Wednesday, May 7, 2014

DFR - ನಿಮಗಿದೋ ..... !!!!

"ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ" ಈ ಹಾಡು ಉಪಾಸನೆ ಚಿತ್ರದ್ದು.. ಈ ಹಾಡಿನ ಸಾಹಿತ್ಯ, ಸಂಗೀತ, ಆರತಿ ತನ್ಮಯಳಾಗಿ ವೀಣೆ ನುಡಿಸುವ ನಟನೆ.. ಬೆಳಕಿನ ಸಂಯೋಜನೆ.. ಆಹಾ ಅತಿ ಸುಂದರ..

ಇಂತಹ ಒಂದು ತನ್ಮಯತೆಯನ್ನು ಮತ್ತೆ ಕಂಡಿದ್ದು.. ಅಣ್ಣಾವ್ರ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿ ಮಾತೆಯನ್ನು ಕಂಡಾಗ ಅಣ್ಣಾವ್ರ ಮುಖದಲ್ಲಿನ ಆ ಅಭಿನಯ.. ತನಗಿಂತಲೂ ಕಿರಿಯಳಾದ ಮತ್ತು ಪರಭಾಷೆಯ ಚಿತ್ರದಲ್ಲಿ ಉತ್ತಮ ಪಾತ್ರಗಳಿಲ್ಲದೇ ಯಾವುದೋ ಯಾವುದೋ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತ ಇದ್ದ ನಳಿನಿಯಲ್ಲಿ ಕಾಳಿ ಮಾತೆಯನ್ನು ಕಂಡು ಅವಳ ಕಾಲನ್ನು ಮುಟ್ಟಿ ನಮಸ್ಕರಿಸುವುದು ಕಾಲ ಮೇಲೆಯೇ ತಲೆಯಿಟ್ಟು ಮಲಗುವುದು..

ಆಹಾ ಅಂಥಹ ನಟನೆ.. ಅಣ್ಣಾವ್ರಿಗೆ ಮಾತ್ರ ಸಾಧ್ಯ..

"ಮಾತೆ ಜಗನ್ಮಾತೆ ಸನ್ನಿಧಾನದಲ್ಲಿ ನಿಂತು ನಿನ್ನಿಂದ ವರ ಪಡೆದ ನನ್ನ ಮನಸ್ಸಿಗೆ ಸಂತೋಷ ತಂದ ಆ ಘಳಿಗೆ ಸುವರ್ಣ ಘಳಿಗೆ" ಎಂದರು ಕಾಳಿದಾಸ

ಕಾಳಿಮಾತೆ "ಹೌದು ಕಾಳಿದಾಸ ನಿನ್ನಂತಹ ಭಕ್ತರು ಇರುವಾಗ ನನ್ನ ಅಸ್ತಿತ್ವ ಇದ್ದೆ ಇರುತ್ತದೆ"

ಯಾಕೋ ಕ್ಷಣ ಕಾಲ ಕಾಳಿದಾಸ ಮೂಕನಾಗಿದ್ದರು..ಅದನ್ನು ಮನಗಂಡ ಮಾತೆ

"ಅರೆ ಮಗು ಏನಾಯಿತು.. ಯಾಕೆ ಸುಮ್ಮನಾದೆ.. ಮೌನಕ್ಕೆ ಶರಣಾದೆ.. ?"

"ಕಾಳಿಯೇ ನನ್ನ ಮುಂದೆ ನಿಂತಿರುವಾಗ.. ಈ ದಾಸನಿಗೆ ಮತ್ತೇನು ಚಿಂತೆ ಮಾತೆ.. ಆದರೆ ನನ್ನ ಮನಸ್ಸಿಗೆ ಒಂದು ಯೋಚನೆ
ತಲೆ ತಿನ್ನುತ್ತಿದೆ.. "

"ಅದೇನು ಕೇಳು ಮಗು.. ನಾನಿರುವೆ ನಿನ್ನ ಪ್ರಶ್ನೆಗಳಿಗೆ ಉತ್ತರ ನೀಡಲು.. "

