ಬೆಳಿಗ್ಗೆ ಎದ್ದೆ..
ರೇಡಿಯೋ ಎಫ್ ಎಂ ೯೨.೭ ನಲ್ಲಿ "ಕಾಲವನ್ನು ತಡೆಯೋರು ಯಾರೂ .. ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ".. ಮನಸ್ಸು ಎಲ್ಲೋ ಹಿಂದಕ್ಕೆ ಹೋಯಿತು..
ಸ್ವಲ್ಪ ಹೊತ್ತು ಕಾಣದ ಕಡಲಿನಲ್ಲಿ ಸುತ್ತಾಡಿದ ಮನಸ್ಸು ಮತ್ತೆ ಭುವಿಗೆ ಬಂದದ್ದು.. ಅಣ್ಣಾವ್ರ ಪ್ರೇಮದ ಕಾಣಿಕೆ ಚಿತ್ರದ ಗೀತೆಯಲ್ಲಿ "ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು.. ಬಯಸಿದಾಗ ಕಾಣದಿರುವ ಎರಡು ಮುಖಗಳು".. ಅರೆ ಅಣ್ಣಾವ್ರು ಒಂದೆರಡು ಸಾಲುಗಳಲ್ಲಿ ಎಷ್ಟೊಂದು ಬ್ರಹ್ಮಾಂಡ ತುಂಬುವ ಸಂದೇಶ ಹೇಳಿದ್ದಾರೆ ಅನ್ನಿಸಿತು!
ಮನಸ್ಸು ತಹಬದಿಗೆ ಬಂತು "ನಗುತಾ ನಲಿ ನಲಿ ಏನೇ ಆಗಲಿ.. " ಹಾಡು ಮತ್ತೆ ನನ್ನನ್ನು ಮಾಮೂಲಿ ಸ್ಥಿತಿಗೆ ತಂದಿತು.
ಕಣ್ಣು ಮುಚ್ಚಿ ಕೂತೆ ಸ್ವಲ್ಪ ಹೊತ್ತು..
"ಶ್ರೀಕಾಂತ್.. ಪೀಠಿಕೆ ಹಾಕದೆ ನೀವು ಏನು ಹೇಳೋಕೂ ಆಗೋಲ್ಲ ಆಲ್ವಾ.. ಒಂದು ಪೀಠಿಕೆ ಹಾಕೇ ಬಿಟ್ಟಿದ್ದೀರ.. ಹಾಗೆ ಒಂದು ಕಾರ್ಯಕ್ರಮದ ಜಲಕ್ ಕೊಟ್ಟು ಬಿಡಿ"
ಕಣ್ಣು ತೆಗೆದ.. ಕಾಣಲಿಲ್ಲ ಏನೂ... ಮತ್ತೆ ಕಣ್ಣು ಮುಚ್ಚಿದೆ..
ಕಳೆದ ಬಾರಿ ಗೋಪಾಲ ವಾಜಪೇಯಿ ಗುರುಗಳ ಪುಸ್ತಕ ಬಿಡುಗಡೆಗೊಂಡಾಗ ಹರಿಣಿ ಮೇಡಂ ಜೊತೆ ನಾನು ಬಂದಿದ್ದೆ.. ಅವರು ಬಹಳ ಕುಶಿ ಪಟ್ಟಿದ್ದರು... ಇಂದು ಬೆಳಿಗ್ಗೆ ಯಾಕೋ ಗೊತ್ತಿಲ್ಲ ಅವರ ನೆನಪು ಕಾಡುತ್ತಿತ್ತು.. ಪ್ರಾಯಶಃ ಅದೇ ಕಾರಣ ಮೇಲಿನ ಗೀತೆಗಳು ಮೂಡಿ ಬಂದು ನನ್ನ ಮನಸ್ಸೊಳಗೆ ಹರಿಣಿ ಮೇಡಂ ಕೂತು ಈ ಕಾರ್ಯಕ್ರಮದ ಬಗ್ಗೆ ವಿವರ ಕೇಳುತ್ತಿದ್ದಾರೆ ಅನ್ನಿಸಿತು.
ಹರಿಣಿ ಮೇಡಂ... ಖಂಡಿತ ಹೇಳುತ್ತೇನೆ..
