೆ ಇತ್ತ ಜ್ಞಾನದ ಕಡಲು ಅತ್ತ ಜ್ಞಾನದ ಆಣೆಕಟ್ಟು.. ಇಬ್ಬರೂ ಪ್ರೋತ್ಸಾಹಿಸಿದ  ಫಲ.. ಒಂದಷ್ಟು  ಪದಗಳನ್ನು ಕಲೆ ಹಾಕಿ ಶುಭಾಶಯ ಕೋರಿಯೇ ಬಿಡೋಣ ಅನ್ನುವ ದುಸ್ಸಾಹಸಕ್ಕೆ  ಕೈ ಹಾಕಿರುವೆ.. !

ಗುರುಗಳೇ ಜನುಮದಿನದ ಶುಭಾಶಯಗಳು :-) :-) :-)

ಸದಾ :-) :-) ಇರಿ!!!

6 comments:

  1. ಶ್ರೀಕಾಂತ್ ನಿಮ್ಮ ಅಭಿಮಾನಕ್ಖೆ ಬೆಲೆಕಟ್ಟಲಾಗುವುದೆ

    ReplyDelete
    Replies
    1. ಧನ್ಯವಾದಗಳು ಗುರುಗಳೆ
      ನಿಮ್ಮ‌ ಪ್ರೀತಿ‌ ಹೀಗೆ ಬರೆಸುತ್ತೆ

      Delete

  2. ಶುಭಾಶಯ ಕೋರಿದ ಪರಿ ಸೂಪರ್ ಆಗಿದೆ . ಜನ್ಮದಿನದ ಶುಭಾಶಯಗಳು

    ReplyDelete
  3. ನಿಜ ಸಮಯ ಎಷ್ಟು ಅಮೂಲ್ಯ ಅಂತಾ ಗೊತ್ತಿದ್ದು ಸುಮ್ಮನೆ ವಾಟ್ಸಾಪ್ ಫೇಸ್ಬುಕ್ನಲ್ಲಿ ಹರಣ ಮಾಡುತ್ತಿರುತ್ತೇವೆ.. ಜ್ಞಾನವನ್ನು ಮುತ್ತು ರತ್ನಗಳಿಗೆ ಹೋಲಿಸಿ ಕಳುವಾಗಲಾರದ, ಮುಚ್ಚಿಟ್ಟುಕೊಳ್ಳಲಾಗದ ಅದ್ಭುತ ಸಂಪತ್ತು ಅಂತ ನೀವು ಪ್ರಂಶಂಸಿಸಿದ್ದು ಸೂಕ್ತ.. ಅಂತಹ ಅಮೂಲ್ಯ ಭಂಡಾರವನ್ನು ಹಂಚಿತ್ತಿರುವ ಶ್ರೀ ರವಿ ತಿರುಮಲೈ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..🙏

    ReplyDelete
    Replies
    1. ಧನ್ಯವಾದಗಳು ಎಂ ಎಸ್ ಸುಂದರ ಪ್ರತಿಕ್ರಿಯೆ ನಿನ್ನದು.. ಬರಹದ ತಾತ್ಪರ್ಯವನ್ನು ಸೊಗಸಾಗಿ ಹೇಳಿರುವೆ

      Delete