Saturday, May 7, 2016

DFR ಹಾಯ್ ಬೆಳಗು - ಶ್ರೀ

ಅಣ್ಣಾವ್ರ "ಹೇ ದಿನಕರ ಶುಭಕರ ಧರೆಗೆ ಬಾ" ಹಾಡು ಬರುತ್ತಿತ್ತು..

ಅರೆ ಅರೆ.. ಯಾರೂ ಕೂಗುತ್ತಿದ್ದಾರೆ, ಇರಪ್ಪ ಇರಪ್ಪ, ನೋಡೋಣ ಎಂದು, ಭಾಸ್ಕರ ತನ್ನ ಕೊನೆಯ ಬಾಗಿಲನ್ನು ತೆಗೆದ.. ಅದು ಕಿರ್ ಎಂದು ಸದ್ದು ಮಾಡಿತು..

"ಹಾಯ್ ಬೆಳಗು" ಎನ್ನುತ್ತಾ ಒಂದು ಕೋಗಿಲೆ ಕಂಠ ಉಳಿಯಿತು..

ಅರೆ ಇದೇನಿದು DFR ನೀವು ಇಲ್ಲಿಗೆ ಬಂದಿದ್ದೀರಿ.. ಏನ್ ಸಮಾಚಾರ..

"ನೋಡಿ Rav's  (DFR ರವಿಯನ್ನು ಕರೆಯುವ ರೀತಿ).. ಇವತ್ತು ಹಿಮಾಲಯದಲ್ಲಿ ಹೆಜ್ಜೆ ಇಟ್ಟೇ.. ಯಾಕೋ ನೀ ಇನ್ನು ಬಂದಿರಲ್ಲಿಲ್ಲ.. ಅದಕ್ಕೆ ನಿನ್ನ ಮೀಟ್ ಮಾಡಿ, ನಿನಗೆ ಶುಭಕೋರಿ.. ಒಂದು ಸಂದೇಶ ಹೇಳೋಣ ಅಂತ ಬಂದೆ.. "

"ಹೇಳಿ DFR"

"ಹಿಮಾಲಯದಲ್ಲಿ ನೀವು ನಿಮ್ಮ ಮನೆಯಿಂದ ಹೆಚ್ಚು ಬೇಡ ಕಡಿಮೆಯೂ ಬೇಡ ಆ ರೀತಿಯ ಶಾಖ ಮತ್ತು ಬೆಳಕನ್ನು ನೀಡಿ.. ನನಗೆ ನನ್ನ ಮತ್ತು ಸಹ ಚಾರಣಿಗರಿಗೆ ಈ ಚಾರಣ ಸುಸ್ತಾಗದಂತೆ, ಮತ್ತು ನಿನ್ನ ಕಣ್ಬೇಳಕಲ್ಲಿ ಭೂರಮೆ ಸುಂದರವಾಗಿ ಕಾಣುವಂತೆ ಮಾತು.. ಸುಮಾರು ಸೆಲ್ಫಿ ತಗೊಳಿದಿದೆ.. "

"ಇದನ್ನ ನೀವು ಹೇಳಬೇಕೇ DFR ಖಂಡಿತ ಹಾಗೆ ಮಾಡುತ್ತೇನೆ.. ನಿಮ್ಮ ಚಾರಣ ಸುಂದರವಾಗಿರಲಿ.. ಶುಭವಾಗಲಿ.. "

ಅರುಣ ಸೂರ್ಯದೇವನಿಗೆ ಕಾಯುತ್ತಿದ್ದ.. ರಥದತ್ತ ಸೂರ್ಯ ದೇವ ಬರುತ್ತಿದ್ದಂತೆ, ರಥವೂ ನಿಧಾನವಾಗಿ ಸಾಗತೊಡಗಿತು..

ಇತ್ತ DFR ತನ್ನ ಸಹ ಚಾರಣಿಗರ ಜೊತೆಯಲ್ಲಿ ಚಾರಣದ ವೇಳಾ ಪಟ್ಟಿಯ ಪ್ರಕಾರ ಬೇಸ್ ಕ್ಯಾಂಪ್ ಕಡೆಗೆ ಹೊರಟರು.

ಅಲ್ಲಿ ಸುರಕ್ಷತಾ ಸಿಬ್ಬಂಧಿ, ತಪಾಸಣೆ ಮಾಡುತ್ತಾ ಸುಮಾರು ನೂರಾರು ಯಾತ್ರಿಕರನ್ನು, ಚಾರಣಿಗರನ್ನು ತಪಸಾನೆ ಮಾಡುತ್ತಲೇ, ನಗುಮೊಗದಿಂದಲೇ ಎಲ್ಲರಿಗೂ ಶುಭ ಹಾರೈಸುತ್ತಾ ಕಳಿಸುತ್ತಿದ್ದರು.