ರೇಡಿಯೋ ಎಫ್ ಎಂ ೯೨.೭ ನಲ್ಲಿ "ಕಾಲವನ್ನು ತಡೆಯೋರು ಯಾರೂ .. ಗಾಳಿಯನ್ನು ಹಿಡಿಯೋರು ಯಾರೂ ಇಲ್ಲ".. ಮನಸ್ಸು ಎಲ್ಲೋ ಹಿಂದಕ್ಕೆ ಹೋಯಿತು..
ಸ್ವಲ್ಪ ಹೊತ್ತು ಕಾಣದ ಕಡಲಿನಲ್ಲಿ ಸುತ್ತಾಡಿದ ಮನಸ್ಸು ಮತ್ತೆ ಭುವಿಗೆ ಬಂದದ್ದು.. ಅಣ್ಣಾವ್ರ ಪ್ರೇಮದ ಕಾಣಿಕೆ ಚಿತ್ರದ ಗೀತೆಯಲ್ಲಿ "ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು.. ಬಯಸಿದಾಗ ಕಾಣದಿರುವ ಎರಡು ಮುಖಗಳು".. ಅರೆ ಅಣ್ಣಾವ್ರು ಒಂದೆರಡು ಸಾಲುಗಳಲ್ಲಿ ಎಷ್ಟೊಂದು ಬ್ರಹ್ಮಾಂಡ ತುಂಬುವ ಸಂದೇಶ ಹೇಳಿದ್ದಾರೆ ಅನ್ನಿಸಿತು!
ಮನಸ್ಸು ತಹಬದಿಗೆ ಬಂತು "ನಗುತಾ ನಲಿ ನಲಿ ಏನೇ ಆಗಲಿ.. " ಹಾಡು ಮತ್ತೆ ನನ್ನನ್ನು ಮಾಮೂಲಿ ಸ್ಥಿತಿಗೆ ತಂದಿತು.
ಕಣ್ಣು ಮುಚ್ಚಿ ಕೂತೆ ಸ್ವಲ್ಪ ಹೊತ್ತು..
"ಶ್ರೀಕಾಂತ್.. ಪೀಠಿಕೆ ಹಾಕದೆ ನೀವು ಏನು ಹೇಳೋಕೂ ಆಗೋಲ್ಲ ಆಲ್ವಾ.. ಒಂದು ಪೀಠಿಕೆ ಹಾಕೇ ಬಿಟ್ಟಿದ್ದೀರ.. ಹಾಗೆ ಒಂದು ಕಾರ್ಯಕ್ರಮದ ಜಲಕ್ ಕೊಟ್ಟು ಬಿಡಿ"
ಕಣ್ಣು ತೆಗೆದ.. ಕಾಣಲಿಲ್ಲ ಏನೂ... ಮತ್ತೆ ಕಣ್ಣು ಮುಚ್ಚಿದೆ..
ಕಳೆದ ಬಾರಿ ಗೋಪಾಲ ವಾಜಪೇಯಿ ಗುರುಗಳ ಪುಸ್ತಕ ಬಿಡುಗಡೆಗೊಂಡಾಗ ಹರಿಣಿ ಮೇಡಂ ಜೊತೆ ನಾನು ಬಂದಿದ್ದೆ.. ಅವರು ಬಹಳ ಕುಶಿ ಪಟ್ಟಿದ್ದರು... ಇಂದು ಬೆಳಿಗ್ಗೆ ಯಾಕೋ ಗೊತ್ತಿಲ್ಲ ಅವರ ನೆನಪು ಕಾಡುತ್ತಿತ್ತು.. ಪ್ರಾಯಶಃ ಅದೇ ಕಾರಣ ಮೇಲಿನ ಗೀತೆಗಳು ಮೂಡಿ ಬಂದು ನನ್ನ ಮನಸ್ಸೊಳಗೆ ಹರಿಣಿ ಮೇಡಂ ಕೂತು ಈ ಕಾರ್ಯಕ್ರಮದ ಬಗ್ಗೆ ವಿವರ ಕೇಳುತ್ತಿದ್ದಾರೆ ಅನ್ನಿಸಿತು.
ಹರಿಣಿ ಮೇಡಂ... ಖಂಡಿತ ಹೇಳುತ್ತೇನೆ..
