Wednesday, June 20, 2012

ಆಷಾಡದಲ್ಲಿ ಹೊಸ ಜೋಡಿ ಹಕ್ಕಿಗಳು ಯಾಕೆ ಬೇರೆ ಬೇರೆ ಇರುತ್ತಾರೆ ಗೊತ್ತೇ !!!!

ನಮ್ಮ ಮಾಧ್ಯಮಗಳು ನಮ್ಮ ಆಚಾರ-ವಿಚಾರಗಳ ಬಗ್ಗೆ ತಿಳಿಸುವ ವಿಚಾರ ಲಹರಿ...(ಒಂದು ಅಣಕು ನೋಟ)


ವೀಕ್ಷಕರೆ...ಆಷಾಡ  ಮಾಸದಲ್ಲಿ ಹೊಸದಾಗಿ ಮದುವೆಯಾದ ಜೋಡಿ ಯಾಕೆ ಬೇರೆ ಬೇರೆ ಇರುತ್ತಾರೆ ಗೊತ್ತೇ...?
ಆಷಾಡಕಿಂತ ಮುಂಚೆ  ಹೊಸದಾಗಿ ಮದುವೆಯಾದಾರೆ...ಗಂಡ ಹೆಂಡತಿ ಒಂದೇ ಸೂರಿನಡಿ ಇರಬಾರದು ಗೊತ್ತೇ..?
ಒಂದೇ ಸೂರಿನಡಿ ಅಂದ್ರೆ ಒಂದೇ ಹೊಸಲನ್ನು ದಾಟಬಾರದು
ಮರ ಗಿಡ, ಮದುವೆ ಆಲ್ಬಮ್, ಹೊಸ ಜೋಡಿಗಳನ್ನ ತೋರಿಸುತ್ತ..ಕಾಲಹರಣ...

ಈ ವಿಷಯದಲ್ಲಿ ಇನ್ನು ಸ್ವಲ್ಪ ವಿಷಯ ತಿಳಿಯೋಣ ಒಂದು ಪುಟ್ಟ ಬ್ರೇಕ್ ನಂತರ...
ನಾಲ್ಕು ಐದು ನಿಮಿಷದ ಜಾಹಿರಾತುಗಳ ನಂತರ 

ವೀಕ್ಷಕರೆ..ಆಷಾಡ ಮಾಸದ ಬಗ್ಗೆ ಮಾತಾಡ್ತಾ ಇದ್ದೀವಿ..
ಆಷಾಡ ಮಾಸ ಜೋಡಿಗಳಿಗೆ ವಿರಹ ವೇದನೆ ಕೊಡುತ್ತೆ..ಯಾಕೆ ಗೊತ್ತೇ..
ಮರ ಗಿಡ, ಮದುವೆ ಆಲ್ಬಮ್, ಹೊಸ ಜೋಡಿಗಳನ್ನ ತೋರಿಸುತ್ತ..ಕಾಲಹರಣ...

ಈ ವಿಷಯದಲ್ಲಿ ಇನ್ನು ಸ್ವಲ್ಪ ವಿಷಯ ತಿಳಿಯೋಣ ಒಂದು ಪುಟ್ಟ ಬ್ರೇಕ್ ನಂತರ...
ನಾಲ್ಕು ಐದು ನಿಮಿಷದ ಜಾಹಿರಾತುಗಳ ನಂತರ 
ಆಷಾಡ ಮಾಸದಲ್ಲಿ ಅತ್ತೆ ಸೊಸೆ ಒಂದೇ ಹೊಸಿಲನ್ನು ದಾಟಬಾರದು. 
ಹೊಸದಾಗಿ ಮದುವೆ ಗಂಡ ಹೆಂಡತಿ ಕೂಡ ಒಂದೇ ಹೊಸಿಲನ್ನು ದಾಟಬಾರದು..
ಗಂಡ ಹಾಗು ಅತ್ತೆ ಮುಖ ನೋಡಬಾರದು..
ವೀಕ್ಷಕರೆ..ಆಷಾಡ ಮಾಸದಲ್ಲಿ ಹೊಸಜೋಡಿಗಳು ಏತಕ್ಕೆ ವಿರಹವೇದನೆ 
ಅನುಭವಿಸುತ್ತಾರೆ..ಎನ್ನುವ ವಿಷಯ ನಿಮಗೆ ತಿಳಿಯಿತು..
ಮುಂದಿನವಾರ ಇನ್ನೊಂದು ವಿಷಯದ ಬಗ್ಗೆ ತಿಳಿದುಕೊಳ್ಳೋಣ..ನಮಸ್ಕಾರಾ..

