ಮಹೇಂದ್ರಾ..
ಮಹೇಂದ್ರ ಬರುತ್ತಾನೆ.. ನಿನ್ನ ವಜ್ರಾಯುಧದಿಂದ ಒಮ್ಮೆ ಅಪ್ಪಳಿಸಿಬಿಡು..
ಆಗದು ಹಿರಣ್ಯ..
ಅಗ್ನಿ ..
ಅಗ್ನಿ ಒಮ್ಮೆ ಈ ಬಾಲಕನನ್ನು ಅಪ್ಪಿಕೊಂಡು ಬಿಡು..
ಅಪ್ಪಿಕೊಂಡರೂ ಬಾಲಕನನ್ನು ಸುಡಲಿಲ್ಲ
ಆನೆಯಿಂದ ತುಳಿಸಿದರು
ಹಾವು ಬಿಟ್ಟರು
ಪ್ರಪಾತಕ್ಕೆ ತಳ್ಳಿದರು
ಊಹೂಂ
ಏನೂ ಬದಲಾಗಲಿಲ್ಲ..
ಕಡೆಗೆ ಸ್ವಗತ "ನಾನಾರು.. ಕಶ್ಯಪಬ್ರಹ್ಮನ ಮಗ.. ದಿತಿ ಗರ್ಭ ಸಂಜಾತ..... "
ಮುಂದಿನ ದೃಶ್ಯ..
ಕಯಾದು ನನ್ನ ಮೇಲೆ ಅತಿಶಯ ಪ್ರೀತಿಯಿದೆ ಅಲ್ಲವೇ
ಹೌದು ಸ್ವಾಮಿ
ಹಾಗಾದರೆ ತಗೋ.. ವಿಷ
ನಾ ಕುಡಿಯಲೇ
ಇಲ್ಲ ನೀನೆ ನಿನ್ನ ಕೈಯಾರೆ ಪ್ರಹ್ಲಾದಕುಮಾರನಿಗೆ ವಿಷ ಪ್ರಾಶನ ಮಾಡಿಸಬೇಕು..
ಒಂದಷ್ಟು ಸಂಭಾಷಣೆ.. ಕಡೆಗೆ ಪ್ರಹ್ಲಾದ ವಿಷವನ್ನು ಗಟಗಟ ಕುಡಿದುಬಿಡುತ್ತಾನೆ..
ಸ್ವಲ್ಪ ಕ್ಷಣ ಮತ್ತೆ ಮರಳಿ ಅಮ್ಮ ಎಂದು ಕರೆಯುತ್ತಾನೆ..
ತಾಯಿ ಕಯಾದುಗೆ ಅಚ್ಚರಿ,ಸ್ ಸಂತಸ ಎಲ್ಲವೂ ಒಮ್ಮೆಲೇ..
ವಿಷ ನಿನಗೆ ಏನೂ ಮಾಡಲಿಲ್ಲವೇ ಕಂದ..
ಏನೂ ಮಾಡಲಿಲ್ಲ.. ಹತ್ತಾರು ಶುಭಾಶಯ ಪತ್ರಗಳನ್ನು ಬಿಡುವಿಲ್ಲದಿದ್ದರೂ ಬಿಡದೆ ಬರೆದು ಕಳಿಸಿದೆ
ಲ್ಯಾಮಿನೇಟ್ ಮಾಡಿಸಿದೆ.. ಫ್ರೇಮ್ ಮಾಡಿಸಿದೆ
ನಾಚಿಕೆಯಿಂದ ಅದನ್ನು ಕಬೋರ್ಡ್ ನಲ್ಲಿ ಬಚ್ಚಿಟ್ಟರು..
ಗೃಹಪ್ರವೇಶಕ್ಕೆ ಲ್ಯಾಮಿನೇಟ್ ಮಾಡಿದ ಪ್ರತಿ ಕೊಟ್ಟೆ.. ಊಹೂಂ ಉಪಯೋಗವಾಗಲಿಲ್ಲ
ಒಮ್ಮೆ ಅವರ ಮನೆಗೆ ಹೋದರು.. ಗೋಡೆ ಗೋಡೆ ಹುಡುಕಿದರೂ ಕಾಣಲಿಲ್ಲ
ಕಡೆ ಪಕ್ಷ ಮಂದಿಗಳ ಸಹಮತಕ್ಕಾದರೂ, ಆ ಪ್ರೀತಿಗಾದರೂ ಒಪ್ಪುತ್ತಾರೆ ಅಂದುಕೊಂಡೆ.. ಊಹೂಂ ಅವರು ಒಪ್ಪುತ್ತಾರೆ ಅಂತ ನಾ ಅಂದುಕೊಂಡೆ.. ಆದರೆ ನನಗಿಂತ ತಿಳಿಗೇಡಿ ಇನ್ನೊಬ್ಬರಿಲ್ಲ..
