ಡಾಕ್ಟರ್ ಹತ್ತಿರ ಒಬ್ಬ ಓಡೋಡಿ ಬಂದ..
ಡಾಕ್ಟರಿಗೆ ಗಾಬರಿ.. "ಏನಾಯ್ತಪ್ಪ"
ನಮ್ಮ ಪಕ್ಕದ ಮನೆಯಲ್ಲಿ ರಕ್ತದ ಒತ್ತಡ ನೋಡುವ ಯಂತ್ರವನ್ನು ತಂದಿದ್ದರು
ನನಗೆ ಕುತೂಹಲ.. "ಅವರ ಮನೆಗೆ ಹೋಗಿ ನನ್ನದು ರಕ್ತದ ಒತ್ತಡ ನೋಡಿರಿ" ಎಂದೇ
ಆಗ ಸಂಜೆ ಎಂಟು ಮೂವತ್ತು.. ಅವರ ಮನೆಯಲ್ಲಿ ಜೀ ಕನ್ನಡ ಓಡುತ್ತಿತ್ತು..
ಓಹ್ ಸಾಹೇಬ್ರು ಬನ್ನಿ ಬನ್ನಿ.. ಅಂತ ಒಳಗೆ ಕರೆದರು..
ಟಿವಿ ನೋಡುತ್ತಾ.. ಹಾಗೆ ಪರೀಕ್ಷೆ ಮಾಡಿಸಿದೆ..
ಆ ಯಂತ್ರದಲ್ಲಿದ್ದ ಪಾದರಸ ಕೆಳಗೆ ಇಳಿಯುತ್ತಲೇ ಇಲ್ಲ. ಬದಲಿಗೆ ಮೇಲಕ್ಕೆ ಅಂಟಿಕೊಂಡು ಬಿಟ್ಟಿತ್ತು..
ಸುಮಾರು ಹೊತ್ತು ನಾನು ನೋಡುತ್ತಲೇ ಇದ್ದೆ.. ಆದರೆ ಆ ಪಾದರಸ ಕೆಳಗೆ ಇಳಿಯುತ್ತಲೇ ಇಲ್ಲ..
ಆರೋಗ್ಯ ಸರಿ ಇದೆ.. ರಕ್ತ ಒತ್ತಡಕ್ಕೆ ಎಂದೂ ಒಳಗಾದವನಲ್ಲ.. ಗಾಬರಿ ಆಯಿತು ಅದಕ್ಕೆ ನಿಮ್ಮ ಹತ್ತಿರ ಬಂದೆ..
ಡಾಕ್ಟರ್ ಸಮಯ ನೋಡಿಕೊಂಡರು.. ರಾತ್ರಿ ೯.೩೦ ಆಗಿತ್ತು.. ಚಂದನ ವಾಹಿನಿ ಓಡುತ್ತಿತ್ತು..
ಬಾಪ್ಪಾ ಕೂತುಕೋ.. ಎಂದು ಹೇಳಿ.. ಟಿವಿ ಧ್ವನಿಯನ್ನು ದೊಡ್ಡದು ಮಾಡಿ.. ರಕ್ತದ ಒತ್ತಡ ಪರೀಕ್ಷಿಸಿದರು.. ಸರಿಯಾಗಿತ್ತು...
ಇನ್ನೈದು ನಿಮಿಷ ಬಿಟ್ಟು .. ಮತ್ತೆ ನೋಡಿದರು... ಆಗಲೂ ಸರಿಯಾಗಿತ್ತು..
ನಾಳೆ ಸಂಜೆ ಬಾ ಅಂದರು..
ಮತ್ತೆ ಮಾರನೇ ದಿನ ಎಂಟು ಮೂವತ್ತಕ್ಕೆ ಡಾಕ್ಟರ್ ಬಳಿ ಹೋದ.. ಸ್ವಾಗತಕಾರಿಣಿ .. ಜೀ ಕನ್ನಡ ಹಾಕಿ ಮೊಬೈಲ್ ನಲ್ಲಿ ಆಟವಾಡುತ್ತಿದ್ದರು..
