ಸುಮಾರು ಎರಡು ಘಂಟೆಗಳ ಅಂತರದಲ್ಲಿ ಎರಡು ಅಂತರಂಗ ಬಹಿರಂಗ ಶುದ್ಧಿ ಮಾಡುವಂತಹ ದೇವರ ನಗು ಕೇಳಿಸಿಕೊಂಡೆ..
**************
ಘಟನೆ - ೧
ಜೀವನ ಯಾವಾಗ ಸಾರ್ಥಕ ಅನ್ನಿಸೋದು...... ಭಗವಂತನ ಆಶೀರ್ವಾದದ ಕಿರಣಗಳು ತಲುಪಿದಾಗ
ಅಂಥ ಒಂದು ಘಟನೆ
ನಮ್ಮ ಆಫೀಸ್ ಗೆ ಹೊಸ ಉಗ್ರಾಣ ಬಾಡಿಗೆಗೆ ತೆಗೆದುಕೊಂಡವು
ಅಲ್ಲಿದ್ದ ಕಾವಲುಗಾರನ ಹತ್ತಿರ ಮಾತಾಡುತ್ತಿದ್ದೆ
ಏನಾದರೂ ಕೆಲಸ ಕೊಡಿ ಸರ್ ಎಂದರು
ಅದು ಇದು ಮಾತಾಡುತ್ತ ...ಪರಿವಾರದ ಬಗ್ಗೆ ಕೇಳಿದೆ...(ನಾ ಹಾಗೆ ಎಲ್ಲರನ್ನೂ ಕೇಳೋಲ್ಲ..ಇಂದು ಯಾಕೆ ಕೇಳಿದೆ ಗೊತ್ತಿಲ್ಲ...)
ಹೆಂಡತಿ ಕ್ಯಾನ್ಸರ್‌ಗೆ ತುತ್ತಾಗಿ ೮ ತಿಂಗಳು ಮುಂಚೆ ಸತ್ತು ಹೋದಳು
ನನಗೆ ಓದು ಬರಹ ಬರೋಲ್ಲ
ಮಕ್ಕಳು ಓದಲಿ ಅಂತ ಆಸೆ...
ಇರೋಕೆ ಮನೆ ಅಂತ ಇಲ್ಲ
ಚಿಕ್ಕ ಮನೆ ಮಾಡಬೇಕು ಹುಡಕಬೇಕು... ಹೀಗೆ ಸಂಕೋಚದಿಂದಲೇ ತಮ್ಮ ಕುಟುಂಬದ ಬಗ್ಗೆ ಪುಟ್ಟ ವಿವರಣೆ ನೀಡಿದರು
ಮಕ್ಕಳು ಏನು ಓದುತ್ತಾ ಇದ್ದಾರೆ ಎಂದೆ..
ಚಿಕ್ಕವನು ಎಂಟನೆ ತರಗತಿ, ದೊಡ್ಡವನು ಸಿವಿಲ್ ಇಂಜಿನೀಯರಿಂಗ್ ಮೊದಲನೆ ವರ್ಷ ಅಂದರು...
ಒಂದು ಕ್ಷಣ.. ನಾ ಹಾಗೆ ನಿಂತೆ.. ತಕ್ಷಣ ಮತ್ತೆ ಸಹಜ ಸ್ಥಿತಿಗೆ ಬಂದು, ಅವರ, ಮಣ್ಣಿನ ಕೆಲಸ ಮಾಡಿ, ಗಲೀಜಾಗಿದ್ದ ಬಟ್ಟೆಯನ್ನು ಗಮನಿಸದೆ ಆಲಂಗಿಸಿದೆ.. ಅವರು ಆ ಕ್ಷಣವನ್ನು ಸಂಭ್ರಮಿಸಿದರು.