11 comments:

 1. ನಿಜವಾದ ಕಾರಣಗಳು ತುಂಬಾ ಇವೆ..ಆದ್ರೆ ನಮಗೆ ಸರಿಯಾದ ಅರಿವಿರದ ದೃಶ್ಯ ಮಾಧ್ಯಮಗಳು ಬರಿ ಹೆಸರಿಗಾಗಿ ಮಾಡುವ ಕಾರ್ಯಕ್ರಮಗಳು ಬರಿ ಕಾಲಹರಣ ಮಾಡುತ್ತವೆ..
  ೧. ಮೊದಲನೆಯದು ಮುಂಗಾರು ಶುರುವಾಗಿರುತ್ತೆ..ಹಿಂದಿನಕಾಲದಲ್ಲಿ ಬಿತ್ತನೆ ಕೆಲಸ ಪ್ರಾರಂಭ ಆಗುವ ಸಮಯ, ಗಂಡಾಳುಗಳು ಹೊಲದಲ್ಲಿ ದುಡಿಮೆ ಮಾಡುವ ಸಮಯ, ಹೆಣ್ಣು ಮಕ್ಕಳಿಗೆ ಮನೆಯಲ್ಲಿ ಕೈ ತುಂಬಾ ಕೆಲಸ, ಮೈ ಮುರಿದು ಕೆಲಸ ಮಾಡಿದರೆ..ವರುಷದ ಬೆಲೆ ಸುಲಭವಾಗುತ್ತೆ...ಅದಿಲ್ಲದೆ ಬೇರೆ ಕಡೆಗೆ ಗಮನ ಹರಿಯಬಾರದು ಎನ್ನುವುದು ಒಂದು..
  ೨. ಈ ಸಮಯದಲ್ಲಿ ಸಮಾಗಮವಾದರೆ..ಸುಮಾರು ಫೆಬ್ರುವರಿ-ಮಾರ್ಚ್-ಏಪ್ರಿಲ್ ಹೊತ್ತಿಗೆ ಹೆರಿಗೆ ಯಾದರೆ ಮಗು ಹಾಗು ಬಾಣಂತಿ ಆರೈಕೆ ಕಷ್ಟ ಅನ್ನುವುದು ಇನ್ನೊಂದು ಕಾರಣ
  ೩. ಹಿಂದೂ ಸಂಪ್ರದಾಯದಲ್ಲಿ ಆಷಾಡ ಕಳೆದರೆ ಹಬ್ಬಗಳು ಸಾಲು ಸಾಲು, ಹೊಸ ವಧುವಿಗೆ ತವರಿನ ಹಂಬಲ ಜಾಸ್ತಿ ಇರುತ್ತೆ..ಗಂಡನ ಮನೆಗೆ ಹೊಂದಿಕೊಳ್ಳುವುದಕ್ಕೋ ಸಮಯ ಹಿಡಿಯುತ್ತೆ..ಈ ಆಷಾಡ ಮಾಸ ಒಂದು ಬ್ರೇಕ್ ಕೊಡುತ್ತೆ..
  ಹೀಗೆ ನಾನ ಕಾರಣಗಳು ಇರ್ತಾವೆ..ನಮಗೆ ತಿಳಿಯ ಬೇಕಷ್ಟೇ..ನಮ್ಮ ಕೆಲ ದೃಶ್ಯ ಮಾಧ್ಯಮಗಳು ನಮ್ಮ ಕುತೂಹಲವನ್ನು ತಮ್ಮ ಬೆಲೆ ಬೇಯಿಸಿಕೊಳ್ಳೋಕೆ ಉಪಯೋಗಿಸಿಕೊಳ್ಳುತ್ತವೆ

  ReplyDelete
  Replies
  1. Mungarinalli Shrungaravelli??
   Maleyalli beliyalli??

   Delete
 2. ಆತ್ಮೀಯ ಶ್ರೀಕಾಂತ ರವರೆ,
  ಆಶಾಡಮಾಸದ ಲೇಖನದ ಬಗ್ಗೆ ಬರೆಯಲು ಈ ಗ ಪ್ರಾರಂಭ ಮಾಡಲು ತಯಾರಿ ನಡೆಯುತ್ತಾ ಇದೆ. ಚಿಂತನೆಗಳ ಕಲೆಕ್ಷನ್ ಆಗ್ತಾ ಇದೆ, ಪೆಪೆರ್ರು ಪೆನ್ನು ಎಲ್ಲ ಮೇಜಿನ ಮೇಲೆ ಇಡಲಾಗಿದೆ, ಬರೆಯಲು ಕೂರುವ ಚೇರು ರೆಡಿ ಆಗಿದೆ.........................ಈಗ ಒಂದು ಪುಟ್ಟ ವಿರಾಮದ ನಂತರ ಮತ್ತೆ??????????????
  ಹಾಳು ಕರೆಂಟು ಬೇರೆ ಹೋಯಿತು.
  better luck next time