*****
ಭಾನುವಾರ ಬೆಳಿಗ್ಗೆ ಸುಮಾರು ಹನ್ನೊಂದಕ್ಕೆ ಕಾರ್ಯಕ್ರಮಕ್ಕೆ ಒಬ್ಬೊಬ್ಬರೇ ಬರಲು ಶುರುಮಾಡಿದರು. ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಡಿಎಂಕೆ ಪಕ್ಷದ ಅಭ್ಯರ್ಥಿಯಂತಿದ್ದ ನಮ್ಮ ಗುರುಗಳು ವಾಜಪೇಯಿ ಸರ್ ನಿಧಾನವಾಗಿ ಕಾರಿಂದ ಇಳಿದು ಬಂದು ನೆರೆದಿದ್ದ ಮಿತ್ರರನ್ನು ಮಾತಾಡಿಸಿದರು.
ಅವರ ಜೀವದ ಗೆಳೆಯರು, ಅವರ ಜೊತೆಗೆ ಹೆಗಲು ಕೊಟ್ಟು ದುಡಿದಿದ್ದ ಸಹೋದ್ಯೋಗಿಗಳು, ಅವರು ಹಿರಿಯರಾಗಿದ್ದರೂ, ತಮಗಿಂತ ಅರ್ಧಷ್ಟು ವಯೋಮಾನದವರನ್ನು ತಮ್ಮ ಗೆಳೆಯರು ಎಂದು ಪರಿಚಯಿಸುತ್ತಾ, ಕಿರಿಯರ ಹೆಗಲ ಮೇಲೆ ಕೈ ಇಟ್ಟುಕೊಂಡು ಮಾತಾಡಿಸುತ್ತಿದ್ದ ಪರಿ ಸೊಗಸಾಗಿತ್ತು.
ಅತಿಥಿಗಳು ಈ ಕೆಳಗಿನವರು
- ಮಲೆಗಳಲ್ಲಿ ಮದುಮಗಳು ನಾಟಕವನ್ನು ಪುಸ್ತಕದಿಂದ ರಂಗಕ್ಕೆ ಕರೆತಂದವರು, ಜೊತೆಯಲ್ಲಿಯೇ ರಂಗಶಾಲೆಗೇ ಹೊಸ ಆಯಾಮ ನೀಡುತ್ತಿರುವ, ಮತ್ತು ಸಾಧನೆ ಮಾಡಿರುವ, ಮಾಡುತ್ತಿರುವ ಶ್ರೀ ಬಸವಲಿಂಗಯ್ಯ,
- ಶ್ರೀ ಸೇತುರಾಂ ಅವರ ಮಂಥನ ಎಂಬ ಮಂಥನ ಧಾರಾವಾಹಿಯಲ್ಲಿ ಮಠದ ಗುರುಗಳಾಗಿ ಅದ್ಭುತ ಅಭಿನಯ ನೀಡಿದ್ದ ಶ್ರೀ ಸಿ ಗುಂಡಣ್ಣ
- ನನ್ನ ಇಷ್ಟ ದೈವ ನಿರ್ದೇಶಕರಾದ ಶ್ರೀ ಪುಟ್ಟಣ್ಣ ಕಣಗಾಲ್ ಅವರು ಶುಭಮಂಗಳ ಚಿತ್ರದಲ್ಲಿ ಮಗ್ಗಿ, ಲೆಕ್ಕದ ಹಾಡನ್ನು ಒಬ್ಬ ಬ್ಯಾಂಕ್ ನಲ್ಲಿ ಕೆಲಸ ಮಾಡುವವರಿಂದಲೇ ಹಾಡು ಬೇಕು ಎಂದು "ನಾಲ್ಕೊಂದ್ಲ ನಾಲ್ಕು ನಾಲ್ಕೆರಡ್ಲ ಎಂಟು"ಹಾಡಿನ ಕತೃ ಶ್ರೀ ಎಂ ಏನ್ ವ್ಯಾಸರಾವ್ ಅವರು..
