ದೃಶ್ಯ ೧
ಕೇಳು ನಿನಗೇನು ಕೇಳು..
ನನಗೆ DFR ತರಹ ತಾಳ್ಮೆ ಬೇಕು..
ಬೇರೆ ಏನೂ ಬೇಡವೇ.. ದುಡ್ಡು, ಅಂತಸ್ತು, ರಾಜ್ಯ, ಕೋಶ..
ಇಲ್ಲ ನನಗೆ ೩ಕೆ ತಂಡದವರು ಇದೆ ಬೇಕು ಅಂತ ಕೇಳಿದ್ದಾರೆ ನನಗೆ ಅದೇ ಬೇಕು
ದೃಶ್ಯ ೨
ಚಾವಟಿಯಲ್ಲಿ ಬಾಸುಂಡೆ ಬರುವ ತರಹ ಹೊಡೆಯುತ್ತಿರುತ್ತಾರೆ..
"ಇನ್ನೂ ಬಲವಂತವಾಗಿ ಹೊಡಿ.. ಇನ್ನೂ ಜೋರಾಗಿ ಹೊಡಿ"
"ಹೊಡೆಯುವೆ" ಆದರೆ ಏತಕ್ಕೆ ಹೀಗೆ ಚಾವಟಿಯಲ್ಲಿ ಏಕೆ ಒದೆ ತಿನ್ನುತ್ತಿದ್ದೀರಾ"
"ನೋಡಿ ಅಲ್ಲಿ ಎಲ್ಲರೂ DFR DFR ತರಹ ಕೆಲಸ ಮಾಡದೆ.. ಸೋಮಾರಿತನದಿಂದ ಇದ್ದಾರೆ.. ಅದಕ್ಕೆ ಅವರ ತರಹ ಪಾದರಸದಂತೆ ಇರಬೇಕು .. ಇಲ್ಲದೇ ಹೋದರೆ ಹೀಗೆ ಎಲ್ಲರಿಗೂ ಏಟು ಅದು ಎಲ್ಲರಿಗೂ ಪಾಠವಾಗಲಿ ಅಂತ ಬಾರಿಸು ಅಂತ ಹೇಳುತ್ತಿದ್ದೇನೆ"
ದೃಶ್ಯ ೩
"ಎಲ್ಲಿ ಮರೆಯಾದೆ ವಿಠಲ ... ಏಕೆ ದೂರದೇ.. ವಿಠಲ ರಂಗ ವಿಠಲ ರಂಗಾಅಅಅಅಅಅಅಅಅಅ"
"ಅರೆ ಗೋರಾ.. ವಿಠಲ ಪಂಡರಾಪುರದಲ್ಲಿ ಸಿಗುತ್ತಾನೆ.. ಆದರೆ ನೀನು ಅಲ್ಲಿಗೆ ಹೋಗಿ ದರ್ಶನ ಪಡೆದು ಬಂದಿದ್ದೀಯಾ.. ಆದರೂ ಯಾಕೆ ಇನ್ನೂ ಹಣೆಯಲ್ಲಿ ಗೆರೆಗಳು ಇದ್ದಾವೆ"
"ಹೌದು ನಾಮದೇವರೇ.. ವಿಠಲನ ದರ್ಶನವೇನೋ ಆಯಿತು.. ಆದರೆ DFR DFR ಅವರ ಅಭಿಮಾನಿಗಳಿಗೆ ಸಿಗುತ್ತಿಲ್ಲ ಏನು ಮಾಡೋದು"
ಟಂ ಅಂತ ಪಾಂಡುರಂಗನೂ ಮಾಯಾ.. ನಾಮದೇವರು ಮಾಯಾ.. ಈ ಪ್ರಶ್ನೆಗೆ ಉತ್ತರ ಬರಿ DFR DFR ಅವರಿಗೆ ಮಾತ್ರ ಗೊತ್ತಿರೋದು
ದೃಶ್ಯ ೪
"ಎಲ್ಲಿರುವನೋ ನಿನ್ನ ಹರಿ.. ಈ ಕಂಬದಲ್ಲಿರುವನೇ.. ಈ ಕಂಬದಲ್ಲಿರುವನೇ?"
