ಅದೊಂದು ಪುಟ್ಟ ಹಳ್ಳಿ ಅಲ್ಲಿನ ಗ್ರಾಮಸ್ಥರು ಮುಗ್ಧರು.. ಆ ಊರಿನ ವ್ಯಾಜ್ಯ ಏನೇ ಇದ್ದರೂ ಅವರೇ ಪರಿಹರಿಸಿ ಕೊಳ್ಳುತ್ತಿದ್ದರು.. ಆ ಪ್ರದೇಶದ ರಾಜ ನ್ಯಾಯ ತೀರ್ಮಾನಕ್ಕೆ ಹೆಸರಾಗಿದ್ದ ವಿಕ್ರಮಾದಿತ್ಯ.. ಅವನ ಸಿಂಹಾಸನದಲ್ಲಿ ೩೨ ಬೊಂಬೆಗಳಿದ್ದವು.. ರಾಜನಿಗೆ ನ್ಯಾಯ ನಿರ್ಣಯಿಸಲು ಆ ಗೊಂಬೆಗಳು ಸಹಾಯ
ಸುತ್ತಮುತ್ತಲ ಹಳ್ಳಿಗಳ ಮಂದಿ ನ್ಯಾಯ ತೀರ್ಮಾನಕ್ಕೆ ಆ ರಾಜನ ಬಳಿ ಬರುತ್ತಿದ್ದದ್ದು ವಾಡಿಕೆ.. ಈ ಹಳ್ಳಿಯ ಮಂದಿ ಮಾತ್ರ ಒಮ್ಮೆಯೂ ಆ ರಾಜನ ಬಳಿ ತಮ್ಮ ಅಹವಾಲು ತೆಗೆದುಕೊಂಡು ಹೋದ ಉದಾಹರಣೆಗಳೇ ಇರಲಿಲ್ಲ ಅಂತ ಆ ಊರಿನ ಪ್ರಮುಖರೆಲ್ಲ ಮಾತಾಡಿಕೊಳ್ಳುತ್ತಿದ್ದರು..
ಇದು ಹೇಗೋ ಆ ಕಿವಿ ಈ ಕಿವಿ ಕಿವಿಗೆ ಅಂತ ಸಾಗಿ ಕಡೆಗೆ ಮಂತ್ರಿಯ ಕಿವಿಗೆ ಬಿತ್ತು.. ಇದೊಂದು ರೀತಿಯ ಅಹಂಗೆ ಪೆಟ್ಟು ಬಿದ್ದ ಹಾಗಿತ್ತು.. ಕಾರಣ ನ್ಯಾಯ ಅಂದರೆ ವಿಕ್ರಮಾದಿತ್ಯ ಅನ್ನೋವಷ್ಟು ಖ್ಯಾತಿಯಿದ್ದ ಆ ರಾಜ್ಯದಲ್ಲಿ ಈ ರೀತಿ ಆಗಲು ಸಾಧ್ಯವೇ ಎನ್ನುವ ಕುತೂಹಲ ಕೂಡ ಸೇರಿದ್ದು ವಿಶೇಷ..
ಇದನ್ನು ಸೂಕ್ಷ್ಮವಾಗಿ ರಾಜನ ಕಿವಿಗೆ ಸಾಗಿಸಿಸಿದರು ಮಂತ್ರಿಗಳು..
ರಾಜನಿಗೆ ಕೋಪದ ಬದಲು ಕುತೂಹಲ ಹೆಚ್ಚಾಯಿತು.. ಸರಿ ತನ್ನ ಮಂತ್ರಿಗಳ ಜೊತೆಯಲ್ಲಿ ಮಾರುವೇಷ ಧರಿಸಿ ಆ ಹಳ್ಳಿಯ ಕಡೆಗೆ ಹೊರಟರು..
