Tuesday, April 13, 2021

ಸೀಮಾವಲೋಕನ .....!

ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರವನ್ನು ನೋಡುತ್ತಿದ್ದೆ... 

"ನೋಡಿದ ಆ ಆ  ಕ್ಷಣದಲಿ ನಿಂತೇ ನೀ ಕಣ್ಣಲ್ಲಿ" ಸಾಲುಗಳು ಹಾಗೆ ಮನಸೆಳೆದಿತ್ತು.. ಮನಸ್ಸು ಹಾಗೆ ಹಿಂದಕ್ಕೆ ಜಾರಿತ್ತು.. 

ಅಂತರ್ಜಾಲ ಕೆಟ್ಟದು.. ಅದು ಇದು.. ಅಂತ ನೂರೆಂಟು ಬೇಡದ ಕಾರಣಗಳನ್ನು ನೂರಾರು ಮಂದಿ ಹೇಳಿದ್ದರು.. ನಾ ತಲೆ ಕೆಡಿಸಿಕೊಂಡಿಲ್ಲ.. ನನಗೆ ಅಂತರ್ಜಾಲ ನೂರಾರು ಸುಮಧುರ ಮನದ ಗೆಳೆಯರನನ್ನು ಕೊಟ್ಟಿದೆ.. 

ಬದುಕು ಕವಲು ದಾರಿಗೆ ಹೊರಳಿದಾಗ.. ಸಿಕ್ಕ ಅದ್ಭುತ ಗೆಳತೀ ಇವಳು.. ಹೆಸರಿಗೆ ಸೀಮಾ.. ಆದರೆ ಇವಳ ಪ್ರೀತಿಗೆ ಸೀಮೆಯೆ ಇಲ್ಲ.. ಪುಟ್ಟ ಹಾಯ್ ಇಂದ ಶುರುವಾದ ಪರಿಚಯ. ಮನದ ಒಡತಿಯಾಗಿ ಬರುವ ತನಕ ಹಾದು ಬಂತು.. 

ಆ ಪುಟ್ಟ ಹೃದಯದೊಳಗೆ ಸಾಗರದಷ್ಟು ಪ್ರೀತಿ ತುಂಬಿಕೊಂಡಿರುವ ಸೀಮಾ.. ಸದಾ ನೆಟ್ವರ್ಕ್ ಸಿಗುವ ಮೊಬೈಲ್ ತರಹ.. ನನ್ನ ಜೊತೆಯಲ್ಲಿ ನನ್ನ ನೆರಳಾಗಿ ನಿಂತಿದ್ದಾಳೆ.. 

                                                                                  ****

"ಶ್ರೀ.. ನಿಮ್ಮ ನೆಚ್ಚಿನ ಅಣ್ಣಾವ್ರ ಶೈಲಿಯಲ್ಲಿ ಯಾವುದಾದರೂ ಒಂದು ಸಿನೆಮಾವನ್ನು ಸಮೀಕರಿಸಿ ಏನಾದರೂ ಬರೆಯಿರಿ"

"ಸೀಮು.. ಅದೆಂಗೋ.. ಗೊತ್ತಾಗ್ತಾ ಇಲ್ಲ.."

"ಶ್ರೀ.. ಅದೆಲ್ಲ ಹರಿಕತೆ ಬೇಡ.. ನನ್ನ ಮೇಲೆ ಪ್ರೀತಿ ಇದ್ದರೇ.. ನಿಮ್ಮ ನೆಚ್ಚಿನ ರಾಜಕುಮಾರ್ ಸಿನಿಮಾದ ಬಗ್ಗೆ ಬರೆದು ಹೇಳಿ.. ಅಷ್ಟೇ.. " ತುಸು ಮುನಿಸಿನಿಂದ ಹೇಳಿದಳು.. 

" ಅಣ್ಣಾವ್ರೇ ಇದೊಳ್ಳೆ ಪರೀಕ್ಷೆ ಆಯ್ತಲ್ಲ.. ನೀವೇ ನನ್ನ ಕಾಪಾಡಬೇಕು.. "

ದೇಹದೊಳಗೆ ಏನೋ ಒಂದು ಶಕ್ತಿ ಹೋದ ಅನುಭವ.. ಕೈಗಳು ತಂತಾನೇ ಕೀ ಬೋರ್ಡಿನ ಮೇಲೆ ಹರಿದಾದ ತೊಡಗಿತು.. ಅದರ ಫಲವೇ ಈ ಬರಹ.. !