ಇವರ ಜೊತೆಯಲ್ಲಿ ನಮ್ಮ ಗುರುಗಳು ಶ್ರೀ ಗೋಪಾಲ ವಾಜಪೇಯಿ ಅವರ ಬಗ್ಗೆ... ಮಹಾನ್ ತಾರೆಗಳೊಂದಿಗೆ, ಪ್ರತಿಭೆಗಳೊಂದಿಗೆ ಹೆಗಲು ತಾಕಿಸಿ ಓಡಾಡಿ, ಆ ದಿಗ್ಗಜರ ಜಲಕ್ ಅನುಭವವನ್ನು ತಮ್ಮ ಎಲ್ಲಾ ಬರವಣಿಗೆಗಳಲ್ಲಿ, ಕೆಲವು ಚಿತ್ರಗಳಲ್ಲಿ ತೋರಿಸಿರುವ ಇವರು, ಅವರ ಮುಂದೇ ಏನೂ ಅಲ್ಲದ ನನ್ನನ್ನು ಆತ್ಮೀಯವಾಗಿ ಮಾತಾಡಿಸಿ, ಎಲ್ಲರೆದುರು ಪರಿಚಯ ಮಾಡಿಸಿ, ನನ್ನೊಳಗೆ ನಾನು ಬೀಗುವಂತೆ ಮಾಡುವ ಇವರು ನಿಜವಾಗಿಯೂ ನಮ್ಮ ನಡುವೆ ಇರುವ ಚೈತನ್ಯದ ಚಿಲುಮೆ.
ಕಾರ್ಯಕ್ರಮಕ್ಕೆ ಅತಿಥಿಗಳನ್ನು ಅಂಗಣಕ್ಕೆ ಆಹ್ವಾನ ಮಾಡಿದ ಮೇಲೆ, ಗೋಪಾಲ್ ಸರ್ ಅವರ ಜೀವದ ಗೆಳೆಯರಲ್ಲಿ ಒಬ್ಬರಾದ ಶ್ರೀಪತಿ ಅವರಿಂದ ಪ್ರಾರ್ಥನಾ ಗೀತ ಅನ್ನುವುದಕ್ಕಿಂತ ಒಂದು ಅದ್ಭುತ ರಂಗ ಗೀತೆಯಿಂದ ಕಾರ್ಯಕ್ರಮಕ್ಕೆ ಚಾಲ್ತಿ ನೀಡಿದರು.
ಕಾರ್ಯಕ್ರಮದಲ್ಲಿ ಗಡಿಬಿಡಿ ಕಂಡು ಕಾಣದಂತೆ ಇದ್ದಾಗ ಅದನ್ನು ತಿಳಿಯಾಗಿಸಿದವರು ಶ್ರೀ ಬಸವಲಿಂಗಯ್ಯ ಅವರು.. "ಸಂತೆಯಲ್ಲಿ ನಿಂತ ಮೇಲೆ ಗಡಿಬಿಡಿ ಆಗಬೇಕಾದ್ದೇ, ಅದಕ್ಕೆ ಮುಜುಗರ ಬೇಡ" ಎನ್ನುತ್ತಾ ಕಬೀರನ ಒಂದು ಪುಟವನ್ನೇ ಹಾಗೆ ಬಿಚ್ಚಿಟ್ಟರು. ದೇಹವನ್ನು ಒಂದು ಚಾದರ್ ಗೆ ಹೋಲಿಸಿದ್ದಾನೆ ಆ ಕಬೀರ ಎಂದರು..