ಮಾರ್ಗ ಮಧ್ಯೆ ಹಲವಾರು ಜನ ಮಾತಾಡುತ್ತ "ವಿಕ್ರಮಾದಿತ್ಯರಂಥಹ ಅರಸರ ಕಾಲದಲ್ಲಿ ನಾವಿರೋದು ಪುಣ್ಯ.. ಅವರ ನ್ಯಾಯ ತೀರ್ಮಾನದ ಬಗ್ಗೆ ಎರಡನೇ ಮಾತುಗಳೇ ಇಲ್ಲ.. ಸರಿಯಾದ ತೀರ್ಪು ಕೊಡೊದರಲ್ಲಿಎತ್ತಿದ ಕೈ.. ಆ ಗೊಂಬೆಗಳು ಸರಿಯಾದ ಮಾರ್ಗದರ್ಶನ ನೀಡುತ್ತವೆ.. ಹಾಗೆಯೇ ಈ ಹಳ್ಳಿಯಲ್ಲಿಯೂ ಎಷ್ಟು ಚೆನ್ನಾದ ಹಾಗೂ ಸರಿಯಾದ ತೀರ್ಮಾನ ಕೊಡುತ್ತಾರೆ..
ವ್ಯಾಜ್ಯ ೧ : ಅಣ್ಣ ತಮ್ಮಂದಿರ ಮಧ್ಯೆ ಭೂಮಿ ಪಾಲು ಮಾಡುವ ವಿಷಯದಲ್ಲಿ ತಕರಾರು ಬಂದಿತ್ತು.. ಆದರೆ ಅವರಿಬ್ಬರೂ ಜಗಳವಾಡದೆ ಆ ಹಳ್ಳಿಯ ಪ್ರಮುಖರ ಬಳಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಂಡರು.. ಸಮಸ್ಯೆ ಇದ್ದದ್ದು ಅವರ ಹೊಲ ಗದ್ದೆಗಳ ಆಕಾರದಲ್ಲಿ ಸರಿಯಾಗಿ ಭಾಗ ಮಾಡಲು ಸಾಧ್ಯವಿರಲಿಲ್ಲ.. ಆಗ ಅಲ್ಲಿನ ಪ್ರಮುಖರು ಮುಖ್ಯ ಭೂಮಿಯನ್ನು ಭಾಗ ಮಾಡಿ ಉಳಿದ ಭಾಗಮಾಡಲು ಆಗದ ಭೂಮಿಯನ್ನು ಒಂದು ವರ್ಷ ಒಬ್ಬನಿಗೆ ಇನ್ನೊಂದು ವರ್ಷ ಇನ್ನೊಬ್ಬನಿಗೆ ಉಳುಮೆ ಮಾಡಲು ಹೇಳಿದರು.. ಒಪ್ಪುವಂತಹ ನಿರ್ಣಯವೇ ಹೌದು.. ಕಾರಣ ಭೂಮಿಯೂ ಫಲವತ್ತಾಗಿರುತ್ತದೆ.. ಬೆಲೆಯೂ ಚೆನ್ನಾಗಿ ಬರುತ್ತದೆ.. ವಾಹ್ ವಾಹ್..