"ಮಾತೆ ನಿನ್ನನ್ನು ಮೊದಲು ನೋಡಿದಾಗ.. ನನಗೆ ಭಯವೂ ಆಗಲಿಲ್ಲ.. ಗಂಟಲು ಕೂಡ ಬತ್ತಲ್ಲಿಲ್ಲ.. ಆದರೆ ಭಕ್ತಿಯಿಂದ ಮನಸ್ಸು ಹಕ್ಕಿಯಾಗಿತ್ತು.. ನಿನ್ನ ಮೊದಲು ಏನೆಂದು ಹೆಸರಿಸಲಿ ಎಂಬ ತರ್ಕಕ್ಕೆ ಮನದಲ್ಲಿ ಉತ್ತರವಿಲ್ಲದೆ ತಡಕಾಡುತ್ತಿತ್ತು.

"ಹೌದು ಮಗು.. ನಿನಗಾದ ಅನುಭವವೇ ಹಲವರಿಗೆ ಆಗಿದೆ ಆಗುತ್ತದೆ.. ಆಗುತ್ತಿರುತ್ತದೆ.. ಕಲ್ಮಶವಿಲ್ಲದ.. ಮನಪೂರ್ತಿ ನಗುತ್ತಾ ಎಲ್ಲರೊಡನೆ ತಾನು ಒಂದು ಎಂದು ಬೆರೆಯುವ ಮನಸ್ಸು ಎಂದಿಗೂ ಹಾಗೆ ಇರುತ್ತದೆ.. "

ಮಾತೆ ಇಂತಹ ಅನುಭವ ಎಲ್ಲರಿಗೂ ಆಗುತ್ತದೆ ಎಂದು ಹೇಳಿದೆಯಲ್ಲ.. ಅದಕ್ಕೆ ಏನಾದರೂ ಉತ್ತಮ ನಿದರ್ಶನಗಳು ಇವೆಯೇ.. ಅಥವಾ ಇದು ಸಾಧ್ಯವೇ..

"ಖಂಡಿತ ಸಾಧ್ಯ ಇದೆ ಕಾಳಿದಾಸ.. ವಿಜಯನಗರವಾಸಿ ಶ್ರೀ ಕೆಲವು ದಿನಗಳ ಹಿಂದೆ ಇವರ ಮನೆಗೆ ಹೋಗಿ ತನ್ನ ತಂಗಿ ಸಂಧ್ಯಾಳ ಮದುವೆಯ ಕರೆಯೋಲೆ ಪತ್ರ ಕೊಡಲು ಹೋದಾಗ.. ಅವರ ವ್ಯಕ್ತಿತ್ವದ ಪ್ರಭೆಯಲ್ಲಿ ಮಿಂದು ಹೊರಗೆ ಬಂದಾಗ ಅವನಲ್ಲಿ ಮೂಡಿದ ಮಾತುಗಳು ನೋಡು ಹೀಗಿವೆ"