ರಕ್ತದ ಒತ್ತಡದ ಯಂತ್ರದಲ್ಲಿ ಮತ್ತೆ ಪಾದರಸ ಮೆಲ್ಲನೆ ಮೇಲಕ್ಕೆ ಏರಿ ಅಲ್ಲೇ ಅಟಕಾಯಿಸಿಕೊಂಡಿತ್ತು.. ಅರೆ ಡಾಕ್ಟರ್ ಅವರಿಗೂ ಆಶ್ಚರ್ಯ.. ಅಷ್ಟರಲ್ಲಿ ವಿದ್ಯುತ್ ಹೋಯಿತು.. ದೀಪಗಳು ಒಮ್ಮೆ ಆರಿ ಮತ್ತೆ ಹೊತ್ತಿಕೊಂಡಿತು.. ಟಿವಿಯಲ್ಲಿ ಚಂದನ ಬಂದಿತು..
ರಕ್ತದ ಒತ್ತಡ ಪರೀಕ್ಷೆ ಮಾಡಿದರು... ಸರಿಯಾಗಿತ್ತು..
ಸ್ವಾಗತಕಾರಿಣಿ ಜೀ ಕನ್ನಡ ಹಾಕಿದರು.. ಮತ್ತೆ ವ್ಯತ್ಯಾಸ..
ಆಗ ತಿಳಿಯಿತು..
ಡಾಕ್ಟರ್ ಜೋರಾಗಿ ನಗಲು ಶುರುಮಾಡಿದರು..
ನೋಡಪ್ಪ ಈ ರೋಗಕ್ಕೆ ಎರಡೇ ಚಿಕಿತ್ಸೆ
೧) ನನ್ನ ಕ್ಲಿನಿಕ್ ನಲ್ಲಿ ರಾತ್ರಿ ೮.೩೦ ರಿಂದ ೯.೦೦ ಕ್ಕೆ ರಕ್ತದ ಒತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಡ.. ಚಂದನ ವಾಹಿನಿ ಓಡುತ್ತಿದ್ದರೆ ಮಾತ್ರ ಪರೀಕ್ಷಿಸಿಕೋ.. ಜೀ ಕನ್ನಡ ಹಾಕಿದ್ದರೆ.. ಒಂಭತ್ತು ಘಂಟೆಯಾದ ಮೇಲೆ ಬಾ
೨) ಇಲ್ಲವೇ .. ನೀ ಪರೀಕ್ಷೆ ಮಾಡಿಸಿಕೊಳ್ಳುವಾಗ.. ಟಿವಿಯನ್ನು ಬಂದ್ ಮಾಡಿ ಅಂತ ಹೇಳು..
ದೇವರು ಕಿರೀಟವನ್ನು ಒಮ್ಮೆ ತೆಗೆದುಕೊಂಡು.. ತಲೆ ಕೆರೆದುಕೊಂಡ.. ಆಮೇಲೆ ಗೊತ್ತಾಯಿತು .. ಫ್ರೇಮ್ ಹಾಕಿದ್ದ ಫೋಟೋದ ಒಳಗಿಂದಲೇ ಜೋರಾಗಿ ನಗಲು ಶುರು ಮಾಡಿದ.. ತನ್ನ ಹೆಬ್ಬೆರಳನ್ನು ಕೆಳಗಿನ ಚಿತ್ರದಂತೆ ತೋರಿಸಿ.. ಮತ್ತೆ ಫ್ರೇಮ್ ಒಳಗೆ ಮರೆಯಾದ.. !
ಯಾಕೆ ಗೊತ್ತೇ.. ಪ್ರತಿ ರಾತ್ರಿ ಜೀ ಕನ್ನಡ ವಾಹಿನಿಯನ್ನು ೮.೩೦ ರಿಂದ ೯. ೦೦ ಕ್ಕೆ ನೋಡಿರಿ ಒಮ್ಮೆ :-)