"ನಾರಾಯಣ ನಾರಾಯಣ" ಧ್ವನಿ ಕೇಳಿ ಎಲ್ಲರೂ ಚಕಿತಗೊಂಡರು.

ನಾರದ ಮಹಾಮುನಿ ಅಲ್ಲಿ ನಗುಮೊಗದಿಂದ ಒಂದು ಫಲಕವನ್ನು ಹಿಡಿದು ನಿಂತಿದ್ದರು.

DFR ನಾರದ ಮುನಿಗೆ ನಮಸ್ಕರಿಸಿ, ನಾರದ ಮುನಿಗಳೇ.. "ಏನು ಸಮಾಚಾರ, ಫಲಕದಲ್ಲಿ ನನ್ನ ಹೆಸರು ಏಕಿದೆ, ಹೇಳಿ ಏನು ಸಮಾಚಾರ"

"DFR ನಿಮಗೆ HMT ಕಾರ್ಖಾನೆ ಮುಚ್ಚುತ್ತಲಿರುವುದು, ಮತ್ತು ಕೆಲವು ಘಟಕಗಳು ಮುಚ್ಚಿರುವುದು ನಿಮಗೆ ಗೊತ್ತೇ ಇದೆ. ಧರಣಿಮಂಡಲ ಮಧ್ಯದೊಳಗೆ  ಮೆರೆಯುತಿರುವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕಾರ್ಖಾನೆಯ ಮುಂದೆ ಲಕ್ಷಾಂತರ ಮಂದಿ ಧರಣಿ ಹೂಡಿದ್ದಾರೆ, ಅದಕ್ಕೆ ನೀವು ಬರಬೇಕಂತೆ"

"ಅರೆ... ಮುನಿಗಳೇ.. ಅದು ಹೇಗೆ ಸಾಧ್ಯ, ನಾನು ಚಾರಣಕ್ಕೆ ಬಂದಿದ್ದೇನೆ, ಜೊತೆಯಲ್ಲಿಯೇ, ಆ ಕಾರ್ಖಾನೆ ಮುಚ್ಚಿರುವುದು ಆಡಳಿತ ಮಂಡಳಿಯ ಸಮಸ್ಯೆ, ನಾನು ಏನು ಮಾಡಲಿ, ನನ್ನನ್ನು ಏಕೆ ಬರಲು ಹೇಳುತ್ತಿದ್ದಾರೆ. ಕಾರಣ ಗೊತ್ತಾಗುತ್ತಿಲ್ಲ"

"DFR,, ಚಾರಣದ ಬಗ್ಗೆ ನೀವೇನು ಯೋಚನೆ ಮಾಡಬೇಡಿ.. ಬನ್ನೇರುಘಟ್ಟದ ಬಳಿಯಲ್ಲಿರುವ ಚಂಪಕಧಾಮ ದೇವಸ್ಥಾನದ ಅಂಜನೇಯ ನಮಗಾಗಿ ಪುಷ್ಪಕ ವಿಮಾನ ತಂದಿದ್ದಾರೆ, ಅದರಲ್ಲಿ ಯೋಜನಾಗಟ್ಟಲೆ ದೂರವನ್ನು ಕ್ಷಣಮಾತ್ರದಲ್ಲಿ ತಲುಪಬಹುದು.. ಕೇವಲ ಮೂವತ್ತು ನಿಮಿಷ ಅಷ್ಟೇ.. ನಾನು ನಿಮ್ಮ ಸಹಚಾರಣಿಗರಿಗೆ ಹೇಳುತ್ತೇನೆ.. ಮತ್ತು ೧೮೦೦ ಕ್ಷಣಗಳಲ್ಲಿ ನಿಮ್ಮನ್ನು ವಾಪಾಸ್ ಇಲ್ಲಿಗೆ ಕರೆದುಕೊಂಡು ಬರುವ ಜವಾಬ್ಧಾರಿ ನನ್ನದು.. ಮತ್ತು ಹನುಮನದು. ಯೋಚಿಸಬೇಡಿ"

"ರೈಟ್.. ಓಕೆ ನಾರದ ಮುನಿಗಳೇ.. "

