Tuesday, March 1, 2011

ಎಲ್ಲಿಗೆ ಪಯಣ ಯಾವುದೋ ದಾರಿ - ಶ್ರೀಕಾಂತನ ದಾರಿ ಮತ್ತು ಪ್ರಪಂಚ


ಇದೇನಪ್ಪ ಅಣ್ಣಾವ್ರ ಸಿಪಾಯಿ ರಾಮು ಹಾಡು ಹೇಳ್ತಾ ಇದ್ದೀನಿ ಅಂತ ಅಚ್ಚರಿ ಪಡಬೇಡಿ.

ನಾವು ಒಂದು ತರಹ ಸಿಪಾಯೀನೆ .ರಾಮ ಸೀತೇನ ಹುಡುಕಿದ ಹಾಗೆ ನಮ್ಮ ಭವಿಷ್ಯನ ಹುಡುಕುತ್ತ ಹೋಗ್ತಾ ಇರ್ತಿವಿ. ಇಂಥ ಒಂದು ಅನ್ವೇಷಣೆ ಸಿಸ್ಚೋ ಗೆ ತಂದು ನಿಲ್ಲಿಸಿತ್ತು.  ಇಲ್ಲಿ ಎಲ್ಲವು ಸುಂದರ ಅನುಭವ..ಎಲ್ಲವು ಸುಮಧುರ.  ನನ್ನ ಮೂರು ವರುಷದ ಕಾಲದಲ್ಲಿ..ನೂರು ವರುಷದ ಹರುಷ ವರ್ಣಿಸಲಸಾಧ್ಯ.  ಎರಡು ಕನ್ನಡ ರಾಜ್ಯೋತ್ಸವ ಕಂಡ ಕಣ್ಣುಗಳು ಧನ್ಯ ಶ್ರೀಕಾಂತ್ ನೀನೆ ಧನ್ಯ ಅಂತ ಹೇಳುತ್ತಿವೆ.

ಈ ಮಿಂಚು-ವಿಳಾಸದಲ್ಲಿ ಅನೇಕ ಪ್ರಚಂಡ ಜನಗಳನ್ನು ಕಂಡೆ...ಬುದ್ದಿವಂತರ ಜೊತೆ ಭುಜಕ್ಕೆ ಭುಜ ತಾಕಿಸಿ ನಡೆದೆ...ವಿಚಾರ ವಿನಿಮಯ ಮಾಡಿಕೊಂಡೆ....ತಪ್ಪುಗಳನ್ನೂ ತಿದ್ದಿ ಕೊಂಡೆ..ಹೀಗೆ ನನ್ನ ಓರೆ-ಕೋರೆಗಳನ್ನೂ ತಿದ್ದಿ ತೀಡಿದ ಎಲ್ಲ ಮಹನೀಯರಿಗೂ ನನ್ನ ನಮನಗಳು.

ಇದೆ ಶುಭ ಶುಕ್ರವಾರ ಮಾರ್ಚ್ ೪ ೨೦೧೧...ಇನ್ನೊಂದು ಉಜ್ವಲ ಭವಿಷ್ಯದ ಹುಡುಕಾಟದಲ್ಲಿ ಒಳ್ಳೆಯ ಗುಣ ಇರುವ ಶ್ರೀಮಂತನಾಗಲು ಗಾಳಿ ಯಲ್ಲಿ ಜಾಗ ಹುಡುಕಿಕೊಂಡು ಹೊರಟಿದ್ದೇನೆ.  ೭ನೆ ತಾರೀಕು ಹೊಸ ಭವಿಷ್ಯಕ್ಕೆ ದಾಂಗುಡಿ ಇಡಲು ಹೊರಟಿರುವುದರಿಂದ...ಕಡೆ ಗಳಿಗೆಯಲ್ಲಿ ಕಳಿಸುವ ಬದಲು ನಾಲ್ಕು ದಿನ ಮುಂಚೆ ಕಳಿಸುತ್ತಿದ್ದೇನೆ. 

ಸಾಮಾಜಿಕ ತಾಣದಲ್ಲಿ ನನ್ನ ಇರುವಿಕೆಯ ಕೆಲವು ಸುಳಿವುಗಳು ಶ್ರೀಕಾಂತ್ ಮಂಜುನಾಥ್ (Srikanth Manjunath) ಎನ್ನುವ ಹೆಸರಿನಲ್ಲಿ ಚಿರಪರಿಚಿತವಾಗಿದೆ .  

ನನ್ನ ಬರಹಗಳು ವಿಚಿತ್ರ ಹಾಗು ಹುಚ್ಚು ಮನಸಿನ ನೂರಾರು ಮುಖಗಳನ್ನ ತೋರಿಸುತ್ತದೆ.

No comments:

Post a Comment