Thursday, June 18, 2015

ಬೆಳಿಗ್ಗೆ ೫ ಗಂಟೆಗೆ ಗಾಯಬ್ ಆಗಿರ್ತೇನೆ!!!!


"ದೇವರ ದೇವ ಎಂಬುದ ಮರೆತೇ ಸೇವಕನಂತೆ ನನ್ನೆಡೆ ನಿಂತೇ ಮಾಧವ ನಿನ್ನ ಮಾಯಾಜಾಲ ಮಾನವ ನಾನು ತಿಳಿಯಲಿಲ್ಲ ವಿಠಲ ರಂಗಾSSSSSSS"

ಭಕ್ತ ಕುಂಬಾರ ಮೈ ಮರೆತು ತನ್ನ ಮನೆಯಲ್ಲಿದ್ದ ರಂಗನನ್ನು ನೆನೆದು ಬಿಕ್ಕಳಿಸುತ್ತಾ ಹಾಡುತ್ತಿರುತ್ತಾನೆ.. ಮಾರ್ಗ ಮಧ್ಯೆ ಸಂತ ಜ್ಞಾನದೇವ, ನಾಮದೇವ ಮಿಕ್ಕ ಸಂತರೆಲ್ಲರೂ ಕಾಣ ಸಿಗುತ್ತಾರೆ....

ಕುಂಬಾರ ಭಕ್ತಿಪರವಶದಿಂದ ಮೈ ಮರೆತು.. ಸಂತರೆಲ್ಲರಿಗೂ ಚರಣ ಕಮಲಗಳಿಗೆ ಎರಗುತ್ತಾ.. "ಎಲ್ಲಿ ಎಲ್ಲಿ ನನ್ನ ರಂಗ.. ವಿಠಲ.. ನೋಡಬೇಕಲ್ಲ.. ನನ್ನ ಜೊತೆಯಲ್ಲಿದ್ದ ರಂಗ.. ನನಗೆ ಸೇವೆ ಮಾಡಿದ ರಂಗ.. ತಾಯಿಯಂತೆ, ಮಗುವಂತೆ, ಅಣ್ಣನಂತೆ, ತಮ್ಮನಂತೆ ಸೇವೆ ಮಾಡಿದ ರಂಗಣ್ಣನನ್ನು ನೋಡಬೇಕು.. ಕಣ್ಣಲ್ಲಿ ತುಂಬಿಕೊಳ್ಳಬೇಕು.. ಹೀಗೆ ಬಡ ಬಡಿಸುತ್ತಲೇ ಇದ್ದರು.. ಅದಕ್ಕಿಂತಲೂ ... "

ಸಮಾಧಾನ ಮಾಡಿದಸಂತರು . " ಗೋರಾ ಯಾಕೆ ಈ ವೇದನೆ, ಯಾಕೆ ಗೋಳಾಟ .. ಯಾಕೆ ಅರ್ಧದಲ್ಲಿಯೇ ನಿಲ್ಲಿಸಿ ಬಿಟ್ಟೆ.. ಹೇಳು ಮುಂದುವರೆಸು.. "

"ಸಂತರೇ.. ರಂಗನನ್ನು ನೋಡಬೇಕು ಮಾತಾಡಿಸಬೇಕು ಎನ್ನುವ ಹಂಬಲ, ಆಸೆ, ಗುರಿ ಬಹಳ ದಿನಗಳದ್ದು.. ಹೇಗಾದರೂ ಸರಿ ನೋಡಬೇಕು ಎಂದು ಅಂದುಕೊಂಡಿದ್ದೆ.. ಆದರೆ ನನ್ನ ಅಜ್ಞಾನ.. ನನ್ನ ಜೊತೆಯಲ್ಲಿಯೇ ರಂಗ ಇದ್ದರೂ ನನಗೆ ತಿಳಿಯಲಿಲ್ಲ.. ನಾಮದೇವರು ಹೇಳಿದ ಮೇಲೆಯೇ ನನಗೆ ಅರಿವಾಗಿದ್ದು.. ಆದರೆ ಈಗ" ಮತ್ತೆ ನಿಲ್ಲಿಸಿದರು ಕುಂಬಾರ