ತಲೆ ಎತ್ತಿ ನೋಡಿದೆ ದೇವರು ನಕ್ಕು ಒಮೆ ಕಣ್ಣು ಮಿಟುಕಿಸಿದ....ತನ್ನ ಇರುವನ್ನು ಆಗಸದಿಂದ ಧುಮುಕುತ್ತಾ ಇರುವ ಕಿರಣಗಳನ್ನು ಭುವಿಗೆ ಬಿಟ್ಟು ಸಂತೈಸಿದ ಹಾಗೆಯೇ ಸಂತಸಪಟ್ಟ.
ತುಮಕೂರು ರಸ್ತೆಯಲ್ಲಿ ತೆಗೆದ ಚಿತ್ರ |
**********
ಘಟನೆ - ೨
ದೇವರು ಯಾಕೋ ಇಂದು ಇನ್ನೊಮ್ಮೆ ನಗುತ್ತಿದ್ದ
ಆಫೀಸ್ ಮುಗಿಸಿಕೊಂಡು ಕ್ಯಾಬ್ ಇಳಿದು ಮನೆ ಕಡೆ ಹೆಜ್ಜೆ ಹಾಕುತ್ತಿದ್ದೆ
ಬೆನ್ನಿಗೆ, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಕಟ್ಟಿಕೊಂಡ ಹಾಗೆ, ಲ್ಯಾಪ್ಟಾಪ್ ಬ್ಯಾಗ್
ಕೈಯಲ್ಲಿ ಕತ್ತಿಯ ಬದಲು ಊಟದ ಡಬ್ಬಿ..
ಇನ್ನೊಂದು ಕೈಯಲ್ಲಿ, ಆಗಷ್ಟೇ ಗೋಪಾಲ ವಾಯಪೇಯಿ ಸರ್ .. ನಾನು ಹಾಕಿದ ಒಂದು ಪೋಸ್ಟಿನ ಕಾಗುಣಿತ ತಿದ್ದಿ ಹೇಳಿ ಸಂದೇಶ ಕಳಿಸಿದ್ದರು.. ಅದನ್ನು ಸರಿಪಡಿಸಿದ ಮೇಲೆ, ಮೊಬೈಲನ್ನು ಹಿಡಿದುಕೊಂಡು, ಅವರ ಗುಂಗಿನಲ್ಲಿಯೇ ಜವಾರಿ ಭಾಷೆ ಅದು ಇದು ಎಂದು ಅವರ ಪೋಸ್ಟ್ ಗಳನ್ನು ನೆನಪು ಮಾಡಿಕೊಂಡು ಹೋಗುತ್ತಿದೆ
ರಂಗು ರಂಗಿನ ಚಿತ್ತಾರ ಮೂಡಿಸಿದ್ದ ಆಗಸ ನೋಡುತ್ತಾ ಸುತ್ತಾ ಮುತ್ತಾ ನೋಡುತ್ತಾ ಮನೆ ಕಡೆಗೆ ಹೆಜ್ಜೆ ಹಾಕುತ್ತಿದ್ದೆ
"ಸರ್ ಸರ್.. "
ಯಾರೋ ಕೂಗಿದ ಹಾಗೆ ಅನ್ನಿಸಿತು..
ಕರೆಬಂದ ಕಡೆ ತಿರುಗಿ ಏನು ಅಂಥ ಹುಬ್ಬು ಹಾರಿಸಿದೆ
ಊಟದ ಡಬ್ಬಾ ನೀವೇ ತೆಗೆದುಕೊಂಡು ಹೋಗ್ತೀರಾ ಅಂಥ ಒಂದು ಅಪರಿಚಿತ ವ್ಯಕ್ತಿ ಕೇಳಿತು
"ಹೌದು" ಎಂದೇ
"ನಾವು ಒಂದು ಜವಾರಿ ಹೋಟೆಲ್ ಮಾಡಿದ್ದೇವೆ.. ತಿಂಡಿ ಊಟ ಎಲ್ಲಾ ಜವಾರಿ ಸ್ಟೈಲ್ ನಲ್ಲಿ ಕೊಡುತ್ತೇವೆ.. ಪ್ರತಿದಿನವೂ ಬನ್ನಿ ಸರ್"
ನಾ ಒಮ್ಮೆ ತಲೆ ಎತ್ತಿ ನೋಡಿದೆ.. ದೇವರು ಶ್ರೀ ಮಜಾ ಮಾಡು ಅಂದ ಹಾಗೆ ಅನ್ನಿಸಿತು.. ನಕ್ಕೆ
"ಇಲ್ಲ ಸರ್ ನನ್ನ ಹೆಂಡ್ರವ್ವ ಊಟ ತಿಂಡಿ ಮಾಡಿಕೊಡುತ್ತಾಳೆ" ಅಂದೆ..
