Friday, January 7, 2011

A Scene in Apthamitra - Subbu Birthday

ವಿಜಯ್ : ಅಚಾರ್ಯರೆ, ಬೇಡ ಹೇಳಬೇಡಿ, 

ಆಚಾರ್ಯ : ವಿಜಯ್, ನೀವು ಸುಮ್ಮನಿರಿ, ನಾನು ಹೇಳ್ತಿನಿ, ನಾಗವಲ್ಲಿಗೆ ನಿಮ್ಮ ಬಗ್ಗೆ ಏನು ಗೊತ್ತು,  ಇವರಬಗ್ಗೆ ಏನು ಹೇಳಿದ್ರು ನಾನು ಹೇಳೋದು ಒಂದೇ, ರಾವಣನಿಗೆ ಹತ್ತು ತಲೆ ಇದ್ದಾರೆ, ಈ ಮಹಾನುಭಾವನಿಗೆ ಒಂದೇ ತಲೆಯಲ್ಲಿ ಹತ್ತು ಮೆದಳು.

ನಾಗವಲ್ಲಿ : ಅದೆಲ್ಲ ಸರಿ, ಅಚಾರ್ಯರರೆ, ನೀವು ನನ್ನನ್ನ ಹೆದರಿಸೋದು ಬಿಟ್ಟು ವಿಜಯ್ ಬಗ್ಗೆ ಹೇಳ್ತಾ ಇದ್ದಿರಲ್ಲ, ಏನ್ ಸಮಾಚಾರ, ಏನಾಯ್ತು ನಿಮಗೆ

ಆಚಾರ್ಯ : ಅಲ್ಲ, ನಾಗವಲ್ಲಿ ಡಿಯರ್ ಕಥೆ ಅದಲ್ಲ..ನಾನು ಹೇಳ್ಬೇಕು ಅಂತ ಇರೋದು, ನಮ್ಮ ವಿಜಯ್ ಎಷ್ಟು ಬುದ್ದಿವಂತ, ಎಷ್ಟು ಕಲೆಗಳು ಅವರಿಗೆ ಗೊತ್ತು ಅಂತ ಹೇಳೋಕೆ ಇಷ್ಟ ಪಡ್ತಾ ಇದ್ದೀನಿ...

ನಾಗವಲ್ಲಿ : ಅದೆಲ್ಲ ಬಿಡಿ, ಇದು ಸಿನಿಮಾ, ನಿಜ ಜೀವನದಲ್ಲೂ ಯಾರು ಹಂಗೆ ಇರ್ತಾರೆ, ಇಲ್ಲಿ ಪಿ. ವಾಸು ಕಥೆ ಬರದು ಇಟ್ಟಿದ್ದಾರೆ ಹಂಗಾಗಿ ನೀವೆಲ್ಲ ಹೇಳ್ತಾ ಇದ್ದೀರಾ, ಅಸ್ಟೇ, ರಿಯಲ್ ಲೈಫ್ ನಲ್ಲಿ ಇರೋಲ್ಲ...

ಆಚಾರ್ಯ : ನಾಗವಲ್ಲಿ, ನೀನು ೧೨೦ ವರುಷದ ಕಥೆ ಹೇಳ್ತಾ ಇದ್ದೀಯ...ನಾನು ಹೇಳ್ತಾ ಇರೋದು ಇಂದಿಗೆ ನಲವತ್ತು ವರುಷದ ಹಿಂದೆ...ಕಳಸಾಪುರದ ಸಂಸ್ಥಾನದಲ್ಲಿ ಪದ್ಮನಾಭ ಉರುಫ್ ಸುಬ್ಬು ಎನ್ನುವ ಮಗು ಹುಟ್ಟಿತು. ಅವನು 
ನೀನು ಕೇಳಿದ ಕಲೆಯಲ್ಲಿ ಪರಿಣಿತಿ ಹೊಂದಿದ್ದಾನೆ, ಕಲೆ, ನೃತ್ಯ, ಹಾಡುಗಾರಿಕೆ, ಮನೆ ಅಲಂಕಾರ, ಕುಸುರಿ ಕೆಲಸ, ಮಾತುಗಾರಿಕೆ, ಸಾಹಿತ್ಯ,  ಕೆಮಿಕಾಲ್ಸ್ ಲ್ಯಾಬ್ ನ ಕೆಲಸ...ಎಲ್ಲದರಲ್ಲೂ ಅವನಿಗೆ ಅವನೇ ಮಾಸ್ಟರ್....ಹಂಗಾಗಿ...ಇವತ್ತು ಅವನ ಜನ್ಮ ದಿನ..ನಾವೆಲ್ಲಾ ಅವನಿಗೆ ಶುಭಾಶಯ ಕೋರೋಣ...ಏನು ಹೇಳ್ತಿಯ 
ನಾಗವಲ್ಲಿ..

ನಾಗವಲ್ಲಿ : ನಾನು ಸೋತೆ ಅಚಾರ್ಯರೆ...ನಿಜವಾಗಿಯೂ ಸುಬ್ಬು ಮಹಾ ಬುದ್ಧಿವಂತ...

ಎಲ್ಲರು ಸೇರಿ ಸುಬ್ಬುವಿಗೆ ಜನ್ಮ ದಿನದ ಶುಭಾಶಯ ಕೋರಿದರು...

ನಾಗವಲ್ಲಿ : ಅದು ಸೇರಿ ಅಚಾರ್ಯರೆ ಇ-ಮೇಲ್ ನ ನೋಡದೆ ಇರುವರು ಸುಬ್ಬುವನ್ನು ಮಥದಿಸೋದು ಹೇಗೆ 

ಆಚಾರ್ಯ : ಅವನ ಜಂಗಮ ಗಂಟೆ ನಂಬರ್ ಇದೆ ... ಇದಕ್ಕೆ ಕರೆ ಮಾಡಿದರೆ ಸಾಕು....

ಡಿಯರ್ ಸುಬ್ಬು...ನಿನಗೆ ನಮ್ಮ ಎಲ್ಲರ ಕಡೆ ಇಂದ ಜನ್ಮ ದಿನದ  ಶುಭಾಶಯಗಳು..

No comments:

Post a Comment