ಮಹಾಭಾರತ ಮಹಾಗ್ರಂಥದ ರಚನೆ ನಡೆಯುತ್ತಿತ್ತು
ವೇದ ವ್ಯಾಸ ಮಹರ್ಷಿಗಳು ದೇವಾನುದೇವ ಮಹಾಗಣಪತಿ ಸಹಾಯದಿಂದ ಬರೆಸುತ್ತಿದ್ದರು. ಮುನಿಗಳಿಗೆ ಬಿಡುವು ಬೇಕು ಎಂದಾಗ ಗಣಪತಿಗೆ ಒಂದು ಕ್ಲಿಷ್ಟ ಶ್ಲೋಕ ಹೇಳಿ, ಅದನ್ನ ಅರ್ಥಮಾಡಿಕೊಂಡು ಬರೆಯುವ ಶರತ್ತನ್ನು ದೇವಾಗ್ರಜನಿಗೆ ಹಾಕಿದ್ದರು. ಆಗ ಅಚಾನಕ್ಕಾಗಿ ಗಣಪತಿಯು
“ಮಹರ್ಷಿಗಳೇ, ಇಂದು ನಿಮ್ಮ ಪ್ರಿಯ ವಿಧ್ಯಾರ್ಥಿಯ ಜನ್ಮ ದಿನ....ಇದನ್ನು ನೀವು ಮರೆತ ಹಾಗಿದೆ.. ಕಾರಣವೇನು?”....ಅವನನ್ನು ಕರೆದರೆ..ನಾನು ನನ್ನ ಆಶಿರ್ವಚನ, ಆಶಿರ್ವಾದ ಕೊಡುತ್ತೇನೆ”
ಮುನಿಗಳಿಗೆ ಆಶ್ಚರ್ಯ..”ದೇವಾನುದೇವ ಇದು ನಿಮಗೆ ನಾನು ಯಾವಾಗ ಹೇಳಿದ್ದೆ?”
ಮುನಿಗಳೇ, ನೀವು ಕಥೆ ಪ್ರಾರಂಭ ಮಾಡಿದಾಗ ನಿಮ್ಮ ಬಳಿ ನಿಮ್ಮ ಬೇಕು ಬೇದವನ್ನೆಲ್ಲ ಗಮನಿಸುತ್ತಿದ್ದ ಒಬ್ಬನ ಬಗ್ಗೆ ನೀವೇ ಅಭಿಮಾನದಿಂದ ಹೇಳುತ್ತಿದ್ದಿರಿ”
“ಹೌದು ಹೌದು ದೇವ, ಅವನ ಹೆಸರು ಶಾಮಣ್ಣ ಅಂತ...ಕೃಷ್ಣನ ಹಾಗೆ ಬುದ್ದಿವಂತ, ಸಮಯಪ್ರಜ್ಞೆ, ಕರ್ತವ್ಯ ಪ್ರಜ್ಞೆ ತುಂಬಾ ಮೆಚ್ಚಿಕೊಳ್ತ್ಹೇನೆ....ಅವನಿಗೆ ನಿಮ್ಮ ಆಶೀರ್ವಾದ ಬಹಳ ಮುಖ್ಯ”
ಗಣೇಶ ಮಹಾಪ್ರಭು “ಶಾಮಣ್ಣ ಒಂದು ಭಾರಿ ಹೀಗೆ ಬಾಪ್ಪ...ನಿನಗೆ ಆಶಿರ್ವಾದ ಮಾಡುತ್ತೇನೆ....”
ಶಾಮಣ್ಣನ ಕಣ್ಣು ತುಂಬಾ ನೀರು ತುಂಬಿ ಬಂತು..ಮನಸ್ಸಿನಲ್ಲೇ .
”ನನ್ನ ಜನ್ಮ ದಿನಕ್ಕೆ ಆಶಿರ್ವಾದ ಗಣಪತಿ, ವೇದವ್ಯಾಸ ಮುನಿಗಳಿಂದ ಎಂದ ಮೇಲೆ ನನ್ನ ಜೀವನದಲ್ಲಿ ಇದಕ್ಕಿಂತ ಇನ್ನೇನು ಬೇಕು” ಪ್ರವರ ಹೇಳಿಕೊಂಡು ಸಾಷ್ಟ್ರಂಗ ನಮಸ್ಕಾರ ಮಾಡಿದ....ಮತ್ತು ಭಕ್ತಿಯಿಂದ ಕೈ ಮುಗಿದು ನಿಂತಿದ್ದಾಗ
ಗಣಪತಿಯು..”ಶಾಮಣ್ಣ ನಿನ್ನ ಕೀರ್ತಿ ಎಲ್ಲರಿಗು ತಿಳಿಯುವಂತಾಗಲಿ..ನಿನ್ನ ಮನೋಭಿಲಾಷೆ ಏನೇ ಇದ್ದರು ಎಲ್ಲವು ನೆರವೇರುತ್ತದೆ”
ವ್ಯಾಸ ಮಹರ್ಷಿ “ ಮಗು ನನ್ನ ಜೊತೆ ನೀನು ಇದ್ದರೆ ನನಗೆ ನನ್ನ ಬಗ್ಗೆ ಯೋಚನೆ ಮಾಡುವ ಅವಶ್ಯಕತೆಯೇ...ಇರುವುದಿಲ್ಲ ನಿನ್ನ ಜನ್ಮ ದಿನದ ಶುಭಾಶಯಗಳು”
ತಮ್ಮ ಶಿಷ್ಯರನೆಲ್ಲ ಕರೆದು..ಹೇಳುತ್ತಾರೆ..ಇಂದು ನನ್ನ ಪ್ರಿಯ ವಿಧ್ಯಾರ್ಥಿಯ ಶುಭದಿನ...ಹಾಗಾಗಿ ಎಲ್ಲರು ಅವನಿಗೆ ಶುಭಾಶಯಗಳನ್ನುಕೋರಬಹುದು....ಅವನು ಸಿಗಲಿಲ್ಲ ಎಂದರೆ ಅವನ ಜಂಗಮ ಘಂಟೆಗೆ ಕರೆ ಮಾಡಿ