ಟಿ"ತಂದೆಯೇ ನಿನಗೆ ನಾ ಹರಿಯನು ಹೇಗೋ ತೋರಿಸುತ್ತೇನೆ.. ಪುರುಸೊತ್ತು ಇಲ್ಲದೆ ಸದಾ ಕಾಲಿಗೆ ಚಕ್ರ ಕಟ್ಟಿಕೊಂಡು ಟೂರು, ಸಿನಿಮಾ, ನಾಟಕ, ಕಾರ್ಯಕ್ರಮ ನಿರೂಪಣೆ, ಹಿಮಾಲಯದ ತಪ್ಪಲು, ಫೆಂಚ್ ಅರಣ್ಯ, ರಂಗ ಶಂಕರ, ಜನದನಿ, ೩ಕೆ ರಾಜ್ಯೋತ್ಸವ, NGO, ಚಂಪಕಧಾಮ ದೇವಸ್ಥಾನ ಅಂತ ಸುತ್ತುತ್ತಲೇ ಇರುವ ಅವರನ್ನು ನೀನು ತೋರಿಸು.. ನಾ ಹರಿಯನ್ನು ತೋರಿಸುತ್ತೇನೆ"
ಹಿರಣ್ಯಕಶಿಪು ಹರಿಯನ್ನು ಹುಡುಕೋದು ಬಿಟ್ಟು.. ನಾ ಸೋತೆ ಅವರನ್ನು ಹುಡುಕೋದು ಕಷ್ಟ.. ಅದಕ್ಕೆ ಬದಲು ಹರಿನಾಮ ಸ್ಮರಣೆ ಮಾಡೋದೇ ಉತ್ತಮ "ನಾರಾಯಣ ನಾರಾಯಣ"
ದೃಶ್ಯ ೫"ಹೊಂಚು ಮಾಡಿ ಸಂಚು ಮಾಡಿ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದ ವರ್ಮಾ.. ಕದಂಬರ ವೃಕ್ಷ ತಲೆಯೆತ್ತಿ ನಿಂತಿದೆ .. "
ಶಿವಸ್ಕಂದ ವರ್ಮಾ ಮಯೂರನಿಗೆ "ಮಯೂರ ನಿನಗೆ ರಾಜ್ಯ ಬೇಕು ತಾನೇ ನಾ ಖುಷಿಯಿಂದ ಕೊಡುತ್ತೇನೆ.. ಆದರೆ DFR DFR ಎಲ್ಲರ ಮನವನ್ನು ಗೆಲ್ಲುತ್ತಾರೆ ಅಲ್ಲವೇ.. ಆ ರೀತಿಯ ಗುಣವನ್ನು ನನಗೂ ಹೇಳಿಕೊಡಿ ಅಂತ ನೀವು DFR DFR ಗೆ ಹೇಳಿ ಪ್ಲೀಸ್"
ದೃಶ್ಯ ೬
ಇದು DFR DFR ತಾಕತ್ತು.. ಎಲ್ಲೇ ಹೋದರೂ ಮತ್ತೆ ಬಂದು ನಿಲ್ಲೋದು DFR DFR ಅವರ ನೀರಿನಂತಹ ಗುಣ.. ಯಾವುದೇ ಪರಿಸ್ಥಿತಿಗೆ, ಯಾವುದೇ ವಾತಾವರಣಕ್ಕೆ, ಯಾವುದೇ ಸ್ಥಿತಿಯಲ್ಲಿಯೂ ಕೂಡ ಸದಾ ಇನ್ನೊಬ್ಬರ ಬಗ್ಗೆ ಯೋಚಿಸುವ, ಸಹಾಯ ಚಾಚುವ ಅವರ ಗುಣ ಎಲ್ಲರಿಗೂ ಮಾದರಿ.. ಅಷ್ಟಿಲ್ಲದೆ ನಾ ಎಲ್ಲರಿಗೂ ಗುಣವಾಚಕವಾಗಿ ಹೆಸರಿಡುವ ನಾನು ಅವರನ್ನು DFR DFR ಅಂತ ಕರೆಯುತ್ತೇನೆಯೇ!
ಜನುಮದಿನದ ಶುಭಾಶಯಗಳು DFR DFR!
ಆರೂ ದೃಶ್ಯಗಳು ಹೌದೌದು ಎನ್ನುವಂತಿವೆ.
ReplyDeleteಬರುವ ವರ್ಷ ದೃಶ್ಯಗಳು ಸಕಾರಾತ್ಮಕವಾಗಿ ಬದಲಾಗುತ್ತೆ ಅಂತ ಶಾಸ್ತ್ರದವರು ಆಣೆ ಮಾಡಿದ್ದಾರೆ.
ಈ ರೀತಿ ನಿಮ್ಮದು ಒಳ್ಳೆಯ ಜನ್ಮ ದಿನದ ಕೊಡುಗೆ ನೋಡಿರಿ ವಿಜಯನಗರದ ಸಾಮ್ರಾಟರೇ...
Ha ha…. ಸಿಕ್ಕಾಪಟ್ಟೆ ಕ್ಯೊಟ್ ಅನಿಸಿದ ಬರಹ. ದೇವರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಅಂತ ಕೇಳ್ಕೊಳ್ತೀನಿ ಶ್ರೀ. ವರ್ಷ-ವರ್ಷವೂ ಜನ್ಮದಿನದ ನಿಮ್ಮ ಬರಹ ಹೊಸ ಹುರುಪು ತುಂಬುತ್ತೆ. ಬದುಕುಗೊಂದು ನಮನ 😍 ಸದಾ ಹಸಿರಾಗಿರುವ ನಮ್ಮ ಸ್ನೇಹಕ್ಕೊಂದು ನಮನ 🙏🏻
ReplyDeleteSuch a creative way to wish someone. Too sweet sri. 😍
ReplyDelete