                                                                                  ****

ಶ್ರುತಿ ಸೇರಿದಾಗ ಸಿನಿಮಾದಲ್ಲಿ ಧರ್ಮಸ್ಥಳದಲ್ಲಿ ಹಾಡುತ್ತಿದ್ದ ಗೀತಾಳನ್ನು ನೋಡಿ ಹಾಡಿಗೆ ಮನಸೋಲುತ್ತಾರೆ.. 

ಅಂತರ್ಜಾಲದಲ್ಲಿ ಸೀಮಾಳನ್ನು ಕಂಡು.. ಅವಳ ಮುಗ್ಧ ಮನಸ್ಸಿಗೆ ಮನ ಸೋಲುತ್ತಾನೆ ಶ್ರೀ.. 

ಕಾರಣಾಂತರಗಳಿಂದ ಗೀತಾ ರಾಜಕುಮಾರ್ ಮನೆಗೆ ಬರುವ ಹಾಗೆ ಆಗುತ್ತದೆ.. 

ಸೀಮಾಳ ಜೊತೆ ಮಾತಾಡುತ್ತ ಮಾತಾಡುತ್ತಾ ತನ್ನ ಮನೆಗೆ ಒಮ್ಮೆ ಬರಲು ಹೇಳುತ್ತಾನೆ.. . 

ಜಾತಕ ಅದು ಇದು ಅಂತ ರಾಜಕುಮಾರ್ ಮನಸ್ಸಿಗೆ ಘಾಸಿಯಾಗಿರುತ್ತದೆ.. 

ವಿಧಿಯ ಆಟದಲ್ಲಿ ಶ್ರೀ ಬದುಕು ಕವಲು ಕಂಡಿರುತ್ತದೆ.. 

ಸುಂದರ ಚಂದದ ಗೀತಾ ರಾಜಕುಮಾರ್ ಮನೆ ಮನವನ್ನು ಆವರಿಸಿಕೊಂಡು.. ರಾಜ್ ಕುಮಾರ್ ಬದುಕನ್ನು ಚಂದ ಮಾಡುತ್ತಾರೆ. 

ಈ ಮುದ್ದು ಸೀಮೂ ಕೂಡ ಹಾಗೆ ಮುರಿದಿದ್ದ ಶ್ರೀ ಬದುಕನ್ನು ಮತ್ತೆ ಎತ್ತಿ ಕಟ್ಟಿ ನಿಲ್ಲಿಸಲು ಶ್ರೀ ಯ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.. 

ಆಹಾ ಸೂಪರ್ ಸೂಪರ್ ಶ್ರೀ
 

                                                                                  ****

ಶ್ರೀ ಗೀತಾಳನ್ನು ನನ್ನನ್ನು ಸಮೀಕರಿಸಿ ಹೇಳಿ.. 

ಏನೋ ಇದು ಸೀಮು ಇಷ್ಟೊಂದು ಪರೀಕ್ಷೆ.. 

ಹೇ ಬರೀರಿ ಶ್ರೀ.. 

                                                                                  ****

ಗೀತಾಳ ಮುಖ ಪುಟ್ಟದು.. 
ಸೀಮಾಳ ಮುಖ ಪುಟ್ಟದು 

ಗೀತಾಳ ಕಣ್ಣುಗಳು ಸುಂದರ 
ಸೀಮಾಳ ಕಣ್ಣುಗಳು ಸುಂದರ 

ಗೀತಾ ಪುಟ್ಟ ನಾಸಿಕ ನೋಡಲು ಚಂದ 
ಸೀಮಾಳ ಪುಟ್ಟ ನಾಸಿಕ ಅಂದ 

ಗೀತಾಳ ಎತ್ತರದ ನಿಲುವು ಆಕರ್ಷಕ 
ಸೀಮಾಳ ಪುಟ್ಟ ಗೌರಿಯ ಅಂದ ಚಂದ 

ಶ್ರುತಿ ಸೇರಿದಾಗ ಚಿತ್ರದಲ್ಲಿ ರಾಜ್ ಕುಮಾರ್ ಪಾತ್ರದ ಮೇಲೆ ಅಪರಿಮಿತ ಪ್ರೀತಿ 
ಶ್ರೀ ಬದುಕಿಗೆ ಶ್ರುತಿ ಸೇರಿಸಿದ ಸೀಮಾಳ ಪ್ರೀತಿ ಕೂಡ ಅಪರಿಮಿತ.. 