"ಈಗ ಏನಾಯಿತು.. ಹೇಳು ಗೋರಾ"

"ನಿಮ್ಮೆಲ್ಲರ ಜೊತೆಯಲ್ಲಿ ಪಂಡರಾಪುರಕ್ಕೆ ಹೊರಟಿದ್ದೇವೆ.. ಅಯ್ಯೋ ಅಯ್ಯೋ ಏನು ಮಾಡಲಿ.. ಅಲ್ಲಿಗೆ ಹೋಗುವ ನಕಾಶೆಯನ್ನೇ ತಂದಿಲ್ಲ.. ಈ ನನ್ನ ಗೋಳಾಟದಲ್ಲಿ ನಕಾಶೆ ತರುವುದನ್ನೇ ಮರೆತುಬಿಟ್ಟಿದ್ದೇನೆ.. ಹಾಗೆಯೇ ಪಂಡರಾಪುರದ ಸುತ್ತಾ ಮುತ್ತಾ ಮಿಕ್ಕ ಸ್ಥಳಗಳನ್ನು ನೋಡಬೇಕು ಎನ್ನುವ ನನ್ನ ಆಸೆ ಹಾಗೆ ಉಳಿದುಬಿಡುತ್ತದೆ.. ಏನು ಮಾಡಲಿ ನಾನು ಹೇಗೆ ಹೇಳಲಿ.. " ಗೋರನ ರೋಧನೆ ಇನ್ನು ಮುಗಿದಿರಲಿಲ್ಲ.. ರಂಗನನ್ನು ನೋಡುವತವಕ , ನಕಾಶೆ ಮರೆತ ದುಃಖ ಎಲ್ಲವೂ ಮಿಳಿತವಾಗಿ ಕಾಡುತ್ತಿತ್ತು..

ಜ್ಞಾನದೇವರು ಹೇಳುತ್ತಾರೆ "ನೋಡು ಗೋರಾ... ನಮ್ಮ ಗುಂಪಿನಲ್ಲಿ ಒಬ್ಬರಿದ್ದಾರೆ.. ಅವರು ಇದ್ದ ಕಡೆ ನಕಾಶೆ ಯಾವುದು ಬೇಡ.. .. ನೋಡು ಅವರು ಫೇಸ್ಬುಕ್ ನಲ್ಲಿ ಆಗಲೇ ತಮ್ಮ ಗೋಡೆಯ ಮೇಲೆ ಬರೆದುಕೊಂಡು ಬಿಟ್ಟಿದ್ದಾರೆ ಈ ಕೆಳಗಿನ ರೀತಿಯಲ್ಲಿ"

"ಇವತ್ತಿನ ಶುಭರಾತ್ರಿ ಹಾಗು ನಾಳಿನ ಶುಭ ಮುಂಜಾನೆ ಶುಭ ದಿನಕ್ಕೆ ಒಂದೇ ಚಿತ್ರ ಇದೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ ಯಾಕಂದ್ರೆ ನಾಳೆ ಬೆಳಿಗ್ಗೆ ೫ ಗಂಟೆಗೆ ಮೈಸೂರಿಂದ ಗಾಯಬ್ ಆಗಿರ್ತೇನೆ"

"ಅವರು ನಮ್ಮನ್ನು ಸೇರಲು ಓಡೋಡಿ ಬರುತ್ತಿದ್ದಾರೆ.. ಅಗೋ ಅಗೋ ನೋಡು ಬಂದೆ ಬಿಟ್ಟರು.. ಇವರೇ ಮೈಸೂರಿನ ಬಾಲಣ್ಣ, ನಿಮ್ಮೊಳಗೊಬ್ಬ ಬಾಲೂ, ಬಾಲಸುಬ್ರಮಣ್ಯ, ಬಾಲೂ ಸರ್.. ಹೀಗೆ ಅನೇಕ ನಾಮಧೇಯದಿಂದ ಹೆಸರಾಗಿರುವ ಇವರೆ ನಮಗೆ ಮಾರ್ಗದರ್ಶಕ.. "

ಓಡೋಡಿ ಬಂದ ಬಾಲೂ ಸರ್.. "ಗುರುಗಳಿಗೆ ನಮಸ್ಕಾರಗಳು .." ಎಂದು ಎಲ್ಲಾ ಸಂತರಿಗೆ ನಮಸ್ಕರಿಸಿದರು.. 