(ತಕ್ಷಣ ಹರಿಣಿ ಮೇಡಂ ಮದ್ಯೆ ನನ್ನ ಜೊತೆ ಮಾತಾಡಿ.. ಶ್ರೀಕಾಂತ್ ಇವಾಗ ಅರಿವಾಯಿತು ನೀವು ಆರಂಭದಲ್ಲಿ ಹಾಕಿದ ಕೆಲವು ಗೀತೆಗಳ ಸಂದೇಶ.. ಸೂಪರ್ ಸೂಪರ್ ಮುಂದುವರೆಸಿ)
ನಿರರ್ಗಳವಾಗಿ ಕಬೀರನ ಜೊತೆಯಲ್ಲಿ ನಮ್ಮನ್ನು ಐದಾರು ಶತಮಾನಗಳ ಹಿಂದಕ್ಕೆ ಕರೆದೊಯ್ದು ದರುಶನ ಮಾಡಿಸಿದ ಶ್ರೀ ಬಸವಲಿಂಗಯ್ಯ ಅವರ ಮಾತಿನ ಸರಮಾಲೆಗೆ ಅರ್ಥವಿತ್ತು. ಸುಂದರವಾಗಿತ್ತು. ಮುತ್ತಿನಹಾರವನ್ನು ಪೋಣಿಸಿದಂತೆ ಮಾತಿನ ಭಂಡಾರ ಸೊಗಸಾಗಿ ಹೊಳೆಯುತ್ತಿತ್ತು. ಈ ಕೃತಿ ಸಂತ್ಯಾಗೆ ನಿಂತಾನ ಕಬೀರ ನಾಟಕ ಅನುವಾದಗೊಂಡು ರಂಗಕ್ಕೆ ಏರಲು ಕಾರಣ ಕರ್ತರು ಅವರೇ ಎಂದು ಗೊತ್ತಾದಾಗ ಸಂತೋಷವಾಯಿತು. ತಮ್ಮ ಮತ್ತು ಗೋಪಾಲ್ ಸರ್ ಅವರ ಗೆಳೆತನ, ಪರಿಚಯದ ಒಂದು ಚಿಕ್ಕ ಪುಟವನ್ನು ನಮ್ಮಲ್ಲಿ ಹಂಚಿಕೊಂಡರು.
ನಂತರ ಮಾತಾಡಿದ ಶ್ರೀ ಸಿ ಗುಂಡಣ್ಣ ಅವರು, ಕಬೀರನ ದೋಹಾಗಳ ಬಗ್ಗೆ, ಗೋಪಾಲ್ ಸರ್ ಮತ್ತು ತಮ್ಮ ಗೆಳೆತನ, ಜೊತೆಯಲ್ಲಿ ಬಸವಲಿಂಗಯ್ಯ ಅವರ ಜೊತೆಗಿನ ನಂಟು, ಎಂ ಏನ್ ವ್ಯಾಸರಾವ್ ಅವರ ಜೊತೆಗಿನ ಒಡನಾಟ, ಇವುಗಳ ಬಗ್ಗೆ ಚುಟುಕಾಗಿ ವಿವರಿಸಿ ತಮ್ಮ ಮಾತನ್ನು ಸುಂದರವಾದ ಚೌಕಟ್ಟಿನೊಳಗೆ ನಿಲ್ಲಿಸಿದರು.
ಅಧ್ಯಕ್ಷ ಸ್ಥಾನದಲ್ಲಿ ಕೂತಿದ್ದ ಶ್ರೀ ಎಂ ಏನ್ ವ್ಯಾಸರಾವ್ ಅವರು ಕಬೀರನ ಬಗ್ಗೆ, ಈ ನಾಟಕದ ಬಗ್ಗೆ, ಅನುವಾದದ ಬಗ್ಗೆ ಎಲ್ಲವನ್ನು ತಿಳಿ ತಿಳಿಯಾಗಿ ಹೇಳುತ್ತಾ, ಒಂದು ಒಳ್ಳೆಯ ಒಡನಾಟ ಎಂಥಹ ಅದ್ಭುತ ಕಾರ್ಯವನ್ನು ಮಾಡಿಸುತ್ತದೆ ಎಂದು ಹೇಳುತ್ತಾ, ತಮಗೆ ಅರಿವಿಗೆ ಬಂದ ವಿಚಾರಗಳನ್ನು ಸಂಕ್ಷಿಪ್ತವಾಗಿ ಹೇಳಿದರು.