ಆ ವ್ಯಕ್ತಿ ಈ ಉತ್ತರ ನಿರೀಕ್ಷಿಸಿರಲಿಲ್ಲ ಒಮ್ಮೆ ಅವರ ಮುಖ ನೋಡಿದೆ..
ನೂರು ಕಣ್ಣು ಸಾಲದು ನಿಮ್ಮ ನೋಡಲು ಅನ್ನುವ ಅಣ್ಣಾವ್ರ ಹಾಡು ನೆನಪಿಗೆ ಬಂತು..
"ಓಹ್ ಹೌದಾ.. " ಅಂಥ ದೀರ್ಘ ಉಸಿರು ಬಿಟ್ಟರು..
ಅವರ ಆ ಉಸಿರಿನಲ್ಲಿ ೧) ನನಗೆ ಮದುವೆ ಆಗಿಲ್ಲ ಅನ್ನುವ ಅರ್ಥವಿತ್ತೇ
೨) ಓಹ್ ಹೆಂಡ್ರವ್ವ ಅಡಿಗೆ ಮಾಡಿಕೊಡ್ತಾಳೆ. ಎಷ್ಟು ಪುಣ್ಯವಂತನಪ್ಪ ಅಂದುಕೊಂಡ್ರಾ
೩) ಪಾಪಿ ಮುಂಡೇದು.. ಹೋಟೆಲನ್ನಲ್ಲಿ ತಿನ್ನೋಕೆ ದುಡ್ಡು ಎಲ್ಲಿ ಇರುತ್ತೆ.. ತಾನೇ ಮನೇಲಿ ಕೆಟ್ಟದಾಗಿ ಮಾಡಿಕೊಂಡು.. ನನ್ನ ಹತ್ತಿರ ಕಥೆ ಹೇಳುತ್ತಾ ಇದೆ... ಎಂದು ಕೊಂಡರೇ..
ಯಾವುದು ಗೊತ್ತಾಗ್ಲಿಲ್ಲಾ...
ಆದರೆ ತಲೆ ಎತ್ತಿ ನೋಡಿದಾಗ.. ದೇವರು ಮುಸಿ ಮುಸಿ ನಗುತ್ತಿದ್ದದು ತುಸು ಜೋರಾಗಿಯೇ ಕೇಳಿಸಿತು..
ಆದರೆ ತಲೆ ಎತ್ತಿ ನೋಡಿದಾಗ.. ದೇವರು ಮುಸಿ ಮುಸಿ ನಗುತ್ತಿದ್ದದು ತುಸು ಜೋರಾಗಿಯೇ ಕೇಳಿಸಿತು..
ಹಹ್ಹಹಹಹಹಃ
ಮೊದಲನೇ ಭಾಗ ಮನ ತಟ್ಟಿತು, ಎರಡನೇ ಭಾಗಕ್ಕೆ ದೇವರೊಂದಿಗೆ ನಾನು ಜೋರಾಗೆ ನಕ್ಕೆ. ಎಷ್ಟು ವಿಧ ವಿಧವಾದ ಜನ ಸಿಗ್ತಾರೆ ಅಲ್ವ.ಸೊಗಸಾಗಿ ಬರೆದಿದ್ದೀರಿ ಅನುಭವವನ್ನು
ReplyDelete