"ಡಿಯರ್ ಫ್ರೆಂಡ್ಸ್.. ನಾನು ನಿಮ್ಮೆಲ್ಲರ ನಾಯಕಿ 3ಕ ತಂಡದ ಒಡತಿ, ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತನ್ನನ್ನೇ ತೊಡಗಿಸಿಕೊಂಡು ಸಮಾಜಮುಖಿಯಾಗಿರುವ, ಮತ್ತು ತಾನು ಸ್ಪೂರ್ತಿಗೊಂಡು, ಇತರರಿಗೂ ಆ ಸ್ಫೂರ್ತಿ ಸಾಂಕ್ರಾಮಿಕವಾಗಿ ಹಬ್ಬುವಂತೆಮಾಡಿ  ಮೇಕ್ A ಡಿಫರೆನ್ಸ್ ಅನ್ನುತ್ತಾ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಿರುವ ನಿಮ್ಮೆಲ್ಲರ ಅಧಿನಾಯಕಿ DFR ಅವರನ್ನು ಕೇವಲ ೧೮೦೦ ಸೆಕೆಂಡ್ಸ್ ಅಂದರೆ ೩೦ ನಿಮಿಷ ಬೆಂಗಳೂರಿನ ಜಾಲಹಳ್ಳಿ ಬಳಿಯ HMT ಕೈ ಗಡಿಯಾರ ಕಾರ್ಖಾನೆಗೆ ಕರೆದೊಯುತ್ತೇನೆ. ೩೧ ನಿಮಿಷಕ್ಕೆ ಅಂದರೆ ೧೮೦೧ ಕ್ಷಣಕ್ಕೆ ನಾವು ಇಲ್ಲಿಯೇ ಇರುತ್ತೇವೆ, ಓಕೆ ನಾ"

"ಓಕೆ ಓಕೆ.. ರೂಪಕ್ಕ, ರೂಪ ಮೇಡಂ, ರೂಪ ಹೋಗಿ ಬನ್ನಿ.. ನೀವು ಬರುವ ತನಕ ನಾವಿಲ್ಲೇ ಕೂತಿರುತ್ತೇವೆ" ಎಂದರು ಸಹಚಾರಣಿಗರು.

ಹನುಮ ದೇವರು ತಂದ ಪುಷ್ಪಕ ವಿಮಾನದಲ್ಲಿ, ನಾರದ ಮುನಿಗಳು, ಹನುಮ ದೇವರು, ಮತ್ತು DFR ಕುಳಿತು ಹಿಮಾಲಯದಿಂದ ಬೆಂಗಳೂರಿನ ಕಡೆಗೆ ಹಾರಿದರು.. DFR ಕೈಯಲ್ಲಿ HMT ಕೈಗಡಿಯಾರ ಒಂದು ಮುಗುಳುನಗೆ ನಕ್ಕು, ಅಬ್ಬಾ, ಅಂತೂ ನನ್ನ ಸಮಸ್ಯೆ ಬಗೆ ಹರಿಯಿತು ಎಂದು ಸಂತಸದಿಂದ ಕುಣಿಯುತ್ತಿತ್ತು.


ಮುಂದೆ ಏನಾಗುತ್ತೆ.. ಎರಡನೇ ಭಾಗದಲಿ ನೋಡಿ.. ಹಾಯ್ ಬೆಳಗು - ನಿವ್ಸ್   ಹುರ್ರಾ....

(ಅದ್ಭುತ ಬರಹಗಾರ್ತಿ ಮತ್ತು ಸ್ನೇಹಿತೆ ನಿವೇದಿತ ಚಿರಂತನ್ ಅವರು ಕೊಟ್ಟ ಒಂದು ಸಲಹೆ.. ಶ್ರೀ ಇಂದು ನಮ್ಮಿಬ್ಬರ ಮತ್ತು ನೂರಾರು ಸ್ನೇಹಿತರ ಸ್ಪೂರ್ತಿಯ ಚಿಲುಮೆ ರೂಪ ಸತೀಶ್ ಅಲಿಯಾಸ್ ನಿಮ್ಮ DFR ಮತ್ತು ನನ್ನ ರೂಪಕ್ಕ ಅವರ ಹುಟ್ಟು ಹಬ್ಬಕ್ಕೆ ಒಂದು ಉಡುಗೊರೆ ಕೊಡೋಣ.. ನಾ ಬ್ಲಾಗ್ ಶುರು ಮಾಡುತ್ತೀನಿ ನೀವು ಅದನ್ನು ಕಂಪ್ಲೀಟ್ ಮಾಡಿ.. ಇಲ್ಲ ನೀವು ಬರೆಯಿರಿ ನಾ ಕಂಪ್ಲೀಟ್ ಮಾಡುತ್ತೀನಿ ಅಂದ್ರು.. ವಾಹ್ ಅನ್ನಿಸಿತು ಒಂದು ಅದ್ಭುತ ಐಡಿಯಾ.. ಸರಿ ಸವಾಲಿಗೆ ಸಿದ್ಧವಾಯಿತು.. ಅದರ ಫಲವೇ.. ಎರಡು ಬ್ಲಾಗ್ ಗಳು DFR ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ನಿಮ್ಮ ಕಣ್ಣ ಮುಂದೆ.. ಧನ್ಯವಾದಗಳು CB..)