ಕಯಾದು ಸ್ವಾಮೀ ಏನು ಮಾಡುತ್ತಿದ್ದೀರಾ.. ಚಿ ಉದಯಶಂಕರ್ ಬರೆದ ಸಂಭಾಷಣೆ ಇದಲ್ಲ.. ಏನಾಯಿತು.. ಯಾವುದೋ ಬೇರೆ ಮಾತಾಡುತ್ತಿದ್ದೀರಲ್ಲ.. ಏನೂ ಸಮಾಚಾರ.. ಏನಾಯಿತು..
ಹಿರಣ್ಯಕಶಿಪು ಒಮ್ಮೆಲೇ ಗಾಬರಿಯಾಗಿ.. ಅಯ್ಯೋ ತಪ್ಪಾಯಿತಲ್ಲ.. ನನ್ನ ಮೆಚ್ಚಿನ ಅಭಿಮಾನಿ ಶ್ರೀಯ ಅನುಭವ ನನ್ನ ತಲೆಯೊಳಗೆ ಓಡುತ್ತಿತ್ತು.. ಅದೇ ಸಂಭಾಷಣೆ ಹಾಗೆ ಬಾಯಿಗೆ ಬಂತು..
ನಿರ್ದೇಶಕರೇ ಕಟ್ ಮಾಡಿ.. ಮತ್ತೊಮ್ಮೆ ಟೇಕ್ ಮಾಡುತ್ತೀನಿ..
ಮುಂದಿನ ದೃಶ್ಯ .. ಅಗ್ನಿ ಸುಡದವನನ್ನು, ಸರ್ಪ ಕಚ್ಚದವನನ್ನು, ಆನೆ ತುಳಿದಯವನನ್ನು.. ಕಯಾದು ಕಡೇಪಕ್ಷ ಜನದಣಿಯ ಪೀತಿಗಾಗಿಯಾದರೂ ತಲೆಬಾಗುತ್ತಾರೆ ಅಂದು ಕೊಂಡಿದ್ದೆ..
ನಿರ್ದೇಶಕರು ಕಟ್ ಕಟ್..
ಅಣ್ಣಾವ್ರೇ ಯಾಕೋ ನಿಮ್ಮ ಗಮನ ಈ ಕಡೆ ಇಲ್ಲ.. ಕೆಲವೊಂದು ವಿಷಯಗಳು ಎಷ್ಟು ಪ್ರಯತ್ನ ಪಟ್ಟರೂ ಆಗೋಲ್ಲ.. ಆ ಪ್ರೀತಿ ವಿಶ್ವಾಸ ಸದಾ ಇರುತ್ತದೆ.. ಆದರೆ ಮುಜುಗರ ಪಟ್ಟುಕೊಂಡು ಸ್ವೀಕರಿಸುವ ಪ್ರಶಸ್ತಿ ಹಿಂಸೆ ಮಾಡುತ್ತೆ.. ಆಗಲಿ ಬಿಡಿ.. ಇವತ್ತು ವಿಶ್ರಾಂತಿ ಮಾಡಿ ನಾಳೆ ಈ ದೃಶ್ಯ ಚಿತ್ರೀಕರಿಸೋಣ..
ಆಗಲಿ ನಿರ್ದೇಶಕರೇ.. ಸಾರಿ ಸಾರಿ .. ಮತ್ತೊಮ್ಮೆ ಹೀಗಾಗೋದಿಲ.. ಕ್ಷಮಿಸಿ ಬಿಡಿ.
ಅಯ್ಯೋ ಅಣ್ಣಾವ್ರೇ ಈ ರೀತಿಯ ಅನೇಕಾನೇಕ ಪಾತ್ರಗಳನ್ನು ಲೀಲಾಜಾಲವಾಗಿ ಮಾಡಿರುವ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗುತ್ತೆ.. ತೊಂದರೆ ಇಲ್ಲ.. ನಾಳೆ ಮಾಡೋಣ..