ವ್ಯಾಜ್ಯ ೨ - ಅದ್ಭುತ ಗೆಳೆತನದ ಇಬ್ಬರೂ ಕಾರಣಾಂತರಗಳಿಂದ ಕೆಲಸದ ಒತ್ತಡ.. ಉದ್ಯೋಗದಲ್ಲಿ ಬೆಳೆಯಲೇ ಬೇಕಾದ ಅನಿವಾರ್ಯತೆ, ಬೆಳೆಯುತ್ತಿರುವ ಬದುಕು ಇವುಗಳಿಂದ ಮೊದಲಿನ ಹಾಗೆ ಮಾತಾಡಲು ಪುರುಸೊತ್ತು ಸಿಗುತ್ತಿರಲಿಲ್ಲ ಆದರೂ ಪ್ರತಿದಿನದ ಶುಭಾಶಯಗಳೊಂದಿಗೆ ದಿನ ಆರಂಭವಾಗುತ್ತಿತ್ತು..ಆದರೆ ಜನುಮದಿನದ ಶುಭಾಶಯಗಳನ್ನು ಹೇಳೋದಕ್ಕೆ ತಡವಾಗಿತ್ತು.. ಆದರೆ ಒಬ್ಬರಲ್ಲಿ ಬೇಸರವಿಲ್ಲ.. ಇನ್ನೊಬ್ಬರಲ್ಲಿ ಕೋಪವಿಲ್ಲ.. ಆದರೂ ಯಾಕೆ ಏನಾಯಿತು ಅನ್ನುವ ತವಕ.. ಈ ಸಮಸ್ಯೆಗೆ ಎಷ್ಟು ಸುಲಭವಾಗಿ ಉತ್ತರ ಕೊಟ್ಟರು.. ನೋಡಿ ಸುಮ್ಮನೆ ಶುಭಾಶಯಗಳು ಅಂತ ಹೇಳಿದರೆ ಒಪ್ಪಿಕೊಳ್ಳುವ ಮನಸ್ಸಲ್ಲ ಅದು.. ಸ್ವಲ್ಪ ವಿಭಿನ್ನವಾಗಿ ಬರೆಯಬೇಕು ಅಂದರೆ ಸಮಯದ ಅಭಾವ.. ಮತ್ತೆ ಬೇಕಾಬಿಟ್ಟಿ ಬರೆಯುವ ಮನಸ್ಸು ಅಲ್ಲವಲ್ಲ.. ಹಾಗೆ ಬರೆದರೂ ಇಲ್ಲೇನೂ ಸಮಸ್ಯೆ ಇದೆ ಎನ್ನುವ ಆಲೋಚನೆಗಳು ಬರುತ್ತಿದ್ದವು.. ಆದರೆ ಅದಕ್ಕೆ ಉತ್ತರ ಸಿಗುತ್ತಿರಲಿಲ್ಲ.. ಹಾಗಾಗಿ ತಿಂಗಳ ಅಂತ್ಯದ ತನಕ ಕಾಯೋದು.. ಆಗಲೂ ಬರಲಿಲ್ಲ ಅಂದರೆ ಕರೆ ಮಾಡಬಹುದು ಅಂತ ತೀರ್ಪು ಕೊಟ್ಟರು.. ತೀರ್ಪು ಎಂದರೆ ಇದು..ಬಾರದ ಕೋಪವೂ ಮಾಯಾ .ಇಲ್ಲದ ಬೇಸರವೂ ಮಾಯಾ..
ವಿಕ್ರಮಾದಿತ್ಯ ಎರಡೂ ತೀರ್ಪುಗಳ ಕತೆಯನ್ನು ಕೇಳಿ ಇನ್ನಷ್ಟು ಖುಷಿಯಾಯಿತು.. ಎರಡೂ ತೀರ್ಪುಗಳಲ್ಲಿ ಭಾಗಿಯಾಗಿದ್ದ ಮಂದಿಯನ್ನು ನೋಡಬೇಕು ಅಂತ ಬಯಸಿದಾಗ ಅಲ್ಲಿನ ಊರ ಜನರು
ಮೊದಲನೇ ತೀರ್ಪಿನಲ್ಲಿದ್ಧ ಅಣ್ಣ ತಮ್ಮಂದಿರು ಹೆಗಲ ಮೇಲೆ ಹೆಗಲು ಕೈ ಹಾಕಿ ಕೊಂಡು ತಮ್ಮ ಹೊಲ ಗದ್ದೆಗಳ ಕಡೆ ಹೊರಟಿದ್ದರು..
ಎರಡನೇ ತೀರ್ಪಿನಲ್ಲಿದ್ದವರನ್ನು ಹುಡುಕಿದರು.. ಆದರೆ ಸಿಗಲಿಲ್ಲ.. ಕಾಣಲಿಲ್ಲ.. ಆಗ ಅವರೆಲ್ಲಿ ಎಂದಾಗ.. ನೋಡ್ರಪ್ಪಾ ಒಬ್ಬರು ಈ ಲೇಖನವನ್ನು ಬರೆಯುತ್ತಿದ್ದಾರೆ.. ಇನ್ನೊಬ್ಬರು ಈ ಲೇಖನವನ್ನು ಓದುತ್ತಿದ್ದಾರೆ..