"ರೂಪ ಅವರನ್ನು ಅಕ್ಕ ಎನ್ನಲೇ, ತಂಗಿ ಎನ್ನಲೇ, ಅತ್ತಿಗೆ ಎನ್ನಲೇ... ....
ಛೆ ಛೆ ಯಾಕಿಷ್ಟು ಗೊಂದಲ ಮನದಲ್ಲಿ ..
ತಡಿ ತಡಿ ಮಾತೆ ಜಗನ್ಮಾತೆ..
ಅಕ್ಕ, ತಂಗಿ, ಅತ್ತಿಗೆ ಇವಕ್ಕೆಲ್ಲ ಮೀರಿದ ಒಂದು ಭಾಂದವ್ಯ ಇದೆ...
ಅದೇ ಮಾತೆ .... ಗುರು ಮಾತೆ.. ...
ಕಾಳಿದಾಸನಿಗೆ ಆದ ಅನುಭವ ಇಂದು ನನಗಾಯಿತು..
ನನಗೆ ಸಿಕ್ಕ ಗುರುಮಾತೆ ನೀವು ರೂಪ..
ಇಂದು ನಿಮ್ಮ ಮುಂದೆ ಕುಳಿತು ಮಾತಾಡುತ್ತಿದ್ದಾಗ ಕಾಳಿದಾಸನಿಗೆ ತನ್ನ ಜಗನ್ಮಾತೆ ಮುಂದೆ ನಿಂತು  ಶ್ಯಾಮಲಾ ದಂಡಕ ಹಾಡಿದಾಗ ಸಿಕ್ಕ ಅನಿರ್ವಚನೀಯ ಅನುಭವ ನನಗಾಯಿತು...
ಹಾಟ್ಸ್ ಆಫ್ ರೂಪ ಹಾಟ್ಸ್ ಆಫ್..
ನಿಮಗೆ ಶಿರಬಾಗಿ ನಮಿಸುವೆ.. ನಿಮ್ಮನ್ನು ಗುರುಮಾತೆ ಎಂದು ಕರೆಯಲು ನನಗೆ ಅತೀವ ಆನಂದವಾಗುತ್ತಿದೆ...
ದೇವರೇ ನನಗಾಗಿ ಕಳಿಸಿದ ಸ್ನೇಹಿತೆ ಎಂದು ಹೇಳಲು ಹೆಮ್ಮೆ ಎನ್ನಿಸುತ್ತಿದೆ.. ನಿಮ್ಮನ್ನು DFR ಎಂದು ಕರೆಯಲೇ.. "

"ಮಾತೆ ಮಾತೆ ನನಗೆ ಮಾತೆ ಹೊರಡುತ್ತಿಲ್ಲ... ಶ್ರೀ ಸೌಖ್ಯವಾಗಿರಲಿ.. ತನ್ನ ಗುರುಮಾತೆಯ ಕುಟುಂಬಕ್ಕೆ ಸದಾ ಒಳ್ಳೆಯದಾಗಲಿ.. ಅಭಿವೃದ್ಧಿ, ಶಾಂತಿ ಎಲ್ಲವೂ  ಒಲಿಯಲಿ ಎಂದು ಹಾರೈಸುತ್ತೇನೆ ಕಾಳಿ ಮಾತೆ.... ಅದು ಸರಿ ಈ DFR ಅಂದರೆ ಏನು ಮಾತೆ" ಎಂದರು ಕಾಳಿದಾಸ...

"ಹೌದು ಕಾಳಿದಾಸ ನಿನ್ನ ಮಾತು ಅಕ್ಷರಶಃ ಸತ್ಯ.. ನಿನಗೆ ನನ್ನ ನೋಡಿದಾಗ ಆದ ಆನಂದ ಅಂದು ಶ್ರೀಗೆ ಆಯಿತು...ಮತ್ತೆ DFR ಅಂದರೆ  Devine Friend Roopa.. ಅಂದರೆ ದೈವಿಕ ಸ್ನೇಹಿತೆ ರೂಪ"

"ಅಬ್ಬಾ.. ಕೆಲವು ಅಕ್ಷರಗಳನ್ನು ಜೊತೆಯಲ್ಲಿ ನಿಲ್ಲಿಸಿದಾಗ ಎಂಥಹ ನುಡಿಮುತ್ತುಗಳಿಗೆ ಜನ್ಮ ನೀಡುತ್ತವೆ..ಸುಂದರ ಮಾತುಗಳು.. ಮಾತೆ ಇಷ್ಟವಾಯಿತು.. "

"ಇನ್ನೂ ಇದೆ ಕಾಳಿದಾಸ.. ಈ DFR ಕೈಗೆ ಸುಮ್ಮನೆ ಕೈ ಗಡಿಯಾರವನ್ನು ಕಟ್ಟಿ ಕೊಳ್ಳುತ್ತಾರೆ ಅಷ್ಟೇ.. ಅದರಲ್ಲಿ ಎಷ್ಟು ಘಂಟೆಗಳಿವೆ ಎಂದು ನಾನು ಅನೇಕಾ ಬಾರಿ ನೋಡಲು ಸೋತ್ತಿದ್ದೇನೆ.. ಕಾರಣ ಗೊತ್ತೇ"