ಇಂದು ಗಣೇಶನ ಹಬ್ಬ.. ಆ ವಿಘ್ನವಿನಾಶಕ ಸಕಲ ಸಮೃದ್ಧಿಯನ್ನು ನೀಡಲಿ DFR!.... ಶುಭವಾಗಲಿ.. ಜೀವನ್ಮುಖಿಯಾಗಿರುವ ನಿಮಗೆ ಸದಾ ಸಮಾಜಮುಖಿ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುವ ನಿಮಗೆ ಶುಭವಾಗಲಿ ಎಂದಷ್ಟೇ ನಾನು ಹಾರೈಸುವುದು DFR.. ಒಳ್ಳೆಯದಾಗಲಿ.. ನಿಮ್ಮ ಪ್ರಯತ್ನಗಳಿಗೆ, ನಿಮ್ಮ ಪರಿಶ್ರಮಗಳಿಗೆ.. ನಿಮ್ಮ ಸಮಾಜಮುಖಿ ಮನಸ್ಸಿಗೆ, ನಿಮ್ಮ ದಣಿವರಿಯದ ಶಕ್ತಿಗೆ ಈ ರಾಜಕುಮಾರ .. ಈ ನಿಮ್ಮ ನೆಚ್ಚಿನ ಅಣ್ಣಾವ್ರು.. ನನ್ನೆಲ್ಲ ಅಭಿಮಾನಿ ದೇವರುಗಳ ಪರವಾಗಿ ನಿಮಗೆ ಸದಾ ಶುಭ ಹಾರೈಸುತ್ತೇನೆ.. ಇದು ಶುಭಾಶೀರ್ವಾದಗಳು DFR!
DFR ಒಮ್ಮೆಲೇ ಗಾಬರಿ ಬಿದ್ದು ಬೆಳಿಗ್ಗೆ ಎದ್ದರು.. ನೋಡಿದರೆ.. ಶ್ರೀ ಮೆಸೇಜ್ ಮೊಬೈಲಿನಲ್ಲಿ ನಗುತಿತ್ತು.. !
First and foremost, let me tell you that I'm a visual person, and whenever I read a script, I start visualizing. Your script's flow was so engaging that it took me on that journey, and the sudden director's "cut" literally pulled me back to reality. This happened back-and-forth, exactly as in your script... ha ha, the power of your writing!
ReplyDeleteಧನ್ಯವಾದ ಶ್ರೀ, ಈ ಸಂಚಿಕೆಯಲ್ಲಿ ನನ್ನ ಕುರಿತಾಗಿ ಓದುವಾಗ ಖುಷಿಯಾಯ್ತು. ನಿಮ್ಮಂತ ಸ್ನೇಹಿತರ ಪ್ರೀತಿ, ಅಭಿಮಾನ, concern, ಇವುಗಳೇ ನನ್ನ ಪಾಲಿನ ಆಸ್ತಿ. ದೇವರಲ್ಲಿ ಪ್ರಾರ್ಥನೆ ಕೂಡ ಇಷ್ಟೇ... ಹೀಗೆ ನನ್ನವರೊಂದಿಗೆ ಕಾಲ ಕಳೆದುಬಿಡಬೇಕು, ಈ ಭೂತಾಯಿಯ ಋಣ ತೀರಿಸಿ ಹೊರಟುಬಿಡಬೇಕು.
ನಿಮ್ಮ ಬರವಣಿಗೆಯ ಶೈಲಿ ವಿಶಿಷ್ಠ! ಅದು ಓದುವವರ ಮುಖದಲ್ಲಿ ಮುಗುಳ್ನಗೆ ಮೂಡಿಸುವಂತದ್ದು... ಸಂತೋಷ ತರುವಂತದ್ದು.... ಮುಂದುವರೆಯಲಿ ನಿಮ್ಮ ಈ ಸ್ನೇಹದ ಪಯಣ. ಎಲ್ಲರಿಗೂ ಸದಾ ಒಳಿತನ್ನೇ ಬಯಸುವ ನಿಮಗೂ, ನಿಮ್ಮ ಕುಟುಂಬಕ್ಕೂ ತುಂಬಾ ತುಂಬ ಒಳ್ಳೆಯದಾಗಲಿ :)