ಇವರಿಗಿಂತ ಕೊಂಚ ಹೊತ್ತು ಮುಂಚೆ ಮಾತಾಡಿದ ಗೋಪಾಲ್ ಸರ್ ಅವರು, ತಮ್ಮ ಕೆಲಸದ ಆರಂಭದ ದಿನಗಳ ಬಗ್ಗೆ ಹೇಳುತ್ತಾ, ಈ ನಾಟಕ ಅನುವಾದ ಮಾಡುವ ಸುವರ್ಣ ಘಳಿಗೆಯನ್ನು ನೆನೆಸಿಕೊಳ್ಳುತ್ತಾ, ಒತ್ತಡದಲ್ಲಿ ಎಷ್ಟೊಂದು ಸುಂದರ ಕೆಲಸಗಳು, ಸಾಧನೆಗಳು ಆಗುತ್ತದೆ ಎನ್ನುವುದನ್ನು ತಮ್ಮ ಶೈಲಿಯಲ್ಲಿ ತಿಳಿಸಿದರು. ತಮ್ಮ ಗೆಳೆಯರ ಸಹಕಾರವನ್ನು ಪರಿಚಯಿಸುತ್ತಾ, ಅವರೆನ್ನಲ್ಲಾ ವೇದಿಕೆಗೆ ಕರೆದು ಈ ದಿನ ಬಿಡುಗಡೆಗೊಂಡ ಕೃತಿಯನ್ನು ಗೌರವ ಪೂರ್ವಕವಾಗಿ ಕೊಟ್ಟು ತಮ್ಮ ಗೆಳೆತನಕ್ಕೆ ಸುವರ್ಣ ಚೌಕಟ್ಟನ್ನು ಹಾಕಿದರು.
ಪ್ರತಿಭಾ ಖನಿಗಳ ಹಸ್ತದಿಂದ ನನಗೂ ಒಂದು ಕೃತಿಯನ್ನು ಕೊಡಿಸಿದ್ದು ಮನದೊಳಗೆ ನಾನು ಕುಣಿದಾಡುವಂತೆ ಮಾಡಿತು ಎಂದರೆ ನನ್ನ ಮಾತು ಸುಳ್ಳಲ್ಲ.
ಯಾಜಿ ಪ್ರಕಾಶನದ ಶ್ರೀ ಗಣೇಶ್ ಯಾಜಿ ಅವರು ತಮ್ಮ ಈ ಸಾಹಸಕ್ಕೆ ಜೊತೆಯಾದವರೆನ್ನಲ್ಲ ನೆನೆಸಿಕೊಂಡು ಅವರ ಶುಭ ಆಶೀರ್ವಾದಗಳು ಹೀಗೆ ಸದಾ ಇರಲಿ ಎಂದು ಹೇಳುತ್ತಾ ಈ ಚಿಕ್ಕ ಚೊಕ್ಕ ಕಾರ್ಯಕ್ರಮಕ್ಕೆ ತೆರೆ ಎಳೆದರು.
ಹಮ್ಮು ಬಿಮ್ಮು ಇಲ್ಲದ ಸರಳ ವಿರಳ ಎನ್ನುವಂಥ ಈ ಕಾರ್ಯಕ್ರಮ ಶುರುವಾಗಿದ್ದು ಮಾತು ಮುಕ್ತಾಯಗೊಂಡಿದ್ದರ ನಡುವೆ ಕಂಡದ್ದು ಸರಳ ಗೆಳೆತನ, ವಿಶ್ವಾಸ, ಮತ್ತು ಪ್ರತಿಭೆಯ ಮೇಲೆ ಅಚಲ ನಂಬಿಕೆ ಜೊತೆಯಲ್ಲಿ ಸಾಧನೆ ಶಿಖರ ಏರಿದರು ಜೊತೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ವಿನಯವಂತಿಕೆ.