ಗೀತ್ ... ಸೀಮು 


                                                                        ****

ತುಂಹೇ ಕೊಯಿ ಔರ್ ದೇಖೇ ತೋ ಜಲ್ ತಾ ಹೇ ದಿಲ್ 
ಬಡಿ ಮುಷ್ಕಿಲೋ ಸೆ ಸಂಬಲ್ ತಾ ಹೇ ದಿಲ್ 
ಕ್ಯಾ ಕ್ಯಾ ಜತನ್ ಕರತೇ ಹೇ ತುಂಹೆ ಕ್ಯಾ ಪತಾ 
ಹಮೇ ತುಮ್ ಸೆ ಪ್ಯಾರ್ ಕಿತ್ನಾ 
ಎ ಹಮ್ ನಹೀ ಜಾನ್ ತೇ
ಮಗರ್ ಜೀ ನಹಿ ಸಕ್ತೆ ತುಮ್ಹಾರೇ ಬಿನಾ... !

ಪುಟ್ಟ ಹೃದಯದಲ್ಲಿ ಕಡಲಾಳದಷ್ಟು ಪ್ರೀತಿ ಬಚ್ಚಿಟ್ಟುಕೊಂಡಿರುವ ಸೀಮು ಜನುಮದಿನದ ಶುಭಾಶಯಗಳು!!!!


5 comments:

 1. Nivedita ChirantanApril 13, 2021 at 3:27 PM

  Bahala Chandada baraha. Happy happy birthday seema avare. Heege sri ge isnpire maadtha iri.

  ReplyDelete
 2. Kumaraswamy Koravangala RangaswamyApril 13, 2021 at 3:36 PM

  ಪ್ರೀತಿ ಪ್ರೇಮಕ್ಕೆ ಸೀಮೆ ಇಲ್ಲ,ಶುಭಾಶಯ ಗಳಿಗೆ ಸೀಮೆ ಇಲ್ಲ, ಕಾಂತ ಶಕ್ತಿಗೆ  ಸೀಮೆ ಇಲ್ಲ, ಸೀಮೆ ಯನ್ನೂ ಬಿಟ್ಟು ಕೊರವಂಗ ಲದ ಕುಟುಂಬ ಸೇ ರಿದ ನಂತರ ಶ್ರೀಕಾಂತ ಸೀಮೆಗೆ ಒಳಪಟ್ಟ ಸೀಮಾಳ ಜನುಮದಿನ ಶುಭಾಶಯಗಳು ಆಯು ಆರೋಗ್ಯ ಐಶ್ವರ್ಯ ಕೀರ್ತಿ, ಪ್ಲವ(ದೋಣಿಯಲಿ) ದಲಿ ನವವರುಷದಲಿ ತುಂಬಿ ಬರಲಿ)

  ReplyDelete
 3. Rajaneesha KashyapApril 13, 2021 at 3:38 PM

  *ಸೀಮಾವಲೋಕನ*ಎಂದಿನಂತೆ *ಶ್ರೀ* ನಿನ್ನ ಬರಹದ ಶೀರ್ಷಿಕೆಯಿಂದ ಶುರುವಾಗಿ ಕೊನೆಯ ಸಾಲಿನ ತನಕ ನಿನ್ನದೇ ಸಹಜ ಮಾತುಗಳನ್ನ ಒಕ್ಕಣಿಸಿದೀಯ...ನಿನ್ನರ್ಧಾಂಗಿ ಸೀಮಾಗೆ ನಿನ್ನ ಸಿಮಾತೀತ ಪ್ರೀತಿ ಖಂಡಿತವಾಗಿ ತಲುಪಿರುತ್ತೆ. ಶುಭಮ್

  ReplyDelete
 4. ನೀವಿಲ್ಲಿ ಮನ ಬಿಚ್ಚಿ ನಿವೇದಿಸಿಕೊಂಡ ಸಮೀಕರಣ ಇಲ್ಲಿ ಸಾರ್ಥಕ್ಯ ಕಂಡಿದೆ.
  ಉತ್ತಮ ಮನೋಲ್ಲೇಖ - ಉತ್ತಮ ಜೋಡಿ.
  ಸೀಮಾರವರಿಗೆ ಜನುಮದಿನದ ಶುಭಾಶಯಗಳನ್ನು ತಲುಪಿಸುವುದು.

  ReplyDelete