  ಪ್ರಕಾಶ್

  ReplyDelete
 3. ಶ್ರೀಕಾಂತ್ ಮಂಜುನಾಥ್ ಆಷಾಢ ಮಾಸದ ವಿರಹಿ ದಂಪತಿಗಳ ಬಗ್ಗೆ ಹಾಗು ಆಷಾಢ ಮಾಸದ ಬಗ್ಗೆ ಮಾಹಿತಿಯನ್ನು ಬ್ರೇಕ್ ಮಾಡಿ ಬ್ರೇಕ್ ಮಾಡಿ ತಿಳಿಸಿ ಕಾಮೆಂಟ್ ನಲ್ಲಿ ಮಾಹಿತಿ ನೀಡಿದ್ದೀರಾ , ಉತ್ತಮ ಮಾಹಿತಿ ಧನ್ಯವಾದಗಳು.
  ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

  ReplyDelete
 4. ರಜನೀಶ...
  ಚಿಕ್ಕದಾದ ಮಾತುಗಳು..ಆದ್ರೆ ಅದರ ಅರ್ಥ..ಸಾಗರದಷ್ಟು..ನಿನ್ನ ಉತ್ತರ ಯಾವಾಗಲು ನೀರ್ಗಲ್ಲಿನಂತೆ..ಬರಿ ತುದಿ ಕಾಣುತ್ತೆ..ಅದರ ಅರ್ಥ ಬಹು ಬಹು ವಿಶಾಲ..
  ಧನ್ಯವಾದಗಳು

  ReplyDelete
 5. ಪ್ರೀತಿಯ ಪ್ರಕಾಶ್ ಚಿಕ್ಕಪ್ಪ..
  ನಿಮ್ಮ ಮುಂದೆ ಚಣ್ಣ ಹಾಕಿ ನಿಂತಿರುವ ಬಾಲಕನ ಪ್ರಣಾಮಗಳು..
  ನಿಮ್ಮ ಪ್ರತಿಕ್ರಿಯೆ ಸದಾ ಹೊಸ ಆಲೋಚನಾ ಲಹರಿಯನ್ನೇ ಹುಟ್ಟಿ ಹಾಕುತ್ತದೆ..
  ಪ್ರತಿಕ್ರಿಯೆಗೆ ಧನ್ಯವಾದಗಳು

  ReplyDelete
  Replies
  1. ನೀವು ಹೇಳಿದಂತೆ ಹಿಂದೆ ಹೊಲಗದ್ದೆಯಲ್ಲಿ ಉಳುಮೆ ಮಾಡುತ್ತಿದ್ದವರಿಗೆ ಅನ್ವಯಿಸುವ ನೀತಿಯನ್ನೇ ನಗರದಲ್ಲಿ ದುಡಿಯುತ್ತಾ ಕಾಲ ಕಳೆಯುವ ಜನರಿಗೆ ಅನ್ವಯಿಸಿನೋಡುವುದು ಸೂಕ್ತವೇ1
   ಇದನ್ನೇ ಅಲ್ಲವೇ ಮೂಲಭೂತವಾದ ಅಥವಾ ಮೌಢ್ಯ ಎನ್ನುವುದು. ಹಿಂದೆ ಯಾವುದೋ ಸಂದರ್ಭಕ್ಕೆ ಸೂಕ್ತವೆನಿಸಿದ ವಿಷಯವನ್ನು ಎಲ್ಲಾ ಸಂದರ್ಭದಲ್ಲೂ ಅಳವಡಿಸುವುದು. ಇದನ್ನು ಯಾರೇ ಆದರೂ ಖಂಡಿಸಬೇಕು. ಸಂದರ್ಭಕ್ಕನುಸಾರವಾಗಿ ಬದುಕನ್ನು ನಡೆಸಬೇಕು. ಪ್ರಜ್ಞಾಹೀನರಾಗಿ ಪಟ್ಟಭದ್ರ ಹಿತಾಸಕ್ತಿಗೆ ಸಿಲುಕುವುದು ಪ್ರಜ್ಞಾವಂತರಿಗೆ ಸೂಕ್ತವಲ್ಲ.
   ವಂದನೆಗಳು.
   ಅಸ್ತ್ರ