ಸಂತೆಯಲ್ಲಿ ನಿಂತ ಕಬೀರ ಹೇಳಿರುವ ಸರಳ ಮಾತುಗಳಲ್ಲಿನ ಸಂದೇಶಗಳನ್ನು ಈ ಭುವಿಯಲ್ಲಿರುವ ಎಲ್ಲರರೂ ಅಳವಡಿಸಿಕೊಂಡರೆ ಜೀವನ ಚಿತ್ರದಲ್ಲಿ ಅಣ್ಣಾವ್ರು ಹಾಡಿದಂತೆ "ಭುವಿಯೆ ಸರ್ಗ ಭುವಿಯೆ ಸ್ವರ್ಗ ಎನುತಿಹರು.. ನಾದಮಯ ಈ ಲೋಕವೆಲ್ಲಾ ನಾದಮಯ"
ಸುಂದರ ಚಿಕ್ಕ ಚೊಕ್ಕ ಕಾರ್ಯಕಮದಲ್ಲಿ ಭಾಗವಹಿಸಲಿಕ್ಕೆ ಅವಕಾಶವಿತ್ತ ಶ್ರೀ ಗೋಪಾಲ್ ವಾಜಪೇಯಿ ಅವರಿಗೆ ಧನ್ಯವಾದಗಳು ಅರ್ಪಿಸಿ ನಾ ಅಲ್ಲಿಂದ ಹೊರಟೆ.... :-)
*****
ಶ್ರೀಕಾಂತ್ ನಿಮಗೆ ಧನ್ಯವಾದಗಳು.. ಕಳೆದ ಸಾರಿಯ ಗೋಪಾಲ್ ಸರ್ ಅವರ ಪುಸ್ತಕ ಬಿಡುಗಡೆ ನಾ ನಿಮ್ಮ ಜೊತೆ ಬಂದಿದ್ದೆ.. ಆದರೆ ಈ ಕಾರ್ಯಕ್ರಮಕ್ಕೆ ಕಬೀರ ಹೇಳಿದ ಚಾದರ್ ನನ್ನ ಬಳಿಯಲ್ಲಿ ಇರದೇ ಹೋಯಿತು.. ಅದನ್ನು ಆ ದೇವ ತನ್ನ ಬಳಿಗೆ ಒಯ್ದು ಬಿಟ್ಟಾ.. ಹಾಗಾಗಿ ನಿಮ್ಮ ಮನದೊಳಗೆ ಕೂತು ಈ ಕಾರ್ಯಕ್ರಮವನ್ನು ಅನುಭವಿಸಬೇಕು ಎಂಬಾ ಆಸೆಯಾಯಿತು. ಹಾಗಾಗಿ ನನಗೆ ಈ ಕಾರ್ಯಕ್ರಮವನ್ನು ನೋಡಲಿಕ್ಕೆ, ಅನುಭವಿಸಲಿಕ್ಕೆ ಅವಕಾಶ ಮಾಡಿಕೊಟ್ಟ ಆ ದೇವನಿಗೆ ನಮಸ್ಕರಿಸುತ್ತೇನೆ. ಮತ್ತೆ...
ಮೇಡಂ ನನಗೆ ಧನ್ಯವಾದಗಳನ್ನು ಹೇಳಬೇಡಿ.. ಗುರುಗಳ ಮೇಲಿನ ಗೌರವ ಭಕ್ತಿ ನನಗೆ ಈ ಕೆಲಸ ಮಾಡಲು ಅನುಕೂಲ ಮಾಡಿಕೊಟ್ಟಿತು. ಅವರಿಗಾಗಿ ಬಂದೆ, ಅವರಿಗಾಗಿ ನಿಂದೆ.. ಗುರುಗಳು ಹೇಳಿದರೆ ಶ್ರೀಕಾಂತ ಕೂಡ ಸಂತ್ಯಾಗ ಏನೂ ಎಲ್ಲಿ ಬೇಕಾದರೂ ನಿಂತಾನಾ...ಬರ್ತಾನಾ.. :-)
ಹರಿಣಿ ಮೇಡಂ ಅಲ್ಲಿಯೇ ಬೆಳಗುತ್ತಿದ್ದ ದೀಪದೊಳಗೆ ಸಾಗುತ್ತಾ ಹೋದಂತೆ.. ಒಂದು ಚಿಕ್ಕ ಬಿಂಧುವಾಗಿ ಹೊಳೆಯುವ ತಾರೆಯಾಗಿ ನಿಂತು ಬಿಟ್ಟರು..
ಒಂದು ಸುಮಧುರ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಕುಶಿ ಕೊಟ್ಟ ಪರಿ ಒಂದು ಕಡೆಯಾದರೆ.. ನನ್ನ ನೆಚ್ಚಿನ ಹರಿಣಿ ಮೇಡಂ ನನ್ನೊಳಗೆ ನುಗ್ಗಿ ಬಂದು ಬರೆಸಿದರು ಎನ್ನುವ ಸಂತಸ ಇನ್ನೊಂದು ಕಡೆ.. ಡಬಲ್ ಧಮಾಕ..
ಗುರುಗಳೇ ಗೋಪಾಲ್ ವಾಜಪೇಯಿ ಸರ್ ನಿಮಗೆ ಮತ್ತು ನಿಮ್ಮ ಸ್ನೇಹ ಭಂಡಾರಕ್ಕೆ ನನ್ನ ಧನ್ಯವಾದಗಳು...!!!
soooperb article and pictures ! Sri !!!
ReplyDelete