ಗೋರ ಕುಂಬಾರ.. ಬಾಲೂ ಸರ್ ಅವರಿಗೆ "ಬಾಲೂ ಅವರೇ ದಯಮಾಡಿ ಪಂಡರಾಪುರಕ್ಕೆ ದಾರಿ ತೋರಿಸಿ.. ರಂಗನನ್ನು ನೋಡಬೇಕು.. ದರ್ಶನಮಾಡಬೇಕು" ಎಂದು ವಿನಂತಿಸಿಕೊಂಡರು.. 

ಜ್ಞಾನದೇವರು "ಬಾಲೂ ಅವರೇ ನಡೆಯಿರಿ ನಿಮ್ಮ ಮಾರ್ಗದರ್ಶನದಲ್ಲಿ ನಮಗೆಲ್ಲ ವಿಠಲನ ದರ್ಶನವಾಗಲಿ.. "
 
ಆಗ ಬಾಲೂ ಸರ್ "ಸಂತರೇ,ಗುರುಗಳೇ .. ಪಂಡರಾಪುರಕ್ಕೆ ಹೋಗೋಣ ಅದಕ್ಕಿಂತ ಮೊದಲು ,,, ಬಿಳಿಗಿರಿ ರಂಗನಬೆಟ್ಟದಲ್ಲಿ ರಂಗಣ್ಣನಿಗೆ ಅಭಿಷೇಕ ಇಟ್ಟುಕೊಂಡಿದ್ದೇವೆ.. ದಯಮಾಡಿ  ಎಲ್ಲರೂ ಅಲ್ಲಿಗೆ ಬನ್ನಿ.. ಅಲ್ಲಿಂದ ನಮ್ಮ ಶಿಷ್ಯ ನವೀನನ ಕುದುರೆಗಾಡಿ ಇದೆ ಒಟ್ಟಿಗೆ ಪಂಡರಾಪುರಕ್ಕೆ ಹೋಗೋಣ.. ... ಇಂದು ನನ್ನ ಜನುಮದಿನ.. ಹಾಗಾಗಿ ನಿಮ್ಮೆಲ್ಲರ ಆಶೀರ್ವಾದ ಬೇಕು"

ಹೀಗೆ ಪಂಡರಾಪುರಕ್ಕೆ ಹೊರಟ ಕುಂಬಾರನ ಪಡೆಯನ್ನು ಬಿಳಿಗಿರಿ ರಂಗನ  ಬೆಟ್ಟಕ್ಕೆ ಕರೆದೊಯ್ಯುವ ಸಾಮರ್ಥ್ಯ ಇರುವ ನಮ್ಮೆಲ್ಲರ ಮೆಚ್ಚಿನ ಬಾಲೂ ಸರ್ ಅವರಿಗೆ ಜನುಮದಿನದ ಶುಭಾಶಯಗಳು.. !!!!

ಇತಿಹಾಸಕ್ಕೆ ಜೂಮ್ ಹಾಕುವ ಶಕ್ತಿ ಇರುವ ಬಾಲೂ ಸರ್!!!
ಬಾಲೂ ಸರ್ ನಿಮ್ಮ ಇತಿಹಾಸ ನೋಡುವ,  ಅರಿಯುವ, ಕಲಿಸುವ, ಎಲ್ಲರಿಗೂ ತಿಳಿಸುವ ಹಂಬಲ, ಉತ್ಸಾಹ ನಮಗೆಲ್ಲರಿಗೂ ಅಚ್ಚುಮೆಚ್ಚು.. ಎಲ್ಲರೊಡನೆ ನಾನು ಒಬ್ಬ ಎನ್ನುವ ನಿಮ್ಮ ಮನಸ್ಸು ಹಾಲಿನಂತೆ.. ಇಂಥಹ  ಸುಮಧುರ ಮನಸ್ಸಿನ ನಿಮಗೆ ಹುಟ್ಟು ಹಬ್ಬಕ್ಕೆ ಶುಭ ಕೋರುವುದು ನಮ್ಮ ಭಾಗ್ಯ... !