   Delete
  2. ಭೂತವೇ ಮೂಲೆಗೆ ಹೋಗಿರುವಾಗ..ಮೌದ್ಯಕ್ಕೆ ಎಲ್ಲಿದೆ ಜಾಗ ಈ ಜಗತ್ತಿನಲ್ಲಿ..ಇದು ಒಂದು ಬೋರಿಂಗ್ ಧಾರಾವಾಹಿಗಳ ಮಧ್ಯೆ ಒಂದು ಕಮರ್ಷಿಯಲ್ ಬ್ರೇಕ್ ತರಹ ಕೆಲಸ ಮಾಡುತ್ತೆ ಅಷ್ಟೇ..
   ಆಷಾಡದಲ್ಲಿ ವ್ಯಾಪಾರ ಕಡಿಮೆ ಅನ್ನುವುದೆಲ್ಲ ಸುಳ್ಳು..ಈ ಮಾಲ್ಪ್ರ, ಹಾಗು ಕೊಳ್ಳುಬಾಕ ಪ್ರಪಂಚದಲ್ಲಿ ಜನ ಬೇಕಾದಾಗ ಕೊಳ್ಳುತ್ತಾರೆ..ಬೇಕಾದಾಗ ತವರು ಮನೆಗೆ ಹೋಗುತ್ತಾರೆ, ಅವಿಬಕ್ಥ ಕುಟುಂಬ ಬರಿ ಹೆಸರಿಗಷ್ಟೇ..ಹಾಗಾಗಿ ಇದು ಬರಿ ಪುಸ್ತಕ ಆಚರಣೆಯಾಗಿದೆಯೇ ಹೊರತು ವಾಸ್ತವಾಗಿಅಲ್ಲ...ಮತ್ತು ಇದು ಚರ್ಚೆಗೆ ಒಳಪಡುವ ವಸ್ತುವು ಅಲ್ಲ ಅಲ್ಲವೇ..ಮಾಧ್ಯಮಗಳು ಹೇಗೆ ತಮ್ಮ ಬೆಳೆ ಬೇಯಿಸಿಕೊಳ್ಳುತ್ತವೆ ಎನ್ನುವ ಒಂದು ಅಣುಕು ನೋಟವಷ್ಟೇ...

   Delete
 6. ನಮ್ಮೊಳಗೊಬ್ಬರು ಬಾಲು ಸರ್..ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.....ನನ್ನ ಲೋಕಕ್ಕೆ ಕಾಲಿಟ್ಟು ನನ್ನ ಲೇಖನಗಳನ್ನು ಧನ್ಯ ಮಾಡಿದ್ದೀರಾ...ವಂದನೆಗಳು..

  ReplyDelete
 7. ಈಗಿನ ನ್ಯೂಸ್ ಚಾನೆಲ್ ಗಳ ಕಾರ್ಯಕ್ರಮಗಳನ್ನ ಚೆನ್ನಾಗಿಯೇ ಅಣಕ ಮಾಡಿದ್ದೀರಿ.. ಒಂದಿಷ್ಟು ಕ್ವೆಶ್ಚನ್ ಮಾರ್ಕಗಳು.. ಒಂದಿಷ್ಟು ಉದ್ಗಾರ ವಾಚಕ ವಾಕ್ಯಗಳಲ್ಲಿ ಮೂಲ ವಿಷಯಕ್ಕೆ ಬರದೇನೆ ಕಾರ್ಯಕ್ರಮಗಳು ಮುಗಿದಿರುತ್ತವೆ... ಆಶಾಢದ ಆಚರಣೆಗಳ ಬಗ್ಗೆಯೂ ತಿಳಿಸಿದ್ದೀರಿ... ಆದರೆ ನೀವೇ ಹೇಳಿದಂತೆ ಅವೆಲ್ಲ ಈಗ ಪುಸ್ತಕಗಳಲ್ಲಿ ಓದಲು ಮಾತ್ರ ಉಳಿದಿವೆ...

  ReplyDelete
 8. ಧನ್ಯವಾದಗಳು ಸಂಧ್ಯಾ...ಕೆಲವು ಆಚರಣೆಗಳು ಈ ವ್ಯಾವಹಾರಿಕ ಪ್ರಪಂಚದಲ್ಲಿ ಅರ್ಥ ಕಳೆದುಕೊಂಡಿದೆ...ಅದು ನಿಜವೇ...ಆಚಾರಗಳು ವಿಚಾರಗಳಿಗೆ ಜೊತೆಯಾಗಿ ನಿಂತರೆ ಇರುತ್ತವೆ..ವೇಗದ ಪ್ರಪಂಚದಲ್ಲಿ ಯಾವುದಕ್ಕೂ ಸಮಯವಿಲ್ಲದೆ ಎಲ್ಲವನ್ನು ಕಳಚಿ ಓದುತಿರುವುದು ಒಂದು ದುರಂತವೇ ಸರಿ...ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು

  ReplyDelete