"ಏನು ಮಾತೆ ಆ ಕಾರಣ...  ರಾಜಕಾರಣ"

"ಊರಾಚೆ ಎನ್ನಬಹುದಾದ ಬಹು ಅಂತರರಾಷ್ಟ್ರೀಯ ಕಂಪನಿಯಲ್ಲಿ ಕೆಲಸ.. ಸುಂದರ ಅರಳು ಪ್ರತಿಭೆಗಳ ಶರಧಿ... ಕ ಕ ಕ ಕುಟುಂಬದ ಒಡತಿ.. ಅರಳುತ್ತಿದೆ ಅರಳುತ್ತಿದೆ ಎಂದು ಹೇಳುವ "ಅರಳು" ಶಾಲೆಗೆ ಸ್ಫೂರ್ತಿ..ಹಲವಾರು ದೇವರ ಮಕ್ಕಳಿಗೆ ಮಾತೃ ಸ್ವರೂಪಿಣಿ.. ಮತ್ತೆ"

"ಕಾಳಿ ಮಾತೆ.. ಈ ಮೇಲಿನ ಮಾತುಗಳನ್ನು ಕೇಳಿ ದಣಿವಾರಿಸಿಕೊಳ್ಳುತ್ತಿದ್ದೇನೆ.... ಅಬ್ಬಾ ಮಾತೆ ಒಂದು ಮಾತು ಹೇಳಲೇ.. "

"ಹೇಳು ಕಂದಾ"

"ಈ DFR ಬಗ್ಗೆ ಮುಂಚೆ ನನಗೆ ಅರಿವಾಗಿದ್ದರೆ.. ನಿನ್ನ ಬಳಿ ಬೇಡುವುದರ ಬದಲು ಅವರ ಬಳಿಯೇ ವಿದ್ಯಾ ಬುದ್ದಿ ಮಾತ್ರವಲ್ಲದೆ... ಎಷ್ಟೇ ಸಾಧಿಸಿದರೂ ನನ್ನ ತಲೆ ನನ್ನ ಭುಜದ ಮೇಲೆ ಸದಾ ಇರಲಿ DFR ತರಹ ಎಂದು ಬೇಡಿಕೊಳ್ಳುತ್ತಿದ್ದೆ"

"ಆಹಾ.. ಮಗು ಕಾಳಿದಾಸ ಎಂಥಹ ಸುಮಧುರ ಯೋಚನೆ.. ಹೌದು ಮಗು.. ಇವತ್ತು ನೋಡು ಅವರ ಜನುಮದಿನಕ್ಕೆ ಹರಿದು ಬರುವ ಅಭಿಮಾನ ಪೂರಿತ ಮಾತುಗಳು.. ನನ್ನ ಮತ್ತು DFR ಅನುಬಂಧ..ಅವರ ಮುಂಗೈ ಮಣಿಕಟ್ಟಿನ ಮೇಲೆ ಇರುವ ಹಚ್ಚೆಯ ತರಹ.."

"ಅದರಲ್ಲೇನೂ ವಿಶೇಷ ಮಾತೆ "  



"ಜೀವನದಲ್ಲಿ ಕಷ್ಟಕ್ಕೆ ಸುಖಕ್ಕೆ ತಲೆಬಾಗುವುದನ್ನು ಕಲಿಸಿದ ಅಮ್ಮನ ಹೆಸರು ಮಡಿಸುವ ಭಾಗದಲ್ಲಿದ್ದರೆ ...ಜೀವನದಲ್ಲಿ ಬರುವ ಎಲ್ಲ ಸಾಧನೆಗಳಿಗೂ, ಪರೀಕ್ಷೆಗಳಿಗೂ ನೆಟ್ಟಗೆ ನಿಲ್ಲಬೇಕೆಂದು ಕಲಿಸುವ ಪಾಠ ಬಾಗುವುದಕ್ಕಾಗದ ಭಾಗದಲ್ಲಿದೆ.. ಹಾಗೆಯೇ ಕಲಿಸಿದ ಪಾಠ...  ಕಲಿಸುವ ಪಾಠ ಇವರೆಡರ ಮಧ್ಯೆ ನಿಲ್ಲುವುದೇ ಮಮತೆ, ಪ್ರೀತಿ, ಮಮಕಾರ.. ಅದರ ಚಿನ್ಹೆ ಅದರ ಮಧ್ಯೆ"

"ಕಾಳಿದಾಸ ಮಾತೆ .... ಅಮೋಘ ಅಮೋಘ.. ಸುಂದರ ಅತಿ ಸುಂದರ.. "

ಇಂತಹ ಸುಮಧುರ ಮನಸ್ಸಿನ DFR ಅವರ ಹುಟ್ಟು ಹಬ್ಬಕ್ಕೆ ಈ ಸುಂದರ ಲೇಖನವನ್ನು ನಾನು ಶ್ರೀ ಒಳಗೆ ಕೂತು ಬರೆಸುತ್ತಿದ್ದೇನೆ ಮಗು.. ಕಾಳಿದಾಸ.. ನೋಡು ಶ್ರೀ ಯನ್ನು ಹೇಗೆ ನಿಂತಿದ್ದಾನೆ..  ಮತ್ತು ಅವನ ಮನದೊಳಗಿನ ಮಾತು ಹೀಗಿವೆ

"ರೂಪ ದಯಮಾಡಿ ತಪ್ಪು ತಿಳಿಯಬೇಡಿ.....  ನಿಮ್ಮ ಜೊತೆ ಇಂದು ಮಾತಾಡುತ್ತ ಕುಳಿತಾಗ ನನ್ನ  ಮನಸ್ಸಲ್ಲಿ ಮೂಡಿದ ಮಾತುಗಳು ಈ ಲೇಖನವಾಗಿದೆ.. .. ನನ್ನ ಮನದಲ್ಲೇ ನಿಮ್ಮ ಮನಸ್ಸಿಗೆ ಕೈ ಮುಗಿಯುತ್ತಲೇ ಇತ್ತು ದೇವರ ಮುಂದೆ ನಿಂತ ಭಕ್ತನ ಹಾಗೆ... ಜನುಮ ದಿನದ ಶುಭಾಶಯಗಳು DFR"

"Wish you happy birthday DFR"

"right.. right .. Thank you Sri....!!!"

ಕಾಳಿಮಾತೆ ಮತ್ತು ಕಾಳಿದಾಸ ಇಬ್ಬರೂ ಅಂತರ್ದಾನವಾಗುತ್ತಾರೆ..

ಭೂಲೋಕದ ಸಮಸ್ತ ಜನತೆ ತಮ್ಮ ಅಭಿಮಾನ ಪೂರಿತ ಮಾತುಗಳಿಂದ ರೂಪ ಸತೀಶ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ.. ಹೇಳುತ್ತಾರೆ ಇಂತಹ ಒಂದು ಸುಮಧುರ ಮನಸ್ಸಿನ ಡಾರ್ವಿನ್ ಸಿದ್ಧಾಂತದ ಮಾನವತ ಜೀವ.. ನಭೂತೋ ನಭವಿಷ್ಯತಿ.. !!! 

7 comments:

  1. ಶ್ರೀ ಕಾಂತ್ ನಿಮ್ಮ ಈ ಶುಭ ಹಾರೈಕೆಯಲ್ಲಿನ ಪ್ರತೀ ಮಾತೂ ನಿಜ, ಅದನ್ನು ನಾನೂ ಸಹ ಬಹಳಷ್ಟು ಸಾರಿ ಅಂದುಕೊಂಡಿದ್ದೇನೆ, ಖಂಡಿತವಾಗಿ ರೂಪ ಸತೀಶ್ D .F .R . ಎನ್ನುವುದರಲ್ಲಿ ಯಾವ ಅನುಮಾನ ಬೇಡ . ನಾನು ಹಲವಾರು ಸಂದರ್ಭದಲ್ಲಿ ಅವರ ಉದಾಹರಣೆಯನ್ನು ಕೊಡುತ್ತಿರುತ್ತೇನೆ . ರೂಪಾ ಸತೀಶ್ ಮೇಡಂ,ಜನುಮದಿನದ ಹಾರ್ದಿಕ ಶುಭಾಶಯಗಳು , ನಿಮ್ಮ ಒಳ್ಳೆಯ ಕನಸುಗಳು ನನಸಾಗಿ ಇತರರಿಗೆ ಮಾದರಿಯಾಗಲಿ. ಅಮ್ಮನಿಗೆ ಪ್ರೀತಿಯ ಮಗಳಾಗಿ, ಮಗಳಿಗೆ ಪ್ರೀತಿಯ ಅಮ್ಮನಾಗಿ , ನನ್ನಂತಹವನಿಗೆ ಆತ್ಮೀಯ ಸಹೋದರಿಯಾಗಿ, ಸದಾ ಚಟುವಟಿಕೆಯ ಕೇಂದ್ರ ಬಿಂದುವಾಗಿ, ನಗು ನಗುತ್ತಾ ಎಲ್ಲರಿಗೂ ಮಾದರಿ ಮಹಿಳೆಯಾಗಿ ನೂರ್ಕಾಲ ಬಾಳಿ . ನೀವು ನಂಬಿರುವ ಶ್ರೀ . ನಿಮಿಶಾಂಬ ದೇವಿಯು ನಿಮ್ಮನ್ನು ಹರಸಿ ಅನುಗ್ರಹಿಸಲಿ. ನಿಮಗೆ ನನ್ನ ಹಾಗು ನಮ್ಮ ಕುಟುಂಬದ ಎಲ್ಲರ ಶುಭ ಹಾರೈಕೆಗಳು .

    ReplyDelete
  2. ನಮ್ಮ ಮುನ್ನಡೆಗೆ ನಿಜ ಕಾರಣರು ಅಪರ’ರೂಪ’ ಅವರು.
    ಅವರ ಜನುಮದಿನಕ್ಕೆ ತಮ್ಮ ಈ ಬರಹ ಸಮಂಜಸವಾಗಿದೆ ಮತ್ತು ಪರಿಪೂರ್ಣವಾಗಿದೆ.
    ಅವರ ಮುಂದಿನ ಬಾಳುಮೆ ಅವರ ಇಚ್ಛೆಯಂತೆ ಸುಂದರವಾಗಿ ರೂಪಗೊಳ್ಳಲಿ. ಅವರ ಕೃಪಾ ನೆರಳಿನಲ್ಲಿ ನಮ್ಮ ಕನ್ನಡವೂ ಅರಳಲಿ.

    ReplyDelete
  3. Sri, Balu Sir, Ba.Pa avre :)
    Nimmellara shubha haaraikagaLige, preethige manasaare sharanu. Tumbaa calculative aagi devru nanna snehitaranna aarisi aarisi kaLsiddaane. Avana aaykegaLu jeevanmoulyagaLannu hechchisikolloke sahakaaravaagide, arthapoorna badukige nandhiyaagide. Ondolle manasu maathra matthondu olle manasanna guruthisoke sadhya. Naavellroo onde doNiyalli payaNisuttiruvudu daiva-ichche!! Nimmellara preetige nanna maru preetiye, gourava, abhimaanave uttara. Thanks for making such a difference in my life.