(DFR  ಈ ಹೆಸರೇ ಸಾಕು ಉತ್ಸಾಹದ ಚಿಲುಮೆಗೆ ಇನ್ನೊಂದು ಹೆಸರು.. 
ಏನು ಬರೆಯುವುದು ಎನ್ನುವ ಗೊಂದಲವಿರಲ್ಲಿಲ್ಲ.. ಬ್ಲಾಗ್ ಟೈಟಲ್ ಕೂಡ ಮೊದಲೇ ನಿರ್ಧಾರವಾಗಿತ್ತು 
೨೩ನೆ ಫೆಬ್ರವರಿ ೨೦೧೬ ... ಮುಂಜಾವು DFR ನನಗೆ ಶುಭಾಷಯ ಕೋರಿದ್ದು.. ಹೀಗೆ 
ಶ್ರೀ "ಹಾಯ್ ಬೆಳಗು"..
ಆಗ ಅವರಿಗೆ ಹೇಳಿದ್ದೆ ಇದೆ ಪದಗಳನ್ನು ಟೈಟಲ್ ಆಗಿ ಮಾಡಿ ಒಂದು ಲೇಖನ ಬರೆಯುತ್ತೇನೆ ಎಂದು 
ಇಂದು ಆ ಸುದಿನ ಬಂದಿದೆ.. ಅದೇ ಹೆಸರಿನಲ್ಲಿ ಒಂದು ಬ್ಲಾಗ್ ಬರೆದಿದ್ದೇನೆ..)

3 comments:

  1. ಮರೆಯಲಿದ್ದ ಕವಿ ಪುಂಗವರಿಗೆ ದನಿಯಾದ ಅಧಿನಾಯಕಿಯ ಜನುಮದಿನಕೆ ಈ ಬರಹ ಉತ್ತಮ ಶುಭಾಶಯ.

    ಅಸಲು ತ್ರೀಕೆ, ಶಾಲೆ, ಆಫೀಸು, ಪ್ರವಾಸ ಹೀಗೆ ವರ್ಷ ಪೂರ ನಿರಂತರತೆ ಅದು ಹೇಗೆ ಕಾಪಾಡಿಕೊಳ್ಳುವರೋ ಎಂಬುದೇ ನಮಗೆ ಪರಮಾಶ್ಬಚರ್ಯ.

    ರೂಪಾಜಿ ಬ್ಲಾಗ್ ಲೋಕದ ಪರವಾಗಿ ನಿಮಗಿದೋ ಜನುಮದಿನದ ಶುಭಾಶಯಗಳು.

    ReplyDelete
  2. ಇಂತಹ ಪ್ರಯೋಗ ಮಾಡಲಿಕ್ಕೆ ಶ್ರೀಕಾಂತ್ ಬಿಟ್ಟರೆ ಇನ್ಯಾರಿಗೆ ಸಾಧ್ಯ , ಈ ಬರಹ ಓದುತ್ತಿದ್ದರೆ ಕೃಷ್ಣ ಗಾರುಡಿ ಅನ್ನೋಹಾಗೆ ಶ್ರೀ ಗಾರುಡಿ ಅನ್ನಲು ಮನಸಾಗುತ್ತಿದೆ. ಈ ಲೇಖನದಲ್ಲಿ ಸೂರ್ಯ ದೇವನನ್ನು, ನಾರದ ಮಹರ್ಷಿಗಳನ್ನು , ವಾಯು ಸುತನನ್ನು ಅಕ್ಷರಗಳ ಮೂಲಕ ಎಳೆದು ತಂದು ನಮ್ಮ ವಾಯು ಪುತ್ರನ ಕೈಲಿ ರೂಪಾ ಸತೀಶ್ ಗೆ ನಮ್ಮ ಹೆಮ್ಮೆಯ ಹೆಚ್.ಎಂ. ಟಿ. ಗಡಿಯಾರ ಉಡುಗೊರೆಯಾಗಿ ಕೊಡಿಸುವ ತಾಕತ್ತು ಶ್ರೀಕಾಂತ್ ಗೆ ಮಾತ್ರ ಇದೆ. ಹುಟ್ಟು ಹಬ್ಬ ಆಚರಿಸಿಕೊಳ್ಳೋದಕ್ಕಿಂತಾ ಶ್ರೀಕಾಂತ್ ಎಂತಹ ಬರಹದ ಉಡುಗೊರೆ ಕೊಡ್ತಾರೆ ಅನ್ನೋ ಕುತೂಹಲನೆ ಎಲ್ಲರಿಗೂ ಇರುತ್ತೆ, ಜೈ ಜೈ ಹೋ ಶ್ರೀಕಾಂತ್ . ರೂಪಾ ಜಿ ಜನುಮದಿನದ ಹಾರ್ದಿಕ ಶುಭ ಕಾಮನೆಗಳು .

    ReplyDelete