ಓದುತ್ತಿದ್ದಾರಲ್ಲ ಅವರದೇ ಜನುಮದಿನ.. ಅವರಿಗೆ ಶುಭಾಶಯಗಳನ್ನು ಕೋರುತ್ತಾ ನಮ್ಮ ದಿನ ನಿತ್ಯದ ಕೆಲ್ಸದ ಕಡೆಗೆ ಗಮನ ಕೊಡೋಣ..
ವಿಕ್ರಮಾದಿತ್ಯರಿಗೆ ಪೂರ್ಣ ಖುಷಿಯಾಯಿತು. ಇಷ್ಟು ಸರಳವಾಗಿ ಆದರೆ ಗಂಭೀರವಾಗಿ ತೀರ್ಪು ಕೊಡಬೇಕಾದರೆ ಈ ಹಳ್ಳಿಯ ಮಂದಿ ಸಾಮಾನ್ಯರಲ್ಲ.. ಏನೋ ದಿವ್ಯಶಕ್ತಿ ಇದೆ .. ಏನದು ಅಂತ ಕೇಳಿದಾಗ..
ನೋಡಿ ಈ ಹಳ್ಳಿಯ ಮಂದಿಗೆ ಪ್ರತಿ ತಿಂಗಳಿಗೆ ಒಮ್ಮೆನಿವೇದಿತಾ ಚಿರಂತನ್ ವಿಚಾರ ವಿನಿಮಯ ಕಾರ್ಯಕ್ರಮ ಮಾಡುತ್ತಾರೆ.. ನಾವೆಲ್ಲರೂ ಒಂದೇ ಮನಸ್ಸಿನಿಂದ ಪೂರ್ಣ ಇಚ್ಚೆಯಿಂದ ಭಾಗವಹಿಸುತ್ತೇವೆ.. ಅವರು ಹೇಳಿ ಕೊಡುವ ಅವರು ತೋರಿಸುವ ಹಾದಿಯಲ್ಲಿ ನೆಡೆಯುತ್ತಿರುವುದರಿಂದ ನಮಗೆ ಈ ರೀತಿಯ ದಿವ್ಯ ಜ್ಞಾನ ಪ್ರಾಪ್ತಿಯಾಗಿದೆ.. ಇದರ ಸಮಸ್ತ ಯಶಸ್ಸು ಅವರಿಗೆ..
ವಿಕ್ರಮಾದಿತ್ಯರ ಸಂತಸಕ್ಕೆ ಪಾರವೇ ಇರಲಿಲ್ಲ..
ನಿವೇದಿತಾ ಚಿರಂತನ್ ಅವರಿಗೆ ಶುಭಾಶಯಗಳು ಹಾಗೆ ಇದೆ ಹಳ್ಳಿಯಂತೆ ನನ್ನ ದೇಶದಲ್ಲಿರುವ ಎಲ್ಲಾ ಹಳ್ಳಿಗಳಿಗೂ ಈ ರೀತಿಯ ದಿವ್ಯ ಜ್ಞಾನ ನೀಡಿ ಎಂಬ ಕಳಕಳಿಯ ಮನವಿಯೊಂದಿಗೆ ಈ ದೇಶದ ಅರಸನಾಗಿ ನಿಮಗೆ ಶುಭ ಕೋರುತ್ತಿದ್ದೇನೆ ಎಂದು ಹೇಳಿ ತಮ್ಮ ಅರಮನೆಗೆ ತಮ್ಮ ಪರಿವಾರದ ಗಣಗಳ ಜೊತೆ ಹೊರಟರು..
***************************
ಸಿಬಿ ತಡವಾಯಿತು.. ಕ್ಷಮೆ ಇರಲಿ.. ಭಗವಂತ ನೀಡಿದ ಅದ್ಭುತ ಗೆಳತಿಗೆ ಜನುಮದಿನದ ತಡವಾದ ಶುಭಾಶಯಗಳು (ಫೋಟೋಗಳನ್ನು ಕದಿಯಲಾಗಿದೆ ----- ಕ್ಷಮೆ ಇರಲಿ)



 
No comments:
Post a Comment