    ReplyDelete
  4. ಕವಿರತ್ನ ಕಾಳಿದಾಸದ ಪ್ರಸಂಗ ಈ ಸನ್ನಿವೇಷಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಕಾಳಿದಾಸನಿಗೆ ದೇವಿಯನ್ನು ಕಂಡಾಗ ಆದಂಥ ಅನುಭವವೇ ರೂಪಕ್ಕನ್ನನ್ನು ಅರಿತ ಎಲ್ಲರಿಗೂ ಅಗುತ್ತದೆಂಬುದು ಸತ್ಯ. ರೂಪಕ್ಕ ಅವರನ್ನು ಯಾರಾದರೂ ಹೊಸಬರಿಗೆ ಪರಿಚಯ ಮಾಡಿಕೊಡುವುದು ಬಹಳ ಕಷ್ಟ ಏಕೆಂದರೆ ಅವರು ಮಾಡುವ ಕಾರ್ಯಗಳ ಪಟ್ಟಿ ಉದ್ದವಾಗಿ ಬೆಳೆಯುತ್ತ ಹೋಗುತ್ತದೆ. ಜೀವನದ ಸಾರ್ಥಕತೆ ಬಗ್ಗೆ ಅವರಿಗಿರುವ ನಿಲುವನ್ನು ಬಹಳ ಹತ್ತಿರದಿಂದ ಕಂಡವನು ನಾನು. ಒಟ್ಟಿನಲ್ಲಿ ಅವರ ಬಗ್ಗೆ ಸಂಪೂರ್ಣವಾಗಿ ಹೇಳಲು ಪದಗಳು ಸಾಲದು. ಅವರು ನಿಮ್ಮೊಬ್ಬರಿಗೇ ಅಲ್ಲ ನಮ್ಮೆಲ್ಲರಿಗೂ ಅವರ ಕಾರ್ಯಗಳಿಂದ ಇಂದು ಬೆಳಕನ್ನು ಕಂಡಿರುವ ಸಮಸ್ತರಿಗೂ ಅವರು DFR... Happy Birthday again...

    ReplyDelete
  5. ನನಗೆ ಪ್ರೇಮಕವಿ ಕೆ.ಕಲ್ಯಾಣ್ ಪ್ರೊ.ಜಿ ಎಸ್ ಎಸ್ ಪ್ರೌಢಶಾಲೆಯಲ್ಲಿ ಸತೀಶ್ ಕನ್ನಡಿಗ ಅವರ ಸಮೂಹದ ಶಾಲಾ ಮಕ್ಕಳ ಸಹಾಯಾರ್ಥ ಕಾರ್ಯಕ್ರಮದಲ್ಲಿ ಮಾತನಾಡುತ್ತಾ...ನೀವೆಲ್ಲಾ ಶ್ರೀಮತಿ ರೂಪಾ ಅವರನ್ನು ರೂಪಕ್ಕಾ ರೂಪಕ್ಕಾ ಎನ್ನುತ್ತಿದ್ದು...ಈಗ ಅವರ ಸಮಾಜಪರ ಕಾಳಜಿ ಗಮನಿಸಿದರೆ ಅವರು ರೂಪ-ರೂಪಕ ಎನ್ನಬೇಕು ಎನಿಸುತ್ತೆ. ಎಂದಿದ್ದರು. ಎಷ್ಟು ನಿಜ ಅಲ್ವಾ...?? ಶ್ರೀಮನ್ ನಿಮ್ಮ ಬ್ಲಾಗ್ ವಿಶೇಷಗಳಲ್ಲಿ ಇದೊಂದು ವಿಶೇಷ. ರೂಪಾನ ನಾನೂ ಅಕ್ಕ ಎನ್ನಬಹುದು..ಒಂದು ಅರ್ಥದಲ್ಲಿ ಯಾಕಂದ್ರೆ ಮೇಘು...ಸುರಯಾಗಿಂತ ಒಂದು ವರ್ಷ ದೊಡ್ಡವಳು...ಹಹಹ ಏನಂತೀರಿ ರೂಪಾ...?? ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತೊಮ್ಮೆ.

    ReplyDelete
  6. :) ಆತ್ಮೀಯತೆಯ ಪ್ರತಿ’ರೂಪ ಈ ಬರಹ. :)

    ReplyDelete
  7. ರೂಪಕ್ಕಾ ನಮ್ಮ ಹೆಮ್ಮೆ..
    DFR ಸರಿಯಾದ ಪೆಟ್ ನೇಮ್ ರೂಪಕ್ಕಾಗೆ...

    ಆತ್ಮೀಯತೆಯ ಎಸಳುಗಳು ಹಾಗೆ ತೆರಕೊಂಡಿವೆ ನಿಮ್ಮ ಲೇಖನದಲ್ಲಿ.. ಸೂಪರ್‍ ಸೇ ಊಪರ್‍ ಶ್ರೀಕಾಂತಣ್ಣಾ... ಇಷ್ಟವಾಯಿತು..

    ReplyDelete