ಹುಟ್ಟು ಹಬ್ಬದ ಶುಭಾಶಯಗಳು ಸರ್ಜಿ!!!

5 comments:

  1. Balu Sir,
    Huttuhabbada ShubhashayagaLu :)
    Sri, neevu heliddu nija,
    Camera drushti.... ellelli nettaru, allallinda itihaasa thandu namma jothe hanchikoLthaare Balu Sir. Intha Sajjanara santhathi hechchali ennode nanna haaraike :)

    ReplyDelete
  2. ಶ್ರೀಕಾಂತ್ ಜಿ , ನಿಮ್ಮ ಈ ಪ್ರೀತಿಯ ಮಾತುಗಳಿಗೆ ಬೆಲೆ ಕಟ್ಟಲಾರೆ, ಯಾವ ಜನ್ಮದಲ್ಲಿ ನಮ್ಮಿಬ್ಬರ ಇಂತಹ ಸಂಬಂಧ ಇತ್ತೋ ಗೊತ್ತಿಲ್ಲ , ಆದರೆ ನಿಮ್ಮ ಹಾರೈಕೆ ತಾಯಿ ಸರಸ್ವತಿ ನೀಡಿದ ಪ್ರಸಾದವೆಂದು ಸ್ವೀಕರಿಸಿದ್ದೇನೆ . ನಿಮ್ಮೆಲ್ಲರ ಪ್ರೀತಿಯ ಶುಭಾಯಶಯಗಳ ಸುರಿಮಳೆ ಯಲ್ಲಿ ಮಿಂದು ಪಾವನನಾದ ಹೆಮ್ಮೆ ನನ್ನದು , ಇಂದು ಬೆಳಿಗ್ಗೆ ನನ್ನ ಜನುಮದಿನದ ಶುಭ ದಿನ ಆದ ಕಾರಣ ನನ್ನ ಹೆತ್ತ ತಾಯಿಯ ಚರಣಕ್ಕೆ ನಮಿಸಿ , ಹೊತ್ತು ಪೊರೆವ ಭೂತಾಯಿಗೆ ಶಿರಭಾಗಿ , ಕಾವೇರಿಯ ಮಡಿಲ ತಾಯಿ ನಿಮಿಶಾಂಭ ತಾಯಿಯ ಸನ್ನಿಧಿಯಲ್ಲಿ ನನ್ನ ಎಲ್ಲಾ ಗೆಳೆಯರು ಹಾಗು ಅವರ ಕುಟುಂಬಕ್ಕೆ ಒಳ್ಳೆಯದಾಗಲೆಂಬ ಪ್ರಾರ್ಥನೆ ಸಲ್ಲಿಸಿದೆ , ನಂತರ ಕಾವೇರಿ ತಾಯಿಯ ಮಡಿಲಿನಿಂದ ಮುಂಗಾರು ಮಜ್ಜನದಲ್ಲಿ ಮುಳುಗಿಹ ಬಿಳಿಗಿರಿ ಬೆಟ್ಟದ ಕಡೆಗೆ ತೆರಳಿ ಅಲ್ಲಿ ಪರಿಸರ ಪ್ರಿಯ, ವನ್ಯ ಜೀವಿಗಳಿಗೆ ಆಶ್ರಯ ದಾತ , ಕಾಡಿನ ಮಕ್ಕಳು ಸೋಲಿಗರ ಭಾವ ಬಿಳಿಗಿರಿ ರಂಗನ ಪಾದಕ್ಕೆ ಶರಣಾಗಿ ಮತ್ತೊಮ್ಮೆ ತಮ್ಮೆಲ್ಲರ ಪ್ರೀತಿಯ ನೆನೆಯುತ್ತಾ ನನ್ನ ಎಲ್ಲಾ ಗೆಳೆಯರು , ಪ್ರೀತಿಪಾತ್ರರು ಹಾಗು ಅವರ ಕುಟುಂಬ , ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಪ್ರಾರ್ಥನೆ ಸಲ್ಲಿಸಿದೆ , ಬಿಳಿ ಮಳೆಗಾಲ ಬಳಸಿ ಮುಂಗಾರು ಮಾರುತಗಳ ತಣ್ಣನೆ ಗಾಳಿ ಶ್ವಾಸಕೋಶಕ್ಕೆ ಶುದ್ಧ ಉಸಿರು ನೀಡಿ ಹರಸಿತ್ತು, ಅತ್ತ ಮುಂಗಾರು ಮೋಡಗಳು ಬಿಳಿಗಿರಿ ಬೆಟ್ಟಗಳಿಗೆ ಪ್ರೀತಿಯ ಅಪ್ಪುಗೆ ನೀಡುತ್ತಿದ್ದವು, ಜಿಟಿ ಜಿಟಿ ಮಳೆಹನಿಗಳು ಬಿಳಿಗಿರಿ ಕಾಡಿಗೆ ಮಜ್ಜನ ಮಾಡಿಸಿ ಮೆರೆಯುತ್ತಿದ್ದವು . ಅತ್ತ ಮುಂಗಾರಿನ ಮಳೆ ಹನಿಗಳಲ್ಲಿ ಬಿಳಿಗಿರಿ ಬೆಟ್ಟ ಪಾವನವಾದರೆ, ಇತ್ತ ನಿಮ್ಮೆಲ್ಲರ ಸಾವಿರಾರು ಪ್ರೀತಿಯ ಶುಭ ಹಾರೈಕೆಗಳು ಮುಂಗಾರಿನ ಮಳೆಯಂತೆ ಬಂದು ನನ್ನನ್ನು ಹರಸಿ ಹಾರೈಸಿ ನನ್ನ ಬಾಳಿನ ಸಂತೋಷವನ್ನು ಹೆಚ್ಚಿಸಿತು, ಗೆಳೆಯರೆಲ್ಲರಿಗೂ ನನ್ನ ಹೃದಯ ಪೂರ್ವಕ ಕೃತಜ್ಞತೆಗಳು . ನಿಮ್ಮೆಲ್ಲರ ಪ್ರೀತಿ ಪಡೆದ ನಾನು ಧನ್ಯ . ಇವತ್ತಿನ ನನ್ನ ಪ್ರಾರ್ಥನೆ ಫಲಿಸಿ ನಿಮಗೆ ಹಾಗು ನಿಮ್ಮೆಲ್ಲರ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ . ಸುಮಾರು ಸಾವಿರಕ್ಕೂ ಮಿಗಿಲಾದ ಶುಭಾಶಯಗಳಿವೆ ಒಬ್ಬೊಬ್ಬರಿಗೂ ವಯಕ್ತಿಕವಾಗಿ ವಂದಿಸುವ ಅವಕಾಶ ಆಗುತ್ತಿಲ್ಲ , ಈ ನನ್ನ ಕೃತಜ್ಞತೆಯನ್ನು ದಯವಿಟ್ಟು ಸ್ವೀಕರಿಸಿ ನನ್ನನ್ನು ಹರಸಿ. ನಿಮ್ಮೆಲ್ಲರ ಪ್ರೀತಿ ಗಳಿಸಿದ ಧನ್ಯ. ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]


    ReplyDelete
  3. ಅಪರೂಪದ ಬಹು ಮುಖ ಪ್ರತಿಭೆ ಬಾಲಣ್ಣನವರ ಜನುಮ ದಿನಕ್ಕೆ ಒಳ್ಳೆಯ ಸರಸ್ವತಿ ಕೊಡುಗೆ ಈ ಬರಹ.
    ಅವರಂತಹ ಸಹೃದಯ ಸರಳರ ಸಂಗ ನನಗಿದೆ ಎಂಬುದೇ ನನಗೆ ಹಿರಿಮೆ.

    ReplyDelete